
ಖ್ಯಾತ ಪತ್ರಕರ್ತ, ಫೈಯರ್ ಬ್ರಾಂಡ್ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್. ಅವರ ಬಾಯಲ್ಲಿ ರೋಚಕ ಕಥೆಗಳನ್ನು ಕೇಳುವುದೇ ಮಜಾ. ಅವರದೇ ರಗಡ್ ಸ್ಟೈಲಲ್ಲಿ, ಅದಕ್ಕೊಂದಿಷ್ಟು ಎಮೋಶಲ್ ಸೇರಿಸಿ ಹೇಳುವುದನ್ನು ಕೇಳಿದರೆ ಎಂಥವರಿಗೂ ಬೋರ್ ಹೊಡೆಸುವುದಿಲ್ಲ. ಇನ್ನಷ್ಟು ಮತ್ತಷ್ಟು ಕೇಳಬೇಕು ಎನಿಸುತ್ತದೆ.
ಲವ್, ಡ್ರಾಮಾ ಮಾಡೋವ್ರನ್ನ ಮಾತ್ರ ಫೋಕಸ್ ಮಾಡ್ತಿದ್ಯಾ ಬಿಗ್ ಬಾಸ್?
ಬಿಗ್ ಬಾಸ್ ಮನೆಯಲ್ಲಿ ರವಿ ಬೆಳಗೆರೆ ತಮ್ಮ ಜೀವನ ಕಥೆಯನ್ನು, ನೋವುಗಳನ್ನು ಬಿಚ್ಚಿಡುತ್ತಾರೆ. ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಬಂದಾಗ ಅವರ ಜೇಬಲ್ಲಿ ಇದ್ದಿದ್ದು 380 ರೂ ಹಾಗೂ ಒಂದು ಮೋಟರ್ ಸೈಕಲ್. ಎಲ್ಲಾ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾರೆ. ಎಲ್ಲಾ ಕಡೆ ಜಗಳ, ಮನಸ್ತಾಪ. ಕೊನೆಗೆ ತಮ್ಮದೇ ಆದ ಸ್ವಂತ ಪತ್ರಿಕೆ ಹಾಯ್ ಬೆಂಗಳೂರನ್ನು ಶುರು ಮಾಡುತ್ತಾರೆ. ಹೇಗೋ ಹೊಟ್ಟೆಪಾಡಿಗಾದ್ರೂ ಸಾಕು ಎಂದುಕೊಂಡು ಶುರು ಮಾಡಿದ ಹಾಯ್ ಬೆಂಗಳೂರಿಗೆ ಕೋಟ್ಯಾಂತರ ರೂ ಹರಿದು ಬಂತು. ಹಾಯ್ ಬೆಂಗಳೂರು ಸ್ಟೈಲ್ ಕನ್ನಡಕ್ಕೆ ಹೊಸತಾಗಿದ್ದರಿಂದ ಓದುಗರನ್ನು ಬೇಗ ಸೆಳೆಯಿತು. ಜನ ಇಷ್ಟಪಟ್ಟರು. ಆ ನಂತರ ಇವರು ಮಾಡಿದ ಕ್ರೈಂ ಡೈರಿ ಸಿಕ್ಕಾಪಟ್ಟೆ ಹಿಟ್ ಆಯಿತು. ಆನಂತರ ಈ ಟಿವಿ ಕನ್ನಡದಲ್ಲಿ ಎಂದೂ ಮರೆಯದ ಹಾಡು ಶುರು ಮಾಡುತ್ತಾರೆ. ಅದೂ ಕೂಡಾ ಹೆಸರು ತಂದು ಕೊಟ್ಟಿತು.
ಬಂದ ದುಡ್ಡನ್ನೆಲ್ಲಾ ಸೇರಿಸಿ ಪ್ರಾರ್ಥನಾ’ ಎನ್ನುವ ಶಾಲೆಯನ್ನು ಶುರು ಮಾಡುತ್ತಾರೆ. ಇದು ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ರವಿ ಬೆಳಗೆರೆ ಅಮ್ಮನ ಹೆಸರು ಬೆಳಗೆರೆ ಪಾರ್ವತಮ್ಮ. ಅವರ ಸ್ಮರಣೆಯಲ್ಲಿ ತಾವು ಹುಟ್ಟು ಹಾಕಿದ ಶಾಲೆಗೆ ಪ್ರಾರ್ಥನಾ ಎಂದು ಹೆಸರಿಡುತ್ತಾರೆ. ಈ ಶಾಲೆಯ ವೈಶಿಷ್ಟ್ಯ ಎಂದರೆ ಅಪ್ಲಿಕೇಶನ್ ಫಾರ್ಮ್ ನಲ್ಲಿ ಜಾತಿಯೇ ಇಲ್ಲ. 8000 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. 4500 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.
ಕೆಲವು ವ್ಯಕ್ತಿಗಳನ್ನು ಪ್ರೀತಿಸಬಹುದು, ಇನ್ನು ಕೆಲವರನ್ನು ದ್ವೇಷಿಸಬಹುದು. ಆದರೆ ಕೆಲವರನ್ನು ಮಾತ್ರ ಇಗ್ನೋರ್ ಮಾಡಲು ಸಾಧ್ಯವಿಲ್ಲ. ಅಂತಹ ವ್ಯಕ್ತಿ ರವಿ ಬೆಳಗೆರೆ ಎಂದು ಕಿಚ್ಚ ಸುದೀಪ್ ಗ್ರಾಂಡ್ ಓಪನಿಂಗ್ ಸ್ಟೇಜ್ ಮೇಲೆ ಹೇಳುತ್ತಾರೆ. ಅದಕ್ಕೆ ತಕ್ಕಂತಿರುವ ವ್ಯಕ್ತಿ ರವಿ ಬೆಳಗೆರೆ. ಕನ್ನಡಕ್ಕೊಬ್ಬರೇ ರವಿ ಬೆಳಗೆರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.