Round Up 2021: ಈ ವರ್ಷ ಇದ್ದಕ್ಕಿದ್ದಂತೆ ಅಂತ್ಯವಾದ ಜನಪ್ರಿಯ ಧಾರಾವಾಹಿಗಳು!

By Suvarna NewsFirst Published Dec 31, 2021, 4:57 PM IST
Highlights

ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡ ಧಾರಾವಾಹಿಗಳು ಈ ವರ್ಷ ಇದ್ದಕ್ಕಿದ್ದಂತೆ ಅಂತ್ಯವಾಗಿವೆ. ಕೆಲವು ಕಥೆಗಳು ಅಪೂರ್ಣವೆಂದೆನಿಸಿದರೆ, ಮತ್ತೆ ಕೆಲವು abdrupt ಆಗಿ ಕೊನೆಯಾದವು. ಅಂತ್ಯವಾದ ಧಾರಾವಾಹಿಗಳ ಪಟ್ಟಿ ಇಲ್ಲಿದೆ...

ಕೊರೋನಾ ಲಾಕ್‌ಡೌನ್‌ನಿಂದ (Covid19) ಸಿನಿಮಾ ಮಾತ್ರವಲ್ಲದೆ ಕನ್ನಡ ಕಿರುತೆರೆಗೂ ದೊಡ್ಡ ಪೆಟ್ಟು ಬಿದ್ದಿತ್ತು. ಮೊದಲ ಲಾಕ್‌ಡೌನ್‌ನಲ್ಲಿ (Lockdown) ಚಿತ್ರೀಕರಣ ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೆ ಎರಡನೇ ಲಾಕ್‌ಡೌನ್‌ನಲ್ಲಿ ಹೈದರಾಬಾದ್‌ನಲ್ಲಿ (Hyderabad) ಚಿತ್ರೀಕರಣ ಮಾಡಲು ಅವಕಾಶ ನೀಡಿದ್ದರು. ಪ್ರಯಾಣ ಮಾಡಬೇಕು ಎನ್ನುವ ಭಯಕ್ಕೆ ಅನೇಕ ಕಿರುತೆರೆ ಕಲಾವಿದರು ಧಾರಾವಾಹಿಯಿಂದ ಹೊರ ನಡೆದರು. ಆದರೆ ಬಜೆಟ್ ಸಮಸ್ಯೆಯಿಂದ ಹಲವು ಧಾರಾವಾಹಿಗಳು ಅಂತ್ಯವಾದವು. ಇಲ್ಲಿದೆ ನೋಡಿ ಆ ಧಾರಾವಾಹಿಗಳ ಪಟ್ಟಿ

ಬ್ರಹ್ಮಗಂಟು (Brahmagantu)
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯನ್ನು ಶ್ರುತಿ ನಾಯ್ಡು (Sruthi Naidu) ನಿರ್ದೇಶನ ಮಾಡುತ್ತಿದ್ದರು. 1000ಕ್ಕೂ ಹೆಚ್ಚು ಎಪಿಸೋಡ್‌ ಪೂರೈಸಿತ್ತು. ಆದರೆ ಜುಲೈ ತಿಂಗಳಿನಲ್ಲಿ ಅಂತ್ಯವಾಯಿತು. ಗೀತಾ ಭಾರತಿ ಭಟ್ (Geetha Bharathi Bhat), ಭರತ್ ಬೊಪಣ್ಣ ಮತ್ತು ಟಿ ಎಸ್ ನಾಗಾಭರಣ (TS Nagabharana) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಕಾದಂಬರಿ (Kadambari)
ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯನ್ನು ರಾಜೇಶ್ ನಟರಂಗ ನಿರ್ಮಾಣ ಮಾಡಿದ್ದರು. ಶೋಭಿತಾ, ನಮಿತಾ (Namitha) ಮತ್ತು ಜಯಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೆಚ್ಚಿನ ದಿನಗಳ ಕಾಲ ಈ ಧಾರಾವಾಹಿ ಪ್ರಸಾರವಾಗಲಿಲ್ಲ. 

ಲಗ್ನಪತ್ರಿಕೆ (Lagna Patrike)
ಚೈತ್ರಾ ಕೊಟೂರು (Chaitra kotturu) ಮತ್ತು ಸಂಜನಾ ಬುರ್ಲಿ (Sanjana Burli) ಲಗ್ನಪತ್ರಿಕೆ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಧಾರಾವಾಹಿ ನಟ ಮತ್ತು ನಟಿ ಚೆನ್ನಾಗಿ ಅಭಿನಯಿಸುತ್ತಿಲ್ಲ ಹಾಗೇ ಮೇಕಪ್ (Makeup) ಕೆಟ್ಟದಾಗಿದೆ, ಎಂದು ನೆಗೆಟಿವ್ ಕಾಮೆಂಟ್ಸ್ (Negative) ಪಡೆದುಕೊಳ್ಳುತ್ತಿತ್ತು. ಹಾಗೆಯೇ ಟಿಆರ್‌ಪಿ ಕೂಡ ಕಡಿಮೆ ಇದ್ದ ಕಾರಣ ನಿಲ್ಲಿಸಲಾಗಿತ್ತು. 

Round Up 2021: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ, ನಟಿಯರಿವರು!

ಮನಸಾರೆ (Manasare)
415 ಎಪಿಸೋಡ್‌ ಮುಗಿಸಿ ಮನಸಾರೆ ಧಾರಾವಾಹಿ ಅಂತ್ಯವಾಗಿತ್ತು. ಆರಂಭದಲ್ಲಿ ಟಿಆರ್‌ಪಿಯಲ್ಲಿ (TRP) ಮೊದಲ ಸ್ಥಾನ ಪಡೆದುಕೊಂಡಿತ್ತು ಆದರೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು. ಈ ಧಾರಾವಾಹಿಯಲ್ಲಿ ಸುನಿಲ್ ಪುರಾಣಿಕ್ (Sunil Puranik), ಚಿತ್ಕಲಾ ಬಿರಾದರ್, ಯಮುನಾ ಶ್ರೀನಿಧಿ ನಟಿಸಿದ್ದಾರೆ. 

ಹೂ ಮಳೆ (Hoo Male)
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಹೂ ಮಳೆ ಧಾರಾವಾಹಿ ಇದ್ದಕ್ಕಿದ್ದಂತೆ ಅಂತ್ಯವಾಗಯಿತು. ಧಾರಾವಾಹಿ ಅಂತ್ಯವಾಗುತ್ತಿರುವುದು ವೀಕ್ಷಕರಿಗೆ ಮಾತ್ರವಲ್ಲದೆ ಸ್ವತಃ ಕಲಾವಿದರಿಗೂ ಶಾಕ್ ತಂದುಕೊಟ್ಟಿತ್ತು. ಚಂದನಾ ಅನಂತಕೃಷ್ಣ (Chandana Ananthakrishna) , ಸುಜಾತಾ ಅಕ್ಷಯ್ (Sujatha Akshaya), ಯಶವಂತ್ ಮತ್ತು ಶ್ರೀರಾಮ್‌ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 

ನಿನ್ನಿಂದಲೇ (Ninindale)
ನಿನ್ನಿಂದಲೇ ಧಾರಾವಾಹಿ ಕೂಡ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು ಆದರೆ ಇದ್ದಕ್ಕಿದ್ದಂತೆ ಅಂತ್ಯವಾಗಿತ್ತು. ಪ್ರಥಮಾ ಪ್ರಸಾದ್, ಪವಿತ್ರಾ, ನಾಗೇಂದ್ರ ಶಾ (Nagendra Sha), ಗಾಯಿತ್ರಿ ಪ್ರಭಾಕರ್‌ (Gayathri Prabhakar) ಮತ್ತು ಅರ್ಪಿತಾ ಈ ಧಾರಾವಾಹಿಯಲ್ಲಿ ನಟಿಸಿದ್ದರು. 

ಕಳೆದ ನವೆಂಬರ್‌ ತಿಂಗಳಿನಲ್ಲಿ ಕಾದಂಬರಿ (Kadambari) ಧಾರಾವಾಹಿ ಕೂಡ ಅಂತ್ಯವಾಯಿತು.

click me!