ಕರಿಯಾ ಅಂತ ಒಪ್ಕೊಬೇಕು, ಹೆದರ್ಕೊಂಡ್ರೆ ಹೆದರಿಸುತ್ತಾರೆ ಅದಿಕ್ಕೆ ಎದ್ರಾಕೊಳ್ಳಿ: Duniya Vijay

By Suvarna News  |  First Published Jan 1, 2022, 10:46 AM IST

ತಂದೆ ತಾಯಿ ಇರುವ ಸ್ಥಳವೇ ದೇಗುಲ. ಕರಿಯಾ ಹಾಡನ್ನು ಒಪ್ಪಿಕೊಂಡಿರುವೆ..... 


ಹೊಸ ವರ್ಷದ ಪ್ರಯುಕ್ತ ಕಲರ್ಸ್ ಕನ್ನಡ (Colors Kannada) ವಾಹಿನಿ ರಂಗು ರಂಗೋಲಿ ಸ್ಪೆಷಲ್ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸದ್ಯಕ್ಕೆ ಹೈಡಿಮ್ಯಾಂಡ್ ಇರುವ ನಟರಾದ ದುನಿಯಾ ವಿಜಯ್ (Duniya Vijay), ಡಾಲಿ ಧನಂಜಯ್ (Dolly Dhananjay), ಶ್ರೀಮುರಳಿ (Sri Mural), ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ವಿಜಯ್ ರಾಘವೇಂದ್ರ (Vijay Raghavendra) ಭಾಗಿಯಾಗಿದ್ದರು. ಅಪರೂಪಕ್ಕೆ ವಿಜಯ್ ಮಾತುಕತೆಗೆ ಸಿಕ್ಕಿರುವ ಕಾರಣ ವೇದಿಕೆ ಮೇಲೆ ನಿರೂಪಕಿ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. 

ಹೌದು! ನಿರೂಪಕಿ ಅನುಪಮಾ ಗೌಡ (Anupama Gowda) ಇದೇ ಮೊದಲ ಬಾರಿ ದುನಿಯಾ ವಿಜಯ್ ಅವರನ್ನು ಮಾತನಾಡಿಸುತ್ತಿರುವುದು ಎಂದಿದ್ದಾರೆ. ಈ ವೇಳೆ ಮಜಾ ಭಾರತ (Maja Bharata) ಕಲಾವಿದರು ಆಗಮಿಸಿ ಬೇರೆ ಬೇರೆ ಶೈಲಿಯಲ್ಲಿ ವಿಜಯ್ ಕುಮಾರ್ ಅವರಿಗೆ ದೃಷ್ಟಿ ತೆಗೆದಿದ್ದಾರೆ. ದುನಿಯಾ ವಿಜಯ್ ಅಂತ ಖ್ಯಾತೆ ಪಡೆದುಕೊಂಡಿರುವವರು ಯಾಕೆ ಸಲಗ ಟೈಟಲ್ ಕಾರ್ಡ್‌ನಲ್ಲಿ (Title Card) ವಿಜಯ್ ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. 

Tap to resize

Latest Videos

undefined

'ನನ್ನ ತಾಯಿ ಸಲಗ (Salaga) ಸಿನಿಮಾ ಬಿಡುಗಡೆ ಸಮಯದಲ್ಲಿ ಹೇಳಿದ್ದರು. ತುಂಬಾ ಕಷ್ಟ ಪಟ್ಟು ಹುಡುಕಿ ನಿನಗೆ ವಿಜಯ್ ಕುಮಾರ (Vijay Kumar) ಅಂತ ಹೆಸರು ಇಟ್ಟಿದ್ದೀನಿ. ಈ ಹೆಸರು ನಿನಗೆ ಅದೃಷ್ಟ ತಂದುಕೊಡುತ್ತೆ ಅದನ್ನು ಮತ್ತೆ ಬಳಸು ಎಂದರು. ಹೀಗಾಗಿ ಅದೇ ಹೆಸರು ಟೈಟಲ್ ಕಾರ್ಡ್‌ನಲ್ಲಿ ಇರುವುದು. ದುನಿಯಾ ಸೇರಿಕೊಂಡು ಕೂಡ ಖ್ಯಾತಿ ತಂದಿದೆ, ವಿಜಯ್ ಕುಮಾರ್ ಆದ್ಮೇಲೆ ದೊಡ್ಡ ಮಟ್ಟದಲ್ಲಿ ಖ್ಯಾತಿ ಸಿಕ್ಕಿದೆ' ಎಂದು ವಿಜಯ್ ಹೇಳಿದ್ದಾರೆ. 

ಕೊರೋನಾ (Covid19) ಆರ್ಭಟ ಮತ್ತೆ ಹೆಚ್ಚಾಗುತ್ತಿದೆ ಈ ಸಮಯದಲ್ಲಿ ಚಿತ್ರಮಂದಿರಗಳು ಮತ್ತೆ ಬಂದ್ ಮಾಡುವ ಮಾತುಗಳು ಶುರುವಾದಾಗಲೇ ನೀವು ಸಲಗ ಸಿನಿಮಾ ಬಿಡುಗಡೆ ಮಾಡಲು ಕಾರಣವೇನು ಎಂದು ಪ್ರಶ್ನಿಸಿದ್ದಾಗ. 'ನನಗೆ ಹುಚ್ಚು ಧೈರ್ಯ ಇದೆ. ಆಮೇಲೆ ನನಗೆ ನನ್ನ ಮೇಲೆ ನಂಬಿಕೆ ಇದೆ. ನಾನು ಎಲ್ಲರಿಗೂ ಒಂದೇ ಹೇಳುವುದು ನಿಮ್ಮ ಮೇಲೆ ನೀವು ನಂಬಿಕೆ ಇಟ್ಟುಕೊಳ್ಳಬೇಕು. ಏನ್ ಬಂದ್ರು ನಾನು ಎದುರಿಸುತ್ತೀನಿ ಅನ್ನೋ ಧೈರ್ಯ ಇರಬೇಕು.. ಆಮೇಲೆ ಯಾವತ್ತು ಹೆದರಬೇಡಿ  ಏನೇ ಬಂದ್ರು ಹೆದರಬೇಡಿ ಯಾವತ್ತು ನೀವು ಹೆದರುವುದಕ್ಕೆ ಶುರು ಮಾಡ್ತೀರಾ ನಿಮ್ಮನ್ನು ಜಾಸ್ತಿ ಹೆದರಿಸುವುದಕ್ಕೆ ಶುರು ಮಾಡುತ್ತಾರೆ. ಯಾವಾಗ ನೀವು ಎದ್ರಾಕೊಂಡು ನಿಂತ್ಕೊಳ್ತೀರಾ automatic ಆಗಿ ಓಡಿ ಹೋಗ್ತಾರೆ. ಅದು ಕಷ್ಟನೂ ಆದ್ಬೋದು ದುಶ್ಮನ್ (Dushman) ಕೂಡ ಆಗ್ಬೋದು. 

Duniya Vijay Wife Workout: ಪತಿಯ ಹಾಗೆ ಪತ್ನಿ ಕೀರ್ತಿ ವಿಜಯ್ ಫುಲ್ ಫಿಟ್!

ತಂದೆ ತಾಯಿ ಸಂಬಂಧದ ಬಗ್ಗೆ:

'ಯಾರು ಸಾಧನೆ ಮಾಡಬೇಕು ಅಂದುಕೊಂಡಿದ್ದೀರಾ, ನೀವೆಲ್ಲರೂ ಒಂದು ಮಾಡಿ ತಾಯಿ ತಂದೆಗೆ (Mother and Father) ಪೂಜೆ ಮಾಡಿ. ಬೇರೆ ಯಾವ ದೇವರನ್ನೂ ಪೂಜೆ ಮಾಡಬೇಡಿ. ಅವರನ್ನು ಮನಸ್ಸಿನಿಂದ ಗೌರವಿಸಿ, ಸಣ್ಣ ಪುಟ್ಟ ಮಾತು ಬರುತ್ತೆ ಹೋಗುತ್ತೆ ಆದರೆ ನೀವು ಯಾವತ್ತು ಅವರನ್ನು ನಿಜವಾದ ದೇವರು ಅಂತ ಪೂಜಿಸುತ್ತೀರಾ ನೋಡಿ ಅಲ್ಲಿ ನಿಮ್ಮ ಬೆಳವಣಿಗೆ ನಿಮಗೆ ಗೊತ್ತಿಲ್ಲದ ಹಾಗೆ ಶುರುವಾಗುತ್ತದೆ. ನನ್ನ ಕಣ್ಣಿಗೆ ಕಾಣಿಸಿದ ದೇವರು ಅವರೇ. ಈ ಪ್ರಪಂಚನೇ ಅಮ್ಮ ಎಲ್ಲವೂ ಅಮ್ಮನೇ ಇಲ್ಲಿ ಈಗ ನನಗೆ ಏನ್ ನೋಡಿದ್ದರೂ ಅಮ್ಮ ಕಾಣಿಸುತ್ತಾರೆ.ನನಗೆ ಅವಳು ದೇವರು. ನಾನು ಊರಿಗೆ ಹೋದಾಗ ಮನೆಯಲ್ಲಿ ಇದ್ದಾಗ ನೆನಪಿಸಿಕೊಂಡರೆ ಅಮ್ಮನ ನೋಡ್ಬೇಕು. ಎಲ್ಲರೂ ಬನ್ನಿ ಇವತ್ತು ಗಣೇಶ ದೇಗುಲಕ್ಕೆ ಹೋಗೋಣ, ಸುಬ್ರಹ್ಮಣ್ಯಕ್ಕೆ ಹೋಗೋಣ ಅನ್ನುತ್ತಾರೆ ಆದರೆ ಅದಲ್ಲ ಬನ್ನಿ ದಿನ ಆದ್ರೆ ಅಮ್ಮಂಗೆ ಹೋಗಿ ಕೈ ಮುಗಿಯೋಣ ಅನ್ನಬೇಕು. 750 ರೂ ಸಂಬಳಕ್ಕೆ ಕೆಲಸ ಮಾಡಿದ ವ್ಯಕ್ತಿ ಈ ಮಟ್ಟಕ್ಕೆ ಬಂದಿದ್ದೀನಿ ಅಂದ್ರೆ ಅದಕ್ಕೆ ಅಮ್ಮನೇ ಕಾರಣ. ನನ್ನ ಜೀವನದಲ್ಲಿ ಆಕೆ ಇಲ್ಲ ಆದರೆ ಅವರು ಮೇಲಿಂದ ಸಲಗ ನೋಡುತ್ತಿದ್ದಾರೆ. ತಂದೆ ತಾಯಿನ ಯಾರೂ ಪೂಜೆ ಮಾಡುತ್ತಾರೋ ಅವರು ಯಾವತ್ತೂ ಕೆಡೋಲ್ಲ' ಎಂದು ವಿಜಯ್ ಹೇಳಿದ್ದಾರೆ.

 

click me!