ಫಸ್ಟ್‌ ಟೈಂ ಪೀರಿಯಡ್ಸ್‌ ಆಗಿದ್ದು ಯಾವಾಗ, ಆ 16 ದಿನಗಳ ಬಗ್ಗೆ ರಿವೀಲ್ ಮಾಡಿದ ಬಿಗ್ ಬಾಸ್ ವೈಷ್ಣವಿ!

By Vaishnavi Chandrashekar  |  First Published Jul 25, 2022, 11:33 AM IST

ಮೊದಲು ಪೀರಿಯಡ್ಸ್ ಆದ 16 ದಿನ ಹುಡುಗರು ನೋಡುವಂತಿಲ್ಲ. ಯುಟ್ಯೂಬ್‌ ಚಾನೆಲ್‌ನಲ್ಲಿ ಪೀರಿಯಡ್ಸ್‌ ಬಗ್ಗೆ ಹಂಚಿಕೊಂಡ ಬಿಗ್ ಬಾಸ್ ವೈಷ್ಣವಿ...


ಅಗ್ನಿಸಾಕ್ಷಿ, ಬಿಗ್ ಬಾಸ್ 8 ರಿಯಾಲಿಟಿ ಶೋ ನಂತರ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡು ಯುಟ್ಯೂಬ್‌ ಲೋಕದಲ್ಲಿ ಸಖತ್ ಬ್ಯುಸಿಯಾಗಿರುವ ವೈಷ್ಣವಿ ಮೊದಲ ಬಾರಿ ಪೀರಿಯಡ್ಸ್‌ ಬಗ್ಗೆ ಜನರು ಏನೆಲ್ಲಾ ತಿಳಿದುಕೊಳ್ಳ ಬೇಕು ಎಂದು ರಿವೀಲ್ ಮಾಡಿದ್ದಾರೆ. ಮಡಿವಂತಿಕೆ ಮಾಡಬೇಡಿ ಏಕೆಂದರೆ ಈಗಲ್ಲೂ ನಾನು ಪೀರಿಯಡ್ಸ್‌ ಆಗಿದೆ ಎಂದು ಹೇಳುವುದಕ್ಕೆ ಸಂಕೋಚ ಆಗುತ್ತದೆ ಎಂದಿದ್ದಾರೆ. 

ವೈಷ್ಣವಿ ಮಾತು:

Tap to resize

Latest Videos

'ನಾವು 2022ರಲ್ಲಿದ್ದೀವಿ. ಇವತ್ತಿಗೂ ಹುಡುಗಿಯರು ಫಸ್ಟ್‌ ಡೇ ಪೀರಿಯಡ್ಸ್‌ ಆಗಿದ್ರೆ ಹೇಳಿಕೊಳ್ಳುವುದಕ್ಕೆ ಆಗೋಲ್ಲ. ಹೇಳುವುದಕ್ಕೆ ಎರಡು ಸಲ ಯೋಚನೆ ಮಾಡುತ್ತಾಳೆ. ನಾನು ಶೂಟಿಂಗ್‌ನಲ್ಲಿ ಇರ್ತೀನಿ ನಾವು ಹೇಳ್ತೀವಿ ಪ್ರಪಂಚ ಬೆಳೆಯುತ್ತಿದೆ ಎಲ್ಲಾ ಹೇಳ್ತೀವಿ ಆದರೆ ಪೀರಿಯಡ್ಸ್‌ ಆಗಿದೆ ಅಂದ್ರೆ ಶೂಟಿಂಗ್‌ನಲ್ಲಿ ಈಗಲೂ ನನಗೆ ಹೇಳುವುದಕ್ಕೆ ಮುಜುಗರ ಆಗುತ್ತದೆ. ಇದನ್ನು ನಾವು ನಾರ್ಮಲೈಸ್ ಮಾಡಬೇಕು ಬದಲಾವಣೆಗಳನ್ನು ತರಬೇಕು' ಎಂದು ವೈಷ್ಣವಿ ಮಾತನಾಡಿದ್ದಾರೆ.

ಬ್ಲೋಟಿಂಗ್:

'ಪೀರಿಯಡ್ಸ್‌ ಸಮಯದಲ್ಲಿ ನಮಗೆ ಹೊಟ್ಟೆ ಉಬ್ಬುತ್ತದೆ. ನಮ್ಮ ಬಾಡಿಯಿಂದ ಫ್ಲ್ಯೂಯಿಡ್‌ ಹೋಗುವಾಗ ಸುಸ್ತಾಗುತ್ತದೆ. ಆ ಸಮಯದಲ್ಲಿ ನಾನು 2-3 ಇಂಚು ಚಾಸ್ತಿ ಆಗಿರುತ್ತೀನಿ. ಬ್ಲೋಟಿಂಗ್ ಅಂತ ಹೇಳಿದ್ದರೆ ಅವರು ಇಲ್ಲ ದಪ್ಪ ಆಗಿದ್ದೀರಾ ದಪ್ಪ ಆಗಿದ್ದೀರಾ ಅಂತ ಹೇಳ್ತಾರೆ. ಈ ಸಮಯದಲ್ಲಿ ನಾನು ಕ್ರಿಸ್ಟಲ್‌ ಬಳಸುತ್ತೀನಿ.Amethyst ಕ್ರಿಸ್ಟಲ್‌ ನಾನು ಬಳಸುತ್ತೀನಿ ಹೊಟ್ಟೆ ಮೇಲೆ ಇಟ್ಕೊಂಡರೆ ನಿಮಗೆ ಆ ಸಮಯದಲ್ಲಿ ಏನು ಬ್ಲೋಟಿಂಗ್ ಅಗುತ್ತೆ ಅದು ಕಡಿಮೆ ಆಗುತ್ತೆ.'

ಫಸ್ಟ್‌ ಪೀರಿಯಡ್ಸ್‌:

'ನಮ್ಮ ಸ್ಕೂಲ್‌ನಲ್ಲಿ ಸೆಕ್ಸ್‌ ಎಜುಕೇಷನ್‌ ಇತ್ತು ಪ್ರತಿಯೊಂದನ್ನು ನಮಗೆ ಹೇಳಿಕೊಟ್ಟಿದ್ದರು. ಒಂದು ವಯಸ್ಸು ಆದ್ಮೇಲೆ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ ಎಂದು. ನನಗೆ ನೆನಪಿದೆ. ಮೊದಲ ಸಲ ಪೀರಿಯಡ್ಸ್ ಆದಾಗ ನನಗೆ ಎಕ್ಸಾಂ ನಡೆಯುತ್ತಿತ್ತು ನಾನು ಮಲಗಿಕೊಂಡು ಓದುವುದು.  ಓದುತ್ತಾ ಓದುತ್ತಾ ನಾನು ಮಲಗಿಕೊಂಡು ಬಿಟ್ಟಿದ್ದೀನಿ. ಡಿಸೆಂಬರ್‌ ಸಮಯದಲ್ಲಿ ಆಗಿದ್ದು ಆಗ ಸಖತ್‌ ಚಳಿ ಇತ್ತು...ಟ್ರ್ಯಾಕ್ ಪ್ಯಾಂಡ್‌, ಸ್ಕರ್ಟ್‌, ಸಾಕ್ಸ್‌ ಜಾಕೆಟ್‌ ತುಂಬಾ ಬಟ್ಟೆ ಹಾಕಿಕೊಂಡಿದ್ದೆ. ಏನೋ ಒಂದು ರೀತಿ ಹಿಂಸೆ ಆಗುತ್ತಿತ್ತು, ಲೂಗೆ ಹೋದೆ ಆಗ ರಕ್ತ ನೋಡಿ ಗಾಬರಿ ಆದೆ. ಈ ವಿಚಾರ ತಾಯಿಗೆ ಹೇಳಬಾರದಂತೆ, ನನಗೆ ಹೇಳಬೇಡ ಬೇರೆ ಅವರಿಗೆ ಹೇಳು ಎಂದು ನಮ್ಮ ಮನೆ ಕೆಲಸದವರಿಗೆ ನಾನು ಮೊದಲು ಈ ವಿಚಾರ ತಿಳಿಸಿದೆ' ಎಂದು ವೈಷ್ಣವಿ ಹೇಳಿದ್ದಾರೆ.

'ನಮ್ಮ ಮನೆಯಲ್ಲಿ ಈ ಸಂಪ್ರದಾಯವನ್ನು ಗಂಭೀರವಾಗಿ ಮಾಡುತ್ತಾರೆ. 16 ದಿನ ಮನೆಯಲ್ಲಿ ಕೂರಬೇಕು. ದಿನ ಬೆಳಗ್ಗೆ ಎಣ್ಣಿ ಕುಡಿಯಬೇಕು, ಹಸಿ ಮೊಟ್ಟೆ ಕುಡಿಬೇಕು ಅದಾದ ಮೇಲೆ ಉದ್ದಿನದು ಮತ್ತು ತುಪ್ಪದು ಏನೋ ಮಾಡ್ತಾರೆ ಅದು ಮಾಡ್ಬೇಕು. ಪ್ರತಿ ದಿನ ಅರಿಶಿಣದ ನೀರಿನಲ್ಲಿ ಸ್ನಾನ ಮಾಡಬೇಕು. 16 ಆದ್ಮೇಲೆ ಮನೆಯಲ್ಲಿ ಹೋಮ ಮಾಡಿಸುತ್ತಾರೆ. ಈ ಸಮಯದಲ್ಲಿ ನೀವು ಯಾರನ್ನೂ ನೋಡುವಂತಿಲ್ಲ ಯಾರು ನಿಮ್ಮನ್ನು ನೋಡುವಂತಿಲ್ಲ ಅದರಲ್ಲೂ ಹುಡುಗರು ನೋಡುವಂತಿಲ್ಲ. ಏನ್ ಏನೋ ಪೂಜೆ ಮಾಡಿ ತೆಂಗಿನ ಗರಿಯಲ್ಲಿ ಮನೆ ಕಟ್ಟಿರುತ್ತಾರೆ ಅದರಿಂದ ಹೊರಗೆ ಬರುವಂತಿಲ್ಲ ಟಿವಿ ನೋಡಬಾರದು ಡಿಸ್ಟರ್ಬ್‌ ಆಗಬಾರದು ಅಂತ ಹೇಳ್ತಾರೆ. ನಮ್ಮ ಮನೆಯಲ್ಲಿ ಇದೆಲ್ಲಾ ಫಾಲೋ ಮಾಡಿದ್ದರು 16 ದಿನ ಮುಗಿಯಲಿ ಅಂತ ಕಾಯುತ್ತಿದ್ದೆ' ಎಂದಿದ್ದಾರೆ ವೈಷ್ಣವಿ.

 

click me!