
ಸಂಕ್ರಾಂತಿ ಹಬ್ಬದಂದು ಇನ್ನಷ್ಟು ಹೊಸತನದೊಂದಿಗೆ ಶುರುವಾಗ್ತಿದೆ "ಬೊಂಬಾಟ್ ಭೋಜನ ಸೀಸನ್ 4" ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ..!
.
ಕನ್ನಡ ಕಿರುತೆರೆ ಇತಿಹಾಸದಲ್ಲೇ 1000 ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಷೋ "ಬೊಂಬಾಟ್ ಭೋಜನ". ಈಗಾಗಲೇ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಇದೀಗ 4ನೇ ಆವೃತ್ತಿಯೊಂದಿಗೆ ಬರಲು ಸಜ್ಜಾಗಿದೆ.
ಸಂಕ್ರಾಂತಿ ಹಬ್ಬದಂದು ಇನ್ನಷ್ಟು ಹೊಸತನದೊಂದಿಗೆ ಶುರುವಾಗ್ತಿದೆ "ಬೊಂಬಾಟ್ ಭೋಜನ ಸೀಸನ್ 4" ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ. ಇನ್ನು ಈ ಬಾರಿಯ 'ಬೊಂಬಾಟ್ ಭೋಜನ ಸೀಸನ್ 4' ಅನೇಕ ವಿಶೇಷತೆಗಳೊಂದಿಗೆ ನಿಮ್ಮ ಮುಂದೆ ಬರ್ತಿದೆ. ಈ ಸೀಸನ್ ಅಲ್ಲಿ ಏನೆಲ್ಲಾ ಇರುತ್ತೆ ಎಂದು ಹೇಳೋದಾದ್ರೆ,..
1. ನಿಮ್ಮ ಅಡುಗೆ : ಜನಸಾಮಾನ್ಯರು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.
2. ಆರೋಗ್ಯವೇ ಭಾಗ್ಯ : ಡಾ|| ಗೌರಿ ಸುಬ್ರಮಣ್ಯ ರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.
3. ಮನೆ ಊಟ : ಒಬ್ಬರ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು, ಅವರು ತಯಾರಿಸಿರುವ ಅಡುಗೆಯ ರುಚಿಯನ್ನು ಸವಿದು ಅವರೊಂದಿಗೆ ಮಾತುಕತೆ ನಡೆಸುವುದು.
4. ನಮ್ಮೂರ ಊಟ : ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಜನರಿಗೆ ತಿಳಿಸುವುದು.
5. ಸವಿಯೂಟ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್ ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರು ವಿಭಿನ್ನ ಅಡುಗೆ ಡಿಶ್ ಗಳನ್ನು ತಯಾರಿಸುತ್ತಾರೆ.
6. ಟಿಫನ್ ಕ್ಯಾರಿಯರ್ : ಬೆಳಗ್ಗೆ ಆಫೀಸ್, ಸ್ಕೂಲ್ ಗೆ ಹೋಗೋರಿಗೆ ಡಬ್ಬಿಗೆ ಕಟ್ಟಿಕೊಡಬಹುದಾದ ಬಲು ಸುಲಭವಾಗಿರುವ ತಿನಿಸುಗಳನ್ನು ಹೇಳಲಾಗುತ್ತದೆ
7. ತಿಂಡಿ-ತಿನಿಸು : ಸಂಜೆಯ ಚಹಾಕ್ಕೆ ಸವಿಯಬಹುದಾದ ಹೊಸ ಬಗೆಯ ಕುರುಕ್ ತಿಂಡಿಗಳನ್ನು ಹೇಳಲಾಗುವುದು.
8. ಮುಖ್ಯ ಅಥಿತಿ : 'ಬೊಂಬಾಟ್ ಭೋಜನ' ಸೆಟ್ ಗೆ ಜನಪ್ರಿಯ ಕಲಾವಿದರನ್ನು, ಸಿನಿಮಾ ತಾರೆಯರನ್ನು ಕರೆಸಿ ಅವರಿಗಿಷ್ಟವಾದ ಅಡುಗೆಯನ್ನು ಮಾಡಿಕೊಡುವುದು.
ಹೀಗೆ ಅನೇಕ ಹೊಸ ಹೊಸ ಅಡುಗೆ ವಿಭಾಗಗಳನ್ನು ಈ ಬಾರಿಯ 'ಬೊಂಬಾಟ್ ಭೋಜನ ಸೀಸನ್ 4' ಹೊಂದಿದೆ.
ಇಬ್ಬರ ಜಗಳ, ಮೂರನೆಯವರಿಗೆ ಲಾಭ; ಸಂಗೀತಾ-ಕಾರ್ತಿಕ್ ಜಟಾಪಟಿ ನೋಡಿ ನಗುತ್ತಿರೋದು ಇವರೇನು!?
ನಳಮಹಾರಾಜ ಸಿಹಿ ಕಹಿ ಚಂದ್ರು ರವರ ನೇತೃತ್ವದಲ್ಲಿ ಶುರುವಾಗುತ್ತಿರುವ 'ಬೊಂಬಾಟ್ ಭೋಜನ ಸೀಸನ್ 4' ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ತಪ್ಪದೇ ವೀಕ್ಷಿಸಬಹುದು.
ಬೀಟ್ ಗುರೂಸ್ ಸಂಗೀತ ಸಂಸ್ಥೆಯ ಮ್ಯೂಸಿಕ್ ಮಸ್ತಿಗೆ ಜೈ; ಸ್ಯಾಂಡಲ್‌ವುಡ್ ಅಂಗಳದಲ್ಲೂ 'ಡಿಜೆಂಬೆ' ಕಲರವ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.