ತ್ರಿವಿಕ್ರಮ್ ಮನದಾಸೆ ಅರಿತುಕೊಂಡ ಮೋಕ್ಷಿತಾ ಪೈ; ವಿಕ್ಕಿಗೆ ಜೋಡಿಯಾಗಲು ಗ್ರೀನ್ ಸಿಗ್ನಲ್!

Published : Feb 02, 2025, 12:24 PM IST
ತ್ರಿವಿಕ್ರಮ್ ಮನದಾಸೆ ಅರಿತುಕೊಂಡ ಮೋಕ್ಷಿತಾ ಪೈ; ವಿಕ್ಕಿಗೆ ಜೋಡಿಯಾಗಲು ಗ್ರೀನ್ ಸಿಗ್ನಲ್!

ಸಾರಾಂಶ

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಬಿಬಿಕೆ ಮನೆಯಲ್ಲಿ ಆಗಾಗ್ಗೆ ಜಗಳವಾಡುತ್ತಿದ್ದರು. ಆದರೆ, ಇದೀಗ ತ್ರಿವಿಕ್ರಮ್ ಮನದಾಸೆಯನ್ನು ಅರಿತುಕೊಂಡಿರುವ ಮೋಕ್ಷಿತಾ ತಾನು ವಿಕ್ಕಿಗೆ ಜೋಡಿಯಾಗುವುದಾಗಿ ತಿಳಿಸಿದ್ದಾರೆ.

ಬೆಂಗಳೂರು (ಫೆ.02): ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಅವರು ಭವ್ಯಾ ಗೌಡ ನನಗೆ ಇಷ್ಟ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಮೋಕ್ಷಿತಾ ಪೈ ಅವರ ಸೌಂದರ್ಯವನ್ನು ನೋಡಿ ತಾನು ಅವರನ್ನು ಇಷ್ಟಪಟ್ಟಿದ್ದಾಗಿ ನೇರವಾಗಿ ತಿಳಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ತ್ರಿವಿಕ್ರಮ್ ಮನದಾಸೆಯನ್ನು ಅರಿತುಕೊಳ್ಳದೇ ಗೋಮುಖ ವ್ಯಾಘ್ರ ಎಂದು ಕರೆದಿದ್ದರು. ಆದರೆ, ಇದೀಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಂತರ ಇಬ್ಬರೂ ಜೊತೆಯಾಗಿ ನಟಿಸಲು ಸಿದ್ಧವೆಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಟಾಮ್ ಅಂಡ್ ಜೆರ್ರಿ ತರಹ ಇದ್ದ ಜೋಡಿ ಎಂದರೆ ಅದು ರಜತ್ ಕಿಶನ್ ಹಾಗೂ ಚೈತ್ರಾ ಕುಂದಾಪುರ ಅವರು. ಇಬ್ಬರೂ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದರು. ಅವರನ್ನು ಬಿಟ್ಟರೆ ಮತ್ತೊಂದು ಕಿತ್ತಾಡುವ ಜೋಡಿ ಎಂದರೆ ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಎಂದೇ ಹೇಳಬಹುದು. ಆದರೆ, ಮೋಕ್ಷಿತಾ ಹಾಗೂ ತ್ರಿವಿಕ್ರಮ್ ನಡುವಿನ ಜಗಳ ಒಂದು ಕಡೆಯಿಂದ ಮಾತ್ರ ನಡೆಯುತ್ತಿತ್ತು. ಕೆಲವೊಂದು ಅನಗತ್ಯ ಹೇಳಿಕೆ ಮತ್ತು ಗೊಂದಲಗಳಿಗೆ ಸಿಲುಕಿ ಮೋಕ್ಷಿತಾ ಅವರ ಕೋಪಕ್ಕೆ ಗುರಿ ಆಗುತ್ತಿದ್ದ ತ್ರಿವಿಕ್ರಮ್ ಪದೇ ಪದೇ ಬೈಸಿಕೊಳ್ಳುವುದೇ ಕಾಯಕ ಆಗಿತ್ತು. ತಾನು ಹಾಗಲ್ಲ ಎಂದು ಎಷ್ಟೇ ಸಮಾಧಾನ ಮಾಡಿದರೂ ಅದನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಇದೀಗ ಬಿಗ್ ಬಾಸ್ ಶೋ ವೀಡಿಯೋಗಳನ್ನು ನೋಡಿ ಹಾಗೂ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ತ್ರಿವಿಕ್ರಮ್ ಅವರ ಮನದಾಸೆಯನ್ನು ಅರಿತುಕೊಂಡಂತೆ ಕಾಣುತ್ತಿದೆ.

ಈ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ತ್ರಿವಿಕ್ರಮ್ ಅವರೊಂದಿಗೆ ನಟಿಸಲು ಸಿನಿಮಾದ ಆಫರ್ ಬಂದರೆ ಖಂಡಿತವಾಗಿಯೂ ಜೋಡಿಯಾಗಿ ನಟನೆ ಮಾಡುವುದಾಗಿ ತಿಳಿಸಿದ್ದಾರೆ. ಮುಂದುವರೆದು ಇನ್ನೂ ಅವರ ಮೇಲಿನ ಕೋಪ ಸಂಪೂರ್ಣವಾಗಿ ಹೋಗಿಲ್ಲ ಎಂಬ ಅರ್ಥದಲ್ಲಿಯೂ ಮಾತನಾಡಿದ್ದಾರೆ. ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವ ಆಫರ್ ಬಂದರೆ ಏನು ಮಾಡುತ್ತೀರಾ? ಎಂದು ಖಾಸಗಿ ವಾಹಿನಿಯಿಂದ ಕೇಳಲಾದ ಪ್ರಶ್ನೆಗೆ 'ನಾನು ತ್ರಿವಿಕ್ರಮ್ ಜೊತೆಗೆ ಸಿನಿಮಾ ಆಫರ್ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ಪ್ರೋಫೆಷನಲ್ ಬೇರೆ, ಪರ್ಸನಲ್ ಬೇರೆ. ಆದ್ದರಿಂದ ಎರಡನ್ನೂ ಕಂಬೈನ್ ಮಾಡೋಕೆ ಆಗಲ್ಲ. ತ್ರಿವಿಕ್ರಮ್ ಜೊತೆಗೆ ಸಿನಿಮಾ ಆಫರ್ ಬಂದರೆ ಒಪ್ಪಿಕೊಳ್ಳುತ್ತೇನೆ ಎಂದು ನಟಿ ಮೋಕ್ಷಿತಾ ಪೈ ಹೇಳಿದ್ದಾರೆ.

ಇದನ್ನೂ ಓದಿ: 'ಮಕ್ಕಳ ಕಳ್ಳಿ' ಆರೋಪಕ್ಕೆ ಉತ್ತರಿಸುತ್ತಲೇ ಮದುವೆಯಾಗೋ ಹುಡುಗನ ಗುಟ್ಟು ಬಿಚ್ಚಿಟ್ಟ ಬಿಗ್​ಬಾಸ್​ ಮೋಕ್ಷಿತಾ ಪೈ

ಎಲ್ಲ ಸ್ಪರ್ಧಿಗಳು ಸಂದರ್ಶನದಲ್ಲಿ ಬ್ಯೂಸಿ: ಬಿಗ್ ಬಾಸ್ ಸೀಸನ್ 11ರ ಎಲ್ಲ ಫೈನಲಿಸ್ಟ್‌ಗಳು ಎಲ್ಲಿಯೇ ಹೋದರೂ ಈಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರನ್ನು ಸಂದರ್ಶನ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಖಾಸಗಿ ಸುದ್ದಿ ವಾಹಿನಿಗಳು, ಖಾಸಗಿ ಸುದ್ದಿ ಸಂಸ್ಥೆಗಳು, ಯೂಟ್ಯೂಬ್ ಚಾನೆಲ್‌ಗಳು ಹಾಗೂ ಆನ್‌ಲೈನ್ ವಾಹಿನಿಯ ಸಂದರ್ಶನಗಳಿಗೆ ಸಂದರ್ಶನ ಕೊಡುತ್ತಿದ್ದಾರೆ. ಇನ್ನು ಇದೇ ವೇಳೆ ಎಲ್ಲ ಸ್ಪರ್ಧಿಗಳೂ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆದಿದ್ದ ಗುಂಗಿನಲ್ಲಿಯೇ ಇದ್ದಾರೆ. ಇದೀಗ ಮೋಕ್ಷಿತಾ ಪೈ ಅವರು ತ್ರಿವಿಕ್ರಮ್ ಅವರೊಂದಿಗೆ ನಟಿಸುವ ಅವಕಾಶ ಸದುಪಯೋಗ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss ಮುಗಿದ್ಮೇಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟ ಮೋಕ್ಷಿತಾ ಪೈ; ಸುಂದರ ಫೋಟೋಗಳಿವು!

ಮೋಕ್ಷಿತಾ, ತ್ರಿವಿಕ್ರಮ್ ಜೋಡಿ ಡ್ಯಾನ್ಸ್: ಬಿಗ್ ಬಾಸ್ ಮನೆಯಲ್ಲಿದ್ದಾಗ ಸಂಕ್ರಾಂತಿ ಹಬ್ಬದಂದು ತ್ರಿವಿಕ್ರಮ್ ಅವರೊಂದಿಗೆ ಮೋಕ್ಷಿತಾ ಅವರು ಡ್ಯಾನ್ಸ್ ಮಾಡಿದ್ದರು. ಆದರೆ ಯಾವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಎಂದು ಜನರಿಗೆ ಗೊತ್ತಿರಲಿಲ್ಲ. ಈ ಬಗ್ಗೆ ಉತ್ತರಿಸಿದ ಮೋಕ್ಷಿತಾ ನಾವಿಬ್ಬರೂ ಜೊತೆಯಾಗಿ 'ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ, ಹೆಣ್ಣು ಹೈಕ್ಳು ದೂರ ಇರಿ ಸ್ವಲ್ಪ ಇವನಿಂದ' ಎಂಬ ಹಾಡಿಗೆ ಡ್ಯಾನ್ಸ್ ಮಾಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ, ಈ ಡ್ಯಾನ್ಸ್‌ಗೆ ವೀಕ್ಷಕರಿಂದ ಭಾರೀ ಉತ್ತಮ ಪ್ರತಿಕ್ರಿಯೆ ಬಂದ ಬಗ್ಗೆಯೂ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!