ಶ್ರೇಷ್ಠಾಳಿಂದ ಪೂಜಾ ಮರ್ಡರ್​? ಕಾವೇರಿ ರಹಸ್ಯ ವೈಷ್ಣವ್​ ಕೈಗೆ- ಏನಿದು ಡಬಲ್​ ​ ಟ್ವಿಸ್ಟ್​?

By Suchethana D  |  First Published Sep 21, 2024, 12:06 PM IST

ಮದುವೆ ನಿಂತಿರುವ ಕಾರಣ ಹುಚ್ಚಿಯಾಗಿರುವ ಶ್ರೇಷ್ಠಾ ಇದಕ್ಕೆ ಕಾರಣ  ಪೂಜಾ ಎಂದು ತಿಳಿದು ಕೊಲೆಗೆ ಯತ್ನಿಸಿದ್ದಾಳೆ, ಅತ್ತ  ಕಾವೇರಿ ಸಾವಿನ ರಹಸ್ಯ ವೈಷ್ಣವ್​ ಕೈಗೆ ಸೇರಿದೆ. ಏನಿದು ಸೀರಿಯಲ್​ ಡಬಲ್​ ಟ್ವಿಸ್ಟ್​?
 


ಶ್ರೇಷ್ಠಾ ಮತ್ತು ತಾಂಡವ್​  ಮದುವೆ ನಿಂತಿದೆ. ಇನ್ನೇನು ತಾಂಡವ್​ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಕುಸುಮಾ ಮತ್ತು ಪೂಜಾ ಎಂಟ್ರಿಯಾಗಿದೆ. ಎಲ್ಲರ ಎದುರೇ ಮಗನಿಗೆ ಕಪಾಳಮೋಕ್ಷ  ಮಾಡಿದ್ದಾಳೆ ಕುಸುಮಾ. ನನ್ನ ಸೊಸೆಗೆ ಎಂದಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದಿದ್ದಾಳೆ. ಕುತ್ತಿಗೆಯಲ್ಲಿ ಹಾಕಿರೋ ಹೂವಿನ ಹಾರವನ್ನು ಕಿತ್ತೆಸೆದಿದ್ದಾಳೆ. ಶಲ್ಯವನ್ನೂ ಮಗನ ಕುತ್ತಿಗೆಗೆ ಕಟ್ಟಿ ದರದರ ಎಳೆದುಕೊಂಡು ಬಂದಿದ್ದಾಳೆ. ಆಕೆಯನ್ನು ತಡೆಯಲು ಬಂದವರನ್ನು ಝಾಡಿಸಿದ್ದಾಳೆ. ಮನೆಗೆ ಕರೆದುಕೊಂಡು ಹೋಗಿದ್ದಾಳೆ.  ಇಷ್ಟಾಗುತ್ತಿದ್ದಂತೆಯೇ ಕೊತಕೊತ ಕುದಿಯುತ್ತಿದ್ದಾಳೆ ಶ್ರೇಷ್ಠಾ. ಅಸಲಿಗೆ ಈ ವಿಷಯವನ್ನು ಪೂಜಾ ಕುಸುಮಾಗೆ ಹೇಳಲೇ ಇಲ್ಲ.  ಆದರೆ ಪೂಜಾಳಿಂದಲೇ ಈ ವಿಷಯ ಎಲ್ಲರಿಗೂ ತಿಳಿದಿದೆ ಎಂದು ಶ್ರೇಷ್ಠಾಳಿಗೆ ಅನ್ನಿಸಿದೆ. ಅತ್ತ ಎಲ್ಲರನ್ನೂ ಬೆದರಿಸಲು ಕತ್ತಿ ಹಿಡಿದು ಕುಸುಮಾ ಮದುವೆ ಹಾಲ್​ಗೆ ಎಂಟ್ರಿ ಕೊಟ್ಟಿದ್ದರೆ, ಇತ್ತ ಶ್ರೇಷ್ಠಾ ಕೈಗೆ ಸಿಕ್ಕ ಮದುವೆಯ ಸಾಮಗ್ರಿ ತೆಗೆದು ಪೂಜಾಳ ಹೊಟ್ಟೆಗೆ ತಿವಿದಿದ್ದಾಳೆ. ಎಲ್ಲದ್ದಕ್ಕೂ ಕಾರಣ ಪೂಜಾ ಎಂದಿದ್ದಾಳೆ. ಹಾಗಾದ್ರೆ ಪೂಜಾಳಿಗೆ ಏನಾಗುತ್ತದೆ ಎನ್ನುವುದು ಈಗಿರುವ ಪ್ರಶ್ನೆ.

ಭಾಗ್ಯ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಅವಳಿಗೆ ಎಲ್ಲಾ  ವಿಷಯ ತಿಳಿದಿದೆ. ತಾಂಡವ್ ಮತ್ತು ಶ್ರೇಷ್ಠಾಳ ಮದುವೆ ವಿಷಯ ತಿಳಿದು ಕುಸಿದು ಬಿದ್ದಿದ್ದಾಳೆ. ಇತ್ತ ಪೂಜಾಳಿಗೆ ತಿವಿದಿರುವಂತೆ ಪ್ರೊಮೋ ತೋರಿಸಲಾಗಿದೆ. ಎಲ್ಲವೂ ಅಯೋಮಯವಾಗಿದೆ. ಕುಸುಮಾ ಈ ದೃಶ್ಯ ನೋಡಿ ಶಾಕ್​ ಆಗಿದ್ದಾಳೆ. ಮೈಮೇಲೆ ಬಂದಂತೆ ವರ್ತಿಸಿರೋ ಶ್ರೇಷ್ಠಾಳ ಅಹಂಗೆ ಪೆಟ್ಟು ಬಿದ್ದಿದೆ. ತನ್ನ ಮತ್ತು ತಾಂಡವ್​ ಮದುವೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದ ಆಕೆಗೆ ಎಲ್ಲರ ಎದುರೇ ಮುಖಭಂಗ ಆಗಿದೆ. ಇದೇ ಕಾರಣಕ್ಕೆ ಅವಳು ಏನು ಮಾಡಲೂ ಹೇಸಳು. ಆದ್ದರಿಂದಲೇ ಪೂಜಾಳ ಕೊಲೆಗೆ ಮುಂದಾಗಿದ್ದಾಳೆ. ಈಗ ಏನಾಗುತ್ತದೆ ಎನ್ನುವುದು ಕುತೂಹಲ. ಇಷ್ಟಾದ ಮೇಲೂ ಇಂಥ ಗಂಡ ನಿನಗೆ ಬೇಕಾ ಎಂದು ಭಾಗ್ಯಳನ್ನು ಕೇಳುತ್ತಿದ್ದಾರೆ ನೆಟ್ಟಿಗರು.

Tap to resize

Latest Videos

ಬೆಡ್​ರೂಮ್​ನಲ್ಲಿ 3 ಸೊಳ್ಳೆಯಲ್ಲಿ ಒಂದು ಮಲಗಿರುತ್ತೆ, ಎರಡು ಎಚ್ಚರವಿರುತ್ತೆ, ಯಾಕೆ? ಸಿಹಿ ಪ್ರಶ್ನೆಗೆ ಉತ್ತರ ಗೊತ್ತಾ?

ಇದು ಭಾಗ್ಯಲಕ್ಷ್ಮಿ ಕಥೆಯಾದ್ರೆ, ಅತ್ತ ಲಕ್ಷ್ಮೀ ಬಾರಮ್ಮಾ ಸೀರಿಯಲ್​ನಲ್ಲಿ ಕಾವೇರಿಯ ರಹಸ್ಯದ ವಿಡಿಯೋ ವೈಷ್ಣವ್​ ಕೈ ಸೇರಿದೆ. ಕೀರ್ತಿಯನ್ನು ಕಾವೇರಿ ಬೆಟ್ಟದ ಮೇಲಿನಿಂದ ಉರುಳಿಸಿದ್ದಾಳೆ. ಇದು ಕಾವೇರಿಯ ಮೊದಲ ಕೊಲೆಯಲ್ಲ.  20 ವರ್ಷದ ಹಿಂದೆ ಕಾವೇರಿ ಒಂದು ಕೊಲೆ ಮಾಡಿದ್ದಳು. ಈ ವಿಷಯವನ್ನು ಕಾವೇರಿ ಗೆಳತಿ ಭಾನುಮತಿಯೇ ಹೇಳಿದ್ದಳು. ಆದರೆ ಕೀರ್ತಿ ಸತ್ತಿದ್ದಾಳೋ ಇಲ್ಲವೋ ಎಂಬ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಇದರ ನಡುವೆಯೇ, ಕಾವೇರಿಯ ಬಾಯಿಯಿಂದ ಸತ್ಯ ಹೊರ ಹಾಕಲು, ಕೀರ್ತಿ ಸಾವಿನ ಹಿಂದೆ ಕಾವೇರಿ ಕಾರಣ ಆಗಿರಬಹುದು. ಕೀರ್ತಿ ಸಾವಿಗೆ ಕಾರಣ ಏನು ಎಂದು ಕಂಡುಹಿಡಿಯುವ ಸಲುವಾಗಿ  ಅವಳ ಆತ್ಮ ತನ್ನ ಮೇಲೆ ಬಂದಂತೆ ಲಕ್ಷ್ಮೀ ವರ್ತಿಸುತ್ತಿದ್ದಾಳೆ. ಆರಂಭದಲ್ಲಿ ಇದು ನಿಜವೋ, ಸುಳ್ಳೋ ತಿಳಿಯದಾಗಿತ್ತು.  ಕೀರ್ತಿ ಮೊಬೈಲ್‌ನ್ನು ಕಾವೇರಿಯೇ ಕದ್ದು ಒಡೆದಿರೋದು ಲಕ್ಷ್ಮೀಗೆ ಇನ್ನಷ್ಟು ಸಂಶಯ ಮೂಡಿಸಿತ್ತು. ಕಾವೇರಿ ಬಾಯಿಂದ ಸತ್ಯ ಹೊರಹಾಕಲು ಲಕ್ಷ್ಮೀ ಬೇರೆ ದಾರಿ ಇಲ್ಲದೆ ಕೀರ್ತಿ ಆತ್ಮ ತನ್ನ ಮೇಲೆ ಆವಾಹನೆ ಆಗಿದೆ ಎನ್ನುವ ರೀತಿಯಲ್ಲಿ ನಾಟಕ ಮಾಡುತ್ತಿದ್ದಾಳಾ ಅಂತ ಪ್ರಶ್ನೆ ಎದುರಾಗಿತ್ತು.

ಆದರೆ ಈಗ ಎಲ್ಲವೂ ಬಯಲಾಗಿದೆ. ಇದು ನಾಟಕ ಎನ್ನುವುದು ಗೊತ್ತಾಗಿದೆ. ಅದೇ ಇನ್ನೊಂದೆಡೆ, ಕೀರ್ತಿಯ ವಿಷಯ ಎತ್ತಿದರೆ ಕಾವೇರಿ ಯಾಕೆ ಹಾಗೆ ಭಯ ಬೀಳುತ್ತಿದ್ದಾಳೆ ಎಂದು ವೈಷ್ಣವ್​ಗೆ ಸಂದೇಹ ಉಂಟಾಗಿತ್ತು.  ಆದರೆ ಇದೀಗ ಎಲ್ಲಾ ಸಾಕ್ಷ್ಯಾಧಾರ ಆತನ ಕೈ ಸೇರಿದೆ. ಅತ್ತ ಪೂಜಾಳ ಕೊಲೆಗೆ ಯತ್ನ, ಇತ್ತ ಸಾವಿನ ರಹಸ್ಯದ ಸಾಕ್ಷ್ಯ... ಒಟ್ಟಿನಲ್ಲಿ ಈ ಎರಡೂ ಸೀರಿಯಲ್​ಗಳು ಸದ್ಯ ಭಾರಿ ಕುತೂಹಲ ಕೆರಳಿಸುತ್ತಿದೆ. 

ಎಂಟ್ರಿ ಆಗ್ತಿದ್ದಂಗೆನೇ ಶಿವಣ್ಣನನ್ನು ತಬ್ಬಿಕೊಂಡು ಕಿಸ್​ ಮಾಡು ಅಂದ್ಬಿಟ್ರು... ಗಾಬರಿ ಬಿದ್ದೋದೆ: ನಟಿ ಅನು ಪ್ರಭಾಕರ್​


click me!