ಆ ತಪ್ಪಿಗೆ ಕ್ಷಮೆ ಕೇಳುತ್ತಾ ತಾಯಿಯ ಪಾದ ಪೂಜೆ ಮಾಡಿದ ವರ್ತೂರ್ ಸಂತೋಷ್!

Published : Feb 22, 2024, 04:39 PM IST
 ಆ ತಪ್ಪಿಗೆ ಕ್ಷಮೆ ಕೇಳುತ್ತಾ ತಾಯಿಯ ಪಾದ ಪೂಜೆ ಮಾಡಿದ ವರ್ತೂರ್ ಸಂತೋಷ್!

ಸಾರಾಂಶ

ತಾಯಿಯ ಪಾದ ಪೂಜೆ ಮಾಡಿದ ವರ್ತೂರ್ ಸಂತೋಷ್. ದಿನದಿಂದ ಹೆಚ್ಚಾಗುತ್ತಿದೆ ಅಭಿಮಾನಿಗಳ ಸಂಖ್ಯೆ..... 

ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್‌ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ ನಂತರ ಅಭಿಮಾನಿಗಳು ಸಂಖ್ಯೆ ಡಬಲ್ ಆಗಿದ್ದಾರೆ. ಟ್ರೋಫಿ ಹಿಡಿದಿರುವ ವಿನ್ನರ್‌ಗಿಂತ 6ನೇ ಸ್ಥಾನದಲ್ಲಿ ಇದ್ದು ಹೊರ ಬಂದಿರುವ ಸಂತೋಷ್‌ ಪಾಪ್ಯೂಲಾರಿಟಿ ಹೆಚ್ಚಾಗಿದೆ. ಶೋ ಮುಗಿಯುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಯಾರೇ ತೋಟದ ಮನೆ ಬಳಿ ಬಂದ್ರೂ ಬೇಧಭಾವ ಮಾಡದೆ ಮಾತನಾಡಿಸಿ ಕಳುಹಿಸುತ್ತಾರೆ. ಹುಲಿ ಉಗುರು ಪ್ರಕರಣದ ನಂತರ ವರ್ತೂರ್‌ ಹೆಸರು ಮತ್ತೊಂದು ಹಂತಕ್ಕೆ ಬೆಳೆದಿದೆ. 

ಈಗ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3ರಲ್ಲಿ ವರ್ತೂರ್ ಸಂತೋಷ್ ಮತ್ತು ಅವರ ತಾಯಿ ಭಾಗಿಯಾಗಿದ್ದಾರೆ. ವಾಹಿನಿ ಬಿಡುಗಡೆ ಮಾಡಿರುವ ಸಣ್ಣ ಪ್ರೋಮೋದಲ್ಲಿ ಪಾದ ಪೂಜೆ ಮಾಡುತ್ತಿರುವ ತುಣುಕು ವೈರಲ್ ಆಗುತ್ತಿದೆ. 'ತಾಯಿ ಇಲ್ಲ ಅಂದ್ರೆ ವರ್ತೂರ್ ಸಂತೋಷ್ ಇಲ್ಲ. ಸಣ್ಣ ವಯಸ್ಸಿನಲ್ಲಿ ನಮ್ಮ ತಂದೆ ತೀರಿಕೊಂಡಾಗ ತನ್ನ ಜೀವನನ್ನು ಮುಡಿಪಾಗಿತ್ತು ಬದುಕಿದ್ದಾರೆ. ಪದಗಳಲ್ಲಿ ಏನೂ ಹೇಳಲು ಸಾಧ್ಯವಿಲ್ಲ. ತಂದೆ ತಾಯಿ...ಎರಡೇ ದೇವರುಗಳು ಇರುವುದು. ಈ ದೇವರುಗಳನ್ನು ಬೇರೆ ಯಾರೂ ಸೃಷ್ಟಿ ಮಾಡಲು ಆಗಲ್ಲ. ನಮ್ಮ ತಾಯಿಗೆ ನನ್ನ ಕಡೆಯಿಂದ ಸುಮಾರು ನೋವು ಆಗಿದೆ. ನನ್ನನ್ನು ಕ್ಷಮಿಸು ಅಮ್ಮ' ಎಂದು ವರ್ತೂರ್ ಸಂತೋಷ್ ಮಾತನಾಡಿದ್ದಾರೆ.

ಸೊಳ್ಳೆ ಗುಯ್ಯಾ ಅನ್ನುತ್ತೆ, ಮೈಕ್‌ ಸಿಕ್ಕಿದೆ ಎಂತ ಏನೋ ಹೇಳ್ಬಾರ್ದು; ಟಾಂಗ್‌ ಕೊಟ್ಟು ತೊಡೆ ತಟ್ಟಿದ ವರ್ತೂರ್ ಸಂತೋಷ್!

ಈ ಮಾತುಗಳನ್ನು ಕೇಳಿ ವರ್ತೂರ್ ಸಂತೋಷ್ ತಾಯಿ ಭಾವುಕರಾಗಿದ್ದಾರೆ. ಮಗ ಪಾದ ಪೂಜೆ ಮಾಡಿ ಕಾಲುಗಳಿಗೆ ನಮಸ್ಕಾರ ಮಾಡುವ ಕ್ಷಣ ಎಲ್ಲರಿಗೂ ಸಿಗುವುದಿಲ್ಲ ಎನ್ನುತ್ತಾರೆ ನೆಟ್ಟಿಗರು. ಕಳೆದ ವಾರ ವಿನ್ನರ್ ಕಾರ್ತಿಕ್ ಮಹೇಶ್ ತಾಯಿ ಆಗಮಿಸಿದ್ದರು. ಟ್ರೋಫಿ ಹಿಂದಿರುವ ಶ್ರಮ ಹಾಗೂ ಮುಂದಿನ ಪ್ಲ್ಯಾನ್‌ಗಳ ಬಗ್ಗೆ ಚರ್ಚೆ ಮಾಡಿದ್ದರು. 

 

ಹಳ್ಳಿಕಾರ್ ಒಡೆಯ ಯಾರೂ ಇಲ್ಲ, ಅವನಿಗೆ ಯೋಗ್ಯತೆನೇ ಇಲ್ಲ: ವರ್ತೂರ್ ಸಂತೋಷ್ ವಿರುದ್ಧ ಕಿಡಿ!

ಹುಲಿ ಉಗುರು ಪ್ರಕರಣದ ನಂತರ ವರ್ತೂರ್ ಮತ್ತೊಮ್ಮೆ ಬಿಗ್ ಬಾಸ್‌ ಮನೆಗೆ ಕಾಲಿಡುತ್ತಾರೆ. ಆಗ ಮಾನಸಿಕವಾಗಿ ಸಾಕಷ್ಟು ಗೊಂದಲ ಇದ್ದ ಕಾರಣ ಹೊರ ಹೋಗಬೇಕು ಎಂದು ಹಠ ಮಾಡುತ್ತಾರೆ. ಆಗ ಕಿಚ್ಚ ಸುದೀಪ್ ಕೂಡ ಬುದ್ಧಿ ಮಾತುಗಳನ್ನು ಹೇಳುತ್ತಾರೆ. ಯಾರ ಮಾತುಗಳನ್ನು ಕೇಳಿದ ವರ್ತೂರ್‌ಗೆ ತಾಯಿ ಬೇಕೇ ಬೇಕು ಎಂದು ಬಿಗ್ ಬಾಸ್ ಮನೆಯೊಳಗೆ ತಾಯಿ ಎಂಟ್ರಿ ಕೊಟ್ಟು ಮಗನನನ್ನು ಸಮಾಧಾನ ಮಾಡುತ್ತಾರೆ. ಅದಾದ ಮೇಲೆ ಫ್ಯಾಮಿಲಿ ರೌಂಡ್‌ಗೂ ವರ್ತೂರ್ ತಾಯಿ ಬರುತ್ತಾರೆ. ಎರಡು ಸಲ ಬಿಗ್ ಬಾಸ್ ಮನೆಯಲ್ಲಿ ನೋಡಿರುವ ಕಾರಣ ಎಲ್ಲೇ ನೋಡಿದರೂ ನೀವು ವರ್ತೂರ್ ತಾಯಿನಾ ಎಂದು ನೆಟ್ಟಿಗರು ಕೇಳಿ ಮಾತನಾಡಿಸುತ್ತಾರಂತೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ