ರಂಗೇರಿದ ತ್ರಿವಿಕ್ರಮ್ ಭವ್ಯ ರೋಮ್ಯಾನ್ಸ್, ವಿಡಿಯೋಕ್ಕೆ ಸಿಕ್ತು ಲಕ್ಷಗಟ್ಟಲೆ ಲೈಕ್ಸ್

By Roopa Hegde  |  First Published Nov 15, 2024, 8:30 PM IST

ಬಿಗ್ ಬಾಸ್ ಮನೆಯಲ್ಲಿ ಜೋಡಿ ಹಕ್ಕಿಗಳ ಡಾನ್ಸ್ ಟಾಸ್ಕ್ ನಡೆಯುತ್ತಿದೆ. ತ್ರಿವಿಕ್ರಮ್ – ಭವ್ಯ ಡಾನ್ಸ್, ಮನೆಯ ಬಿಸಿ ಹೆಚ್ಚಿಸಿದೆ. ಪ್ರೋಮೋ ಪೋಸ್ಟ್ ಆದ 17ನೇ ನಿಮಿಷದಲ್ಲಿ 33 ಸಾವಿರ ಲೈಕ್ಸ್ ಸಿಕ್ಕಿದೆ. 
 


ಬಿಗ್ ಬಾಸ್ (Bigg Boss) ಮನೆ ರೋಮ್ಯಾನ್ಸ್ (Romance) ನಿಂದ  ರಂಗೇರಿದೆ. ಬಿಗ್ ಬಾಸ್ನಲ್ಲಿ ಈ ವಾರ ಜೋಡಿ ಸ್ಪರ್ಧೆ ನಡೆಯುತ್ತಿದೆ. ರಾಮಾಚಾರಿ – ಚಾರು (Ramachari – Charu) ಮನೆಗೆ ಬಂದಿದ್ದು, ಒಂದೊಂದೇ ಟಾಕ್ಸ್ ಆಡಿಸ್ತಿದ್ದಾರೆ. ಇಂದು ಮನೆಯಲ್ಲಿ ಜೋಡಿಗಳ ಡಾನ್ಸ್ ನೋಡಲು ಸಿಗ್ತಿದೆ. ತಮ್ಮ ತಮ್ಮ ಜೋಡಿ ಜೊತೆ ಬಿಗ್ ಬಾಸ್ ಸ್ಪರ್ಧಿಗಳು ಹಾಡಿಗೆ ಹೆಜ್ಜೆ ಹಾಕಿದ್ದಾರೆ.  ಕಲರ್ಸ್ ಕನ್ನಡ ಈಗಾಗಲೇ ಡಾನ್ಸ್ ಪ್ರೋಮೋಗಳನ್ನು ಬಿಡುಗಡೆ ಮಾಡಿದೆ. ಆದ್ರೆ ಅದ್ರಲ್ಲಿ ಹೆಚ್ಚು ಸುದ್ದಿ ಮಾಡ್ತಿರೋದು ತ್ರಿವಿಕ್ರಮ್ ಹಾಗೂ ಭವ್ಯ (Trivikram and Bhavya)  ಜೋಡಿಯದ್ದು.

ತ್ರಿವಿಕ್ರಮ್ ಹಾಗೂ ಭವ್ಯ ಗೌಡ ಡಾನ್ಸ್ ಪ್ರೋಮೋ ಪೋಸ್ಟ್ ಆಗ್ತಿದ್ದಂತೆ ವೈರಲ್ ಆಗಿದೆ. ಕೆಲವೇ ನಿಮಿಷದಲ್ಲಿ ಸಾವಿರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಒಂದು ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿರುವ ವಿಡಿಯೋದಲ್ಲಿ ತ್ರಿವಿಕ್ರಮ್ ಹಾಗೂ ಭವ್ಯ, ರೋಮ್ಯಾಂಟಿಕ್ ಹಾಡಿಗೆ ಡಾನ್ಸ್ ಮಾಡಿರೋದನ್ನು ನೀವು ಕಾಣ್ಬಹುದು.

Tap to resize

Latest Videos

undefined

ನನ್ನಂಥ ಶತಮೂರ್ಖ ಇನ್ನೊಬ್ಬ ಇಲ್ಲ, ಎಕ್ಕಡ ತಗೊಂಡು ಹೊಡ್ಕೋಬೇಕು; ಚೈತ್ರಾ ಕುಂದಾಪುರ

ಭವ್ಯ ಹಾಗೂ ತ್ರಿವಿಕ್ರಮ್ ಡಾನ್ಸ್ ವಿಡಿಯೋ ಪೋಸ್ಟ್ ಮಾಡಿರುವ ಕಲರ್ಸ್ ಕನ್ನಡ ಇಲ್ಲಿ ಪ್ರೇಮಾಯಣ, ಅಲ್ಲಿ ರೋಮಾಂಚನ ಅಂತ ಶೀರ್ಷಿಕೆ ಹಾಕಿದೆ. ಈ ಜೋಡಿ, ಶೃಂಗಾರದ ಹೊಂಗೆ ಮರ ಹೂಬಿಟ್ಟಿದೆ ಹಾಡಿಗೆ ಡಾನ್ಸ್ ಮಾಡಿದ್ದಾರೆ. ತ್ರಿವಿಕ್ರಮ್, ಭವ್ಯರನ್ನು ಏಳ್ಸಿ, ಕುಳ್ಸಿ ಡಾನ್ಸ್ ಮಾಡ್ತಿದ್ರೆ, ಭವ್ಯ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಡಾನ್ಸ್ ಮೋಡಿ ಮಾಡಿದ್ದು, ಮನೆ ಬಿಸಿಯನ್ನು ಹೆಚ್ಚಿಸಿದೆ. 

ತ್ರಿವಿಕ್ರಮ್ ಬರೀ ಟಾಸ್ಕ್ ಮಾಡೋಕೆ ಮಾತ್ರವಲ್ಲ ಡಾನ್ಸ್ ಮಾಡೋದ್ರಲ್ಲೂ ಮುಂದಿದ್ದಾರೆ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಇಷ್ಟೊತ್ತು ಈ ಜೋಡಿಗೆ ಕಾಯ್ತಿದ್ವಿ ಎಂದು ಬಳಕೆದಾರರು ಹೇಳಿದ್ದಾರೆ. ಈ ಜೋಡಿ ಮೇಲೆ ಯಾರ ಕಣ್ಣೂ ಬೀಳದಿರಲಿ ಎಂದು ಜನರು ದೇವರನ್ನು ಪ್ರಾರ್ಥಿಸಿದ್ರೆ, ತ್ರಿವಿಕ್ರಮ್ – ಭವ್ಯ ಜೋಡಿ ದಿ ಬೆಸ್ಟ್ ಎಂದು ಮತ್ತೆ ಕೆಲವರು ಹೇಳಿದ್ದಾರೆ. ವಿಡಿಯೋಕ್ಕೆ ನೂರಾರು ಕಮೆಂಟ್ ಬಂದಿದೆ. 

ಜೋಡಿ ಟಾಸ್ಕ್ ಆರಂಭದಲ್ಲಿ ತ್ರಿವಿಕ್ರಮ್ ಕ್ಯಾಪ್ಟನ್ ಆಗಿದ್ದ ಕಾರಣ ಅವರಿಗೆ ಜೋಡಿ ಇರಲಿಲ್ಲ. ನಂತ್ರ ಬಿಗ್ ಬಾಸ್ ಸ್ವಲ್ಪ ಟ್ವಿಸ್ಟ್ ನೀಡಿದ್ದರು. ತ್ರಿವಿಕ್ರಮ್ ಅವರಿಗೆ ಜೋಡಿಯಾಗಿ ಯಾರು ಹೋಗ್ತೀರಾ ಅಂತ ಸ್ಪರ್ಧಿಗಳನ್ನು ಕೇಳಿದ್ದರು. ಗೌತಮಿ, ಭವ್ಯ, ಅನುಷಾ ರೈ ಹಾಗೂ ಚೈತ್ರಾ ಕುಂದಾಪುರ ತಮ್ಮ ಪಾರ್ಟನರ್ ಬಿಟ್ಟು ತ್ರಿವಿಕ್ರಮ್ ಹೆಸರು ಹೇಳಿದ್ದರು. ಈ ವಿಷ್ಯವಾಗಿ ಶಿಶಿರ್ ಮತ್ತು ಚೈತ್ರಾ ಮಧ್ಯೆ ಫೈಟ್ ನಡೆದಿತ್ತು. ಇತ್ತ ತ್ರಿವಿಕ್ರಮ್ ಯಾರನ್ನೂ ಒಪ್ಪಿಕೊಳ್ಳಲು ಸಿದ್ಧ ಇರಲಿಲ್ಲ. ಕೊನೆಯಲ್ಲಿ ಭವ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದರು.

ಮುಖವಾಡ ಹಾಕಿರೋದು ಗೌತಮಿ ಅಲ್ಲ ಮೋಕ್ಷಿತಾ; ಅರ್ಥ ಆಯ್ತಾ ಎಂದು ಕಾಲೆಳೆದ ನೆಟ್ಟಿಗರು!

ತ್ರಿವಿಕ್ರಮ್ ಮತ್ತು ಭವ್ಯ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ಸುದ್ದಿ ಆರಂಭದಿಂದಲೇ ಇತ್ತು. ತುಕಾಲಿ ತಮ್ಮ ಪತ್ನಿ ಮಾನಸಾಗೆ ಫೋನ್ ಮಾಡಿದ್ದಾಗ ಇದಕ್ಕೆ ರೆಕ್ಕೆ ಬಂದಿತ್ತು. ಆದ್ರೆ ಇಬ್ಬರು ಕಣ್ಣಲ್ಲೇ ಮಾತನಾಡಿದ್ದು ಬಿಟ್ರೆ ಎಲ್ಲೂ ತೋರಿಸಿಕೊಂಡಿರಲಿಲ್ಲ. 

ತ್ರಿವಿಕ್ರಮ್ ಹಾಗೂ ಭವ್ಯ ಉತ್ತಮ ಆಟಗಾರರು ಅನ್ನೋದ್ರಲ್ಲಿ ಡೌಟೇ ಇಲ್ಲ. ಹಿಂದಿನ ವಾರ ಸ್ವಲ್ಪದರಲ್ಲೇ ಭವ್ಯ ಕಿಚ್ಚನ ಚಪ್ಪಾಳೆ ಮಿಸ್ ಮಾಡಿಕೊಂಡಿದ್ದರು. ನಾಯಕತ್ವದ ಪಟ್ಟ ತ್ರಿವಿಕ್ರಮ್ ಪಾಲಾಗಿತ್ತು. ಆದ್ರೆ ಯಾವುದಕ್ಕೂ ಜಗ್ಗದ ಭವ್ಯ ತಮ್ಮ ಆಟ ಆಡ್ತಿದ್ದಾರೆ. ಈ ಬಾರಿ ಕ್ಯಾಪ್ಟನ್ ಟಾಸ್ಕ್ ಸ್ವಲ್ಪ ಭಿನ್ನವಾಗಿದ್ದು, ರಾಮಾಚಾರಿ – ಚಾರು ಬಿಗ್ ಬಾಸ್ ಮನೆ ವಾತಾವರಣವನ್ನು ಬದಲಿಸಿದ್ದಾರೆ. ಸದಾ ಗಲಾಟೆ ನೋಡ್ತಿದ್ದ ಫ್ಯಾನ್ಸ್ ಗೆ ಡಾನ್ಸ್, ನಗು, ರೋಮ್ಯಾನ್ಸ್ ನೋಡುವ ಅವಕಾಶ ಸಿಕ್ಕಿದೆ. 

click me!