ಹಾಟ್​ ಅವತಾರದಲ್ಲಿ ಲೇಡಿ ವಿಲನ್ಸ್: ಸೌಂದರ್ಯ, ಶಕುಂತಲಾ ಎಂಟ್ರಿ ನೋಡಿ ಉಫ್​ ಎಂದ ಫ್ಯಾನ್ಸ್​

Published : Oct 04, 2025, 05:02 PM IST
Brahmagantu Soundarya and Amruthadhaare Shakuntala

ಸಾರಾಂಶ

ಜೀ ಕುಟುಂಬ ಅವಾರ್ಡ್ಸ್ ನಾಮಿನೇಷನ್ ಕಾರ್ಯಕ್ರಮದ ರೆಡ್ ಕಾರ್ಪೆಟ್ ಮೇಲೆ 'ದೃಷ್ಟಿಬೊಟ್ಟು' ಸೌಂದರ್ಯ ಮತ್ತು 'ಅಮೃತಧಾರೆ' ಶಕುಂತಲಾ ತಮ್ಮ ಎಂದಿನ ಸೀರೆ   ಬಿಟ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.  

ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮದ ನಾಮಿನೇಷನ್​ ಶುರುವಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಬೆಸ್ಟ್​ ನಾಯಕ, ನಾಯಕಿ, ವಿಲನ್​, ಪೋಷಕ ಪಾತ್ರ, ಬಾಲ ಕಲಾವಿದರು... ಹೀಗೆ ವಿಭಿನ್ನ ಕ್ಯಾರೆಕ್ಟರ್​ಗಳನ್ನು ಆಯ್ಕೆ ಮಾಡಿ ಅವಾರ್ಡ್​ ನೀಡಲಾಗುತ್ತದೆ. ಸೀರಿಯಲ್​ ಕಲಾವಿದರ ಪಾಲಿಗೆ ಇದೊಂದು ಅವಿಸ್ಮರಣೀಯ ಕ್ಷಣ. ಬಹುತೇಕ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೂ ಎಲ್ಲರಿಗೂ ಪ್ರಶಸ್ತಿ ಒಲಿಯುವುದಿಲ್ಲ. ಅದೃಷ್ಟವಂತರಿಗೆ ಮಾತ್ರ ಪ್ರಶಸ್ತಿ ಸಿಗುವುದು ಇದೆ. ಅಷ್ಟಕ್ಕೂ ಅವಾರ್ಡ್ಸ್​ ಎಂದರೇನೇ ಹಾಗಲ್ವಾ? ಇನ್ನು ವೀಕ್ಷಕರಿಗೂ ಕೆಲವು ನಟ-ನಟಿಯರು ತುಂಬಾ ಇಷ್ಟವಾಗಿ ಬಿಡುತ್ತಾರೆ. ಆದ್ದರಿಂದ ಅವರನ್ನೇ ಆಯ್ಕೆ ಮಾಡುವುದೂ ಉಂಟು.

ವಿಲನ್​ಗಳ ಕ್ಯಾಟ್​ವಾಕ್​

ಅದೇನೇ ಇದ್ದರೂ ರೆಡ್​ ಕಾರ್ಪೆಟ್​ ಮೇಲೆ ಎಲ್ಲಾ ನಟ-ನಟಿಯರು ಇದಾಗಲೇ ramp walk ಮಾಡುತ್ತಾ ಬಂದಾಗಿದೆ. ಆದರೆ ಅದರಲ್ಲಿ ಗಮನ ಸೆಳೆದಿರುವುದು ದೃಷ್ಟಿಬೊಟ್ಟು ಸೌಂದರ್ಯ ಮತ್ತು ಅಮೃತಧಾರೆ ಶಕುಂತಲಾ. ಇಬ್ಬರೂ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನವೂ ಸೀರೆಯಲ್ಲಿಯೇ ಅವರನ್ನು ನೋಡುತ್ತಿದ್ದ ಫ್ಯಾನ್ಸ್, ಈ ಡ್ರೆಸ್​ನಲ್ಲಿ ಮೊದಲ ಬಾರಿಗೆ ನೋಡಿ ಅಬ್ಬಬ್ಬಾ ಎನ್ನುವ ಕಮೆಂಟ್ಸ್​ ಹಾಕುತ್ತಿದ್ದಾರೆ.

ಬ್ರಹ್ಮಗಂಟು ಸೌಂದರ್ಯ ಕುರಿತು...

ಇನ್ನು 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರದ ನಟಿಯ ಹೆಸರು ಪ್ರೀತಿ ಶ್ರೀನಿವಾಸ್. ಇವರು ಮನೋವಿಜ್ಞಾನಿ ಮತ್ತು ಭರತನಾಟ್ಯ ಕಲಾವಿದೆಯಾಗಿದ್ದು, ಸೀರಿಯಲ್ ನಟನೆಯ ಜೊತೆಗೆ ತೆಲುಗು ಧಾರಾವಾಹಿ 'ಜಗದ್ಧಾತ್ರಿ' ಯಲ್ಲಿಯೂ ನಟಿಸುತ್ತಿದ್ದಾರೆ. ಅವರು 'ವರಲಕ್ಷ್ಮಿ ಸ್ಟೋರ್ಸ್' ಮತ್ತು 'ಸರಸ್ವತಿ ಲಕ್ಷ್ಮಿ ಪ್ರಿಯೆ' ಧಾರಾವಾಹಿಗಳಲ್ಲೂ ನಟಿಸಿದ್ದಾರೆ ಮತ್ತು 'ಸುವರ್ಣ ಸಂಕಲ್ಪ' ಕಾರ್ಯಕ್ರಮದ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ಸರಸ್ವತಿ ಪಾತ್ರದಲ್ಲಿ ಅಪ್ಪಟ ಹಳ್ಳಿ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಅನ್ನಪೂರ್ಣ', 'ರಾಮ ಸೀತಾ ಎಕ್ಕಡ', 'ಗಂಗಮಂಗ'. ಎನ್ನುವ ತೆಲಗು ಸೀರಿಯಲ್​​ಗಳಲ್ಲಿ ನಟಿಸಿದ್ದು, 'ಗಣೇಶ ಮತ್ತೆ ಬಂದ' ಮತ್ತು ರೂಪ ಅಯ್ಯರ್ ನಿರ್ದೇಶನದ 'ಚಂದ್ರ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಹೃದಯ್‌ ಎಂಬ ಮಗನಿದ್ದು ಈಚೆಗೆ ಅವನ ಉಪನಯನ ಮಾಡಿ ಅದರ ಫೋಟೋ ಶೇರ್​ ಮಾಡಿಕೊಂಡಿದ್ದರು.

ಮೋಹಕ ಪಾತ್ರಗಳಲ್ಲಿ ನಟಿಸಿದ್ದ ವನಿತಾ ವಾಸು

ಇನ್ನು ಶಕುಂತಲಾ ಪಾತ್ರಧಾರಿ ವನಿತಾ ವಾಸು ಅವರ ಬಗ್ಗೆ ಸ್ಯಾಂಡಲ್​ವುಡ್​ ವೀಕ್ಷಕರಿಗೆ ತಿಳಿದೇ ಇದೆ. 1980ರ ದಶಕದ ಕೊನೆಯಿಂದ 1990ರ ದಶಕದ ಮಧ್ಯದವರೆಗೆ ಮೋಹಕ ಪಾತ್ರಗಳಿಗೆ ಹೆಸರಾಗಿದ್ದವರು ಇವರು. ಆಗಂತುಕ ಚಿತ್ರದಲ್ಲಿ ನಾಯಕಿಯಾಗಿ ಚಿತ್ರ ಜೀವನ ಪ್ರಾರಂಭಿಸಿದ ವನಿತಾ ಕಾಡಿನ ಬೆಂಕಿ, ತರ್ಕ, ಗೋಲ್‍ಮಾಲ್ ರಾಧಾಕೃಷ್ಣ, ಕಾಲಚಕ್ರ ಮತ್ತು ನಾಗಮಂಡಲಗಳಂತಹ ವಿಭಿನ್ನ ಚಿತ್ರಗಳಲ್ಲಿನ ವೈವಿಧ್ಯಮಯ ಪಾತ್ರಗಳನ್ನು ಸಮರ್ಥವಾಗಿ ಪೋಷಿಸಿ ಸಿನಿರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿರುವ ವನಿತಾ ಮನೆಯೊಂದು ಮೂರು ಬಾಗಿಲು ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ. 'ಬ್ರಹ್ಮಗಂಟು' ಹಾಗೂ 'ಸಂಘರ್ಷ' ಮುಂತಾದ ಧಾರಾವಾಹಿಗಳಲ್ಲಿಯೂ ಅಭಿನಯಿಸಿ, ಈಗ ಅಮೃತಧಾರೆಯಲ್ಲಿ ವಿಲನ್​ ಶಕುಂತಲಾ ಆಗಿ ವೀಕ್ಷಕರ ಕೋಪಕ್ಕೆ ಕಾರಣರಾಗಿದ್ದಾರೆ!

ಇದನ್ನೂ ಓದಿ: ಕಂಟೆಂಟ್​ ಕ್ರಿಯೇಟರ್ಸ್​ಗೆ Bigg Boss ಭರ್ಜರಿ ಆಫರ್​! ಟಿವಿಯಲ್ಲಿ ಮಿಂಚಲು ನಿಮಗೂ ಅವಕಾಶ

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?