
ಬಿಗ್ ಬಾಸ್ ಸೀಸನ್ 11ರ ಫಿನಾಲೆ ಕಾರ್ಯಕ್ರಮ ಮುಗಿದು ಸ್ಪರ್ಧಿಗಳು ಹಾಗೂ ಅಲ್ಲಿ ಭಾಗಿಯಾಗಿದ್ದ ಇತರರು ಹೊರ ಬರಲು ರಾತ್ರಿ ಸುಮಾರು 2.30 ಸಮಯ ಆಗಿತ್ತು. ಆದರೂ ಅಭಿಮಾನಿಗಳು ಸೆಲ್ಫಿ ಪಡೆಯಲು ಕಾಯುತ್ತಿದ್ದರು. ಈ ವೇಳೆ ಮುಖ್ಯ ದ್ವಾರದಿಂದ ಹೊರ ಬರುತ್ತಿದ್ದ ಒಂದೊಂದು ಕಾರಿನ ಸುತ್ತ ಅಭಿಮಾನಿಗಳು ತುಂಬಿಕೊಂಡು ಸೆಲ್ಫಿ ಕೇಳುತ್ತಿದ್ದರು. ಪರಿಸ್ಥಿತಿ ಹೇಗಿತ್ತು ಅಂದ್ರೆ ಸೆಲ್ಫಿ ಕೊಡಲು ಕಾರಿನ ಕಿಟಕಿ ಅಥವಾ ಬಾಗಿಲು ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ತಡರಾತ್ರಿ ಆಗಿದ್ದ ಕಾರಣ ಪ್ರತಿಯೊಬ್ಬರು ಸುಸ್ತಾಗಿದ್ದರು. ಈ ವೇಳೆ ತುಕಾಲಿ ಸಂತೋಷ್ ಮತ್ತು ಮಾನಸಾ ಕಾರಿನ ಸುತ್ತ ಜನರು ತುಂಬಿಕೊಳ್ಳುತ್ತಾರೆ. ಆಗ ಮಾನಸ ಸಿಟ್ಟು ಮಾಡಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತದೆ. ಈ ವಿಡಿಯೋಗಳು ತಪ್ಪಾಗಿ ವೈರಲ್ ಆಗುತ್ತಿರುವ ಕಾರಣ ಸ್ಪಷ್ಟನೆ ನೀಡಿದ್ದಾರೆ.
'ನಮಸ್ತೆ ಸ್ನೇಹಿತರೇ...ವಿಚಾರ ಏನೆಂದರೆ. ಬಿಗ್ ಬಾಸ್ ಫಿನಾಲೆ ಆದ ದಿನ ಒಳಗೆ ಇದ್ದ ಸ್ಪರ್ಧಿಗಳು ಹೊರಗೆ ಬರುತ್ತಾರೆ ಅಗ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಅಭಿಮಾನಿಗಳು ಆಗಮಿಸಿದ್ದರು. ಅದೇ ಸಮದಯಲ್ಲಿ ಮಾನಸ ಮತ್ತು ನಾನು ಕಾರಿನಲ್ಲಿ ಹೊರಗಡೆ ಬಂದ್ವಿ ಆಗ ಕಾರು ಸುತ್ತ ಜನರು ಮುತ್ತಿಕೊಂಡು ಬಿಟ್ಟರು. ಮಾನಸಕ್ಕೆ ಸಂತೋಷಣ್ಣ ಒಂದೇ ಒಂದು ಸೆಲ್ಫಿ ಎಂದು ಕೇಳುತ್ತಿದ್ದರು ಆದರೆ ಕಾರಿನಿಂದ ಇಳಿದು ಸೆಲ್ಫಿ ಕೊಡೋಣ ಅಂದ್ರೆ ಕಾರಿನ ಡೋರ್ ಪಕ್ಕ ಕಾರಿನ ಟಯರ್ ಪಕ್ಕ ಜನರು ನಿಂತುಕೊಂಡಿದ್ದರು. ಒಂದೇ ಒಂದು ಎಚ್ಚು ಕಮ್ಮಿ ಆಗಿಬಿಟ್ಟರೆ ಯಾರಿಗಾದರೂ ಎಚ್ಚು ಕಮ್ಮಿ ಆಗಿಬಿಡುತ್ತದೆ ಎಂಬ ಗಾಬರಿ ನಮಗೆ ಇತ್ತು. ಈ ಸಂದರ್ಭದಲ್ಲಿ ವಿಡಿಯೋ ತೆಗೆದಿದ್ದಾರೆ. ಈ ಗಾಬರಿಯಲ್ಲಿದ್ದಾಗ ಮಾಡಿದ ವಿಡಿಯೋವನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿ ನಮ್ಮ ಮನಸ್ಸಿಗೆ ನೋವಾಗುವಂತೆ ಮಾಡಿದ್ದಾರೆ. ನಮ್ಮಿಬ್ಬರಿಗೂ ಯಾವುದೇ ರೀತಿಯಲ್ಲಿ ಸಮಸ್ಯೆ ಆಗಿಲ್ಲ. ಅಲ್ಲಿದ್ದವರು ನಮ್ಮ ಅಭಿಮಾನಿಗಳು ನಮ್ಮ ಪ್ರೀತಿಯ ಹೃದಯ ಸಂಬಂಧಿಗಳು. ಇದಾದ ಮೇಲೆ ನಾವು ಸೈಡ್‌ಗೆ ಹೋಗಿ ಕಾರು ನಿಲ್ಲಿಸಿದಿ ಎಲ್ಲರಿಗೂ ಸೆಲ್ಫಿ ಕೊಟ್ಟು ಮಾತನಾಡಿಸಿ ಕಳುಹಿಸಿದ್ದೀನಿ ಆ ವಿಡಿಯೋ ಯಾರೂ ಹಾಕಿಲ್ಲ. ಸಿಕ್ಕಾಪಟ್ಟೆ ಜನರಿದ್ದರು ಅಂತ ನಾವು ಗಾಬರಿಯಲ್ಲಿ ಇಳಿದು ಸೆಲ್ಫಿ ಕೊಡಲು ಆಗಲಿಲ್ಲ ದಯವಿಟ್ಟು ನಮ್ಮನ್ನು ಕ್ಷಮಿಸಿ. ದಯವಿಟ್ಟು ನಮ್ಮನ್ನು ತಪ್ಪಾಗಿ ಭಾವಿಸಬೇಡಿ ಅಲ್ಲಿ ಯಾವುದೇ ಅನಾಹುತ ಆಗಿಲ್ಲ. ಬೇರೆ ಬೇರೆ ರೀತಿಯಲ್ಲಿ ಕೆಟ್ಟದಾಗಿ ವರ್ಣಿಸಿ ನಮ್ಮ ಮನಸ್ಸಿಗೆ ನೋವು ಮಾಡಬೇಡಿ. ನಾವು ನಿಮ್ಮನ್ನು ಸದಾ ನಗಿಸುತ್ತೀವಿ ಖುಷಿಯಿಂದ ಇಡುತ್ತೀವಿ. ಇಷ್ಟು ವರ್ಷ ನಗಿಸುತ್ತಿದ್ದೀವಿ ಇನ್ನು ಮುಂದೆ ಕೂಡ ನಗಿಸುವುದು ನಮ್ಮ ಕೆಲಸ' ಎಂದು ವಿಡಿಯೋ ಮೂಲಕ ತುಕಾಲಿ ಸಂತೋಷ್ ಮತ್ತು ಮಾನಸಾ ಮಾತನಾಡಿದ್ದಾರೆ.
ಬಿಗ್ ಬಾಸ್ ನಂತರ ಬಂಪರ್ ಆಫರ್ ಪಡೆದ ಚೈತ್ರಾ ಕುಂದಾಪುರ; ವೀಕ್ಷಕರು ಫುಲ್ ಶಾಕ್
'ನಿಮ್ಮ ಬಳಿ ಯಾರು ಸೆಲ್ಫಿ ಕೇಳಲು ಬರುತ್ತಾರೆ? ನಿಮಗೆ ಹೊಡೆಯಲು ಬರುತ್ತಿರುವುದು. ನಿಮ್ಮನ್ನು ಜನರು ಬೆಳೆಸಿರುವುದು ಅವರನ್ನು ಗೌರವಿಸಿ, ಮಾಸನ ಕೋಪ ಮಾಡಿಕೊಂಡು ಮೂತಿ ತಿರುಗಿಸಿದ್ದು ಸ್ಪಷ್ಟವಾಗಿ ಕಾಣಿಸುತ್ತಿದೆ. ಸೆಲ್ಫಿ ಕೊಡಲು ಅಲ್ಲ ನಿಮ್ಮ ಹೆಂಡತಿಗೆ ಪಾಠ ಕಲಿಸಲು ಜನರ ಬಂದಿದ್ದು' ಎಂದು ಸ್ಪಷ್ಟನೆ ಕೊಟ್ಟ ಮೇಲೂ ಜನರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ.
ಕ್ಯಾಬ್ ಡ್ರೈವರ್ ಆದ ಕಿರುತೆರೆ ನಟಿ ನಿನಾದ್; ಒಂದೂವರೆ ವರ್ಷದ ನಂತರ ಸಿಕ್ಕಿ ಭಾಗ್ಯ ಅಂತಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.