ಬಿಗ್‌ಬಾಸ್‌ನಲ್ಲಿ ಎಲ್ಲರಿಗೂ ಒಂದು ನ್ಯಾಯ ಆದ್ರೆ, ಯಮುನಾ ಶ್ರೀನಿಧಿಗೆ ಮತ್ತೊಂದು ನ್ಯಾಯ ಏಕೆ?

By Mahmad Rafik  |  First Published Oct 7, 2024, 3:27 PM IST

ಬಿಗ್‌ಬಾಸ್ ಸೀಸನ್ 11 ರಲ್ಲಿ ಯಮುನಾ ಶ್ರೀನಿಧಿ ಅವರ ಹಠಾತ್ ಹೊರಗಡೆಯಿಂದಾಗಿ ಅಚ್ಚರಿ ಮತ್ತು ವಿವಾದಗಳು ಸೃಷ್ಟಿಯಾಗಿವೆ.  ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರೋದೇನು?


ಬೆಂಗಳೂರು: ಕನ್ನಡದ ಬಿಗ್‌ಬಾಸ್ ಸೀಸನ್ 11 ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಮೊದಲ ದಿನದಿಂದಲೂ ಪ್ರಬಲ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ಯಮುನಾ ಶ್ರೀನಿಧಿ ಹೊರಗೆ ಬಂದಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಮನೆಯಿಂದ ಹೊರಗೆ ಹೋಗುವ ಸ್ಪರ್ಧಿಗಳಾಗಿ ಹಂಸಾ ಮತ್ತು ಯಮುನಾ ನಿಂತುಕೊಂಡಿದ್ದರು. ಹಂಸಾ ಸೇಫ್‌ ಆಗಿ ಮನೆಯಲ್ಲಿಯೇ ಉಳಿದಿದ್ದು, ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಕಾರಣ ಹಂಸಾ ನಾಮಿನೇಷನ್ ನಿಂದ ಹೊರಗೆ ಉಳಿಯಲಿದ್ದು, ಮೂರನೇ ವಾರಕ್ಕೆ ಕಾಲಿಡುವ ಮೊದಲ ಸ್ಪರ್ಧಿಯಾಗಿದ್ದಾರೆ. ಮನೆಯಿಂದ ಹೊರ ಬಂದಿರುವ ಯಮುನಾ ಶ್ರೀನಿಧಿ ಜೊತೆ ಹೀಗ್ಯಾಕೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. 

ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಯನ್ನು ವೇದಿಕೆ ಮೇಲೆ ಕರೆಸಲಾಗುತ್ತದೆ. ಸ್ಪರ್ಧಿಗೆ ಮನೆಯಲ್ಲಿನ ಅನುಭವ ಹೇಗಿತ್ತು ಸೇರಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಾಗೆಯೇ ಸ್ಪರ್ಧಿ ಬಿಗ್‌ಬಾಸ್ ಮನೆಯಲ್ಲಿ ಕಳೆದ ಕ್ಷಣಗಳ ವಿಡಿಯೋವನ್ನು ತೋರಿಸಲಾಗುತ್ತದೆ. ಈ ವಿಡಿಯೋದಲ್ಲಿ ಸ್ಪರ್ಧಿಯ ಸಂತಸ, ಕೋಪ, ಜಗಳ ಸೇರಿದಂತೆ ಎಲ್ಲಾ ಸನ್ನಿವೇಶಗಳನ್ನು ಕವರ್ ಮಾಡಲಾಗಿರುತ್ತದೆ. ಹಾಗೆ ನೋಡಿದ್ರೆ ಯಮುನಾ ಶ್ರೀನಿಧಿ ಬಿಗ್‌ಬಾಸ್ ಮನೆ ಪ್ರವೇಶಿಸಿದ ಕ್ಷಣದಿಂದಲೂ ಆಕ್ಟಿವ್ ಆಗಿದ್ದವರು. ಬಿಗ್‌ಬಾಸ್ ಸಹ ಯಾರನ್ನು ಸ್ವರ್ಗ ಮತ್ತು ನರಕಕ್ಕೆ ಯಾರನ್ನು ಕಳುಹಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಯಮುನಾ ಅವರಿಗೆ ನೀಡಲಾಗಿತ್ತು. 

Tap to resize

Latest Videos

undefined

ಆರಂಭದಲ್ಲಿ ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ ನಂತರ ಜಗದೀಶ್ ಮತ್ತು ಗೌತಮಿ ಜಾಧವ್  ಸ್ವರ್ಗ ಮತ್ತು ನರಕಕ್ಕೆ ಸ್ಪರ್ಧಿಗಳನ್ನು ಕಳುಹಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಕಡಿಮೆ ವೋಟ್ ಬಂದ ಕಾರಣ ಯಮುನಾ ಶ್ರೀನಿಧಿ ಮನೆಯಿಂದ ಹೊರಗೆ ಬರಬೇಕಾಯ್ತು. ಆದ್ರೆ ಯಮುನಾ ಅವರ ಒಂದು ವಾರದ ವಿಡಿಯೋ ತೋರಿಸದ್ದರ ಬಗ್ಗೆ ಚರ್ಚೆಗಳು ನಡೆದಿವೆ. ಮನೆಯಿಂದ ಹೊರಗೆ ಬಂದಿರುವ ಯಮುನಾ ಶ್ರೀನಿಧಿಯವರಿಗೆ 1 ಲಕ್ಷ ರೂಪಾಯಿಯ ಚೆಕ್ ನೀಡಲಾಗಿದೆ.

ಬಿಗ್‌ಬಾಸ್ ಮಾಜಿ ಸ್ಪರ್ಧಿಯಾಗಿರುವ ಕಿರಿಕ್ ಕೀರ್ತಿ ಸಹ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮೊದಲ ವಾರ ಹೋಗೋ ಕಂಟೆಸ್ಟೆಂಟ್ ಅಲ್ಲ ಅನಿಸಿತ್ತು. ಆದ್ರೆ ಜನರ ತೀರ್ಪು ಅಂತಿಮ. ಕೆಲವು ಸಲ ಕೆಲವು ಕಾರಣಕ್ಕೆ ಹೊರಹೋಗಬೇಕಾಗಿ ಬರುತ್ತೆ. ಆದ್ರೆ VT ನೂ ಯಾಕೆ ಮಾಡಲಿಲ್ಲ ಅನ್ನೋದು ಗೊತ್ತಾಗಲಿಲ್ಲ. ಆದ್ರೆ ಕಾರಣವಿಲ್ಲದೇ ಬಿಗ್‌ಬಾಸ್ ಏನೂ ಮಾಡಲ್ಲ. There must be a reason ಎಂದು ಕಿರಿಕ್ ಕೀರ್ತಿ ಬರೆದುಕೊಂಡಿದ್ದಾರೆ. 

ಜಗದೀಶ್ ಅಲ್ವಂತೆ, ಬಿಗ್‌ಬಾಸ್ ಮನೆಯಲ್ಲಿರೋ ಡೇಂಜರಸ್ ಮ್ಯಾನ್ ಇವರಂತೆ!

ಯಮುನಾ ಶ್ರೀನಿಧಿ ವಿಡಿಯೋ ವೈರಲ್ 
ಬಿಗ್‌ಬಾಸ್‌ ಮನೆಗೆ ಹೋಗುವ ಮುನ್ನವೇ ಸ್ಪರ್ಧಿಗಳು ಮತಯಾಚನೆ ಮಾಡುವ ವಿಡಿಯೋ ರೆಕಾರ್ಡ್ ಮಾಡಿರುತ್ತಾರೆ. ನಾಮಿನೇಟ್ ಆದ ಕೂಡಲೇ ಸ್ಪರ್ಧಿಯ ಸೋಶಿಯಲ್ ಮೀಡಿಯಾದಲ್ಲಿ ವೋಟ್ ಕೇಳುವ ವಿಡಿಯೋ ಪೋಸ್ಟ್ ಆಗುತ್ತದೆ. ಮನೆಯಿಂದ ಹೊರಗೆ ಬಂದಿರುವ ಯಮುನಾ ಅವರು ಮತ ಕೇಳಿರುವ ವಿಡಿಯೋ ವೈರಲ್ ಆಗ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ವೋಟ್ ಮಾಡುವಷ್ಟರಲ್ಲಿ ಹೊರಗಡೆನೇ ಬಂದಬಿಟ್ರಲ್ಲ ಮೇಡಂ. ಈ ವಿಡಿಯೋ ಮೊದಲೇ ಬಂದಿದ್ರೆ ಚೆನ್ನಾಗಿರುತ್ತಿತ್ತು. ಹೊರಗಡೆ ಬಂದ ಮೇಲೆ ಬಂದಿದೆ. ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡರೆ ಏನು ಪ್ರಯೋಜನ ಎಂದು ಕಮೆಂಟ್ ಮಾಡುತ್ತಿದ್ದಾರೆ. 

ನೀವು ಹೇಳಿದ್ದು ಕರೆಕ್ಟಾಗಿ ಗುರು ನಾನು ಕೂಡ ವೋಟಿಂಗ್ ಮಾಡುವಷ್ಟರಲ್ಲಿ ಅವರು ಹೊರಗಡೆನೇ ಬಂದು ಬಿಟ್ಟಿದ್ದಾರೆ. ಯಾಕ್ ಮಾಡಬೇಕು ನಿಮಗೆ ನೀವ್ ಒಳ್ಗೆ ಇರೋಕ್ಕಿಂತ ಹೊರಗಡೆ ಬರೋದೇ ಒಳ್ಳೆಯದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಸಪ್ರೈಸ್‌ ಎಲಿಮಿನೇಷನ್, ಮೊದಲನೇವಾರ ಯಮುನಾ ಶ್ರೀನಿಧಿ ಔಟ್!

click me!