
ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಕಲಾವಿದ, ಚಲನಚಿತ್ರ ನಟ ರಾಜು ತಾಳಿಕೋಟೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗಿದ್ದಾರೆ. ರಾಜು ತಾಳಿಕೋಟೆ ಕನ್ನಡ ಚಿತ್ರರಂಗದ ಪ್ರಮುಖ ನಟ, ರಂಗಭೂಮಿ ಕಲಾವಿದ. ಮೂವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರು.
ಓದಿದ್ದು 4 ನೇ ತರಗತಿ. ಆನಂತರ ಕೈ ಹಿಡಿದಿದ್ದು ರಂಗಭೂಮಿ. ಖಾಸ್ಗತೇಶ್ವರ ನಾಟ್ಯ ಸಂಘದ ಮೂಲಕ ಸಾಕಷ್ಟು ನಾಟಕಗಳನ್ನು ಮಾಡಿದ್ದಾರೆ. ’ಕಲಿಯುಗದ ಕುಡುಕ’ ನಾಟಕ ಸಿಕ್ಕಾಪಟ್ಟೆ ಫೇಮಸ್ ಅಗಿದೆ.
ಬಿಗ್ ಬಾಸ್ ಮನೆಯೊಳಗೆ ಹೋಗಿ 38 ಗಂಟೆಯೊಳಗೆ ಹೊರಬಿದ್ರು ರವಿ ಬೆಳಗೆರೆ?
ಇವರ ತಂದೆ- ತಾಯಿ ಕೂಡಾ ಕಲಾವಿದರು. 4 ನೇ ತರಗತಿ ವರೆಗೆ ಓದಿರುವ ರಾಜು ತಂದೆ ತಾಯಿ ಹುಟ್ಟು ಹಾಕಿರುವ ನಾಟಕ ಕಂಪನಿ ನಡೆಸುತ್ತಿದ್ದಾರೆ. ‘ಹೆಂಡ್ತಿ ಅಂದ್ರೆ ಹೆಂಡ್ತಿ’ ಸಿನಿಮಾದಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಾರೆ. ಪಂಚರಂಗಿ, ಜಾಕಿ, ಮೈಲಾರಿ, ಅಂಜದ ಗಂಡು, ವೀರಬಾಹು, ಮನಸಾರೆ ಸಿನಿಮಾದಲ್ಲಿ ನಟಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಬಯಲಾಯ್ತು ಚೈತ್ರಾ ವಾಸುದೆವನ್ ಮದುವೆ ಗುಟ್ಟು!
ರಾಜು ತಾಳಿಕೋಟೆಯವರ ಫ್ಯಾಮಿಲಿ ಬಹಳ ಮಜವಾಗಿದೆ. ಇವರಿಗೆ ಇಬ್ಬರು ಹೆಂಡತಿಯರು. ಇನ್ನೂ ಮಜಾ ಎಂದರೆ ಇವರ ಮೊಮ್ಮಗನಿಗೂ, ಇವರ ಮಗನಿಗೆ ಒಂದು ವಾರವಷ್ಟೇ ಡಿಫರೆನ್ಸ್! ಬಿಗ್ ಬಾಸ್ ವೇದಿಕೆ ಮೇಲೆ ಫ್ಯಾಮಿಲಿ ಪರಿಚಯ ಮಾಡುವಾಗ ಸುದೀಪ್ ದಂಗಾಗಿ ಹೋದರು. ಇವರಿಗೆ ಇಬ್ಬರು ಹೆಂಡತಿಯರು, ಅವರ ಮಕ್ಕಳು, ಮೊಮ್ಮಕ್ಕಳು ಇಡೀ ಕುಟಂಬ ಓಟ್ ಮಾಡಿದ್ರೆ ಸಾಕು ಇವರು ಸೇಫ್ ಆಗ್ತಾರೆ ಎಂದು ಸುದೀಪ್ ಹಾಸ್ಯ ಚಟಾಕಿ ಹಾರಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.