
ಬಾಲಿವುಡ್ ನಟಿ ಕಂಗನಾ ರಣಾವತ್ ನಿರೂಪಣೆ ಮಾಡುತ್ತಿರುವ ಲಾಕಪ್ ರಿಯಾಲಿಟಿ ಶೋನಲ್ಲಿ ಹಿಂದಿ ಕಿರುತೆರೆ ನಟಿ ನಿಶಾ ರಚಾಲ್ ಸ್ಪರ್ಧಿಸುತ್ತಿದ್ದಾರೆ. ಶೋ ಪ್ರವೇಶಿಸುವ ಮುನ್ನ ದಾಂಪತ್ಯ ಜೀವನ ಹೇಗಿತ್ತು, ಅರ್ಥಿಕವಾಗಿ ಏನೆಲ್ಲಾ ಕಷ್ಟ ಎದುರಿಸಿದ್ದರು ಹಾಗೂ ಹಣ ಇಲ್ಲದಿದ್ದರೂ ಹೇಗೆ ಅದ್ಧೂರಿ ಬರ್ತ್‌ಡೇ ಮಾಡಿ ನೆಟ್ಟಿಗರ ಕಣ್ಣಿಗೆ ಗುರಿಯಾದರು ಎಂದು ನಿಶಾ ಮಾತನಾಡಿದ್ದಾರೆ.
ಮದುವೆ ಜೀವನ:
'ಮಾಜಿ ಪತಿ ಕಿರಣ್ ಮತ್ತು ನನ್ನ ನಡುವೆ ಮದುವೆ ಆ ದೌರ್ಜನ್ಯದ ದಿನಗಳಿಂದಲೇ ನನಗೆ ಲಾಕಪ್ ಆಫರ್ ಬಂದಿರುವುದು. ಶೋ ಒಪ್ಪಿಕೊಳ್ಳುವುದಕ್ಕೆ ಸಮಯ ತೆಗೆದುಕೊಂಡೆ. ನಾನು ಜೀವನದಲ್ಲಿ ತುಂಬಾನೇ ಸಾಧನೆ ಮಾಡಬೇಕು ಎಂದುಕೊಂಡವಳು. ಯಾಕೆ ಈ ಶೋ ಎಂದು ಕೇಳಿದರೆ ನಾನು ಹೇಳುವುದು 21 ವರ್ಷದಿಂದ ಚಿತ್ರರಂಗದಲ್ಲಿ ಇರುವೆ ನಾನು ತುಂಬಾನೇ ಪ್ರೊಫೆಶನಲ್. ಕಲಾವಿದೆಯಾಗೇ ನಾನು ತುಂಬಾನೇ ಎಕ್ಸಪ್ಲೋರ್ ಮಾಡಬೇಕು. ನನ್ನ ಜೀವನದಲ್ಲಿ ನಡೆದಿರುವ ಘಟನೆಗಳನ್ನು ನೆನಪಿಸಿಕೊಂಡೆ ಈ ಶೋಗೆ ಓಕೆ ಹೇಳುವುದಕ್ಕೆ ಧೈರ್ಯಬೇಕು. ನನ್ನ ಜೀವನದಲ್ಲಿ ಕಾಂಟ್ರವರ್ಸಿಗಳು ಕೇವಲ 72 ದಿನಗಳು ಮಾತ್ರ ಬದುಕಿತ್ತು' ಎಂದು ನಿಶಾ ಇಟೈಮ್ ಜೊತೆ ಮಾತನಾಡಿದ್ದಾರೆ.
'ಪ್ರಮುಖವಾಗಿ ನನ್ನ ಆರ್ಥಿಕ ಪರಿಸ್ಥಿತಿಯಿಂದ ಶೋ ಒಪ್ಪಿಕೊಂಡೆ. ನನ್ನ ಮಗನ ವಿದ್ಯಾಭ್ಯಾಸಕ್ಕೆ ದೊಡ್ಡ ಮೊತ್ತ ಎತ್ತಿಡಬೇಕಿದೆ. ನನ್ನ ಜೀವನದ ಕೆಲವೊಂದು ಘಟನೆಗಳನ್ನು ಸಂಪೂರ್ಣವಾಗಿ ಹೇಳ್ತೀನಿ ತೆಗೆದುಕೊಳ್ಳಿ ಅಂದ್ರೂ ಜನರು ಬರುತ್ತಾರೆ ದುಡ್ಡು ಕೊಡುತ್ತಾರೆ ಆದರೆ ಅದೆಲ್ಲಾ ಮುಖ್ಯವಲ್ಲ. ನನ್ನ ಜೀವನ ಎಲ್ಲರಿಗೂ ಮಸಾಲ ಅಲ್ಲ ಆದರೆ ಪ್ರೆಸ್ ಕಾನ್ಫರೆನ್ಸ್ ಮೂಲಕ ನಾನು ಆಗಲೇ ಎಲ್ಲರಿಗೂ ಉತ್ತರ ಕೊಟ್ಟಿರುವೆ. ಸಂಪೂರ್ಣ ಸತ್ಯ ಹೊರ ಬಂದಿಲ್ಲ ಏಕೆಂದರೆ ಹೆಣ್ಣಿನ ಧ್ವನಿಯನ್ನು ಯಾರೂ ಕೇಳಿಸಿಕೊಳ್ಳುವುದಕ್ಕೆ ರೆಡಿ ಇಲ್ಲ' ಎಂದು ನಿಶಾ ಹೇಳಿದ್ದಾರೆ.
'ನಾನು ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಹೇಳಿದ್ದರೆ ನನ್ನ ಜೀವನ ಮತ್ತು ಮಗನ ವಿದ್ಯಾಭ್ಯಾಸ ನೋಡಿಕೊಳ್ಳಬೇಕು ಹಾಗಾಗಿ Mc Donalds ಅಥವಾ ಯಾವುದಾದರೂ ಹೋಟೆಲ್‌ನಲ್ಲಿ ಕೆಲಸ ಮಾಡುವುದಕ್ಕೆ ರೆಡಿ ಎಂde, ಆಗ ಅನೇಕರು ನನ್ನನ್ನು ಟ್ರೋಲ್ ಮಾಡಿದ್ದರು. ತಾಯಿ ಆಗಿ ತಾಯಿಗೆ ಮಾತ್ರ ಈ ಕಷ್ಟ ಎನು ಎಂಬುದು ಅರ್ಥವಾಗುತ್ತದೆ. ಹಣ ಮುಖ್ಯ. ಅವನಿಗೆ ತಿನ್ನಲು ಏನು ಕೊಡಲಿ? ಏನು ಕೊಡಸಲಿ? ಯಾವ ಔಷದಿ ಬೇಕು? ಸ್ಕೂಲ್ ಫೀಸ್ ಹೇಗೆ ಕಟ್ಟಬೇಕು? ನಾನು ಕೆಲಸಕ್ಕೆ ಹೋದರೆ ಇವನನ್ನು ನೋಡಿಕೊಳ್ಳುವವರಿಗೆ ಹಣ ನೀಡಬೇಕು. ಜೀವನದಲ್ಲಿ ಆಗುತ್ತಿರುವ ಅವಮಾನಗಳು ಮತ್ತು ನೋವುಗಳನ್ನು ನೋಡಿ ಭಯದಿಂದ ನಾನು ಕೋಣೆ ಬಾಗಿಲು ಹಾಕಿಕೊಂಡು ಒಬ್ಬಳೇ ಜೋರಾಗಿ ಅಳಬೇಕು ಎಂದುಕೊಂಡೆ. ಈಗ ಹೊರ ಬರುವುದಕ್ಕೆ ಧೈರ್ಯ ಬೇಕು' ಎಂದಿದ್ದಾರೆ ನಿಶಾ.
'ನಾನು ಹೋಟೆಲ್‌ನಲ್ಲಿ ಕೆಲಸ ಮಾಡುವುದಕ್ಕೆ ರೆಡಿ ಎಂದು ಹೇಳಿದೆ ಅದಾದ ನಂತರ ಅದ್ಧೂರಿಯಾಗಿ ಬರ್ತಡೇ ಪಾರ್ಟಿ ಮಾಡಿದೆ ಆಗ ಎಲ್ಲಿಂದ ಹಣ ಬಂತು ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಅದಲ್ಲದೆ ಹಣ ಇಲ್ಲ ಅಂದವರು ಬ್ರ್ಯಾಂಡ್ ಬ್ಯಾಗ್ ತೆಗೆದುಕೊಂಡಿರುವುದು ಹೇಗೆ ಎಂದು ಕೂಡ ಕೇಳಿದ್ದರು. ಅವರಿಗೆ ನಾನು ಉತ್ತರ ಕೊಡಬೇಕು. ನಾನೊಬ್ಬಳು ಸೆಲೆಬ್ರಿಟಿ ನನಗೆ ಕೆಲಸ ಮಾಡುವುದಕ್ಕೆ ಹಣ ಕೊಡುತ್ತಾರೆ. ಅವತ್ತು ಮಾತನಾಡಿದ್ದು ಒಬ್ಬ ತಾಯಿಯಾಗಿ ಮಾತ್ರ. ಟ್ರೋಲ್ ಮತ್ತು ಕೆಟ್ಟ ಕಾಮೆಂಟ್ ತಡೆದುಕೊಳ್ಳುವ ಶಕ್ತಿ ನನಗಿಲ್ಲ. ನನ್ನ ಕುಟುಂಬ ನನ್ನನ್ನು ನೋಡುತ್ತಿದ್ದ ರೀತಿಯಲ್ಲಿ ಜನರು ನೋಡುತ್ತಿದ್ದರು ಆದರೆ ನಡೆದ ಒಂದು ಘಟನೆಯಿಂದ ಇಡೀ ಜೀವನವೇ ಜಡ್ಜ್ ಮಾಡುವಂತೆ ಆಗಿದೆ. ತುಂಬಾ ಪ್ರೀತಿ ಕೊಡುತ್ತಿದ್ದವರು ಈಗ ಟ್ರೋಲ್ ಮಾಡಿದರೆ ಹೇಗಿರುತ್ತದೆ? 'ಎಂದು ನಿಶಾ ಮಾತನಾಡಿದ್ದಾರೆ.
'ಅನೇಕರು ನನ್ನ ಮಾಜಿ ಪತಿಯ ತೆರೆ ಮೇಲಿನ ಪಾತ್ರ ನೋಡಿ ರಿಯಲ್ ಲೈಫ್‌ನಲ್ಲೂ ಹಾಗೆ ಅಂದುಕೊಂಡಿದ್ದಾರೆ. ನೀವು ನನ್ನ ಪ್ರಶ್ನೆಗೆ ಉತ್ತರ ಕೊಡಿ. ಜನಪ್ರಿಯತೆ ಇಲ್ಲದ ವ್ಯಕ್ತಿ ಹೀಗೆ ಮಾಡಿದ್ದರೆ ನಿಮ್ಮ ಉತ್ತರ ಇದೇ ಆಗಿರುತ್ತಿತ್ತಾ? ಹೀಗೆ ವರ್ತಿಸುತ್ತಿದ್ದರಾ? ದೌರ್ಜನ್ಯಕ್ಕೆ ಒಳಗಾದ ನಂತರ ನನಗೆ ಸಿಕ್ಕ ಫಾಲೋವರ್ಸ್ ಮತ್ತು ಪ್ರೀತಿ ಬೇರೆ ರೀತಿ ಇದೆ. ಅವರು ಕೂಡ ಇದೇ ರೀತಿ ಜೀವನ ಎದುರಿಸುತ್ತಿದ್ದಾರೆ. ನಾನು ನಟಿಯಾಗಿದ್ದಾಗ ಜನರು ಕೊಟ್ಟ ಪ್ರೀತಿ ಮಿಸ್ ಮಾಡಿಕೊಳ್ಳುತ್ತಿರುವೆ. ಆ ಪ್ರೀತಿ ಪಡೆದುಕೊಳ್ಳಲು ಲಾಕಪ್ ಒಪ್ಪಿಕೊಂಡಿರುವೆ' ಎಂದು ನಿಶಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.