ಹೀರೋಯಿನ್‌ ಆಗೋಕೆ ರೆಡಿಯಾದ ಸಾನ್ವಿ ಸುದೀಪ್‌, ಆದ್ರೆ, ಒಂದು ಕಂಡೀಷನ್‌!

Published : Mar 15, 2025, 01:11 PM ISTUpdated : Mar 15, 2025, 01:21 PM IST
ಹೀರೋಯಿನ್‌ ಆಗೋಕೆ ರೆಡಿಯಾದ ಸಾನ್ವಿ ಸುದೀಪ್‌, ಆದ್ರೆ, ಒಂದು ಕಂಡೀಷನ್‌!

ಸಾರಾಂಶ

ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸುದೀಪ್‌ ಶೀಘ್ರದಲ್ಲೇ ಸಿನಿಮಾ ರಂಗಕ್ಕೆ ಹೀರೋಯಿನ್‌ ಆಗಿ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ನಟನೆಯ ತರಬೇತಿ ಪಡೆದಿದ್ದು, ಸ್ವಂತ ಪರಿಶ್ರಮದಿಂದ ಅವಕಾಶ ಗಿಟ್ಟಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. ನಿರ್ದೇಶನ ಮತ್ತು ಚಿತ್ರಕಥೆ ಬರೆಯುವಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಸ್ಯಾಂಡಲ್‌ವುಡ್‌ನ ಸ್ಟಾರ್‌ ಹೀರೋಗಳಲ್ಲಿ ಕಿಚ್ಚ ಸುದೀಪ್‌ ಒಬ್ಬರು. ಯಾವುದೇ ಹಿನ್ನೆಲೆ ಇಲ್ಲದೆ ಅವರು ಚಿತ್ರರಂಗಕ್ಕೆ ಪ್ರವೇಶಿಸಿ ಒಳ್ಳೆಯ ಹೆಸರು ಗಳಿಸಿದರು. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಸುದೀಪ್‌ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದ್ದಾರೆ. ಆದರೆ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್‌ ನಟನೆಗೆ ವಿದಾಯ ಹೇಳುವ ಬಗ್ಗೆಯೂ ಮಾತನಾಡಿದ್ದರು. ಈ ಎಲ್ಲದರ ನಡುವೆ ಸುದೀಪ್‌ ಅವರ ಪುತ್ರಿ ಸಾನ್ವಿ ಸುದೀಪ್‌, ಹೀರೋಯಿನ್‌ ಆಗಿ ಸಿನಿಮಾ ರಂಗಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ತಾವು ಹೀರೋಯಿನ್‌ ಆಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡಬಹುದು ಎನ್ನುವ ಸೂಚನೆಯನ್ನು ಜಿನಾಲ್‌ ಮೋದಿ ಪಾಡ್‌ಕಾಸ್ಟ್‌ನಲ್ಲಿ ನೀಡಿದ್ದಾರೆ. ತಮ್ಮ ಮ್ಯೂಸಿಕ್‌ನ ಕಾರಣದಿಂದಾಗಿ ಚಿರಪರಿಚಿತರಾಗಿರುವ ಸಾನ್ವಿ ಸುದೀಪ್‌, ಶೀಘ್ರದಲ್ಲಿಯೇ ಕ್ಯಾಮೆರಾ ಮುಂದೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ್ದ ಸುದೀಪ್ ಅವರ ಪುತ್ರಿ ಸಾನ್ವಿ, ಚಿತ್ರರಂಗಕ್ಕೆ ಪ್ರವೇಶಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾರೆ. ಪ್ರಸ್ತುತ ತಾನು ಚಿತ್ರರಂಗಕ್ಕೆ ಪ್ರವೇಶಿಸಲು ಸಿದ್ಧಳಾಗಿದ್ದೇನೆ. ಹೈದರಾಬಾದ್‌ನಲ್ಲಿ ಈಗಾಗಲೇ 4 ತಿಂಗಳ ಕಾರ್ಯಾಗಾರದಲ್ಲಿ ತರಬೇತಿ ಪಡೆದಿದ್ದೇನೆ. ಸುದೀಪ್‌ ಅವರ ಪುತ್ರಿ ಎನ್ನುವ ಕಾರಣಕ್ಕೆ ಸಿಗುವ ಅವಕಾಶ ಬೇಕಾಗಿಲ್ಲ. ಸ್ವಂತವಾಗಿ ಅವಕಾಶಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ಹೇಳಿದರು. ತನ್ನ ತಂದೆಯ ಹೆಸರು ಹೇಳಿದರೆ ಅವಕಾಶಗಳು ಬರುತ್ತವೆ. ಆದರೆ, ನನಗೆ ಅದು ಬೇಕಿಲ್ಲ. ನಟಿಯಾಗಲು ತನಗೆ ಇನ್ನೂ ಸಮಯ ಬೇಕು ಎಂದು ಅವರು ಹೇಳಿದ್ದಾರೆ. ಅದರೊಂದಿಗೆ ನಿರ್ದೇಶನ ಹಾಗೂ ಚಿತ್ರಕಥೆಯಲ್ಲೂ ಆಸಕ್ತಿ ಹೊಂದಿದ್ದೇನೆ ಎಂದಿದ್ದಾರೆ. 

ಮತ್ತೊಂದೆಡೆ, ನಿರ್ದೇಶನ ಮತ್ತು ಚಿತ್ರಕಥೆ ಬರೆಯುವಲ್ಲಿ ತಾನು ಉತ್ತಮ ಸಾಧನೆ ಮಾಡುವ ಯೋಜನೆಯನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು. ಸಿನಿಮಾದ ಎಲ್ಲಾ ವಿಭಾಗಗಳಲ್‌ಲೂ ಕೆಲಸ ಮಾಡಬೇಕು ಎಂದು ಬಯಸಿದ್ದೇನೆ. ನಾನು ಬಹಳ ಸಮಯದಿಂದ ಅತಿಯಾದ ತೂಕದಿಂದ ಬಳಲುತ್ತಿದ್ದೆ. ಅದಕ್ಕಾಗಿ ನಟಿಯಾಗಲು ಹೆಚ್ಚಿನ ಸಮಯ ತೆಗೆದುಕೊಂಡೆ.ಕ್ಯಾಮೆರಾ ಹಿಂದೆ ನಡೆಯುವ ಕೆಲಸದಲ್ಲಿ ತಾನು ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು. ನಾಯಕಿ ಮಾತ್ರವಲ್ಲ, ಯಾವುದೇ ಪಾತ್ರವನ್ನು ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ʼಏನ್‌ ಸಾಧನೆ ಮಾಡಿದ್ದೀರಿ ಅಂತ ಸಂದರ್ಶನ ಕೊಡ್ತೀರಿ?ʼ

ಹೆಚ್ಚಿನವರು ನಾನು ಕಿಚ್ಚ ಸುದೀಪ್‌ ಅವರ ವಿರುದ್ಧ ವಿಲನ್‌ ಪಾತ್ರ ಮಾಡಬೇಕೆಂದು ಬಯಸಿದ್ದಾರೆ. ನನಗೆ ಅಂಥ ಪಾತ್ರಗಳು ಇಷ್ಟವಾಗುತ್ತದೆ. ಬೇರೊಬ್ಬರ ನಾಯಕಿಯಾಗಿ, ಹೀರೋಯಿನ್‌ ಆಗಿ ನಟಿಸುವ ಪಾತ್ರ ನನಗೆ ಬೇಕಾಗಿಲ್ಲ. "ನಾನು ಯಾರದ್ದೋ ನಾಯಕಿಯಾಗಬೇಕೆಂದು ಬಯಸುವವಳಲ್ಲ. ನನ್ನನ್ನು ಆ ರೀತಿ ನೋಡಲು ಸಾಧ್ಯವಿಲ್ಲ. ನನಗೆ ಅದರ ಬಗ್ಗೆ ಯಾವುದೇ ಅಗೌರವವಿಲ್ಲ, ಆದರೆ ನಾನು ಹಾಗೆ ಮಾಡಲು ಸಾಧ್ಯವಿಲ್ಲ. ನಾನು ನನ್ನ ತಂದೆಯೊಂದಿಗೆ ಬೆಳೆದಿದ್ದೇನೆ, ಅವರು ನನ್ನನ್ನು ಮತ್ತು ನಾನು ಬೆಳೆದ ಇಬ್ಬರು ಹಿರಿಯ ಸೋದರಸಂಬಂಧಿಗಳನ್ನು ನಿರಂತರವಾಗಿ ದೊಡ್ಡಸ್ವರದಲ್ಲಿ ಮಾತನಾಡುತ್ತಾ ಹೆದರಿಸುತ್ತಿದ್ದರು. ಆದ್ದರಿಂದ, ನಾನು ಅವರಂತೆಯೇ ಆದೆ. ನಾನು ನನ್ನ ತಂದೆಯ ಬಟ್ಟೆ, ಬೂಟುಗಳು ಮತ್ತು ಪರ್‌ಫ್ಯೂಮ್‌ ಹಾಕಿಕೊಳ್ಳುತ್ತೇನೆ. ನಾನು ಅವರ ಪ್ರತಿರೂಪ ಎಂದು ಎಲ್ಲರಿಗೂ ತಿಳಿದಿದೆ. ನ್ನ ತಂದೆಯ ರೀತಿ, ಕಾಮಿಡಿ ಹಾಗೂ ಬಾಸ್‌ ಪಾತ್ರಗಳನ್ನು ಮಾಡುವ ಆಸೆ ಇದೆ ಎಂದಿದ್ದಾರೆ.

ಯಶ್‌ ನನ್ನ ಬರ್ತಡೇ ಪಾರ್ಟಿಗೆ ಬರ್ತಿದ್ರು, ತಂದೆ ಫ್ರೆಂಡ್‌ ಮೇಲೆ ಕ್ರಶ್ ಆಗಲ್ಲ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ