James ಟ್ರೈಲರ್ ನೋಡಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಬಿಗ್ ಬಾಸ್ ವೈಷ್ಣವಿ ಹೇಳಿದ ಮಾತು

Suvarna News   | Asianet News
Published : Feb 26, 2022, 06:13 PM IST
James ಟ್ರೈಲರ್ ನೋಡಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಬಿಗ್ ಬಾಸ್ ವೈಷ್ಣವಿ ಹೇಳಿದ ಮಾತು

ಸಾರಾಂಶ

ವೈರಲ್ ಆಗುತ್ತಿದೆ ಪವರ್ ಸ್ಟಾರ್ ಜೇಮ್ಸ್ ಟ್ರೈಲರ್. ನೋಡಿ ಫಿದಾ ಆದ ಬಿಗ್ ಬಾಸ್ ವೈಷ್ಣವಿ ವಿಮರ್ಶೆ ಇದು..  

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ 'ಜೇಮ್ಸ್'  ಮಾರ್ಚ್‌ 17 ರಂದು ತೆರೆ ಕಾಣುತ್ತಿದೆ. ಸಿನಿಮಾ ಫೋಟೋ, ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾ ತಾರೆಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಟ್ರೈಲರ್‌ ನೋಡಿ ಫಿದಾ ಆಗಿ ತಮ್ಮ ನಿರೀಕ್ಷೆಯನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಕಿರುತೆರೆ ನಟಿ ವೈಷ್ಣವಿ ಕೂಡ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಟ್ರೈಲರ್ ವಿಮರ್ಶೆ ಮಾಡಿದ್ದಾರೆ. 

ವೈಷ್ಣವಿ ಮಾತು:

'ಜೇಮ್ಸ್‌ ಟೀಸರ್ ತುಂಬಾ ಪವರ್‌ಫುಲ್ ಆಗಿದೆ. ಸಿನಿಮಾಗೋಸ್ಕರ ನಾನು ಕಾಯ್ತಾ ಇದ್ದೀನಿ. ಇಂಡಸ್ಟ್ರಿಯಲ್ಲಿ ನಾನು ಕೇಳಿದಂತೆ ವಿಚಾರ ಇದು.ಜೇಮ್ಸ್ ಸಿನಿಮಾದಲ್ಲಿ ಬೈಕ್‌ ಚೇಸ್‌ ಸೀನ್‌ ಇಟ್ಟಿದ್ದಾರೆ. ಆಗ ಪುನೀತ್ ಸರ್ ಹೇಳಿದರಂತೆ ಯಾರಿಗೆ ಏನೇ ತೊಂದರೆ ಆದರೂ ಆ ಸೀನ್‌ ಬೇಡ ಎಂದು ಹೇಳಿದ್ದರಂತೆ. ಅವರು ನಿಜಕ್ಕೂ ಜೆಂಟಲ್‌ಮ್ಯಾನ್. ಯಾರಿಗೂ ತೊಂದರೆ ಆಗಬಾರದು ಅವರ ತಂಡ ಸೇಫ್ ಆಗಿರಬೇಕು ಅಂತ ಥಿಂಕ್ ಮಾಡ್ತಾರೆ. ಪ್ರತಿಯೊಬ್ಬ ಆರ್ಟಿಸ್ಟ್‌ನೂ ಸಮನಾಗಿ ನೋಡುತ್ತಾರಂತೆ.' ಎಂದು ಹೇಳುತ್ತಾ ವೈಷ್ಣವಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತು ಶುರು ಮಾಡಿದ್ದಾರೆ.

'ನಾನು ಮೊದಲು ಪುನೀತ್‌ ಸರ್‌ನ ಭೇಟಿ ಮಾಡಿದ್ದು 'ಅನುಬಂಧ' ಅವಾರ್ಡ್ ಕಾರ್ಯಕ್ರಮದಲ್ಲಿ. ಅವರು ನನಗೆ ಅವಾರ್ಡ್‌ ಕೊಟ್ಟಿದ್ದರು.  'ನಮ್ಮ ಇಡೀ ಫ್ಯಾಮಿಲಿ ನಿಮ್ಮ ಸೀರಿಯಲ್‌ನ ನೋಡ್ತಾರೆ  ತುಂಬಾ ಇಷ್ಟ ಪಡ್ತಾರೆ 8 ಗಂಟೆ ಆದ್ರೆ ಪ್ರತಿಯೊಬ್ಬರು ಅಗ್ನಿಸಾಕ್ಷಿ ನೋಡ್ತಾರೆ' ಎಂದು ವೇದಿಕೆ ಮೇಲೆ ಅವರು ಹೇಳಿದ್ದರು. ಅಶ್ವಿನಿ ಮೇಡಂ ಕೂಡ ಹೇಳಿದ್ದರು. ಶಿವರಾಜ್‌ಕುಮಾರ್‌ ಸರ್‌ನ ಸಿನಿಮಾ ಮುಹೂರ್ತದ ದಿನ ಭೇಟಿ ಮಾಡಿದ್ದೆ. ಅವತ್ತು ಅಣ್ಣಾವ್ರ ಪುಣ್ಯಸ್ಮರಣೆ ಇತ್ತು. ಅದೆಲ್ಲಾ ಬೇಗ ಮುಗಿಸಿಕೊಂಡು ನಮ್ಮ ಸಿನಿಮಾ ಮುಹೂರ್ತಕ್ಕೆ ಬಂದಿದ್ದು ಖುಷಿ ಆಯ್ತು' ಎಂದು ವೈಷ್ಣವಿ ಮಾತನಾಡಿದ್ದಾರೆ.

Bahukrita Vesham: ವೈಷ್ಣವಿ ಗೌಡ ನಟನೆಯ ಚಿತ್ರಕ್ಕೆ ಸಿನಿಮಂದಿಯ ಅಭಿಪ್ರಾಯವೇನು?

'ಪುನೀತ್ ಸರ್ ಹಾಡುಗಳನ್ನು ಮುಂಚೆ ಕೇಳಿದಾಗ ಒಂದು ರೀತಿ ಅನಿಸುತ್ತಿತ್ತು ಈವಾಗ ಅವರ ಹಾಡು ಕೇಳಿದ್ದರೆ ಒಂದು ರೀತಿ ಭಾವನೆ. ಮನಸ್ಸೆಲ್ಲಾ ಭಾರ ಆಗುತ್ತೆ. ಈ ಸಿನಿಮಾ ಟೀಸರ್‌ ನೋಡುವಾಗಲೂ ನಮ್ಮ ಜೊತೆ ಇಲ್ಲ ಅಂತ ನಂಬಲು ಆಗುತ್ತಿಲ್ಲ. ಜೇಮ್ಸ್ ಮೇಕಿಂಗ್ ಸೂಪರ್ ಆಗಿದೆ. ಕ್ಯೂರಿಯಾಸಿಟಿ ಹೆಚ್ಚಿಸಿದೆ. ಫೈಟ್ ಅಂದ್ರೆ ಪುನೀತ್ ಸರ್ ಡ್ಯಾನ್ಸ್‌ ಅಂದ್ರೆ ಪುನೀತ್‌ ಸರ್. ಅವರ ತರ ಸ್ಟೈಲ್ ಆಗಿ ಡ್ಯಾನ್ಸ್ ಮಾಡೋದು ಯಾರನ್ನು ನೋಡಿಲ್ಲ. ಅವರ ಎಷ್ಟೋ ಸ್ಟೆಪ್‌ ಟ್ರೈ ಮಾಡಿದೆ ನನಗೆ ಕೈ ಕಾಲು ನೋವು ಬಂತು. ಅವರು ತುಂಬಾ ಸುಲಭವಾಗಿ ಮಾಡುತ್ತಾರೆ. ಅವರ ಸ್ಟೈಲ್ ಬಗ್ಗೆ ಹೇಳುವುದೇ ಬೇಡ. ಫೈಟ್‌ ಸೀಕ್ವೆನ್ಸ್‌ ಸೂಪರ್ ಆಗಿದೆ' ಎಂದಿದ್ದಾರೆ ವೈಷ್ಣವಿ.

ಅಬ್ಬಾ Instagramನಲ್ಲಿ ಈ ಕಿರುತೆರೆ ನಟಿಯರು ಇಷ್ಟೊಂದು ಫಾಲೋವರ್ಸ್‌ ಹೊಂದಿದ್ದಾರಾ?

'ಈ ಸಿನಿಮಾಗೆ ಶಿವಣ್ಣ ಅವರ ವಾಯ್ಸ್‌ ಇದೆ. ಇದೊಂದು ಪರ್ಸನಲ್‌ ಟಚ್‌ ಇದೆ. ಪುನೀತ್‌ ಸರ್ ಇಲ್ಲ ಅನ್ಸೋದಿಲ್ಲ. ಶಿವಣ್ಣ ಅವರ ಧ್ವನಿ ಸಿನಿಮಾದಲ್ಲಿ ಹೇಗಿರಲಿದೆ ಎಂದು ನೋಡಲು ಕಾಯುತ್ತಿರುವೆ. ಟೀಸರ್‌ನ ಕೊನೆಯಲ್ಲಿ ಅವರ ವಾಕ್,  ತುಂಬಾ ಸ್ಟೈಲಿಶ್ ಆಗಿ ನಡೆದುಕೊಂಡು ಬರುತ್ತಾರೆ. ಟಿವಿನಲ್ಲಿ ನೋಡೋಕೆ ಮಜಾ ಇದೆ, ದೊಡ್ಡ ಪರದೆ ಮೇಲೆ ನೋಡೋಕೆ ಸಿನಿಮಾ ಮಜಾ ಇರುತ್ತೆ. ಟೀಸರ್‌ ನೋಡಬೇಕಿದ್ದರೆ ಈ ತುಂಬಾ ಬೇಸರ ಆಗುತ್ತೆ. ನಮ್ಮ ಫ್ಯಾಮಿಲಿನಲ್ಲಿ ಯಾರನ್ನೋ ಕಳೆದುಕೊಂಡಿದ್ದೀವಿ ಅನ್ಸುತ್ತೆ. ಇಡೀ ತಂಡಕ್ಕೆ ಒಳ್ಳೆಯದು ವಿಶ್ ಮಾಡ್ತೀನಿ. ಇಡೀ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ' ಎಂದು ವೈಷ್ಣವಿ ಮಾತು ಮುಗಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!