15 ವರ್ಷಗಳ ನಂತರ ಮನೆಗೆ ಹೊಸ ದುಬಾರಿ ಫ್ರಿಡ್ಜ್‌ ತಂದ ವರುಣ್ ಆರಾಧ್ಯ; ಜನರ ಬಿಕ್ಷೆ ಎಂದ ನೆಟ್ಟಿಗರು!

By Vaishnavi Chandrashekar  |  First Published Oct 1, 2024, 12:26 PM IST

ತಾಯಿಯ ಆಸೆಯಂತೆ ಮನೆಗೆ ದುಬಾರಿ ಫ್ರಿಡ್ಜ್‌ ತಂದುಕೊಟ್ಟ ವರುಣ್ ಆರಾಧ್ಯ. ಕಾಮೆಂಟ್ಸ್‌ ಪೂರ್ತಿ ರೆಸ್ಪೆಕ್ಟ್‌ ಬಟನ್‌ ಎಂದಿದ್ದಾರೆ ನೆಟ್ಟಿಗರು.....
 


ಸೋಷಿಯಲ್ ಮೀಡಿಯಾ ಸ್ಟಾರ್, ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ ನಾನಾ ಕಾರಣಗಳಿಂದ ಪದೇ ಪದೇ ನೆಗೆಟಿವ್ ಆಗಿ ಟ್ರೋಲ್ ಆಗುತ್ತಿರುತ್ತಾರೆ. ವರ್ಷ ಕಾವೇರಿ ಜೊತೆ ಬ್ರೇಕಪ್ ಮಾಡಿಕೊಂಡ ನಂತರ ವರುಣ್ ಆರಾಧ್ಯಗೆ ನೆಗೆಟಿವ್ ಕಾಮೆಂಟ್ ಮತ್ತು ನಿಂದನೆ ಹೆಚ್ಚಾಗಿತ್ತು. ಹೊಸದಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿ ಲಕ್ಷಗಟ್ಟಲೆ ಫಾಲೋವರ್ಸ್ ಹೊಂದಿರುವ ನಟ ಈಗ ಅದನ್ನು ದುಡಿಮೆಯ ಹಾದಿ ಮಾಡಿಕೊಂಡಿದ್ದಾರೆ. ತಾಯಿ,ತಂಗಿ, ಭಾವ ಮತ್ತು ಅಕ್ಕನ ಮಗಳನ್ನು ನೋಡಿಕೊಳ್ಳುತ್ತಿರುವ ವರುಣ್ ಆರಾಧ್ಯ ಪ್ರತಿಯೊಬ್ಬರ ಆಸೆಯನ್ನು ಈಡೇರಿಸುತ್ತಿದ್ದಾರೆ. ಈಗ ಮನೆಗೆ ಹೊಸದಾಗಿ ಫ್ರಿಡ್ಜ್‌ ತಂದಿದ್ದಾರೆ. 

ಹೌದು!ಸುಮಾರು 15 ವರ್ಷಗಳಿಂದ ವರುಣ್ ಆರಾಧ್ಯ ಮನೆಯಲ್ಲಿ ಒಂದೇ ಫ್ರಿಡ್ಜ್‌ನ ಬಳಸಲಾಗುತ್ತಿದೆ. ಪುಟ್ಟ ಫ್ರಿಡ್ಜ್‌ ಆಗಿರುವ ಕಾರಣ ಹೆಚ್ಚಿನ ಸಾಮಾನುಗಳನ್ನು ಇಡಲು ಕಷ್ಟವಾಗುತ್ತಿತ್ತು ಎಂದು ಹಲವು ದಿನಗಳಿಂದ ತಾಯಿ ಹೊಸ ಫ್ರಿಡ್ಜ್‌ ಕೇಳುತ್ತಿದ್ದರು. ಹೀಗಾಗಿ ತಾಯಿ ಜೊತೆ ಮಾಡಿರುವ ವ್ಲಾಗ್‌ಗೆ 20 ಸಾವಿರ ಲೈಕ್ ಬಂದರೆ ಖಂಡಿತಾ ಫ್ರಿಡ್ಜ್‌ ತರುವುದಾಗಿ ವರುಣ್ ಪ್ರಾಮಿಸ್ ಮಾಡಿದ್ದರು. ಒಂದೆರಡು ಫ್ರಿಡ್ಜ್‌ಗಳನ್ನು ನೋಡಿಕೊಂಡು ಬಂದಿದ್ದರು. ಅದರಂತೆ ತಾಯಿಯನ್ನು ಕರೆದುಕೊಂಡು ಹೋಗಿ ಮನೆಗೆ ಡಬಲ್ ಡೋರ್ ಇರುವ ಫ್ರಿಡ್ಜ್‌ನ ತಂದಿದ್ದಾರೆ. 

Tap to resize

Latest Videos

undefined

ಟ್ರೋಲಿಗರು ಕೂಡ ಗೆಸ್ ಮಾಡಿಲ್ಲ ಗುರು ನಿನ್ನ ಎಂಟ್ರಿನಾ; ಧನರಾಜ್ ಪರ ನೆಟ್ಟಿಗರು

'ಜನರು 20 ಸಾವಿರ ಲೈಕ್ ಕೊಟ್ಟಿರುವ ಕಾರಣ ನಮ್ಮ ಮನೆಗೆ ಫ್ರಿಡ್ಜ್‌ ಬಂದಿದೆ. ಎಲ್ಲ ನಿಮ್ಮ ಸಪೋರ್ಟ್‌ನಿಂದ ಇದೆಲ್ಲಾ ಸಾಧ್ಯವಾಗಿದ್ದು. ನಮ್ಮನ್ನು ಹೀಗೆ ಸಪೋರ್ಟ್ ಮಾಡಿ ಬೆಳೆಸಿ' ಎಂದು ವರುಣ್ ಆರಾಧ್ಯ ತಾಯಿ ಮಾತನಾಡಿದ್ದಾರೆ. ಜನರಿಗೆ ಲೈಕ್ ಕೊಡಿ ಲೈಕ್ ಕೊಡಿ ಎಂದು ಕೇಳಿ ಕೇಳಿ ಖರೀದಿ ಮಾಡಿರುವ ಫ್ರಿಡ್ಜ್‌ ಇದು ಹೀಗಾಗಿ ಇದು ನಿಮಗೆ ಜನರು ಕೊಟ್ಟಿರುವ ಭಿಕ್ಷೆ. ಇಷ್ಟೇ ಅಲ್ಲ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ನಿಮ್ಮ ಮಗನಲ್ಲಿ ಬೆಳೆಸಿ ಎಂದು ನೆಟ್ಟಿಗರು ಕಾಲೆಳೆದು ಕಾಮೆಂಟ್ ಮಾಡಿದ್ದಾರೆ. 

ಯೋಚನೆ ಮಾಡಿ ಮಾಡಿ ಅದೆಷ್ಟೋ ದಿನ ನಿದ್ರೆ ಮಾಡಿಲ್ಲ; ಅವಕಾಶ ಗಿಟ್ಟಿಸಿಕೊಂಡ ಸತ್ಯ ಬಿಚ್ಚಿಟ್ಟ ದುನಿಯಾ ವಿಜಯ್ ಪುತ್ರಿ ಮೋನಿಷಾ!

ಬೃಂದಾವನಾ ಸೀರಿಯಲ್‌ ನಂತರ ಸಂಪೂರ್ಣವಾಗಿ ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಂಡಿರುವ ವರುಣ್ ಆರಾಧ್ಯ ಆಗಾಗ ಸ್ಟಾರ್ ನಟಿಯರ ಜೊತೆ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾರೆ. ಅಲ್ಲದೆ ಸೈಲೆಂಟ್ ಆಗಿ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ.

click me!