ಭಾರತ ಹೆಸರಿನ ಮೂಲವೇ ಗೊತ್ತಾಗಲಿಲ್ಲ, KBCಯಲ್ಲಿ 7.5 ಲಕ್ಷ ರೂ ಕಳೆದುಕೊಂಡ GST ಅಧಿಕಾರಿ

Published : Aug 28, 2026, 07:47 PM IST
GST Officer Loses Money on KBC

ಸಾರಾಂಶ

ಭಾರತದ ಹೆಸರಿನ ಮೂಲ ಕುರಿತು ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಕೇಳಲಾಗಿತ್ತು. ಜಿಎಸ್‌ಟಿ ಅಧಿಕಾರಿ ತಬ್ಬಿಬ್ಬಾದರು. ಕೊನೆಗೆ ಲೈಫ್ ಲೈನ್ ಎಲ್ಲಾ ಬಳಸಿ ಉತ್ತರ ಹೇಳಿದರೂ ತಪ್ಪಾಗಿತ್ತು

ಮುುಂಬೈ (ಆ.28) ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಹಲವು ಬಾರಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದೆ ಪರದಾಡಿ ಕೊನೆಗೆ ಶೋದಿಂದ ಅರ್ಧದಲ್ಲಿ ನಿರ್ಗಮಿಸಿದ ಹಲವು ಉದಾಹರಣೆಗಳಿವೆ. ಇದೀಗ ಮೇಲ್ನೋಟಕ್ಕೆ ಸುಲಭ ಎನಿಸಿದರೂ ಟ್ರಿಕಿ ಪ್ರಶ್ನೆಗೆ ಜಿಎಸ್‌ಟಿ ಅಧಿಕಾರಿ ಪರದಾಡಿದ್ದಾರೆ. ಕೊನೆಗೆ ತಪ್ಪು ಉತ್ತರ ಹೇಳಿ ಇರೋ ದುಡ್ಡು ಕಳೆದುಕೊಂಡ ಘಟನೆ ನಡೆದಿದೆ. ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ, ಭಾರತ ಹೆಸರಿನ ಮೂಲದ ಕುರಿತು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರ ಹೇಳಲು ಜಿಎಸ್‌ಟಿ ಅಧಿಕಾರಿಗೆ ಸಾಧ್ಯವಾಗಲಿಲ್ಲ. ಪರಿಣಾಮ 7.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಜಿಎಸ್‌ಟಿ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಅನೂಜ್ ತಮ್ಮ ಕುಟುಂಬದ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 7.5 ಲಕ್ಷ ರೂಪಾಯಿ ಗೆದ್ದ ಅನೂಜ್ ಮುಂದಿನ 12.5 ಲಕ್ಷ ರೂಪಾಯಿ ಪ್ರಶ್ನೆಗೆ ತಪ್ಪು ಉತ್ತರ ನೀಡಿ ಇರುವ ದುಡ್ಡು ಕಳೆದುಕೊಂಡಿದ್ದಾರೆ. 5 ಲಕ್ಷ ರೂಪಾಯಿ ಪ್ರಶ್ನೆಗೆ ಲೈಫ್‌ಲೈನ್ ಬಳಸಿ ಸರಿಯಾಗಿ ಉತ್ತರಿಸಿದ್ದರು. ಇದೇ ಆತ್ಮವಿಶ್ವಾಸದಲ್ಲಿದ್ದ ಅನೂಜ್‌ಗೆ ನಿರೂಪಕ ಅಮಿತಾಬ್ ಬಚ್ಚನ್ ಕೇಳಿದ ಮುಂದಿನ ಪ್ರಶ್ನೆ ಸುಲಭವಾಗಿರಲಿಲ್ಲ.

12.5 ಲಕ್ಷ ರೂಪಾಯಿ ಮೌಲ್ಯದ 12ನ ಪ್ರಶ್ನೆ ಅನೂಜ್ ಆಟಕ್ಕೆ ಅಂತ್ಯ ಹಾಡಿತ್ತು. ಭಾರತ, ಜೋರ್ಡಾನ್ ಹಾಗೂ ಜಾಂಬಿಯಾ ಧ್ವಜಗಳ ಚಿತ್ರ ನೀಡಲಾಗಿತ್ತು. ಬಳಿಕ ಈ ಚಿತ್ರದಲ್ಲಿ ತೋರಿಸಲಾದ ಧ್ವಜಗಳ ದೇಶಗಳ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ಸತ್ಯ ಎಂಬು ಪ್ರಶ್ನೆ ನೀಡಿ ಅದಕ್ಕೆ ನಾಲ್ಕು ಆಯ್ಕೆ ನೀಡಲಾಗಿತ್ತು.

ಆಯ್ಕೆಗಳು:

  • A. ಹೆಸರುಗಳು ನದಿಗಳಿಂದ ಬಂದಿವೆ
  • B. ಒಂದೇ ಸ್ವಾತಂತ್ರ್ಯ ದಿನ ಹೊಂದಿವೆ
  • C. ರಾಜಧಾನಿಗಳು ಒಂದೇ ಅಕ್ಷರದಿಂದ ಆರಂಭವಾಗುತ್ತವೆ
  • D. ಉತ್ತರ ಗೋಳಾರ್ಧದಲ್ಲಿವೆ

ಇದು ದೇಶದ ಹೆಸರಿನ ಮೂಲ ಕುರಿತಾಗಿತ್ತು. ಇದಕ್ಕೆ ಅನೂಜ್ ಬಳಿ ಉತ್ತರ ಸ್ಪಷ್ಟ ಇರಲಿಲ್ಲ. ಹೀಗಾಗಿ 50:50 ಲೈಫ್ ಲೈನ್ ಬಳಸಿದ್ದಾರೆ. ಕೊನೆಯ ಎರಡು ಉತ್ತರಗಳು ಲೈಫ್‌ಲೈನ್ ಮೂಲಕ ಮೆರೆಯಾಯಿತು. ಆದರೆ ಸರಿಯಾದ ಉತ್ತರ ಹೇಳುವುದು ಕಷ್ಟವಾಯಿತು. ಕೊನೆಗೆ ಗಟ್ಟಿ ನಿರ್ಧಾರ ಮಾಡಿದ ಅನೂಜ್ ಒಂದೇ ಸ್ವಾತಂತ್ರ್ಯ ದಿನ ಹೊಂದಿದೆ ಎಂದು ಉತ್ತರಿಸಿದ್ದಾರೆ. ಆದರೆ ಇದು ತಪ್ಪು ಉತ್ತರವಾಗಿತ್ತು. 12.5 ಲಕ್ಷ ರೂಪಾಯಿ ಗೆಲ್ಲೋ ಪ್ರಶ್ನೆಗೆ ತಪ್ಪು ಉತ್ತರ ನೀಡಿದ ಕಾರಣ 7.5 ಲಕ್ಷ ರೂ ಗೆದ್ದಿದ್ದ ಅನೂಜ್‌ಗೆ ನೆಗಟೀವ್ ಆಗಿತ್ತು. ಹೀಗಾಗಿ ತಮ್ಮ ಗ್ಯಾರೆಂಟಿ ಮೊತ್ತ 5 ಲಕ್ಷ ರೂಪಾಯಿ ಮಾತ್ರ ಗೆದ್ದುಕೊಂಡರು.

ಸರಿಯಾದ ಉತ್ತರವೇನು?

ಮೂರು ದೇಶಗಳು ನದಿಗಳಿಂದ ಗುರುತಿಸಿಕೊಂಡಿದೆ.ಹೆಸರುಗಳು ನದಿಗಳಿಂದ ಬಂದಿದೆ ಅನ್ನೋದು ಸರಿಯಾದ ಉತ್ತರವಾಗಿತ್ತು. ಭಾರತ ಸಿಂಧೂ ನದಿ ನಾಗರೀಕತೆಯೊಂದಿಗೆ ಗುರುತಿಸಿಕೊಂಡಿದೆ. ಜೋರ್ಡಾನ್ ಹೆಸರು ಜೋರ್ಡಾನ್ ನದಿಯಿಂದ ಬಂದಿದ್ದರೆ, ಜಾಂಬಿಯಾ ದೇಶದ ಹೆಸರು ಝಾಂಬೆಜಿ ನದಿಯಿಂದ ಬಂದಿದೆ. ಮೂರು ದೇಶಗಳ ಹೆಸರು, ಗುರುತಿನ ಹಿಂದೆ ನದಿಗಳ ಪಾತ್ರ ಪ್ರಮುಖವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಕರ್ ಅನುಶ್ರೀ ಫಸ್ಟ್ ಆನಿವರ್ಸರಿ @ ಕೀನ್ಯಾ: ಕಾಡಲ್ಲಿ ಸಾಥ್ ಕೊಟ್ಟ ರೋಷನ್ ರಾಜ
Amruthadhaareಯಲ್ಲಿ ಫಾರಿನ್​ ಟೂರ್​ ಹೋದ ಗೌತಮ್​, ಹೆದ್ದಾರಿ 66 ನಲ್ಲಿ ಪ್ರತ್ಯಕ್ಷ- ಏನಿದು ಹೊಸ ವೇಷ