ಜೈಲು ಸೇರಿದ ಚಕ್ರವರ್ತಿ ಚಂದ್ರಚೂಡ್; ಬಿಟ್ಟಿ ಸಲಹೆ ಬೇಡ ಅನ್ಸುತ್ತೆ?

Suvarna News   | Asianet News
Published : Apr 10, 2021, 10:33 AM IST
ಜೈಲು ಸೇರಿದ ಚಕ್ರವರ್ತಿ ಚಂದ್ರಚೂಡ್; ಬಿಟ್ಟಿ ಸಲಹೆ ಬೇಡ ಅನ್ಸುತ್ತೆ?

ಸಾರಾಂಶ

ವೈಲ್ಡ್‌ ಕಾರ್ಡ್‌ ಎಂಟ್ರಿ ಚಕ್ರವರ್ತಿ ಚಂದ್ರಚೂಡ್‌ ಮೊದಲ ವಾರವೇ ಜೈಲು ವಾಸ ಶುರು ಮಾಡಿದ್ದಾರೆ. ಪ್ಲಾನಿಂಗ್‌ನಲ್ಲಿ ದೊಡ್ಡ ಎಡವಟ್ಟು....  

ಬಿಗ್ ಬಾಸ್‌ ಸೀಸನ್‌8ರ ವೈಲ್ಡ್ ಕಾರ್ಡ್‌ ಸ್ಪರ್ಧಿಯಾಗಿ ಎಂಟರ್ ಆಗುತ್ತಿದ್ದಂತೆ ತಮ್ಮ ಮಾತಿನ ಶೈಲಿಯಲ್ಲಿ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ ಚಕ್ರವರ್ತಿ ಚಂದ್ರಚೂಡ್‌ರನ್ನು ಮನೆಯ ಕೆಲ ಸದಸ್ಯರು ಕಳಪೆ ಸ್ಪರ್ಧಿ ಎಂಬ ಹಣೆ ಪಟ್ಟಿ ನೀಡಿ ಜೈಲಿಗೆ ಕಳುಹಿಸಿದ್ದಾರೆ. 

ಆಕ್ಟಿಂಗ್ ಕೆರಿಯರ್‌ಗೇ ಗುಡ್ ಬೈ ಹೇಳಬೇಕಾಗುತ್ತೆ ಅಂದಿದ್ದೇಕೆ ಸುದೀಪ್? 

ಚಕ್ರವರ್ತಿ ಬಿಬಿ ಮನೆಗೆ ಪ್ರವೇಶಿಸುತ್ತಿದ್ದಂತೆ ಎಲ್ಲರ ಆಲೋಚನೆ ಬದಲಾಗಿದೆ. ಟಾಸ್ಕ್‌ ಮಾಡುವಾಗ ಮಾತ್ರ ತಂಡ ಮಾಡಿಕೊಳ್ಳುತ್ತಿದ್ದವರು ಟಾಸ್ಕ್‌ ಇಲ್ಲದ ಸಮಯದಲ್ಲೂ ಗುಂಪಾಗಿ ಕೂರುವಂತೆ ಆಗಿದೆ. ಇದಕ್ಕೆ ಕಾರಣ ಚಕ್ರವರ್ತಿ ಚಂದ್ರಚೂಡ್‌. ಬೇಕೆಂದು ಒಬ್ಬರ ಬಳಿ ಮತ್ತೊಬ್ಬರ ಬಗ್ಗೆ ಚಾಡಿ ಹೇಳುವುದು, ಎಲ್ಲರಲ್ಲಿ ಏನೋ ಬದಲಾವಣೆ ತರುತ್ತೇನೆ ಎಂದು ಪದೇ ಪದೇ ಹೇಳುವುದು, ವಾತಾವರಣ ಬದಲಾಯಿಸುವ ಪ್ರಯತ್ನದಲ್ಲಿ ಸದಸ್ಯರ ಪ್ರೀತಿ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಅತಿ ಕಡಿಮೆ ಸಮಯ ಕಳೆದ ಚಕ್ರವರ್ತಿ ವರ್ತನೆ ಹಲವರಿಗೆ ಇಷ್ಟವಾಗಿಲ್ಲ.

'ಸರ್ವಾಧಿಕಾರಿ ಆಗಿ ಮುಂದೆಯೂ ಇರ್ತೀನಿ, ವಾರ ವಾರ ಜೈಲಿಗೆ ಬರ್ತೀನಿ. ಎಲ್ಲರಿಗೂ ಉತ್ತರ ಕೊಡ್ತೀನಿ' ಎಂದು ಜೋರಾಗಿ ಹೇಳುತ್ತಾ ಚಕ್ರವರ್ತಿ ಜೈಲು ಪ್ರವೇಶಿಸಿದ್ದರು. ಕಳಪೆ ಸ್ಪರ್ಧಿ ಆ ದಿನ ಅಡುಗೆಗೆ ಬೇಕಾದ ತರಕಾರಿಯನ್ನು ಹೆಚ್ಚಿ ಕೊಡಬೇಕು, ಕೆಲಸ ಮಾಡುತ್ತಲೇ ಜೈಲು ಟೋಪಿ ಅಳತೆ ಸರಿ ಇಲ್ಲ ಮುಂದಿನ ಬಾರಿ ಟೋಪಿ ಸೈಜ್ ಬೇರೆ ಕೊಡಬೇಕು ಎಂದು ಚಕ್ರವರ್ತಿ ಬಿಗ್ ಬಾಸ್‌ಗೆ ತಿಳಿಸಿದ್ದರು. 

6ನೇ ವಾರದ  ನಾಮಿನೇಶನ್‌ಗೆ ದಾಂಢಿಗರು... ದಿವ್ಯಾ ನನಗೆ ಓಕೆ ಎಂದ ಮಂಜು! 

ರಘು ಗೌಡ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಚಕ್ರವರ್ತಿ ವಿರುದ್ಧ ಮನೆಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಬಿಟ್ಟಿ ಸಲಹೆ ನೀಡುತ್ತಾರೆ ಅಂತ ದಿವ್ಯಾ ಮಾಡಿದ ಕಾಮೆಂಟ್‌ಗೆ ಚಕ್ರವರ್ತಿ ಪಿತ್ತ ನೆತ್ತಿಗೆ ಏರಿತ್ತು. ಪ್ರಶಾಂತ್, ಶಮಂತ್, ಚಕ್ರವರ್ತಿ ಹಾಗೂ ವಿಶ್ವನಾಥ್ ಗೇಮ್ ಪ್ಲಾನ್ ಮಾಡಿದ ಪ್ರಕಾರ ದಿವ್ಯಾ ಸುರೇಶ್‌ರನ್ನು ಜೈಲಿಗೆ ಕಳುಹಿಸಬೇಕು ಎಂದುಕೊಂಡಿದ್ದರು ಆದರೆ ಬಿಗ್ ಬಾಸ್ ಮನೆಯಲ್ಲಿ ಅಂದುಕೊಂಡಂತೆ ಏನೂ ನಡೆಯುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?