RJ Rashmi reveals ಆರ್‌ಜೆ ರಚನಾ ಮಗು ದತ್ತು ಪಡೆದುಕೊಳ್ಳಬೇಕೆಂದುಕೊಂಡಿದ್ದರಂತೆ!

Suvarna News   | Asianet News
Published : Feb 24, 2022, 02:23 PM IST
RJ Rashmi reveals ಆರ್‌ಜೆ ರಚನಾ ಮಗು ದತ್ತು ಪಡೆದುಕೊಳ್ಳಬೇಕೆಂದುಕೊಂಡಿದ್ದರಂತೆ!

ಸಾರಾಂಶ

ಆರ್‌ಜೆ ರಚನಾ ಜೊತೆಗಿರುವ ಒಡನಾಟದ ಬಗ್ಗೆ ಹಂಚಿಕೊಂಡ Rapid ರಶ್ಮಿ. ರಚನಾ ಲೈಫ್‌ ಸ್ಟೈಲ್‌ ಹೀಗಿತ್ತು....

ಐತಳಕಡಿ ಮಾರ್ನಿಂಗ್ ಶೋ ಮೂಲಕ ಇಡೀ ಬೆಂಗಳೂರನ್ನು ಬೆಳಗ್ಗೆ ಎಬ್ಬಿಸುತ್ತಿದ್ದ ಪೋರಿ ಟಪೋರಿ ಆರ್‌ಜೆ ಮಾತಿನ ಮಲ್ಲಿ ರಚನಾ (Rj Rachana) ಫೆಬ್ರವರಿ 22ರಂದು ಹೃದಯಾಘಾತದಿಂದ (Heart Attack) ನಿಧನರಾದರು. 39 ವರ್ಷದ ಫಿಟ್ ಆ್ಯಂಡ್ ಫೈನ್‌, ಬ್ಯೂಟಿಫುಲ್ ರಚನಾ ಇನ್ನಿಲ್ಲ ಎಂಬ ವಿಚಾರ ಕೇಳಿ ಎಲ್ಲರಿಗೂ ಶಾಕ್ ಆಗಿದೆ.  3 ವರ್ಷಗಳ ಹಿಂದೆಯೇ ವೃತ್ತಿ ಜೀವನದಿಂದ ಬ್ರೇಕ್ ತೆಗೆದುಕೊಂಡ ರಚನಾ ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ಯಾರಿಗೂ ಸಂಪೂರ್ಣ ಮಾಹಿತಿ ಇಲ್ಲ. ಆದರೆ Rapid ರಶ್ಮಿ (Rapid Rashmi) ತಮ್ಮ ಸ್ನೇಹದ ಬಗ್ಗೆ ಹಂಚಿಕೊಂಡಿದ್ದಾರೆ. 

ರಶ್ಮಿ ಮಾತು:
'ನಾನು ಆರ್‌ಜೆ ಅಗಿ ವೃತ್ತಿ ಜೀವನ ಅರಂಭಿಸುವುದಕ್ಕೂ ಮುನ್ನವೇ ನಾವು ಸ್ನೇಹಿತರಾಗಿದ್ದವರು. ನಾನು ಅನೇಕ ಖಾಸಗಿ ಕಾರ್ಯಕ್ರಮಗಳ ನಿರೂಪಣೆ (Host) ಮಾಡಿದ್ದೀವಿ. ಆಲ್ಲಿಂದ ಸ್ನೇಹವಾಗಿತ್ತು ಒಟ್ಟಿಗೆ ಹೊರ ಹೋಗುತ್ತಿದ್ವಿ ಒಂದು ರೀತಿ ಕೇರ್‌ಫ್ರೀ ದಿನವಾಗಿತ್ತು ನಮಗೆ. ರಚನಾ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಆಕೆಯ ದಿನ ನಿತ್ಯ ಸೇವಿಸುವ ಆಹಾರದ ಬಗ್ಗೆಯೂ ತುಂಬಾ ಕ್ಲೀಯರ್ ಆಗಿದ್ದರು. ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು, ಸರಿಯಾದ ಕ್ರಮದಲ್ಲಿ ಸೇವಿಸುತ್ತಿದ್ದಳು ರಚನಾ. ನಾನು ತಿನ್ನಲು ಹೊರ ಹೋಗುತ್ತಿದ್ದರೆ, ಅಲ್ಲಿ ಸಲಾಡ್ (Salad) ಸಿಗುತ್ತದೆ, ಅಲ್ಲಿ ಈ ರೀತಿ ಸಲಾಡ್ ಇದೆ ಇಲ್ಲಿಗೆ ಹೋಗೋಣ ಎಂದು ಹೇಳುತ್ತಿದ್ದಳು. ಬಹುತೇಕ ಸಮಯ ಸಲಾಡ್ ಸೇವಿಸುತ್ತಿದ್ದಳು,' ಎಂದು ರಶ್ಮಿ ಮಾತನಾಡಿದ್ದಾರೆ.

ರಚನಾ ವೃತ್ತಿ ಜೀವನ ಬಿಟ್ಟ ನಂತರ ಭೇಟಿ ಆಗುವುದು, ಸಂಪರ್ಕದಲ್ಲಿರುವುದು ಕಡಿಮೆ ಆಗಿತ್ತು. 'ಆರ್‌ಜೆ ಕೆಲಸ ಬಿಟ್ಟ ಮೇಲೆ ರಚನಾ ಜೊತೆ ಸಂಪರ್ಕದಲ್ಲಿ ನಾನು ಇರಲಿಲ್ಲ. ಆದರೆ ಈಗ ಮನಸ್ಸಿಗೆ ತುಂಬಾನೇ ನೋವಾಗುತ್ತಿದೆ. ರಚನಾ ಸದಾ ಹೇಳುತ್ತಿದ್ದಳು, ಒಂದು ಮಗು ದತ್ತು (Baby Adoption) ಪಡೆದುಕೊಳ್ಳಬೇಕು ಅಂತ. ಅಕೆಯ ಅಲೋಚನೆಗಳು ತುಂಬಾ ಇಂಪ್ರೆಸ್ಸಿವ್ ಆಗಿರುತ್ತಿತ್ತು. ಹಾಗೆಯೇ ಅದಕ್ಕೆ ನಾನು ಸಪೋರ್ಟ್ ಮಾಡುತ್ತಿದ್ದೆ. ಆದರೆ ಅವಳ ವಿಷಯದಲ್ಲಿ ವಿಧಿಯ ಆಟವೇ ಬೇರೆ ಇತ್ತು. ಈಗ ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ತುಂಬಾ ನಂಬ್ (Numb) ಆಗಿರುವೆ. ಆಕೆ ನಮ್ಮೊಟ್ಟಿಗೆ ಇಲ್ಲ ಅನ್ನೋದನ್ನೂ ಕಲ್ಪನೆ ಕೂಡ ಮಾಡಿಕೊಳ್ಳಲು ಆಗುತ್ತಿಲ್ಲ,' ಎಂದು ರಶ್ಮಿ ಹೇಳಿದ್ದಾರೆ.

ಬೆಂಗಳೂರಿನ ಅಪೋಲೋ (Apollo Hospital) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದರುವ ರಚನಾ ಅವರ ಅಂಗಾಂಗವನ್ನು (Organ Donation) ಕುಟುಂಬಸ್ಥರು ದಾನ ಮಾಡಿದ್ದಾರೆ. ಈ ಮೂಲಕ ಕೆಲವರ ಬಾಳಿಗೆ ಬೆಳಕಾಗಿದ್ದಾರೆ.

'ನೀವು ಇನ್ನು ಮುಂದೆ ನಮ್ಮೊಂದಿಗಿಲ್ಲವೆಂದು ನಂಬಲು ತುಂಬಾ ಕಷ್ಟ! ಸಮಯವು ತುಂಬಾ ಅನಿರೀಕ್ಷಿತವಾಗಿದೆ. ಇರೋ ಅಷ್ಟೂ ದಿನ ನಿಮ್ಮ ಅಕ್ಕ ಪಕ್ಕದವರ ಜೊತೆ ಖುಷಿಯಿಂದ ಇ,ರಿ' ಎಂದು ರೆಡಿಯೋ ಸಿಟಿ ಕನ್ನಡ ಅವರು ರಚನಾ ಆರ್‌ಜೆ ವಿಡಿಯೋ ಹಂಚಿಕೊಂಡಿದ್ದಾರೆ. ಕರ್ನಾಟಕದ ಎಲ್ಲಾ ರೆಡಿಯೋ ಸಂಸ್ಥೆಗಳೂ ರಚನಾ ಸಾವಿಗೆ  ಸಂತಾಪ ಸೂಚಿಸಿವೆ.

ಸಾವಿನಲ್ಲೂ ಸಾರ್ಥಕತೆ: ಪುನೀತ್ ಸಂಚಾರಿ ವಿಜಯ್ ಹಾದಿಯಲ್ಲಿ RJ ರಚನಾ, ಅಂಗಾಗ ದಾನ!

ಆರ್‌ಜೆ ಮಯೂರ ರಾಘವೇಂದ್ರ:
'ನಮ್ಮ ಕೊನೆ ಸಂದರ್ಶನ 5 ವರ್ಷಗಳ ಹಿಂದೆ. 'ನಮ್ಮ ಕ್ಲಬ್‌ಗೆ ಸ್ವಾಗತ. ಆದಷ್ಟು ಬೇಗ ಮೀಟ್ ಆಗೋಣ,' ಎನ್ನುವ ಮಾತಿನಿಂದ ಶುರುವಾಗಿತ್ತು. ನಾನು ರೆಡೆಯೋದಿಂದ ಹೊರ ಬಂದ್ರೀ. ಈಗ ನಾನು ಆಕೆಯ ಮನೆಯಿಂದ ಹೊರ ಬಂದಾಗ ಆಕೆಯೊಂದಿಗೆ ಕಳೆದ ಕ್ಷಣ ನೆನಪುಗಳು ಎಲ್ಲವನ್ನೂ ನೆನಪಿಸಿಕೊಂಡು, ಶಾಕ್ ಆಗಿರುವೆ. ಆಕೆ ನಡೆಸಿಕೊಡುವ ಕಾರ್ಯಕ್ರಮದ ಕೇಳುಗನಾಗಿದ್ದೆ, ನಾನು ರೆಡಿಯೋ ಸೇರಿಕೊಂಡಾಗ, ಇಬ್ಬರೂ ಒಳ್ಳೆಯ ರೀತಿಯಲ್ಲಿ ಸ್ನೇಹ ಹೊಂದಿದ್ದೆವು. ಏನೇ ಕೆಲಸ ಮಾಡಿದರೂ ನಾವು ಒಬ್ಬರಿಗೊಬ್ಬರು ಸಹಕರಿಸುತ್ತಿದ್ದೆವು. ನನಗೆ ನೆನಪಿರುವ ಪ್ರಕಾರ ನಮ್ಮ ಕಾಲದಲ್ಲಿ ಆತಿ ಹೆಚ್ಚು ಬೇಡಿಕೆ ಇರುವ ಆರ್‌ಜೆ ಆಗಿದ್ದರು ಅವರು. ಎಲ್ಲಿ ನೋಡಿದರೂ, ಯಾರನ್ನೇ ಕೇಳಿದರೂ ರಚನಾ ಹೆಸರು ಹೇಳುತ್ತಿದ್ದರು. ಪೇಪರ್, ಜಾಹೀರಾತು, ಸಿನಿಮಾ, ರೆಡಿಯೋ........ ಅದು ಆಕೆಯಲ್ಲಿದ್ದ ಎನರ್ಜಿ ಮತ್ತು ಚಾರ್ಮ್‌,' ಎಂದಿದ್ದಾರೆ ಮಯೂರ್ (RJ Mayura Raghavendra).

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!