ಬಿಗ್ ಬಾಸ್‌ ತಂಡಕ್ಕೆ 100 ರೂಮ್, ವೀಕೆಂಡ್ ಊಟ ತಿಂಡಿ ಕೊಡುವುದು ಈ ಸ್ಟಾರ್ ನಟ; ಇವ್ರು ಕೂಡ ವೈಲ್ಡ್‌ ಕಾರ್ಡ್‌ ಸ್ಪರ್ಧಿನೇ!

By Vaishnavi Chandrashekar  |  First Published Sep 13, 2024, 10:52 AM IST

ಬಿಗ್ ಬಾಸ್ ತಂಡಕ್ಕೆ ಸಪೋರ್ಟ್ ಆಗಿ ನಿಂತ ಸ್ಟಾರ್ ನಟ. 100 ರೂಮ್ ಕೊಡುವಷ್ಟು ದೊಡ್ಡ ಹೋಟೆಲ್ ಹೊಂದಿರುವುದು ಯಾರು? 


ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ ಬಿಗ್ ಬಾಸ್. ಸೀಸನ್ 1 ರಿಂದ 10ರವರೆಗೂ ಮನೋರಂಜನೆ ನೀಡುತ್ತಾ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಳಿಸಿದ ಈ ಕಾರ್ಯಕ್ರಮಕ್ಕೆ ಒಮ್ಮೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಸ್ಪರ್ಧಿನೇ ತಿಂಡಿ-ಊಟ ಮತ್ತು ಹೋಟೆಲ್ ಸವಲತ್ತು ನೀಡಿದ್ದರಂತೆ. ಯಾರು ಆ ಸ್ಟಾರ್ ನಟ?

ಬಿಗ್ ಬಾಸ್ ಕಾರ್ಯಕ್ರಮದ ಹಿಸ್ಟರಿಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ಸೀಸನ್ ಅಂದ್ರೆ ಸೀಸನ್ 3. ಹುಚ್ಚ ವೆಂಕಟ್ ಆರಭಟ,ರೆಹೆಮಾನ್ ಜಗಳ ..ಪ್ರತಿಯೊಂದು ಹೈಲೈಟ್ ಆಗುತ್ತಿತ್ತು. ಈ ಸೀಸನ್‌ನ ವಿನ್ನರ್ ಟ್ರೋಫಿಯನ್ನು ನಟಿ ಶ್ರುತಿ ಹಿಡಿದರು. ಹುಚ್ಚ ವೆಂಕಟ್ ಎಲಿಮಿನೇಟ್ ಆದಾಗ ಎಂಟ್ರಿ ಕೊಟ್ಟ ವೈಲ್ಡ್‌ ಕಾರ್ಡ್ ಸ್ಪರ್ಧಿ ಮಿತ್ರ ಹಂಚಿಕೊಂಡ ಮಾತುಗಳು.

Tap to resize

Latest Videos

undefined

ನನಗೆ ಜೀವ ಬೆದರಿಕೆ ಹಾಕಿರುವುದು ನಿಜ, ಈಗಲೂ ತಂದೆ ತಾಯಿಗೆ ಧೈರ್ಯ ಹೇಳುತ್ತಿರುವೆ: ವರ್ಷ ಕಾವೇರಿ

'ಬಿಗ್ ಬಾಸ್‌ನ ಇಡೀ ತಂಡ ಉಳಿದುಕೊಂಡಿದ್ದು ನಾನು ನಡೆಸುತ್ತಿದ್ದ ಹೋಟೆಲ್‌ನಲ್ಲಿ, ಸುಮಾರು ನಾಲ್ಕು ಸೀಸನ್‌ ಅಲ್ಲಿ ನಡೆಯಿತ್ತು. ಪ್ರತಿ ವೀಕೆಂಡ್ ಊಟ ತಿಂಡ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ನನ್ನ ಕಂಪನಿಯಿಂದ ನಡೆಯುತ್ತಿತ್ತು. ಆ ಸಮಯದಲ್ಲಿ ನನಗೆ ಒಳ್ಳೆ ಬ್ಯುಸಿನೆಸ್ ಕೂಡ ನಡೆಯುತ್ತಿತ್ತು, ಸುಮಾರು 100 ರೂಮ್‌ಗಳನ್ನು ಬಿಗ್ ಬಾಸ್‌ಗೆ ಕೊಡುತ್ತಿದ್ದೆ ಹೀಗಾಗಿ ಬೇರೆ ಯಾವ ಈವೆಂಟ್ ಮಾಡಲು ಆಗುತ್ತಿರಲಿಲ್ಲ. ಬಿಗ್ ಬಾಸ್‌ ಕಾರ್ಯಕ್ರಮದಿಂದ ಹುಚ್ಚ ವೆಂಕಟ್‌ ಹೋರ ಹೋಗಿದ್ದಾರೆ ಅವರಿಗಿಂತ ದೊಡ್ಡ ಹುಚ್ಚರು ಇದ್ದಾರೆ ಅವರೇ ರೆಹೆಮಾನ್ ಮತ್ತು ಶ್ರುತಿ...ನೀವು ಹೋದರೆ ಚೆನ್ನಾಗಿರುತ್ತದೆ ಎಂದು ಪರಂ ನನ್ನ ಬಳಿ ಮಾತನಾಡಿದ್ದರು' ಎಂದು ನಟ ಮಿತ್ರ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಒಂದು ರೀಲ್ ಮಾಡೋಕೆ 20 ಸಾವಿರ ಕೇಳ್ತೀನಿ; ಬೇರೆ ಬೇರೆ ದುಡಿಮೆ ಬಗ್ಗೆ ರಿವೀಲ್ ಮಾಡಿದ ಅನುಪಮಾ ಗೌಡ!

'ಮಜಾ ಇದೆ ಚೆನ್ನಾಗಿದೆ ಅಲ್ಲದೆ ಲಿಮಿಟೆಡ್‌ ಸಮಯ ಕಳೆದ್ದ ಕಾರಣ ಒಪ್ಪಿಕೊಂಡ ಎಂಟ್ರಿ ಕೊಟ್ಟೆ. ಮಾಸ್ಟರ್ ಆನಂದ್‌ ನನಗೆ ಹಳೆ ಪರಿಚಯ ಅವನ ಪ್ಲ್ಯಾನ್‌ಗಳು ನನಗೆ ಗೊತ್ತಿತ್ತು, ಅಯ್ಯಪ್ಪ ನನಗೆ ಪರಿಚಯವೇ ಇರಲಿಲ್ಲ...ನೀನು ಗೊತ್ತು ನಟಿ ಶ್ರುತಿ ಗೊತ್ತು...ಟಕ್ಕರ್ ಕೊಟ್ಟರೆ ನಿಮ್ಮಿಬ್ಬರಿಗೆ ಕೊಡಬೇಕು ಆಗ ಮಾತ್ರ ನಾನು ಮೇನ್‌ ಸ್ಟ್ರೀಮ್‌ನಲ್ಲಿ ಇರಲು ಸಾಧ್ಯ. ನಮ್ಮ ಸೀಸನ್‌ನಲ್ಲಿ ಚಾಕು ಇರಲಿಲ್ಲ ಅಕ್ಕಿ ಇರಲಿಲ್ಲ....ತಾಯಿ ಸ್ಥಾನದಲ್ಲಿ ಶ್ರುತಿ ನಿಂತರು. ಅಲ್ಲಿ ನಾನು ಶ್ರುತಿ ಜಾಗ ಕಿತ್ತುಕೊಂಡೆ. ಸುಮಾರು 25 ದಿನಗಳ ಕಾಲ ಎಂಜಾಯ್ ಮಾಡಿದ್ದೀನಿ ಕೊನೆಯ ದಿನ ಎಲ್ಲರಲ್ಲಿ ಕಣ್ಣೀರು ನೋಡಿದೆ..  ಬಿಗ್ ಬಾಸ್ ಕಾರ್ಯಕ್ರಮ ಸ್ಕ್ರಿಪ್ಟೆಡ್‌ ಅಂತ ಸುಮಾರು ಚಾನೆಲ್‌ಗಳಲ್ಲಿ ಹೇಳುತ್ತಾರೆ ಆದರೆ ಅದು ಸುಳ್ಳು ಏಕೆಂದರೆ ನಾನು ಆ ಹೀಟ್‌ನ ಎದುರಿಸಿದ್ದೀನಿ' ಎಂದು ಮಿತ್ರ ಹೇಳಿದ್ದಾರೆ. 

click me!