ಬಿಗ್‌ಬಾಸ್ ಮನೆಗೆ ಚೈತ್ರಾ ಕೊಟ್ಟೂರು ರೀ ಎಂಟ್ರಿ | ಸದಸ್ಯರಿಗೆ ಫುಲ್ ಶಾಕ್ | ಮತ್ತೆ ವೈಲ್ಡ್ ಕಾಲ್ಡ್ ಎಂಟ್ರಿ ಪಡೆದ್ರಾ ಚೈತ್ರಾ? ಮತ್ತೆ ಶುರುವಾಗುತ್ತಾ ಆ್ಯಪಲ್ ಕಥೆ? ಏನಿದು ಹೊಸ ಟ್ವಿಸ್ಟ್? ನೋಡಿ.
ಈಗೀಗ ಬೋರ್ ಹೊಡೆಸುತ್ತಿರುವ ಬಿಗ್‌ಬಾಸ್‌ಗೆ ಒಂದಷ್ಟು ಕಲರ್ ತುಂಬಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಏನೇನೋ ಸರ್ಕಸ್ ಮಾಡಲಾಗುತ್ತಿದೆ. ಮನೆಗೆ ಆಗಾಗ ಯಾರನ್ನಾದರೂ ಕಳುಹಿಸಿ ಮನೋರಂಜನೆ ನೀಡಲಾಗುತ್ತಿದೆ. ಕೆಲದಿನಗಳ ಹಿಂದೆ ಸಂಗೀತ ಮಾಂತ್ರಿಕ ಗುರುಕಿರಣ್ ಬಂದು ಒಂದಷ್ಟು ಹೊತ್ತು ಸ್ಪರ್ಧಿಗಳ ಜೊತೆ ಕಳೆದು ಹೋಗಿದ್ದಾರೆ. ನಿನ್ನೆ ಜಾದೂಗಾರ ಕುದ್ರೋಳಿ ಗಣೇಶ್ ಅವರು ಮನೆಯೊಳಗೆ ಬಂದಿದ್ದಾರೆ. ಅವರ ಮ್ಯಾಜಿಕ್ ಮೋಡಿಯನ್ನು ಸ್ಪರ್ಧಿಗಳು ಎಂಜಾಯ್ ಮಾಡಿದ್ಧಾರೆ.
ಶೈನ್ ಜೊತೆ ಫ್ಲರ್ಟ್; ಸೊಪ್ಪು ಮಾರುವವನ ಜೊತೆ ಮದ್ವೆ; ಏನಿದು ಕೊಟ್ಟೂರು ಕನ್ಫ್ಯೂಷನ್?
ಗಣೇಶ್ ಬೆಡ್‌ರೂಂ, ಡೈನಿಂಗ್ ಟೇಬಲ್, ಲೀವಿಂಗ್ ಏರಿಯಾದಲ್ಲಿ ಮ್ಯಾಜಿಕ್ ಮಾಡಿದ ನಂತರ ಗಾರ್ಡನ್ ಏರಿಯಾಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇದ್ದಕ್ಕಿದ್ದಂತೆ ಚೈತ್ರಾ ಕೊಟ್ಟೂರ್ ಪ್ರತ್ಯಕ್ಷರಾಗಿದ್ದಾರೆ. ಚೈತ್ರಾರನ್ನು ನೋಡಿ ಸದಸ್ಯರೆಲ್ಲರೂ ಫುಲ್ ಶಾಕ್ ಆಗಿದ್ದಾರೆ. ಅವರು ಮನೆಯೊಳಗೆ ಬಂದಿದ್ದು ಅಷ್ಟು ಖುಷಿಯಾದಂತೆ ಕಾಣಿಸಿಲ್ಲ.
BB7: ಗೇಮ್ ಅಥವಾ ಇರೋದೆ ಹೀಗಾ? ಬಯಲಾಯ್ತು ಚೈತ್ರಾ ಕೊಟ್ಟೂರ್ ಮಾಸ್ಟರ್ ಪ್ಲಾನ್?
ಮನೆಯೊಳಗಿದ್ದಾಗ ಚೈತ್ರಾ ಅಸಂಬದ್ಧ ಮಾತುಗಳನ್ನು ಆಡುತ್ತಾ ಕಿರಿಕಿರಿ ಎನಿಸುವಂತೆ ನಡೆದುಕೊಳ್ಳುತ್ತಿದ್ದರು. ನಾಲ್ಕನೇ ವಾರ ಎಲಿಮನೇಟ್ ಆಗಿ ಹೊರ ಹೋಗಿದ್ದರು. ಆಗ ಕಿಚ್ಚ ಸುದೀಪ್ ಜೊತೆ ಮಾತನಾಡುವಾಗ, ಹೇಗನಿಸುತ್ತಿದೆ ಎಂದಾಗ ನನ್ನ ಅರ್ಧ ಸೀರೆಯನ್ನು ಹರಿದು ಮನೆಯೊಳಗೆ ಬಿಟ್ಟು ಹೋಗುತ್ತಿದ್ದೇನೆ' ಎಂದಿದ್ದರು. ಈಗ ಆ ಸೀರೆಯನ್ನು ತೆಗೆದುಕೊಂಡು ಹೋಗಲು ಬಂದಿರಬಹುದಾ? ಮತ್ತೆ ವೈಲ್ಡ್ ಕಾಲ್ಡ್ ಎಂಟ್ರಿ ಪಡೆದಿರಬಹುದಾ? ಸ್ಪರ್ಧಿಗಳಿಗೆ ಶಾಕ್ ಕೊಡಲು ಒಂದೆರಡು ದಿನ ಗೆಸ್ಟ್ ಆಗಿ ಇರ್ತಾರಾ? ಕುತೂಹಲ ಮೂಡಿಸಿದೆ.