ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

By Suvarna News  |  First Published Feb 5, 2024, 4:48 PM IST

ಸಂಗೀತಾ ಮತ್ತು ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ಸಂದರ್ಶನದಲ್ಲಿ ಈ ಕುರಿತು ವಿವರಿಸಿದ್ದಾರೆ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್.
 


ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ. ಬಿಗ್​ಬಾಸ್​ ಮನೆಯಲ್ಲಿ ನಡೆಯುವುದು ಒಂದಿಷ್ಟು ಪೂರ್ವ ನಿಯೋಜಿತವೇ ಎಂಬ ಆರೋಪ ಇದ್ದರೂ  ಅಲ್ಲಿ ನಡೆಯುವುದೆಲ್ಲವೂ, ಎಲ್ಲ ಸನ್ನಿವೇಶಗಳು  ನಿಜವೆಂದು ನಂಬಿ ನೋಡುವ ಬಹುದೊಡ್ಡ ವರ್ಗವೇ ಇದೆ. ಆದ್ದರಿಂದಲೇ ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.  ಕಾಂಟ್ರವರ್ಸಿ ಮಾಡಿಕೊಂಡು ಫೇಮಸ್​ ಆದವರೇ ಬಿಗ್​ಬಾಸ್​ ಮನೆಯೊಳಕ್ಕೆ ಹೋದರೂ ಹೊರಗೆ ಬಂದ ಮೇಲೆ ಅಭಿಮಾನಿಗಳ ಸಂಖ್ಯೆ ದಿಢೀರ್​ ಏರಿಕೆ ಆಗುವುದೂ ಇದೆ. ಅದರಲ್ಲಿಯೂ   ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ. ಬಿಗ್​ಬಾಸ್​ ವಿನ್​ ಆಗಿ ಹೊರಗೆ ಹೋದರೆ, ಯಾವುದೋ ಯುದ್ಧ ಗೆದ್ದು, ದೇಶವನ್ನು ಉಳಿಸಿದ ಯೋಧರಂತೆ ಅವರನ್ನು ಸ್ವಾಗತಿಸುವುದು ಇದೆ. ​ಕೆಲವೊಮ್ಮೆ ಯೋಧರಿಗೂ ಸಿಗದ ಮನ್ನಣೆಯೂ ಬಿಗ್​ಬಾಸ್​ ವಿಜೇತರಿಗೆ ಸಿಗುವುದು ಇದೆ. 

ಅದೇ ರೀತಿ ಇದೀಗ ಬಿಗ್​ಬಾಸ್​ ಸೀಸನ್​ 10 ವಿನ್ನರ್​ ಕಾರ್ತಿಕ್​ ಮಹೇಶ್​ ಅವರು ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಆರಂಭದಲ್ಲಿ ಬಿಗ್​ಬಾಸ್​ ಅನ್ನು ಒಪ್ಪಿಕೊಳ್ಳದೇ ಕೊನೆಕ್ಷಣದಲ್ಲಿ ಒಪ್ಪಿಕೊಂಡು ಹೋಗಿದ್ದ ಕಾರ್ತಿಕ್​ ಅವರಿಗೆ ಈ ಗೆಲುವು ವಿಶೇಷ ಅನುಭವವನ್ನೂ ನೀಡಿದೆ. ಬಿಗ್​ಬಾಸ್​ ಮನೆಯೊಳಕ್ಕೆ ಹಾಗೂ ವಿನ್​ ಆಗಿ ಮನೆಯ ಹೊರಗೆ ಬಂದ ಮೇಲೆ ಅವರ ಜೀವನದಲ್ಲಿ ಆಗಿರುವ ಹಲವು ಬದಲಾವಣೆಗಳ ಕುರಿತು ಕಾರ್ತಿಕ್​ ಕಲರ್ಸ್​ ಕನ್ನಡ ವಾಹಿನಿಯ ಜೊತೆ ಮಾತನಾಡಿದ್ದಾರೆ. ಅಂದಹಾಗೆ ಬಿಗ್ ಬಾಸ್ ಪ್ರಿಯರಿಗೆ ತಿಳಿದಿರುವಂತೆ,  ಅಸಮರ್ಥರ ತಂಡದಲ್ಲಿ ಒಂದಾಗಿ ಮನೆಯೊಳಗೆ ಪ್ರವೇಶಿಸಿದ್ದರು ಕಾರ್ತಿಕ್ (Karthik). ಇವರ ಜೊತೆ ಸಂಗೀತಾ ಶೃಂಗೇರಿ ಮತ್ತು ತನಿಷಾ ಇದ್ದರು. ಈ ಮೂವರು  ಬಹುಬೇಗ ಸ್ನೇಹಿತರಾದರು. ಅದರಲ್ಲಿಯೂ ಶುರುವಿನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧ ಒಂದು ಲೆವೆಲ್​ ಮುಂದೆಯೇ ಹೋಗಿತ್ತು. ಪ್ರೇಕ್ಷಕರು ಇವರನ್ನು ನೋಡುವ ಸ್ಟೈಲೇ ಬೇರೆಯಾಗಿತ್ತು. ಇದಕ್ಕೆ ಕಾರಣ, ಬಿಗ್​ಬಾಸ್​ ಮನೆಯಲ್ಲಿ ಇವರಿಬ್ಬರೂ ಕೇವಲ ಸ್ನೇಹಿತರಾಗಿ ಇರದೇ  ಕೆಲವು ಸಲ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಂಡರು. ಇದೇ ವೇಳೆ ಒಂದು ಹಂತದಲ್ಲಿ  ‘ಲವ್‌ ಗಿವ್‌ ಎಲ್ಲ ಬೇಡ… ಫ್ರೆಂಡ್ ಆಗಿರೋಣ’ ಎಂದು ಸಂಗೀತ ಸ್ಪಷ್ಟವಾಗಿ ಹೇಳಿದ್ದರು ಕೂಡ. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಕೆಲ ವಾರ ಇವರಿಬ್ಬರ ನಡುವಿನ ಗಾಢ ಪ್ರೀತಿಗೆ ಅದೇನಾಯಿತು. ಇವರಿಬ್ಬರೂ ಜಗಳ ಶುರು ಮಾಡಿಕೊಂಡರು. ಈ ಜಗಳ ಬೆಳೆದು ದೊಡ್ಡದಾಗುತ್ತಾ ಇಬ್ಬರೂ ಹಾವು-ಮುಂಗುಸಿ ರೀತಿ ವರ್ತಿಸಿದರು.

Tap to resize

Latest Videos

ಬಿಗ್​ಬಾಸ್​ ಅಂದ್ರೆ ಪ್ರತಾಪ್​ಗೆ ಹೀಗಂತೆ! ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಡ್ರೋನ್​ ಹೇಳಿದ್ದೇನು?

ಅದರ ಬಗ್ಗೆ ನಿರೂಪಕಿ  ಕಾರ್ತಿಕ್​ ಅವರಿಗೆ ಪ್ರಶ್ನೆ ಕೇಳಿದರು. ಸಂಗೀತಾ ಮತ್ತು ನಿಮ್ಮ ನಡುವೆ ಅಷ್ಟೊಂದು ಬಾಂಡಿಂಗ್​ ಇತ್ತು. ಮೊದಲಿಗೆ ಸಿಕ್ಕಾಪಟ್ಟೆ ಸ್ನೇಹಿತರಾಗಿದ್ರಿ, ಆಮೇಲೆ ಏಕಾಏಕಿ ತುಂಬಾ ದೂರವಾದ್ರಿ. ಕಾರಣವೇನು ಎಂಬ ಪ್ರಶ್ನೆಗೆ ಕಾರ್ತಿಕ್​ ಅದು ಸಲ್ಲಿನ ಸಿಚುಯೇಷನ್​ಗೆ ಹಾಗಾಯ್ತು ಅಷ್ಟೇ. ಫ್ರೆಂಡ್​ಷಿಪ್​ ಚೆನ್ನಾಗಿಯೇ ಇತ್ತು. ಆದರೆ ಇಬ್ಬರ ಯೋಚನೆ ನಂತರ ಬೇರೆ ಬೇರೆಯಾಗಲು ಶುರುವಾಯ್ತು. ಇಬ್ಬರ ನಡುವೆ ಹೊಂದಾಣಿಕೆ  ಆಗಲಿಲ್ಲ. ಅದು ದಿನ ಕಳೆದಂತೆ ಹೆಚ್ಚಾಗುತ್ತಾ ಇಬ್ಬರ ನಡುವೆ ಅಂತರ ಹೆಚ್ಚಾಯ್ತು ಎಂದರು. ನಂತರ ಬಿಗ್​ಬಾಸ್​  ಮನೆಯೊಳಕ್ಕೆ ಹೀಗಾಯ್ತು, ಈಗ ಬಿಗ್​ಬಾಸ್​ ಮನೆಯಿಂದ ಹೊರಬಂದ ಮೇಲೆ ಇಬ್ಬರೂ ಫ್ರೆಂಡ್​ಷಿಪ್​ ಮುಂದುವರೆಸುವಿರಾ ಎನ್ನುವ ಪ್ರಶ್ನೆಗೆ ಕಾರ್ತಿಕ್​, ಸರಿಯಾಗಿ ಉತ್ತರಿಸದೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರಿಸಿದರು. ಫ್ರೆಂಡ್​ಷಿಪ್​ನಿಂದ  ದೂರ ಇರುತ್ತೇನೆ ಎಂದು ಅಲ್ಲ, ಫ್ರೆಂಡ್​ಷಿಪ್​ ಚೆನ್ನಾಗಿ ಇರಬೇಕು ಎನ್ನುವುದು ನನ್ನ ಆಸೆ ಎಂದಷ್ಟೇ ಹೇಳಿದ್ದಾರೆ.

ಹಾಗೆನೇ, ಬಿಗ್​ಬಾಸ್​ನಲ್ಲಿ ನನಗೆ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಜೀವನವೇ ಬೇರೆಯಾಗಿದೆ. ಈ ಮೊದಲು ನಾನು ಅವಕಾಶ ಹುಡುಕಿಕೊಂಡು ಹೋಗಬೇಕಿತ್ತು. ಆದರೆ ಇದೀಗ ಅವಕಾಶವೇ ನನ್ನನ್ನು ಹುಡುಕಿಕೊಂಡು ಬರುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಬೇಕಾದಷ್ಟು ಕಷ್ಟಪಟ್ಟಿದ್ದೇನೆ. ಅದಕ್ಕೆಲ್ಲವೂ ಬಿಗ್​ಬಾಸ್​ ನನಗೆ ನೆರವಾಗಿದೆ ಎಂದರು. ಒಂದು ವೇಳೆ ನಾನು ಬಿಗ್​ಬಾಸ್​ ಒಪ್ಪಿಕೊಂಡಿರದೇ ಇದ್ದರೆ ಅದು ನನ್ನ ಜೀವನದ ಅತಿ ದೊಡ್ಡ ಪ್ರಮಾದ ಆಗುತ್ತಿತ್ತು. ಕೊನೆಯ ಘಳಿಗೆಯಲ್ಲಿ ಒಪ್ಪಿಕೊಂಡು ಒಳ್ಳೆಯದ್ದನ್ನು ಮಾಡಿದೆ ಎಂದರು.

ಲೈವ್​ನಲ್ಲಿ ನಮ್ರತಾ ಸೌಂದರ್ಯ ಹೊಗಳಿದ ಕಾರ್ತಿಕ್​: ಸ್ನೇಹಿತ್​ನ ಕಾಲು ಹೀಗೆ ಎಳೆಯೋದಾ ಫ್ಯಾನ್ಸ್​?

ಇದೇ ವೇಳೆ, ಬಿಗ್​ಬಾಸ್​ ಮನೆಯಿಂದ ಏನು ಮಿಸ್​ ಮಾಡಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಾರ್ತಿಕ್​,  ದಿನ ಬೆಳಗಾದ್ರೆ ಬಿಗ್​ಬಾಸ್​ ವಾಯ್ಸ್​ ಕೇಳ್ತಿತ್ತು. ಬೆಲ್​ ಹೊಡೆಯುತ್ತಿತ್ತು. ಏನಾದ್ರೂ ತಪ್ಪು ಮಾಡಿದ್ರೆ ತಿದ್ದಲು ಸುದೀಪ್​ ಸರ್​ ಇರುತ್ತಿದ್ದರು. ಈಗ ಎಲ್ಲವೂ ಮಿಸ್​ ಆದಂತೆ ಎನ್ನಿಸುತ್ತಿದೆ ಎಂದರು. ವಿನಯ್​ ಮತ್ತು ಕಾರ್ತಿಕ್​ ಕಳೆದ 10 ವರ್ಷಗಳಿಂದ ಸ್ನೇಹಿತರಾದರೂ ಬಿಗ್​ಬಾಸ್​​ ಮನೆಯಲ್ಲಿ ಒಂದು ಹಂತದಲ್ಲಿ ಇಬ್ಬರೂ ಸಿಕ್ಕಾಪಟ್ಟೆ ಕಚ್ಚಾಟ ಆಡಿರುವ ಪ್ರಶ್ನೆಗೆ ಉತ್ತರಿಸಿದ ಕಾರ್ತಿಕ್​, ಇದು ಆಟವಷ್ಟೇ. ಇಬ್ಬರೂ ನಮ್ಮ ನಮ್ಮ ಕೆಪ್ಯಾಸಿಟಿಯಲ್ಲಿ ಆಡಿದ್ವಿ ಅಷ್ಟೇ. ಇಗಲೂ ನಾವು ಫ್ರೆಂಡ್ಸೇ. ಆಟ, ಸ್ಪರ್ಧೆ ಅಂತ ಬಂದಾಗ ಒಂದಿಷ್ಟು ಹಾಗೀಗೆ ಆಗುವುದು ಸಹಜ ಎಂದರು.  
 

click me!