ಕರಿಮಣಿ ಮಾಲಿಕ ನೀನಲ್ಲ ಎಂದ ಸ್ನೇಹಾ! ಲವ್​ ಶುರುವಾಗೋ ಹೊತ್ನಲ್ಲಿ ಇದೇನಿದು ಎಂದು ಫ್ಯಾನ್ಸ್​ ಮುನಿಸು

Published : Feb 22, 2024, 03:56 PM IST
 ಕರಿಮಣಿ ಮಾಲಿಕ ನೀನಲ್ಲ ಎಂದ ಸ್ನೇಹಾ! ಲವ್​ ಶುರುವಾಗೋ ಹೊತ್ನಲ್ಲಿ ಇದೇನಿದು ಎಂದು ಫ್ಯಾನ್ಸ್​ ಮುನಿಸು

ಸಾರಾಂಶ

ಕರಿಮಣಿ ಮಾಲಿಕ ನೀನಲ್ಲ ಎಂದ ಪುಟ್ಟಕ್ಕನಮಕ್ಕಳು ಸ್ನೇಹಾ! ಈ ರೀಲ್ಸ್​ ನೋಡಿ ನೆಟ್ಟಿಗರು ಏನೆಂದ್ರು ಕೇಳಿ...     

ಈಗ ತಾನೇ ಸ್ನೇಹಾ ಮತ್ತು ಕಂಠಿಯ ಜೀವನದಲ್ಲಿ ಪ್ರೀತಿ ಚಿಗುರುತ್ತಿದೆ. ಸ್ನೇಹಾಗೆ ಕಂಠಿ ಮೇಲಿದ್ದ ವೈಮನಸ್ಸು ತಣ್ಣಗಾಗುತ್ತಿದ್ದು, ಪ್ರೀತಿಯಲ್ಲಿ ಬಿದ್ದಿದ್ದಾಳೆ. ಅದೇ ಇನ್ನೊಂದೆಡೆ, ಸ್ನೇಹಾಳ ಮೇಲೆ ಕಿಡಿ ಕಾರುತ್ತಿದ್ದ ಅತ್ತೆ ಬಂಗಾರಮ್ಮ ಒಪ್ಪಿಕೊಳ್ಳದಿದ್ದರೂ ಆಕೆಯ ಯಾವುದೋ ಒಂದು ಮೂಲೆಯಲ್ಲಿ ಸ್ನೇಹಾಳ ಮೇಲೆ ಪ್ರೀತಿ ಮೂಡುತ್ತಿದೆ. ಇದಾಗಲೇ ಅತ್ತೆ ಬಂಗಾರಮ್ಮನ ಮೇಲೆ ಸ್ನೇಹಾಗೆ ಇದ್ದ ಕೋಪ ಹೋಗಿದ್ದು, ಅತ್ತೆಯ ಮನಸ್ಸನ್ನು ಗೆಲ್ಲಲು ಹಾತೊರೆಯುತ್ತಿದ್ದಾಳೆ.  ಆದರೆ ಅತ್ತೆಗೋ ಈಕೆಯ ಮೇಲೆ ಕೋಪ ಕಡಿಮೆಯಾಗುವ ಹಾಗೆ ಕಾಣಿಸುತ್ತಿಲ್ಲ. ತಾನು ಗರ್ಭಿಣಿ ಎಂದು ಸುಳ್ಳು ಹೇಳಿದ್ದು ತಿಳಿದು ನಂತರ ಸತ್ಯ ಗೊತ್ತಾಗಿ ಸ್ನೇಹಾಳ ಮೇಲೆ ಮುನಿಸಿಕೊಂಡಿದ್ದ ಕಂಠಿಗೂ ಸ್ನೇಹಾದ ಮೇಲೆ ಕೋಪ ಕರಗಿದೆ. ಪ್ರೇಮಿಗಳ ದಿನದಂದು ಇಬ್ಬರೂ ಪ್ರೀತಿ ಹಂಚಿಕೊಂಡಿದ್ದಾರೆ.

ಹೀಗಿರುವ ಮಧ್ಯೆಯೇ, ಇತ್ತೀಚೆಗೆ ಭಾರಿ ಟ್ರೆಂಡ್​ ಆಗಿರುವ ಕರಿಮಣಿ ಮಾಲಿಕ ನೀನಲ್ಲ ಹಾಡಿಗೆ ಪುಟ್ಟಕ್ಕನ ಮಕ್ಕಳು ಸ್ನೇಹಾ ರೀಲ್ಸ್​ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು, ಪ್ಲೀಸ್​ ಹಾಗೆ ಹೇಳ್ಬೇಡಾ ಸ್ನೇಹಾ ಅನ್ನುತ್ತಿದ್ದಾರೆ. ಅಷ್ಟಕ್ಕೂ ಪುಟ್ಟಕ್ಕನ ಮಕ್ಕಳು ಸೀರಿಯಲ್​ನ ಸ್ನೇಹಾ ಮತ್ತು ಕಂಠಿ ಜೋಡಿಯನ್ನು ಸೀರಿಯಲ್​ ಪ್ರಿಯರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ನಿಜ ಜೀವನದಲ್ಲಿಯೂ ಇಬ್ಬರೂ ಮದ್ವೆಯಾಗಿ ಅನ್ನೋಷ್ಟರ ಮಟ್ಟಿಗೆ. ಇದು ಸೀರಿಯಲ್​, ಧಾರಾವಾಹಿಯಲ್ಲಿ ಮಾತ್ರ ನಾವಿಬ್ಬರೂ ದಂಪತಿಯಷ್ಟೇ ಎಂದು ಇವರಿಬ್ಬರೂ ಎಷ್ಟೋ ಬಾರಿ ಅಭಿಮಾನಿಗಳಿಗೆ ಸಮಜಾಯಿಷಿ ಕೊಟ್ಟಿದ್ದೂ ಆಗಿದೆ. ಆದರೂ ಇವರಿಬ್ಬರನ್ನು ಒಟ್ಟಿಗೇ ನೋಡಲು ಫ್ಯಾನ್ಸ್​ಗೆ ತುಂಬಾ ಇಷ್ಟ.

ಶೂಟಿಂಗ್​ನಲ್ಲಿ ಜಾರಿಬಿದ್ದ ಹಾಟ್​ ಬ್ಯೂಟಿ ನೋರಾ ಫತೇಹಿ: ಛೇ... ಹೀಗೆಲ್ಲಾ ನಟಿಯ ಕಾಲೆಳೆಯೋದಾ ನೆಟ್ಟಿಗರು?

ಅಂದಹಾಗೆ ಸ್ನೇಹಾ ಅವರ ನಿಜವಾದ ಹೆಸರು ಸಂಜನಾ ಬುರ್ಲಿ. ಇವರು ನಂದೂ ಒಂದು ಇರ್ಲಿ ಎನ್ನುವ ಮೂಲಕ ಕರಿಮಣಿ ಮಾಲಿಕ ನೀನಲ್ಲ ಹಾಡಿಗೆ ರೀಲ್ಸ್​ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಅಂದಹಾಗೆ,  ಸ್ನೇಹಾ ಅಲಿಯಾ ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಆಗ್ಗಾಗ್ಗೆ ಟ್ರೆಂಡಿಂಗ್​ ಹಾಡುಗಳಿಗೆ ರೀಲ್ಸ್​ ಮಾಡುತ್ತಲೇ ಇರುತ್ತಾರೆ. ಈಚೆಗೆ ಕಾಟೇರಾ ಚಿತ್ರದ ಪಸಂದಾಗವ್ನೇ.... ನೋಡ್ತಾ ನೋಡ್ತಾ ಆಗೊಗೈತೆ ಸ್ಯಾನೆ ಪಿರೂತಿ  ಹಾಡಿಗೆ ರೀಲ್ಸ್​ ಮಾಡಿದ್ದರು.  ಸಂಜನಾ ಅವರ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ನೀವು ಸ್ನೇಹಾ ಆಗಿಯೂ ಸೂಪರ್​, ಸಂಜನಾ ಆಗಿಯೂ ಸೂಪರ್​ ಎಂದು ಹೊಗಳುತ್ತಿದ್ದಾರೆ.  ಬಂಗಾರಮ್ಮನ ಮನೆಯಲ್ಲಿಯೂ ನಿಮ್ದೇ ಹವಾ, ಸೋಷಿಯಲ್​ ಮೀಡಿಯಾದಲ್ಲಿಯೂ ನಿಮ್ದೇ ಹವಾ ಮೇಡಂ ಎಂದು ಹಲವರು ಕಮೆಂಟ್​ ಮೂಲಕ ಶ್ಲಾಘಿಸಿದ್ದರು.  

ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. 

25 ವರ್ಷಗಳ ಬಳಿಕ ಗಂಡ ಕೊಟ್ಟ ಚಿನ್ನದ ಬಳೆ: ಪ್ರೇಮಿಗಳ ದಿನದ ಉಡುಗೊರೆಗೆ ಪುಟ್ಟಕ್ಕ ಶಾಕ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?