ರಾಕಿಂಗ್ ಸ್ಟಾರ್ ಡಿಪ್ರೆಷನ್ ಬಗ್ಗೆ ಡೈರೆಕ್ಟರ್ ಶ್ರುತಿ ನಾಯ್ಡುಗೇಕೆ ಭಯವಿತ್ತು?

By Roopa Hegde  |  First Published Oct 7, 2024, 12:14 PM IST

ಕನ್ನಡದ ಪ್ರಸಿದ್ಧ ನಿರ್ಮಾಪಕಿ ಶ್ರುತಿ ನಾಯ್ಡು, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ. ಯಶ್ ವೃತ್ತಿಯ ಆರಂಭದ ದಿನಗಳಲ್ಲಿ ಯಾವೆಲ್ಲ ಕನಸುಗಳನ್ನು ಹೊಂದಿದ್ರು ಎಂಬುದನ್ನು ಶ್ರುತಿ ಬಿಚ್ಚಿಟ್ಟಿದ್ದಾರೆ. ಹಾಗೆ ತಮಗೆ ಅವರ ಮೇಲಿದ್ದ ಭಯವೇನು ಎಂಬುದನ್ನು ಶ್ರುತಿ ನಾಯ್ಡು ತಿಳಿಸಿದ್ದಾರೆ.
 


ಕನ್ನಡ ಕಿರುತೆರೆ (Kannada television)ಯ ಪ್ರಸಿದ್ಧ ನಿರ್ಮಾಪಕಿ, ನಿರ್ದೇಶಕಿ ಹಾಗೂ ನಟಿ ಶ್ರುತಿ ನಾಯ್ಡು (producer, director and actress Shruti Naidu) ಮಹಿಳೆಯರಿಗೆ ಸ್ಫೂರ್ತಿ. ನಟನೆ ಮೂಲಕ ತಮ್ಮ ವೃತ್ತಿ ಶುರು ಮಾಡಿದ ಶ್ರುತಿ ನಾಯ್ಡು, ಸಾಕಷ್ಟು ಹಿಟ್ ಸೀರಿಯಲ್ ಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಅಧ್ಬುತ ಕಲಾವಿದರನ್ನು ಇಂಡಸ್ಟ್ರಿಗೆ ಪರಿಚಯ ಮಾಡಿದ್ದಾರೆ. ಶ್ರುತಿ ನಾಯ್ಡು ಸೀರಿಯಲ್ ಸಾಕಷ್ಟು ವಿಶೇಷತೆಯನ್ನು ಹೊಂದಿರುತ್ತದೆ. ರ್ಯಾಪಿಡ್ ರಶ್ಮಿ (Rapid Rashmi) ಶೋನಲ್ಲಿ ಪಾಲ್ಗೊಂಡಿದ್ದ ಶ್ರುತಿ ನಾಯ್ಡು, ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ (Sandalwood Rocking Star Yash) ಬಗ್ಗೆ ಮಾತನಾಡಿದ್ದಾರೆ.

2004ರಲ್ಲಿ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದ ನಂದಗೋಕುಲ ಸೀರಿಯಲ್ ನಲ್ಲಿ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಟಿಸಿದ್ದರು. ಇದು ಅವರ ಮೊದಲ ಸೀರಿಯಲ್. ಆ ನಂತ್ರ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಜೋಡಿ ತಿರುಗಿ ನೋಡಲಿಲ್ಲ. ಯಶ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಶೃತಿ, ಒಂದು ಸಮಯದಲ್ಲಿ ಯಶ್ ಡಿಪ್ರೆಶನ್ ಗೆ ಹೋಗ್ಬಿಟ್ರೆ ಎನ್ನುವ ಭಯ ನನ್ನನ್ನು ಕಾಡಿತ್ತು ಎಂದಿದ್ದಾರೆ. ಯಶ್, ಮೈಸೂರಿನ ಹುಡುಗ ಆಗಿದ್ದ ಕಾರಣ, ಶ್ರುತಿ, ಬೇಗ ಕನೆಕ್ಟ್ ಆಗಿದ್ದರಂತೆ. ಸೆಟ್ ನಲ್ಲಿ ಯಶ್ ಜೊತೆ ಸಾಕಷ್ಟು ವಿಷ್ಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯಶ್ ಮಾತು ಕೇಳಿ ಸ್ವಲ್ಪ ಟೆನ್ಷನ್ ಆಗಿದ್ರು ಶ್ರುತಿ.

Tap to resize

Latest Videos

undefined

ವೆಟ್ಟೈಯಾನ್ ರಣಬೇಟೆಗೆ ಕೌಂಟ್​​ಡೌನ್ ಸ್ಟಾರ್ಟ್: ರಜನಿ ಎನ್​ಕೌಂಟರ್​ಗೆ ಬಿಗ್ ಬಿ ಕೌಂಟರ್..!

ಮುಂದೇನಾಗ್ಬೇಕು ಎನ್ನುವ ಕ್ಲಾರಿಟಿ ಯಶ್ ಗೆ ಆಗ್ಲೇ ಇತ್ತು ಎನ್ನುತ್ತಾರೆ ಶ್ರುತಿ ನಾಯ್ಡು. ತಮ್ಮೆಲ್ಲ ಪ್ಲಾನ್ ಗಳನ್ನು ಯಶ್ ಹೇಳಿದ್ದರು. ಪ್ಯಾನ್ ಇಂಡಿಯಾ ಲೆವಲ್ ನಲ್ಲಿ ಪ್ರಸಿದ್ಧಿ ಪಡೆಯಬೇಕು, ಸಿನಿಮಾ ಇಂಡಸ್ಟ್ರಿಗೆ ಹಿಟ್ ಚಿತ್ರಗಳನ್ನು ನೀಡ್ಬೇಕು ಎನ್ನುವ ಆಸೆಯನ್ನು ಮೊದಲೇ ಕಂಡಿದ್ರು ಯಶ್. ಒಂದ್ವೇಳೆ ಅವರು ಅಂದ್ಕೊಂಡಿದ್ದು ಆಗಿಲ್ಲವೆಂದ್ರೆ ಎಂಬ ಭಯ ಶ್ರುತಿಗೆ ಆಗ ಕಾಡಿತ್ತಂತೆ. ಯಶ್, ಹಂತ ಹಂತವಾಗಿ ಬೆಳೀತಾ ಹೋದಂತೆ ನನಗೆ ಖುಷಿಯಾಯ್ತು. ಇವರು ಮಾಡೇ ಮಾಡ್ತಾರೆ ಎಂಬ ಭರವಸೆ ಬಂತು ಎಂದಿದ್ದಾರೆ ಶ್ರುತಿ ನಾಯ್ಡು. 

ಯಶ್ ಒಂದೇ ಸಮನೆ ಕನಸುಗಳನ್ನು ಹೇಳ್ತಾ ಇದ್ರೆ, ಶ್ರುತಿ ನಗ್ತಿದ್ದರಂತೆ. ಗಾಡ್ ಫಾದರ್ ಇಲ್ಲದೆ ಹೇಗೆ ಮಾಡ್ತೀರಿ ಎಂದು ಕಾಲೆಳೆದಿದ್ದರು. ಆದ್ರೆ ದೊಡ್ಡ ಕನಸು ಕಂಡಿದ್ದ ಯಶ್, ಇಂಡಸ್ಟ್ರಿಯಲ್ಲಿ ಯಾವುದೇ ಸಪೋರ್ಟ್ ಇಲ್ಲದೆ, ಅಮ್ಮನ ಆಸೆಯಂತೆ ಬೆಳೆದ್ರು. ಅವರ ಹಠ, ಅವರ ಛಲ, ಅವರ ಫ್ಲಾನಿಂಗ್ ಅವರನ್ನು ಈ ಮಟ್ಟಿಗೆ ತಂದು ನಿಲ್ಲಿಸಿದೆ. ಸತತ ಪ್ರಯತ್ನದಿಂದ ಅವರು ಈ ಎಲ್ಲ ಸಾಧನೆ ಮಾಡಿದ್ದಾರೆ. ಅವರ ಬೆಳವಣಿಗೆ ನೋಡಿ ಸಂತೋಷವಾಗಿದೆ ಎಂದಿದ್ದಾರೆ ಶ್ರುತಿ ನಾಯ್ಡು. 

ಹಾಲಿವುಡ್​ಗೂ ಸವಾಲ್ ಹಾಕ್ತಾನೆ ಮಾರ್ಟಿನ್ ಧ್ರುವ: 12 ಭಾಷೆಯಲ್ಲಿ ಸಿದ್ಧವಾಗಿರೋ ಮೊದಲ ಕನ್ನಡ ಸಿನಿಮಾ

ತಮ್ಮ ಜೀವನದ ಅನೇಕ ಅನುಭವಗಳನ್ನು ಹಂಚಿಕೊಂಡ ಶ್ರುತಿ ನಾಯ್ಡು, ಹೆಣ್ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಎಷ್ಟೋ ಹೆಣ್ಮಕ್ಕಳು ತಮ್ಮ ಕಾನ್ಫಿಡೆನ್ಸ್ ಕಳೆದುಕೊಳ್ತಿದ್ದಾರೆ. ಈಗಿನ ಜಗತ್ತು ಸೆನ್ಸಿಟಿವ್ ಆಗಿದೆ. ಆದ್ರೆ ರಿಲೇಶನ್ಶಿಪ್ ನಿಂದ ಹಿಡಿದು ಕೆಲಸದವರೆಗೆ ಎಲ್ಲ ಕಡೆ ಸಾಕಷ್ಟು ಅವಕಾಶವಿದೆ. ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಬೇಡಿ. ಅದ್ರಿಂದ ಹೊರಗೆ ಬನ್ನಿ. ಕಾನ್ಫಿಡೆಂಟ್ ಆಗಿರಿ. ನಿಮ್ಮ ಸುತ್ತ ಎಷ್ಟು ಸುಂದರ ಪ್ರಪಂಚವಿದೆ. ಕಣ್ತೆರೆದು ನೋಡಿ. ಬೇಕಾದ್ದೆಲ್ಲ ಇಲ್ಲಿ ಸಿಗುತ್ತೆ. ಭಗವಂತ ನಿಮಗೆ ಅಂತ ಏನೆಲ್ಲ ಕೊಟ್ಟಿದ್ದಾನೆ, ನಿಮ್ಮಲ್ಲಿ ಒಳ್ಳೆಯದು ಏನಿದೆ ಎಂಬುದನ್ನು ನೋಡಿ. ಧೈರ್ಯಕಳೆದುಕೊಳ್ಳದೆ ಮುನ್ನುಗ್ಗಿ ಎಂದಿದ್ದಾರೆ ಶ್ರುತಿ ನಾಯ್ಡು. 

click me!