
ಸೌಂದರ್ಯ ಎಂದರೆ ಸಾಕು, ಬ್ರಹ್ಮಗಂಟು ಸೀರಿಯಲ್ ವೀಕ್ಷಕರಿಗೆ ಸುಂದರಿಯಾಗಿರೋ ವಿಲನ್ ಕಣ್ಣೆದುರು ಬರುತ್ತಾಳೆ. Brahmagantu Serialನಲ್ಲಿ ಹೆಸರಿಗೆ ತಕ್ಕ ಹಾಗೆ ರಿಯಲ್ ಆಗಿ ನಟಿ ಸೌಂದರ್ಯವತಿಯೇ. ಆದರೆ ಈ ಸೀರಿಯಲ್ನಲ್ಲಿಯೂ ಸೌಂದರ್ಯವೇ ಮೇಲು ಎಂದು ಬಯಸುವವಳು. ಸೌಂದರ್ಯ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಮಕ್ಕಳೇ ಬೇಡ ಎಂದು, ತನ್ನ ತಮ್ಮ ಚಿರುಗೆ ಕೂಡ ಮಕ್ಕಳು ಆಗಬಾರದು ಎನ್ನುವ ಕಾರಣಕ್ಕೆ ತಮ್ಮ ಮತ್ತು ಆತನ ಪತ್ನಿಯನ್ನು ದೂರ ಮಾಡಿ ಅಡಿಅಡಿಗೂ ದ್ವೇಷ ಕಾರುವ ಕ್ಯಾರೆಕ್ಟರ್ ಸೌಂದರ್ಯಳದ್ದು.
ಇದೇ ದ್ವೇಷದ ಮೂಲಕವೇ ಜನಪ್ರಿಯತೆ ಹೆಚ್ಚಿಸಿಕೊಂಡಿರೋ ಸೌಂದರ್ಯಳ ನಿಜವಾದ ಹೆಸರು ಪ್ರೀತಿ ಶ್ರೀನಿವಾಸ್ (Preethi Srinivaas). ಇವರಿಗೆ ಈಗ ಜೀ ಕುಟುಂಬ ಅವಾರ್ಡ್ನಲ್ಲಿ ಅತ್ಯುತ್ತಮ ಖಳನಟಿ ಪ್ರಶಸ್ತಿ ದೊರೆತಿದೆ. ಅಮೃತಧಾರೆಯ ಶಕುಂತಲಾ ಮತ್ತು ನಾ ನಿನ್ನ ಬಿಡಲಾರೆಯ ಮಾಳವಿಕಾ ಜೊತೆಗೆ ಬ್ರಹ್ಮಗಂಟು ಸೌಂದರ್ಯಳಿಗೂ ಈ ವರ್ಷದ ಅತ್ಯುತ್ತಮ ಖಳ ನಟಿ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ ಪ್ರೀತಿ.
ಬ್ರಹ್ಮಗಂಟುವಿನಲ್ಲಿ ಮಗುವೇ ಬೇಡ ಅಂತಿರೋ ಸೌಂದರ್ಯಗೆ ರಿಯಲ್ ಆಗಿ ಓರ್ವ ಮಗ ಕೂಡ ಇದ್ದಾನೆ. ಅವಾರ್ಡ್ ಪಡೆದ ಬಳಿಕ ಪತಿ ಮತ್ತು ಮಗನ ಜೊತೆ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ನಟಿ. ಇನ್ನು ನಟಿಯ ಕುರಿತು ಹೇಳುವುದಾದರೆ, ಪ್ರೀತಿ ಅವರು, ಮನೋವಿಜ್ಞಾನಿ ಮತ್ತು ಭರತನಾಟ್ಯ ಕಲಾವಿದೆಯಾಗಿದ್ದು, ಸೀರಿಯಲ್ ನಟನೆಯ ಜೊತೆಗೆ ತೆಲುಗು ಧಾರಾವಾಹಿ 'ಜಗದ್ಧಾತ್ರಿ' ಯಲ್ಲಿಯೂ ನಟಿಸುತ್ತಿದ್ದಾರೆ. ಅವರು 'ವರಲಕ್ಷ್ಮಿ ಸ್ಟೋರ್ಸ್' ಮತ್ತು 'ಸರಸ್ವತಿ ಲಕ್ಷ್ಮಿ ಪ್ರಿಯೆ' ಧಾರಾವಾಹಿಗಳಲ್ಲೂ ನಟಿಸಿದ್ದಾರೆ ಮತ್ತು 'ಸುವರ್ಣ ಸಂಕಲ್ಪ' ಕಾರ್ಯಕ್ರಮದ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ.
'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ಸರಸ್ವತಿ ಪಾತ್ರದಲ್ಲಿ ಅಪ್ಪಟ ಹಳ್ಳಿ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಅನ್ನಪೂರ್ಣ', 'ರಾಮ ಸೀತಾ ಎಕ್ಕಡ', 'ಗಂಗಮಂಗ'. ಎನ್ನುವ ತೆಲಗು ಸೀರಿಯಲ್ಗಳಲ್ಲಿ ನಟಿಸಿದ್ದು, 'ಗಣೇಶ ಮತ್ತೆ ಬಂದ' ಮತ್ತು ರೂಪ ಅಯ್ಯರ್ ನಿರ್ದೇಶನದ 'ಚಂದ್ರ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಹೃದಯ್ ಎಂಬ ಮಗನಿದ್ದು ಈಚೆಗೆ ಅವನ ಉಪನಯನ ಮಾಡಿ ಅದರ ಫೋಟೋ ಶೇರ್ ಮಾಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.