10 ಸೀಸನ್ಸ್ ಸಂಪ್ರದಾಯ ಕೈಬಿಟ್ಟ ಕಲರ್ಸ್ ಕನ್ನಡ; ಯಾಕಿಂಗ್ ಮಾಡಿದ್ರಿ ಬಿಗ್‌ಬಾಸ್?

Published : Oct 07, 2024, 07:16 PM ISTUpdated : Oct 08, 2024, 11:59 AM IST
10 ಸೀಸನ್ಸ್ ಸಂಪ್ರದಾಯ ಕೈಬಿಟ್ಟ ಕಲರ್ಸ್ ಕನ್ನಡ; ಯಾಕಿಂಗ್ ಮಾಡಿದ್ರಿ ಬಿಗ್‌ಬಾಸ್?

ಸಾರಾಂಶ

ಈ ಬಾರಿಯ ಬಿಗ್ ಬಾಸ್ ಸೀಸನ್ 11ರಲ್ಲಿ ಯಾವೊಬ್ಬ ಸಿಂಗರ್​ ಕೂಡ ಇಲ್ಲ. ಹೋಗಲಿ ಕವಿತೆ ಬರಿಯೋರು ಇಲ್ಲ. ಹೀಗಾಗಿ ಇಷ್ಟೂ ಸೀಸನ್‌ನಲ್ಲಿ ಭಾಗಶಃ ಇರ್ತಿದ್ದ ಎಂಟರ್​ಟೇನ್​ಮೆಂಟ್​ ಈ ಸೀಸನ್​ನಲ್ಲಿ ಮಿಸ್​ ಆಗಿದೆ.

- ವಿನುತಾ ಪರಮೇಶ್

ಈ ಬಾರಿಯ ಬಿಗ್ ಬಾಸ್ ಸೀಸನ್ 11ರಲ್ಲಿ ಯಾವೊಬ್ಬ ಸಿಂಗರ್​ ಕೂಡ ಇಲ್ಲ. ಹೋಗಲಿ ಕವಿತೆ ಬರಿಯೋರು ಇಲ್ಲ. ಹೀಗಾಗಿ ಇಷ್ಟೂ ಸೀಸನ್‌ನಲ್ಲಿ ಭಾಗಶಃ ಇರ್ತಿದ್ದ ಎಂಟರ್​ಟೇನ್​ಮೆಂಟ್​ ಈ ಸೀಸನ್​ನಲ್ಲಿ ಮಿಸ್​ ಆಗಿದೆ.

ಬಿಗ್ ಬಾಸ್​.. ಬಿಗ್ ಬಾಸ್​ ದೇಶದಾದ್ಯಂತ ಎಲ್ಲೆಲ್ಲೂ ಬಿಗ್ ಬಾಸ್​ ಫೀವರ್​ ಶುರುವಾಗಿದೆ. ಹಾರಾಟ ಚೀರಾಟವಿದ್ದರೂ ಬಿಗ್ ಬಾಸ್​​ ಸದ್ಯ ಎಲ್ಲೆಡೆ ಚಾಲ್ತಿಯಲ್ಲಿದೆ. ದೊಡ್ಮನೆಯಲ್ಲಿ ಮೊದಲ ಎಲಿಮನೇಷನ್​ ಕೂಡ ನಡೆದಿದೆ. ಯಮುನಾ ಶ್ರೀನಿಧಿ ಮನೆಯಿಂದ ಹೊರಬಂದಿದ್ದಾರೆ. ಯಾರೋ ವೀಕ್​ ಅಭ್ಯರ್ಥಿ ಮನೆಯಿಂದ ಹೊರಗೆ ಬರ್ಬೋದು ಅಂತ ಊಹಿಸಿದ್ದ ಬಿಗ್​ಬಾಸ್​ ಪ್ರೇಕ್ಷರಿಗೆ ಯಮುನಾ ಶ್ರೀನಿಧಿ ಎಲಿಮನೇಷನ್​ ಶಾಕ್​ ಕೊಟ್ಟಿದೆ. ಕಾರಣ ಮೊದಲ ದಿನದಿಂದಲೇ ಯಮುನಾ ಶ್ರೀನಿಧಿ ಸಖತ್​ ವೈಲೆಂಟ್​ ಆಗಿ ಆಟ ಶುರು ಮಾಡಿದ್ದರು. ಇನ್ನು ಚೈತ್ರಾಕುಂದಾಪರ ಜೊತೆಗಿನ ಇವರ ವಾಗ್ವಾದ ನೋಡಿ, ಒಂದಷ್ಟು ವಾರ ಸರ್ವೈವ್​ ಆಗುತ್ತಾರೆ ಅಂತಲೇ ಅಂದಾಜಿಸಲಾಗಿತ್ತು. ಆದರೆ, ಇದೀಗ ಅಚ್ಚರಿ ಎಂಬಂತೆ ಯಮುನಾ ಶ್ರೀನಿಧಿ ಬಿಗ್ ಬಾಸ್ ಮನೆಯಿಂದ ಔಟ್​ ಆಗಿದ್ದಾರೆ. ಈ ನಡುವೆ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದ್ದು, ಬಿಗ್ ಬಾಸ್ ಯಾಕ್​ ಹಿಂಗ್​ ಮಾಡಿದ್ದಾರೆ ಎಂದು ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸಪ್ರೈಸ್‌ ಎಲಿಮಿನೇಷನ್, ಮೊದಲನೇವಾರ ಯಮುನಾ ಶ್ರೀನಿಧಿ ಔಟ್!

ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಟಿವಿ, ಮೊಬೈಲ್ ಸೇರಿದಂತೆ ಯಾವುದೇ ಸಂಪರ್ಕ ಮಾಧ್ಯಮಗಳು ಇರುವುದಿಲ್ಲ. ಇದ್ದರೂ ಅದರಲ್ಲಿ ಯಾವುದೇ ಚಾನೆಲ್ಸ್​ ಬರೋದಿಲ್ಲ. ಇನ್ನು ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳನ್ನ ಹೊರತುಪಡಿಸಿ ಅಲ್ಲಿ ಕೇಳೋಕೆ ಸಿಗೋದು, ಬೆಳಗಿನ ವೇಕ್​ ಅಪ್​ ಸಾಂಗ್​, ಬಿಗ್ ಬಾಸ್​ ಧ್ವನಿ, ಅದು ಬಿಟ್ಟರೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪನ ಪಂಚಾಯಿತು ಮಾತುಗಳಷ್ಟೇ..  ಇನ್ನು ಕಂಟೆಸ್ಟೆಂಟ್‌ಗಳಿಗೆ ಟಾಸ್ಕ್​ ಇದ್ದಾಗ​ ಒಂದಷ್ಟು ಟಾಸ್ಕ್ ವಿಚಾರಕ್ಕೆ ಜಗಳ, ಮನೆ ಕೆಲಸ ಇದ್ದಾಗ ಮನೆಗೆಲಸ ಮಾತುಗಳು.. ಯಾರಾದರೂ ಜಗಳ ಮಾಡಿದರೆ ಜಗಳದ ಮಾತುಗಳು ಹಾಗೂ ತರ್ಲೆ ಮಾಡಿದರೆ ಒಂದಷ್ಟು ನಗು.. ದೊಡ್ಮನೆ ದುನಿಯಾ ಇರೋದು ಇಷ್ಟೇ.. ಕಳೆದೊಂದು ದಶಮಾನದಿಂದ 10 ಸೀಸನ್‌ಗಳಿಂದಲೂ ಬಿಗ್ ಬಾಸ್ ಎಂದರೆ ಇಷ್ಟೇ ಎಂದು ನೋಡಿಕೊಂಡು ಬಂದಿದ್ದೀವಿ. ಇದನ್ನ ಹೊರತು ಪಡಿಸಿಯೂ ಬಿಗ್​ ಮನೆಯಲ್ಲಿ ಸಿಗುತ್ತಿದ್ದ ಮನರಂಜನೆ ಮಿಸ್​ ಆಗಿದೆ.

ಅದೇನ್​ ಗೊತ್ತಾ? ಪ್ರತಿ ಸೀಸನ್​ನಲ್ಲೂ ಯಾರೊಬ್ಬರಾದ್ರೂ ಪುರುಷ ಅಥವಾ ಮಹಿಳಾ ಹಾಡುಗಾರರು​ ಇರುತ್ತಿದ್ದರು.. ಅಥವಾ, ಸಾಂಗ್​ ಬರಿಯೋ ಸಾಹಿತ್ಯ ರಚನಾಕಾರರು ಆದರೂ ಇರುತ್ತಿದ್ದರು. ಆದರೆ, ಈ ಬಾರಿಯ ಬಿಗ್ ಬಾಸ್ ಸೀಸನ್ 11ರಲ್ಲಿ ಯಾವೊಬ್ಬ ಸಿಂಗರ್​ ಕೂಡ ಇಲ್ಲ. ಹೋಗಲಿ ಕವಿತೆ ಬರಿಯೋರು ಇಲ್ಲ. ಹೀಗಾಗಿ ಇಷ್ಟೂ ಸೀಸನ್‌ನಲ್ಲಿ ಭಾಗಶಃ ಇರ್ತಿದ್ದ ಎಂಟರ್​ಟೇನ್​ಮೆಂಟ್​ ಈ ಸೀಸನ್​ನಲ್ಲಿ ಮಿಸ್​ ಆಗಿದೆ. ಈ ಹಿಂದೆ ರ್ಯಾಪರ್​ ಚಂದನ್​ ಶೆಟ್ಟಿ ಇದ್ದ ಸೀಸನ್​, ಅತ್ತ ವಾಸುಕಿ ವೈಭವ್​ ಇದ್ದ ಸೀಸನ್‌ನ ಹಾಡುಗಳು ಇಂದಿಗೂ ಟ್ರೆಂಡಿಂಗ್‌ನನಲ್ಲಿವೆ.

ಇದನ್ನೂ ಓದಿ: ಮಾನವ ಹಕ್ಕುಗಳ ಉಲ್ಲಂಘನೆ ಆರೋಪ: ಬಿಗ್‌ಬಾಸ್ ಮನೆಗೆ ಮಹಿಳಾ ಆಯೋಗ ಭೇಟಿ?

ಸಂಗೀತಗಾರ ವಾಸುಕಿ ವೈಭವ್ ಇದ್ದ ಸೀಸನ್‌ನಲ್ಲಿ ಕಿಚ್ಚನಿಗೆ ಡೆಡಿಕೇಟ್​ ಮಾಡಿದ್ದ ಸಾಂಗ್​... 'ಮನಸ್ಸಿಂದ ಯಾರೂನು ಕೆಟ್ಟೋರಲ್ಲ.., ಅನ್ನೋ ಸಾಲುಗಳು ಜನಮನದಲ್ಲಿ ಉಳಿದಿವೆ. ಚಂದನ್​ ಶೆಟ್ಟಿ ನಿವೇದಿತಾ ಗೌಡಗೆ ಹಾಡಿದ್ದ ಸಾಲುಗಳಾದ ಗೊಂಬೆ ಗೊಂಬೆ ಸಾಂಗ್​ ಎವರ್‌ಗ್ರೀನ್ ಆಗಿದೆ​. ಹೀಗೆ ಹಿಂದೆ ನಡೆದ ಎಲ್ಲ 10 ಸೀಸನ್‌ಗಳಲ್ಲಿ ಇದ್ದ ಮನರಂಜನೆ ಈ ಸೀಸನ್‌​ನಲ್ಲಿ ಮಿಸ್​ ಆಗಿತ್ತು. ಈ ಸೀಸನ್‌ನಲ್ಲಿ ಉಗ್ರಂ ಮಂಜು ಹಾಡಿದ್ದ ಹಾಡನ್ನು ಕೇಳಿದ್ದ ವೀಕ್ಷಕರು, ಉಗ್ರಂ ಮಂಜು ಇರೋದ್ರಿಂದ ಈ ಬಾರಿ ಸಿಂಗರ್ಸ್​ ಇಲ್ಲ ಅಂತ ಮೀಮ್ಸ್​ ಮಾಡ್ತಿದ್ದಾರೆ. ಸದ್ಯಕ್ಕೆ ಯಾರೊಬ್ಬರ ಕಂಠದಲ್ಲೂ ಯಾವುದೇ ಸಾಂಗ್​ ಕೇಳಿ ಬಂದಿಲ್ಲ, ಮುಂದಿನ ದಿನಗಳಲ್ಲಿ ಯಾರಾದರೂ ಗಂಟಲು ತೆರೆದರೆ ಅಚ್ಚರಿ ಪಡಬೇಕಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?