Bigg Boss Kannada 11 - ಫಸ್ಟ್‌ ಟೈಮ್‌ ಬಿಗ್‌ಬಾಸ್‌ಗೇ ಮೈಕ್ ಸರಿ ಮಾಡ್ಕೊಳ್ಳಿ ಅಂದಿರೋ ಕಂಟೆಸ್ಟೆಂಟ್ ಇವರೇ ನೋಡಿ!

Published : Oct 01, 2024, 11:20 AM ISTUpdated : Oct 01, 2024, 11:28 AM IST
 Bigg Boss Kannada 11 - ಫಸ್ಟ್‌ ಟೈಮ್‌ ಬಿಗ್‌ಬಾಸ್‌ಗೇ ಮೈಕ್ ಸರಿ ಮಾಡ್ಕೊಳ್ಳಿ ಅಂದಿರೋ ಕಂಟೆಸ್ಟೆಂಟ್ ಇವರೇ ನೋಡಿ!

ಸಾರಾಂಶ

  ಬಿಗ್‌ಬಾಸ್ ಶೋ ರಂಗೇರ್ತಿದೆ. ಈ ನಡುವೆ ಸ್ಪರ್ಧಿಯೊಬ್ಬರು ಬಿಗ್‌ಬಾಸ್‌ಗೇ ಮೈಕ್‌ ಸರಿ ಮಾಡ್ಕೊಳ್ಳಿ ಅನ್ನೋ ಸೂಚನೆ ಕೊಟ್ಟಿದ್ದು ಎಲ್ಲರ ಹುಬ್ಬೇರೋ ಹಾಗೆ ಮಾಡಿದೆ.  

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್ 11 ಅದ್ಧೂರಿಯಾಗಿ ಆರಂಭಗೊಂಡಿದೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಸ್ವರ್ಗ-ನರಕ ಅಂತ ಎರಡು ಮನೆಗಳನ್ನು ಮಾಡಲಾಗಿದೆ. ಹೀಗಾಗಿ ಸೀಸನ್ 11ರ ಮೇಲಿನ ಕುತೂಹಲಗಳು ಹೆಚ್ಚಾಗಿವೆ.

ವಿವಿಧ ಸ್ಪರ್ಧಿಗಳಲ್ಲಿ ಕೆಲವರು ಸ್ವರ್ಗಲೋಕ ವಾಸಿಗಳಾದರೆ, ಉಳಿದವರು ನರಕದಲ್ಲಿ ಏಗ್ತಾ ಇದ್ದಾರೆ. ಗೀತಾ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ ಸ್ವರ್ಗಕ್ಕೆ ಎಂಟ್ರಿ ಕೊಟ್ಟರೆ, ಎರಡನೇ ಸ್ಪರ್ಧಿ ನಟಿ ಯಮುನಾ ಶ್ರೀನಿಧಿ ಕೂಡ ಸ್ವರ್ಗಕ್ಕೆ ಹೋಗಿದ್ದಾರೆ. ತಮ್ಮ ಕಾಮಿಡಿ ವಿಡಿಯೋಗಳಿಂದ ಕರ್ನಾಟಕದ ಮನೆ ಮಾತಾಗಿರುವ ಧನರಾಜ್ ಆಚಾರ್ ಮೂರನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇವರನ್ನು ಕೂಡ ಸ್ವರ್ಗಕ್ಕೆ ಕಳುಹಿಸಲಾಗಿದೆ. ನಾಲ್ಕನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟಿರೋ ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಜಾದವ್ 1 ಲಕ್ಷಕ್ಕೂ ಅಧಿಕ ವೋಟ್ಸ್ ಪಡೆದ ಗೌತಮಿ ಸೀದಾ ಸ್ವರ್ಗಕ್ಕೆ ತೆರೆಳಿದ್ದಾರೆ. ಸ್ಯಾಂಡಲ್‌ವುಡ್ ನಟಿ ಅನುಷಾ ರೈ ನರಕಕ್ಕೆ ತೆರಳಿದ್ದಾರೆ. ನಟ ಕೀರ್ತಿರಾಜ್ ಅವರ ಮಗ ಧರ್ಮ ಕೀರ್ತಿರಾಜ್ ಯುಮನಾ ಶ್ರೀನಿಧಿ ಮತ್ತು ಭವ್ಯಾ ಗೌಡ ದಯದಿಂದ ಸ್ವರ್ಗ ಸೇರಿದ್ದಾರೆ. ವಿವಾದಾತ್ಮಕ ಆರೋಪಗಳಿಂದ ಭಾರೀ ಸದ್ದು ಮಾಡಿದ್ದ ವಕೀಲ ಜಗದೀಶ್ 2 ಲಕ್ಷಕ್ಕೂ ಅಧಿಕ ವೋಟ್ಸ್ ಪಡೆದು ಸ್ವರ್ಗಕ್ಕೆ ತೆರಳಿದ್ದಾರೆ. ಆದರೆ ಜಗದೀಶ್‌ಗೆ ನರಕಕ್ಕೆ ಹೋಗಬೇಕೆಂಬ ಆಸೆಯಿತ್ತು. ಕಿರುತೆರೆ ನಟ ಶಶಿರ್ ಶಾಸ್ತ್ರಿ ನರಕದಲ್ಲಿದ್ದಾರೆ.

BBK11: ಎಲ್ಲಾ ಕಡೆ ಲಾಯರ್ ಬುದ್ದಿ ತೋರಿಸ್ತಾರೆ: ಲಾಯರ್ ಜಗದೀಶ್ ಗೆ ಟಾಂಟ್ ಕೊಟ್ಟ ಧನ್‌ರಾಜ್

ಹೀಗೆ ಹಲವರು ಸ್ಪರ್ಧಿಗಳು ಸ್ವರ್ಗ ಮತ್ತು ನರಕಗಳಲ್ಲಿ ನೆಲೆ ಕಂಡುಕೊಂಡು ಆಟವನ್ನು ರಂಗೇರಿಸಿದ್ದಾರೆ. ಮೊದಲ ದಿನವೇ ವಿವಾದಾತ್ಮಕ ವ್ಯಕ್ತಿತ್ವದ ಚೈತ್ರಾ ಕುಂದಾಪುರ ಮೊದಲ ದಿನವೇ ವಿವಾದಗಳಿಂದ ಗಮನ ಸೆಳೆದರು. ಇದನ್ನೆಲ್ಲ ನೋಡಿದರೆ ಈ ಸಲ ಈಕೆಗೆ ಓಟ್ ಕಡಿಮೆ ಬೀಳೋ ಚಾನ್ಸಸ್ ಇದೆ. ಆದರೆ ಚಾರ್ಮ್ ಉಳಿಸಿಕೊಂಡಿರೋ ಕಾರಣಕ್ಕೆ ಈಕೆ ಮನೆಯಿಂದ ಆಚೆ ಹೋಗೋ ಚಾನ್ಸಸ್ ಕಡಿಮೆ. ಜೊತೆಗೆ ಈಕೆಯ ಆಟಿಟ್ಯೂಡ್‌ ಅನ್ನು ವೀಕ್ಷಕರು ಕುತೂಹಲದಿಂದ ನೋಡುತ್ತಿದ್ದಾರೆ. ಸೋ ಈಕೆಯ ಪ್ರೋಮೋಗಳಿಗೆ ಚಾನೆಲ್‌ಗೂ ಸಖತ್ ಟಿಆರ್‌ಪಿ ಬರ್ತಿದೆ. ಸೋ ಚೈತ್ರಾ ಮೊದಲ ವಾರವೇ ಹೊರನಡೆಯೋ ಚಾನ್ಸಸ್ ಕಮ್ಮಿ ಅನ್ನೋ ಮಾತು ಕೇಳಿ ಬರ್ತಿದೆ.

ಅದಿರಲಿ, ಆದರೆ ಇಲ್ಲೊಬ್ಬ ಮಹಾನುಭಾವ ಬಿಗ್‌ಬಾಸ್‌ಗೆ ಮೈಕ್ ಸರಿ ಮಾಡ್ಕೊಳ್ಳಿ ಅನ್ನೋ ಸೂಚನೆ ನೀಡೋ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಆತ ಮತ್ಯಾರೂ ಅಲ್ಲ. ಧನರಾಜ್. ಈತನನ್ನು ಬಿಗ್‌ಬಾಸ್ ಸೀಕ್ರೆಟ್ ರೂಮ್‌ನೊಳಗೆ ಕರೆದು ಏನೋ ಸೂಚನೆ ಕೊಟ್ಟಿದ್ದಾರೆ. ಅದಕ್ಕೆ ಕೊಂಚ ಸಂಕೋಚದಿಂದಲೇ ಇವರು, 'ನಂಗೆ ಸರಿಯಾಗಿ ಕೇಳಿಸ್ತಿಲ್ಲ ಬಿಗ್‌ಬಾಸ್' ಅಂದುಬಿಟ್ಟಿದ್ದಾರೆ. 'ಬಿಗ್‌ಬಾಸ್‌ಗೇ ಮೈಕ್ ಸರಿಯಾಗಿ ಹಾಕ್ಕೊಳ್ಳಿ ಅಂದ ಮೊದಲ ಕಂಟೆಸ್ಟೆಂಟ್ ನೀವು' ಅನ್ನೋ ಮಾತನ್ನು ಬಿಗ್‌ಬಾಸ್ ಧನರಾಜ್‌ಗೆ ಹೇಳಿಬಿಟ್ಟಿದ್ದಾರೆ. ಇದು ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.

ಶ್ರಾವಣಿ ಬ್ಲಡ್ ಕೊಡ್ತಿದ್ರೆ ಸುಬ್ಬು ಹಿಂಗ್ಯಾಕೆ ಮಾಡ್ತಿದ್ದಾನೆ! ನಿಮ್ಗೂ ಈ ಅನುಭವ ಆಗಿದ್ಯಾ?

ಅಷ್ಟಕ್ಕೇ ಸುಮ್ಮನಾಗದ ಬಿಗ್‌ಬಾಸ್, ತನ್ನ ವಾಯ್ಸೇ ಕೇಳಿಸ್ತಿಲ್ಲ ಅಂತ ದೊಡ್ಡ ಮನುಷ್ಯನಿಗೆ ಜಿಂಕೆಯಂತೆ ಬಿಹೇವ್ ಮಾಡೋ ಟಾಸ್ಕ್ ನೀಡಿದೆ. ಅದಕ್ಕೆ ಸರಿಯಾಗಿ ಧನರಾಜ್‌ಗೆ ಶುರುವಿನಲ್ಲೇ ಸುದೀಪ್, 'ನೀವು ಜಿಂಕೆ ಥರ ಇರ್ತೀರಿ' ಅನ್ನೋ ಮಾತು ಹೇಳಿದ್ರು. ಅದನ್ನು ಬಿಗ್‌ಬಾಸ್ ನೆನಪು ಮಾಡಿ ಇನ್ಮೇಲೆ ಜಿಂಕೆ ಥರನೇ ಇರ್ಬೇಕು ಅಂದುಬಿಟ್ಟಿದ್ದಾರೆ. ಧನರಾಜ್ ಮೊದಲ ದಿನವೇ ಡಲ್ ಆಗಿದ್ದು ಇದಕ್ಕೆ ಕಾರಣ. ಸೋ ಇನ್ಮೇಲಿಂದ ಧನರಾಜ್ ಬಿಗ್‌ಬಾಸ್ ಮನೆಯ ಗಂಡು ಜಿಂಕೆ. ಜಿಂಕೆಯಂತೆ ನೆಗೆಯುತ್ತಾ ಹೋದ ಇವರು ಅದೇ ಆಟಿಟ್ಯೂಡ್ ಮುಂದುವರಿಸಿದ್ದಾರೆ. ಕರಾವಳಿ ಮೂಲದ ಈ ಯೂಟ್ಯೂಬರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?