ಇಬ್ರು ಮಕ್ಕಳಿಗೆ ಅಮ್ಮ ಸ್ವೀಟ್​ ಮಾಡಿಕೊಟ್ರೆ ಹೆಸ್ರೇನು? ಮೇಘನಾ ತರ್ಲೆ ಪ್ರಶ್ನೆಗೆ ತಲೆಕೆಡಿಸಿಕೊಂಡ ತೀರ್ಪುಗಾರರು!

Published : Nov 17, 2024, 12:29 PM IST
ಇಬ್ರು ಮಕ್ಕಳಿಗೆ ಅಮ್ಮ ಸ್ವೀಟ್​ ಮಾಡಿಕೊಟ್ರೆ ಹೆಸ್ರೇನು? ಮೇಘನಾ ತರ್ಲೆ ಪ್ರಶ್ನೆಗೆ ತಲೆಕೆಡಿಸಿಕೊಂಡ ತೀರ್ಪುಗಾರರು!

ಸಾರಾಂಶ

ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ಒಗಟು ಕೇಳಿ ಎಲ್ಲರ ತಲೆ ಕೆಡಿಸಿದ್ದಾರೆ ಸೀತಾರಾಮ ಪ್ರಿಯಾ ಉರ್ಫ್​ ಮೇಘನಾ ಶಂಕರಪ್ಪ. ಇವರು ಕೇಳಿದ್ದೇನು?  

ಇಬ್ರು ಮಕ್ಕಳಿಗೆ ಅಮ್ಮ ಸ್ವೀಟ್​ ಮಾಡಿಕೊಟ್ರೆ ಅದ್ರ ಹೆಸ್ರೇನು? ಇಂಥದ್ದೊಂದು ಪ್ರಶ್ನೆಯನ್ನು  ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ಸೀತಾರಾಮ ಸೀರಿಯಲ್​ ಪ್ರಿಯಾ ಅಂದ್ರೆ  ಮೇಘನಾ ಶಂಕರಪ್ಪ ಅವರು ತೀರ್ಪುಗಾರರಿಗೆ ಕೇಳಿ ತಲೆ ಕೆಡಿಸಿದರು.  ಅದಕ್ಕೆ ಆ್ಯಂಕರ್​ ಅನುಶ್ರೀ ಸೇರಿದಂತೆ  ತೀರ್ಪುಗಾರರಾಗಿರುವ ರಕ್ಷಿತಾ ಎಲ್ಲರೂ ತಮ್ಮದೇ ಆದ ಉತ್ತರ ನೀಡಿದ್ದಾರೆ. ಕೇಸರಿಬಾತ್​ ಅದು ಇದು ಎಲ್ಲಾ  ಉತ್ತರ ಕೊಟ್ಟರು. ಆದ್ರೆ ಯಾವುದಕ್ಕೂ ನಟಿ ಮೇಘನಾ ಅಲ್ವೇ ಅಲ್ಲ ಎಂದ್ರು.  ಕೊನೆಗೆ ಎಲ್ಲರೂ ಉತ್ತರ ಏನು ಎಂದು ತಲೆ ಕೆಡಿಸಿಕೊಂಡರೂ ಅವರ ಯಾವ ಉತ್ತರವೂ ಸರಿಯಲ್ಲ ಎನ್ನುವುದು ಮೇಘನಾ ಮಾತು.


ಕೊನೆಗೆ ನಟಿ ಮೇಘನಾನೇ ಅದಕ್ಕೆ ಉತ್ತರ ಹೇಳಿದರು. ಅದೇನೆಂದ್ರೆ ಒಬ್ಬಟ್ಟು. ಒಬ್ಬ ಮತ್ತು ಟು ಸೇರಿ ಒಬ್ಬಟ್ಟು ಎಂದು. ಇದನ್ನು ಕೇಳಿ ಎಲ್ಲರೂ ತಲೆ ಚಚ್ಚಿಕೊಂಡರು.  ಒಟ್ಟಿನಲ್ಲಿ ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯ ಮೇಲೆ ಮೇಘನಾ ಅವರು ಟಫ್​ ಕಾಂಪಿಟೀಟರ್​ ಆಗುವ ಜೊತೆ ಜೊತೆಗೆ ಹೀಗೆ ಜೋಕ್​ ಮಾಡುತ್ತಾ, ಪ್ರಶ್ನೆ ಕೇಳುತ್ತಾ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಲೇ ಇರುತ್ತಾರೆ. 

ನಾಲ್ಕು ಸೆಕೆಂಡ್​ಗೆ ಸ್ಟಾಪ್​ ಆಗತ್ತಾ? ಅಣ್ಣಯ್ಯ ಸೀರಿಯಲ್​ ನಟಿಯ ಈ ಚಾಲೆಂಜ್​ ಸ್ವೀಕರಿಸುವಿರಾ?
 
ಇನ್ನು ಸೀತಾರಾಮ ಸೀರಿಯಲ್​ ವಿಷಯಕ್ಕೆ ಬರುವುದಾದರೆ,  ಪ್ರಿಯಾಗೆ ಬ್ರೆಸ್ಟ್​ ಕ್ಯಾನ್ಸರ್​ ಇದೆ.  ಯಾವಾಗಲೂ ನಗುನಗುತ್ತಲೇ ಇರೋ ಪ್ರಿಯಾಳ ಈ ಕಷ್ಟವನ್ನು ಗಂಡ ಅಶೋಕ್​ಗಾಗೀ ಸ್ನೇಹಿತರಾದ ಸೀತಾ  ಮತ್ತು ರಾಮ್​ಗಾಗಲೀ ನೋಡಲು ಆಗ್ತಿಲ್ಲ. ಆದರೆ ಪ್ರಿಯಾ ಎಲ್ಲಾ ಸವಾಲುಗಳನ್ನು ಎದುರಿಸಿ ಗೆದ್ದು ಬರುವೆ ಎನ್ನುತ್ತಿದ್ದಾಳೆ. ಇದು ಸೀತಾರಾಮ ಪ್ರಿಯಾಳ ಸುದ್ದಿಯಾದ್ರೆ, ಇನ್ನು ಅಸಲಿ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ಅವರ  ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  

ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  

ಲಕ್ಷ್ಮಿನಿವಾಸ ಶೂಟಿಂಗ್​ ಸೆಟ್​ನಲ್ಲಿ ಮೊಲ ತಂದಾಗ ಏನಾಗಿತ್ತು? ತೆರೆಮರೆಯ ಸ್ಟೋರಿ ಇಲ್ಲಿದೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!