
'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಚಂದನ್ 'ಬಿಗ್ ಬಾಸ್ ಸೀಸನ್ 3' ಕನ್ನಡ ರನ್ನರ್ ಅಪ್ ಆಗಿ ಹೊರಬಂದವರು. ಆ ನಂತರ ಸಿನಿಮಾ ಮತ್ತು ಧಾರಾವಾಹಿ ಎರಡನ್ನೂ ಸಮವಾಗಿ ನಿಭಾಯಿಸಿದ್ದರು.
'ಲಕ್ಷ್ಮೀ ಬಾರಮ್ಮ' ಚಂದು ಮದುವೆ ಆಗ್ಬಿಟ್ರಾ?
'ರಾಧಾ ಕಲ್ಯಾಣ' ದಲ್ಲಿ ನಟಿಸಿದ್ದರೂ ವೃತಿಗೆ ಬಿಗ್ ಬ್ರೇಕ್ ಸಿಕ್ಕಿದ್ದು'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಂದನ್ ಪಾತ್ರಕ್ಕೆ. 2014ರಲ್ಲಿ 'ಪರಿಣಯ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಹಲವಾರು ಸಿನಿಮಾಗಳಲ್ಲಿ ನಟಿಸಿ ಬಂದ ಚಂದನ್ ಈಗ ಬೆಳ್ಳಿತೆರೆಯಲ್ಲಿ 'ಗೊಂಬೆ' ಜೊತೆ ಫಸ್ಟ್ ನೈಟ್ ಮಾಡಿಕೊಳ್ಳುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯಲ್ಲಿ ಒಂದು ದೃಶ್ಯದಲ್ಲಿ ಗೊಂಬೆ ಜೊತೆ ಫಸ್ಟ್‌ನೈಟ್ ಸೀನ್ ಇರಬೇಕು ಅದರ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಜನರಿಗೆ ಗೊಂದಲ ಕ್ರಿಯೇಟ್ ಮಾಡಿದ್ದು ಗೊಂಬೆ ಎಂಬ ಹೆಸರು. ಚಂದನ್ ಆಟ ಆಡುವ ಗೊಂಬೆ ಬಗ್ಗೆ ಹೇಳಿದರೆ ಕೆಲ ಅಭಿಮಾನಿಗಳು ಅದನ್ನು 'ಲಕ್ಷ್ಮೀ ಬಾರಮ್ಮ' ಪಾತ್ರಧಾರಿ ಗೊಂಬೆ ಎಂದು ಕನ್ಫ್ಯೂಸ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.