
ದಿನಕ್ಕೊಂದು ಬಟ್ಟೆ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಪೋಸ್ಟ್ ಹಂಚಿಕೊಳ್ಳುವ ಬಿಗ್ ಬಾಸ್ ಕನ್ನಡ ಖ್ಯಾತಿಯ ನಿವೇದಿತಾ ಗೌಡ ಅವರು ʼBoys v/s Girlsʼ ಶೋನಲ್ಲಿ ಭಾಗವಹಿಸಿದ್ದಾರೆ. ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರು ಹೇಳಿರುವ ಹೇಳಿಕೆಯೊಂದು ವೈರಲ್ ಆಗ್ತಿದೆ.
‘ಬಾಯ್ಸ್ V/S ಗರ್ಲ್ಸ್’ ಶೋ..!
ಹೌದು, Boys v/s Girls ಶೋನಲ್ಲಿ ನಿವೇದಿತಾ ಗೌಡ ಸೇರಿದಂತೆ ಅನೇಕ ಸ್ಪರ್ಧಿಗಳಿದ್ದಾರೆ. ನಿವೇದಿತಾ ಗೌಡ ಅವರು “ಗಂಡು ಮಕ್ಕಳ ಗಮನ ಸೆಳೆಯಲು ಬ್ರೇನ್ ಬೇಡ, ಬ್ಯೂಟಿ ಇದ್ರೆ ಸಾಕು” ಎಂದು ಹೇಳಿದ್ದಾರೆ. ಈ ಮಾತಿಗೆ ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಬಂದಿದೆ. ಪ್ರತಿ ಶನಿವಾರ ಮತ್ತು ಭಾನುವಾರ 7.30ಕ್ಕೆ ‘ಬಾಯ್ಸ್ V/S ಗರ್ಲ್ಸ್’ ಹಾಗೂ 9 ಗಂಟೆಗೆ ʼಮಜಾ ಟಾಕೀಸ್ʼ ಕಾರ್ಯಕ್ರಮಗಳು ಪ್ರಸಾರ ಆಗುತ್ತಿವೆ. ಹೊಸದಾಗಿ ವಾಹಿನಿ ಈ ಶೋಗಳನ್ನು ಪರಿಚಯಿಸಿವೆ. ಹೊಸ ಹೊಸ ರೀತಿಯ ರಿಯಾಲಿಟಿ ಶೋಗಳನ್ನು ಪರಿಚಯ ಮಾಡುತ್ತಿರುವ ಕಲರ್ಸ್ ಕನ್ನಡ ವಾಹಿನಿಯು ಹೊಸದಾಗಿ ‘ಬಾಯ್ಸ್ V/S ಗರ್ಲ್ಸ್’ ಎಂಬ ರೋಮಾಂಚಕ ಶೋ ಆರಂಭಿಸಿದೆ.
Bigg Boss ಮುಗಿದ್ಮೇಲೂ ಬಾಸ್-ಶಿಷ್ಯನ ಜಗಳ ಮುಗಿತಿಲ್ಲ; ಮತ್ತೆ ಕದನಕ್ಕಿಳಿದ ಚೈತ್ರಾ ಕುಂದಾಪುರ, ರಜತ್!
ಈ ಶೊ ಹೇಗಿರಲಿದೆ?
ಈ ಶೋನಲ್ಲಿ ಹುಡುಗ, ಹುಡುಗಿಯರ ಟೀಂ ಇರುತ್ತವೆ. ಇಲ್ಲಿ ಸ್ಪರ್ಧಿಗಳು ಜಿದ್ದಾಜಿದ್ದಿಗೆ ಬಿದ್ದು ನೋಡುಗರಿಗೆ ಮನರಂಜನೆ ಕೊಡುವ ಆಟ ಆಡುತ್ತಾರೆ. ಈ ಮೂಲಕ ಕನ್ನಡ ಕಿರುತೆರೆಗೆ ಹೊಸದೆನಿಸುವ ಥ್ರಿಲ್ ತರಲಿದೆ. ಹುಡುಗರ ತಂಡವನ್ನು ʼಬಿಗ್ ಬಾಸ್ ಕನ್ನಡ ಸೀಸನ್ 10’ ಖ್ಯಾತಿಯ ವಿನಯ್ ಗೌಡ ಮುನ್ನಡೆಸುತ್ತಾರೆ. ಹುಡುಗಿಯರ ತಂಡವನ್ನು ಶುಭಾ ಪೂಂಜಾ ಮುನ್ನಡೆಸುತ್ತಾರೆ. ಈಗಷ್ಟೇ ʼಬಿಗ್ ಬಾಸ್ ಕನ್ನಡ 11’ ಶೋ ಗೆದ್ದಿರುವ ಹನುಮಂತ ಲಮಾಣಿ, ʼಬಿಗ್ ಬಾಸ್ʼ ಮನೆಯಲ್ಲಿ ನಗುವಿನ ಹೊಳೆ ಹರಿಸಿದ ಧನರಾಜ್ ಆಚಾರ್, ಮನೆ ಮಗಳು ಐಶ್ವರ್ಯಾ ಸಿಂಧೋಗಿ, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ ಮತ್ತು ಬಿಗ್ ಬಾಸ್ ಶೋನ ಈ ಸೀಸನ್‌ನ ಗೇಮ್ ಚೇಂಜರ್ ರಜತ್ ಕೂಡ ಇಲ್ಲಿ ಸ್ಪರ್ಧಿಗಳಾಗಿದ್ದಾರೆ. ದೊಡ್ಮನೆಯಲ್ಲಿ ಜಗಳ ಆಡಿದ್ದ ಚೈತ್ರಾ ಕುಂದಾಪುರ, ರಜತ್ ಮತ್ತೆ ಇಲ್ಲಿ ಕದನಕ್ಕಿಳಿದಿದ್ದಾರೆ.
ಪ್ರತಿ ದಿನ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಹಾಕೋದ್ಯಾಕೆ?
ಸ್ಪರ್ಧಿಗಳು!
ಕಿರುತೆರೆಯ ಹೆಸರು ಗಳಿಸಿರುವ ʼಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಪ್ರಶಾಂತ್, ಮಂಜು ಪಾವಗಡ, ನಿವೇದಿತಾ ಗೌಡ, ಸೂರಜ್, ವಿಶ್ವಾಸ್, ಸ್ನೇಹಿತ್ ಗೌಡ, ವಿವೇಕ್ ಸಿಂಹ, ರಕ್ಷಿತಾ, ಚಂದನಾ ಗೌಡ, ರಮ್ಯ, ಪ್ರಿಯಾ ಸವದಿ, ಸ್ಪಂದನಾ ಮತ್ತು ಐಶ್ವರ್ಯಾ ಸಾಲೀಮಠ ಅವರು ಕೂಡ ಸ್ಪರ್ಧಿಗಳು. ಈ ಶೋನ ಪೂರ್ತಿ ಸ್ಪರ್ಧಿಗಳಿಗೆ ವಿಧ ವಿಧವಾದ ರೋಚಕ ಸವಾಲುಗಳಿರುತ್ತವೆ. ಬಾಯ್ಸ್, ಗರ್ಲ್ಸ್ ಇಬ್ಬರೂ ತಮ್ಮ ಚಾಕಚಕ್ಯತೆ, ಸೃಜನಶೀಲತೆ, ಒಟ್ಟಾಗಿ ಆಡುವ ಮನೋಭಾವದಿಂದ ಈ ಸವಾಲುಗಳನ್ನು ಎದುರಿಸಬೇಕು. ಗೇಮ್ ಜೊತೆಗೆ ನೃತ್ಯವೂ ಸೇರಿದಂತೆ ಬೇರೆ ಬೇರೆ ಟಾಸ್ಕ್ ಇರುತ್ತವೆ. ಇನ್ನು ಹಳ್ಳಿ ಸೆಟಪ್, ಕಾಲೇಜ್ ಸೆಟಪ್ ಕೂಡ ಇರಲಿವೆ. ಈ ಶೋನಲ್ಲಿ ಗೆಲ್ಲಲು ಚುರುಕು ಬುದ್ಧಿ, ದೈಹಿಕ ಶಕ್ತಿ ಎರಡೂ ಬೇಕು. ‘ಬಾಯ್ಸ್ V/S ಗರ್ಲ್ಸ್’ ಶೋನ ಪ್ರತಿ ಸಂಚಿಕೆಯನ್ನೂ ತುಂಬ ಕುತೂಹಲಕರವಾಗಿ ಇರುವಂತೆ ರೂಪಿಸಲಾಗಿದೆಯಂತೆ. ಅನುಪಮಾ ಗೌಡ ಅವರು ಈ ಶೋ ನಿರೂಪಕರು. ನಿರ್ಣಾಯಕರು. ಇನ್ನು ಶ್ರುತಿ, ತಾರಾ ಅವರು ಈ ಶೋನ ನಿರ್ಣಾಯಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.