ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಸೌಂದರ್ಯ ಸಮರ/ ಮನೆಯವರಿಂದ ಭರ್ಜರಿ ಸ್ವಾಗತ/ ಹುಡುಗರ ಮುಖದಲ್ಲಿ ಖುಷಿ ಎಂದ ಪ್ರಿಯಾಂಕಾ/ ಮನೆಯವರಿಂದ ಸಾಕಷ್ಟು ಪುಕ್ಕಟೆ ಸಲಹೆ
ಬಿಗ್ ಬಾಸ್ ಮನೆಗೆ ರಕ್ಷಾ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಗೆ ಮನೆ ಲೆಕ್ಕಾಚಾರ ಮೊದಲಿನ ಹಾಗೆ ಇದೆ. ಮನೆಗೆ ಬಂದ ರಕ್ಷಾಗೆ ಎಲ್ಲರೂ ಪರಿಚಯ ಮಾಡಿಕೊಂಡರು. ಬಿಗ್ ಬಾಸ್ ಮನೆಯೊಳಗೆ ಬರುತ್ತಲೇ ರಕ್ಷಾಗೆ ಬಾಸ್ ಟಾಸ್ಕೊಂದನ್ನು ಕೊಟ್ಟು ಕಳಿಸಿದ್ದಾರೆ.
ಇತ್ತ ಮನೆಯೊಳಗಿದ್ದ ಕಿಶನ್ ಗೆ ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಲೇಡಿಯೊಬ್ಬರು ಬರಲಿದ್ದು ಅವರನ್ನು ನಿಮ್ಮ ಲವರ್ ಎಂದು ಮನೆಯವರಿಗೆಲ್ಲ ನಂಬಿಸಬೇಕು, ಸುದೀಪ್ ಬಂದು ಹೇಳುವವರೆಗೂ ಸಿಕ್ರೆಟ್ ಟಾಸ್ಕ್ ಮುಂದುವರಿಯಲಿದೆ ಎಂದು ಆದೇಶ ಸಹನ ಸಿಕ್ಕಿದೆ.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹಾಟ್ ಬೆಡಗಿ ರಕ್ಷಾ
ಇನ್ನು ಮನೆಯೊಳಕ್ಕೆ ಕಾಲಿಡಬೇಕಿದ್ದರೆ ರಕ್ಷಾಗೂ ಇದನ್ನೇ ಹೇಳಿದ್ದು ಮನೆಯವರಿಗೆಲ್ಲ ನೀವು ಕಿಶನ್ ಅವರನ್ನು ಲವರ್ ಎಂದೇ ಬಿಂಬಿಸಬೇಕು ಎಂದಿದ್ದಾರೆ.
ಇನ್ನು ಸೋಮವಾರ ಎಂದಿನಂತೆ ಎಲಿಮನೇಶನ್ ಮತ್ತು ನಾಯಕನ ಆಯ್ಕೆ ಇತ್ತು. ಅತಿ ಹೆಚ್ಚು ಕಲ್ಲಂಗಡಿ ಹಣ್ಣು ತಿಂದ ಕುರಿ ಪ್ರತಾಪ್ ೀ ವಾರದ ಮನೆಯ ಕ್ಯಾಪ್ಟನ್ ಆದರು.
ಈ ಸಾರಿ ಬಿಗ್ ಬಾಸ್ ನಾಮಿನೇಶನ್ ಗೆ ಹೊಸ ಪ್ರಕ್ರಿಯೆ ಹೇಳಿದ್ದರು. ನಿಮಗೆ 5 ಅಂಕ ನೀಡಲಾಗುತ್ತಿದ್ದು ಅದರಲ್ಲಿ ಇಬ್ಬರಿಗೆ ಹಂಚಬೇಕು. ಒನ್ನರಿಗೆ 4 ಒಬ್ಬರಿಗೆ 1 ಕನಿಷ್ಠ ಆದರೂ ನೀಡಬೇಕು ಎಂದಿದ್ದರು.
19 ಅಂಕ ಪಡೆದ ಚಂದನ್ ಆಚಾರ್, 16 ಪಾಯಿಂಟ್ಸ್ ಪಡೆದ ಪೃಥ್ವಿ, 8 ಅಂಕ ಪಡೆದ ಭೂಮಿ, 5 ಅಂಕ ಪಡೆದ ಕಿಶನ್ ನಾಮಿನೇಟ್ ಆದರು. ಇದಾದ ಮೇಲೆ ಕುರಿ ಪ್ರತಾಪ್ ಶೈನ್ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು.