ನಂದಗೋಕುಲ: ಕೇಶವ ಪಾತ್ರಧಾರಿ ಯಶವಂತ್ ಧಾರಾವಾಹಿ ತೊರೆದಿದ್ದೇಕೆ? ಪತ್ರದಲ್ಲಿ ಏನಿದೆ?

Published : Aug 29, 2026, 11:55 AM IST
Nandagokula

ಸಾರಾಂಶ

'ನಂದಗೋಕುಲ' ಧಾರಾವಾಹಿಯಲ್ಲಿ ಕೇಶವ ಪಾತ್ರ ನಿರ್ವಹಿಸುತ್ತಿದ್ದ ನಟ ಯಶವಂತ್ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ವೃತ್ತಿಪರ ಅಂಶಗಳು ಮತ್ತು ಪಾತ್ರದ ಬೆಳವಣಿಗೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಕನ್ನಡದ ಜನಪ್ರಿಯ ಧಾರಾವಾಹಿ ನಂದಗೋಕುಲ ತಂಡದಿಂದ ಕೇಶವ ಪಾತ್ರಧಾರಿಯಾಗಿ ನಟ ಯಶವಂತ್ ಹೊರ ಬಂದಿದ್ದಾರೆ. ಧಾರಾವಾಹಿಯಿಂದ ಹೊರ ಬಂದಿರುವ ಬಗ್ಗೆ ನಟ ಯಶವಂತ್‌ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಧಾರಾವಾಹಿಯಿಂದ ಹೊರಗೆ ಬಂದಿರೋದ್ಯಾಕೆ ಎಂಬುದರ ಬಗ್ಗೆ ನಟ ಯಶವಂತ್ ತಿಳಿಸಿದ್ದಾರೆ.

ಆತ್ಮೀಯ ನಂದಗೋಕುಲ ಕುಟುಂಬ,

ಇಂದು ನಾನು ನನ್ನ ಪ್ರಯಾಣದ ಒಂದು ವಿಶೇಷ ಅಧ್ಯಾಯವನ್ನು ಮುಗಿಸುತ್ತಿದ್ದೇನೆ. ನನ್ನ ಹೃದಯಕ್ಕೆ ಯಾವಾಗಲೂ ಹತ್ತಿರವಾಗಿ ಉಳಿಯುವ ಪಾತ್ರ 'ಕೇಶವ'ನಿಗೆ ನಾನು ವಿದಾಯ ಹೇಳುತ್ತಿದ್ದೇನೆ, ಅದರೊಂದಿಗೆ 'ನಂದಗೋಕುಲ'ದೊಂದಿಗಿನ ನನ್ನ ಪಯಣ ಕೊನೆಗೊಂಡಿದೆ.

ಸರಿ ಸುಮಾರು 350 ಸಂಚಿಕೆಗಳು, ನೀವು ಕೇಶವನನ್ನು ನಿಮ್ಮ ಮನೆ ಮಗನಾಗಿ ಸ್ವಾಗತಿಸಿದ್ದೀರಿ, ಅರ್ಥಮಾಡಿಕೊಂಡಿದ್ದೀರಿ, ಬೆಂಬಲಿಸಿದ್ದೀರಿ ಮತ್ತು ನಾನು ಊಹಿಸಲು ಸಾಧ್ಯವಾಗದಷ್ಟು ಪ್ರೀತಿಸಿದ್ದೀರಿ. ನೀವು ನನ್ನ ಮೇಲೆ ಮತ್ತು ಪಾತ್ರದ ಮೇಲೆ ಸುರಿಸಿದ ಅಪಾರ ಪ್ರೀತಿಯನ್ನು ನಾನು ಶಾಶ್ವತವಾಗಿ ನನ್ನೊಂದಿಗೆ ಕೊಂಡೊಯ್ಯುತ್ತೇನೆ.

ನನ್ನ ಜೀವನದ ಅರ್ಥಪೂರ್ಣ ಭಾಗವಾಗಿರುವ 'ನಂದಗೋಕುಲ'ವನ್ನು ಬಿಡುವುದು ಸುಲಭದ ಮಾತಲ್ಲ. ಹಲವು ಚಿಂತನಶೀಲ ಚರ್ಚೆಗಳ ನಂತರ, ಪಾತ್ರದ ಬೆಳವಣಿಗೆ ಹಾಗೂ ಕೆಲವು ವೃತ್ತಿಪರ ಅಂಶಗಳನ್ನು ಪರಿಗಣಿಸಿದ ನಂತರ ನಾನು ನನ್ನ ಪ್ರಯಾಣದ ಮುಂದಿನ ಅಧ್ಯಾಯವನ್ನು ಸ್ವೀಕರಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ.

ಈ ಪ್ರಯಾಣದುದ್ದಕ್ಕೂ ನನ್ನೊಂದಿಗೆ ನಿಂತ ಎಲ್ಲರಿಗೂ - ನನ್ನ ಸಹನಟರು, ನಿರ್ದೇಶಕರು, ಬರಹಗಾರರು, ತಂತ್ರಜ್ಞರು ಮತ್ತು ಇಡೀ ನಂದಗೋಕುಲ ತಂಡಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ, ನಿಮ್ಮೊಂದಿಗೆ ಬದುಕಿದ ಪ್ರತಿ ದೃಶ್ಯ, ನೀವುಗಳು ನೀಡಿದ ಪ್ರತಿ ಮೆಚ್ಚುಗೆ ಮತ್ತು ಪ್ರತಿ ಟೀಕೆ ಕೂಡ ನನ್ನ ಬೆಳವಣಿಗೆಯ ಒಂದು ಭಾಗವಾಗಿದೆ. ನಾನು ಹೋದಲ್ಲೆಲ್ಲಾ ಆ ನೆನಪುಗಳನ್ನು ಮತ್ತು ಪಾಠಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ.

ಬಹುಮುಖ್ಯವಾಗಿ, ನಿಮಗೆ, ನನ್ನ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ - ಕೇಶವನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಕೇಶವನನ್ನು ಹಾಗೇ ನೋಡಿ ಸುಮ್ಮನಾಗಲಿಲ್ಲ, ನೀವು ಅವನೊಂದಿಗೆ ಬೆರೆತು, ಅವನನ್ನು ಅರ್ಥಮಾಡಿಕೊಂಡಿರಿ ಮತ್ತು ಅವನನ್ನು ನಿಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಂಡಿರಿ. ಈ ಬಂಧವನ್ನು ಬಾಂಧವ್ಯವನ್ನು ನಾನು ಯಾವಾಗಲೂ ಜೋಪಾನವಾಗಿಡುತ್ತೇನೆ.

ಇದು ನಂದಗೋಕುಲದೊಂದಿಗಿನ ನನ್ನ ಪ್ರಯಾಣದ ಅಂತ್ಯವಾಗಿರಬಹುದು, ಆದರೆ ಇದು ನನ್ನ ಹೊಸ ಪ್ರಯಾಣದ ಶುರು. ನನ್ನ ಹೃದಯದಲ್ಲಿ ಕೃತಜ್ಞತೆಯೊಂದಿಗೆ, ಹಿಂದಿನ ಪಾಠಗಳು ಮತ್ತು ಮುಂದೆ ಏನಾಗಲಿದೆ ಎಂಬುದರ ಉತ್ಸಾಹದೊಂದಿಗೆ ನಾನು ಹೊಸ ಅಧ್ಯಾಯಕ್ಕೆ ಹೆಜ್ಜೆ ಹಾಕುತ್ತಿದ್ದೇನೆ - ಆ ಅಧ್ಯಾಯ ನನ್ನ ಮುಂಬರುವ ಚಿತ್ರ 'ಸಮುದ್ರ ಮಂಥನ'ದಿಂದ ಪ್ರಾರಂಭವಾಗುತ್ತದೆ.

ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಚಿತ್ರಮಂದಿರಗಳಲ್ಲಿ ಭೇಟಿಯಾಗಲು ಮತ್ತು ಈ ಹೊಸ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ತುದಿಗಾಲಿನಲ್ಲಿ ನಿಂತಿದ್ದೇನೆ. ನಿನ್ನೆಯವರೆಗೂ ನಾನು ಕೇಶವನಾಗಿದ್ದೆ, ನಾಳೆ, ಪರದೆಯ ಮೇಲೆ ಇನ್ಯಾರೋ, ಆದರೆ ಕೊನೆವರೆಗೂ, ನಾನು ನಿಮ್ಮ ಯಶವಂತ್

ನಿಮ್ಮ ಪ್ರೀತಿಯ,

ಯಶ್ವಂತ್ ಕುಮಾರ್ ಎಸ್ ಎಸ್

ಇದನ್ನೂ ಓದಿ: Bigg Boss ಅಗ್ನಿ ಪರೀಕ್ಷೆಗೆ ಜಡ್ಜ್‌ ಮಾಡಿಲ್ಲವೇಕೆ? ಫ್ಯಾನ್ಸ್‌ ಅಸಮಾಧಾನಕ್ಕೆ ಗಿಲ್ಲಿ ನಟನ ಉತ್ತರ

ಇದನ್ನೂ ಓದಿ: ಕನ್ನಡ ಕಿರುತೆರೆಯಲ್ಲಿ ಮನೆ ಮಂದಿ ಎಲ್ಲಾ ನೋಡಬಹುದಾದ ಬೆಸ್ಟ್ ಧಾರಾವಾಹಿ ಇದೊಂದೇ ಅಂತೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತ ಹೆಸರಿನ ಮೂಲವೇ ಗೊತ್ತಾಗಲಿಲ್ಲ, KBCಯಲ್ಲಿ 7.5 ಲಕ್ಷ ರೂ ಕಳೆದುಕೊಂಡ GST ಅಧಿಕಾರಿ
ಆಂಕರ್ ಅನುಶ್ರೀ ಫಸ್ಟ್ ಆನಿವರ್ಸರಿ @ ಕೀನ್ಯಾ: ಕಾಡಲ್ಲಿ ಸಾಥ್ ಕೊಟ್ಟ ರೋಷನ್ ರಾಜ