ಮದುವೆ ದಿನ ಮದುಮಗನೇ ಕೋಣೆಯೊಳಗೆ ಲಾಕ್​! ಅಭಿಮಾನಿಗಳಿಗೆ ವಾಷ್​ರೂಮ್​ದೇ ಚಿಂತೆ...

By Suchethana D  |  First Published Aug 28, 2024, 1:35 PM IST

ಭಾಗ್ಯಳ ಮೇಲಿನ ಸಿಟ್ಟಿಗೆ ಶ್ರೇಷ್ಠಾ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ರೆ, ತಾಂಡವ್​ನನ್ನು ಕುಸುಮಾ ಕೋಣೆಯೊಳಕ್ಕೆ ಕೂಡಿ ಹಾಕಿದ್ದಾಳೆ. ಮುಂದೇನು?
 


ಶ್ರೇಷ್ಠಾ ಅತ್ತ ಎಲ್ಲರನ್ನೂ ವಿರೋಧ ಹಾಕಿಕೊಂಡು ಮದ್ವೆಗೆ ರೆಡಿಮಾಡಿಕೊಳ್ತಿದ್ರೆ, ಇತ್ತ ಮದುಮಗ ತಾಂಡವ್​ ರೂಂ ಒಳಗೆ ಲಾಕ್​ ಆಗಿದ್ದಾನೆ! ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕುದಿಯುತ್ತಿರೋ ಶ್ರೇಷ್ಠಾ, ಅವಳ ಗಂಡ ತಾಂಡವ್​ ಜೊತೆ  ಮದ್ವೆ ಫಿಕ್ಸ್​ ಮಾಡಿದ್ದಾಳೆ. ಅದನ್ನು ಭಾಗ್ಯಳಿಗೂ ಫೋನ್​ ಮಾಡಿ ತಿಳಿಸಿದ್ದಾಳೆ. ಅಷ್ಟಕ್ಕೂ ಶ್ರೇಷ್ಠಾ ಅಕ್ಷರಶಃ ನಾಗವಲ್ಲಿಯಾಗಿದ್ದಾಳೆ. ಏನಾದರೂ ಮಾಡಿ ಭಾಗ್ಯಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ಭಾಗ್ಯಳಿಗೆ ಈಕೆ ಮದ್ವೆಯಾಗ್ತಿರೋದು ತನ್ನ ಗಂಡನೇ ಎನ್ನೋ ವಿಷ್ಯನೇ ಗೊತ್ತಿಲ್ಲ, ಆದರೂ ಇಬ್ಬರು ಮಕ್ಕಳ ಅಪ್ಪನ ಜೊತೆ  ಮದ್ವೆಯಾಗ್ತಿದ್ದಾಳೆ ಅನ್ನೋದು ಮಾತ್ರ ಗೊತ್ತಿದೆ. ಅಷ್ಟೇ ಅಲ್ಲದೇ ಯಾರೋ ಒಬ್ಬಳಿಗೆ ದುಡ್ಡು ಕೊಟ್ಟು ತನ್ನ ವಿರುದ್ಧ ವಿಡಿಯೋ ಹರಿಬಿಟ್ಟ ಶ್ರೇಷ್ಠಾಳಿಗೆ ಬುದ್ಧಿ ಕಲಿಸಿದ್ದಾಳೆ ಭಾಗ್ಯ.  ಭಾಗ್ಯಳ ವಿರುದ್ಧ ಇಲ್ಲಸಲ್ಲದ ವಿಡಿಯೋಗಳನ್ನು ದುಡ್ಡು ಕೊಟ್ಟು ವೈರಲ್​  ಮಾಡಿಸಿದ್ದಳು ಶ್ರೇಷ್ಠಾ. ಅವಳಿಗೆ ಸರಿಯಾದ ಬುದ್ಧಿ ಕಲಿಸಿ ಬಂದಿದ್ದಾಳೆ ಭಾಗ್ಯ. ಆದ್ದರಿಂದ ಮದ್ವೆ ಹೇಗೆ ತಪ್ಪಿಸ್ತಿಯಾ ನೋಡ್ತೇನೆ ಎಂದು ಚಾಲೆಂಜ್​ ಹಾಕಿದ್ದಾಳೆ ಶ್ರೇಷ್ಠಾ.

ಶ್ರೇಷ್ಠಾ ತಾಂಡವ್​ ಜೊತೆ ಮದ್ವೆಯಾಗ್ತಿರೋ ಸತ್ಯ ಗೊತ್ತಿಲ್ಲದಿದ್ದರೂ, ಅವಳ ಹಿಂದೆ ಮುಂದೆ ತಿರುಗಾಡ್ತಿರೋ ತಾಂಡವ್​ ಅವಳ ಮದುವೆಗೆ ಹೋಗಿಯೇ ಹೋಗ್ತಾನೆ ಎನ್ನುವಷ್ಟು ತಲೆಯನ್ನು ಉಪಯೋಗಿಸಿದ್ದಾಳೆ ಕುಸುಮಾ. ಇದೇ ಕಾರಣಕ್ಕೆ ತಾಂಡವ್​ನನ್ನು ರೂಂ ಒಳಗೆ ಲಾಕ್​ ಮಾಡಿದ್ದಾಳೆ. ಇಡೀ ದಿನಕ್ಕಾಗುವಷ್ಟು ಏನು ಬೇಕೋ ಎಲ್ಲವನ್ನೂ ನೀಡುವಂತೆ ಭಾಗ್ಯಳಿಗೆ ಕುಸುಮಾ ಹೇಳಿದ್ದಾರೆ. ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿಯ ಊಟದ ವರೆಗೆ ಎಲ್ಲವೂ ತಾಂಡವ್​ ರೂಮ್​ನಲ್ಲಿಯೇ ತಂದಿಡುವಂತೆ ಹೇಳಿದ್ದಾಳೆ ಕುಸುಮಾ. ಇದನ್ನು ಕೇಳಿ ತಾಂಡವ್​ಗೆ ಮೈಯೆಲ್ಲಾ ಉರಿದು ಹೋಗಿದೆ. ಇದೇನಿದು ಚಿಕ್ಕಮಕ್ಕಳಂತೆ ಎಂದು ಬೈದಿದ್ದಾನೆ. ಒಂದು ಕೆಲಸ ಮಾಡು, ಕೈ ಕಾಲು ಕಟ್ಟಿ ಹಾಕು ಎಂದಿದ್ದಾನೆ. ಸಮಯ ಬಂದ್ರೆ ಅದನ್ನೂ ಮಾಡ್ತೇನೆ ಎಂದಿದ್ದಾಳೆ ಕುಸುಮಾ. ಶ್ರೇಷ್ಠಾಳ ಹಿಂದೆ ಮುಂದೆ ತಿರುಗೋ ನೀನು ಅವಳ ಮದುವೆಗೆ ಹೋಗುವುದಿಲ್ಲ ಎನ್ನುವುದು ಏನು ಗ್ಯಾರೆಂಟಿ ಕೇಳುತ್ತಲೇ ಅಲ್ಲೇ ಕೂಡಿ ಹಾಕಿದ್ದಾಳೆ.

Tap to resize

Latest Videos

ದುಡ್ಡಿಗಾಗಿ ಮದ್ವೆಯಾದ ಶಿಲ್ಪಾ ಶೆಟ್ಟಿ, ಅನಿಲ್​ ಕಪೂರ್​! ವೈರಲ್​ ವಿಡಿಯೋದಿಂದ ರಟ್ಟಾಯ್ತು ಗುಟ್ಟು

ಇದೀಗ ತಾಂಡವ್​ ಅಭಿಮಾನಿಗಳಿಗೆ ವಾಷ್​ರೂಮ್​ ಚಿಂತೆ ಶುರುವಾಗಿದೆ. ಅವನಿಗೆ ಕೂಡಿ ಹಾಕಿರೋ ಕೋಣೆಯಲ್ಲಿ ಅಟ್ಯಾಚ್​ ಬಾತ್​ರೂಮ್​ ಇದ್ಯಾ ಎಂದು ಕೇಳುತ್ತಿದ್ದಾರೆ! ಅದಕ್ಕೆ ಕೆಲವರು ಇಲ್ಲದೇ ಏನು, ಅದು ಬೆಡ್​ರೂಮ್​. ಇದ್ದೇ ಇರುತ್ತೆ ಎಂದಿದ್ದಾರೆ. ಆದರೂ ಕುಸುಮಾ ಅದನ್ನೂ ಹೇಳಬೇಕಿತ್ತು. ಇಲ್ಲದಿದ್ರೆ ಪಾಪ ತಾಂಡವ್​ ಏನು ಮಾಡಬೇಕು ಎಂದು ತಮಾಷೆ ಮಾಡುತ್ತಿದ್ದಾರೆ. ಮತ್ತೆ ಕೆಲವರು, ಕಿಟಕಿಯಿಂದ ಹಾರು ಎಂದು ಸಲಹೆ ಕೊಡುತ್ತಿದ್ದಾರೆ. ಹಲವರಂತೂ ಕುಸುಮಾಳಿಗೆ ಭೇಷ್​ ಭೇಷ್​ ಎನ್ನುತ್ತಿದ್ದಾರೆ. ಅವನಿಗೆ ಅಲ್ಲೇ ಕೈ ಕಾಲು ಕಟ್ಟಿ ಕೂಡಿ ಹಾಕಿ, ಸುಮ್ಮನೇ ಬಿಡಬೇಡಿ ಎಂದಿದ್ದರೆ, ಮತ್ತೆ ಕೆಲವರು ಇಂಥ ಜಾಣ ಕುಸುಮಾಗೆ ಶ್ರೇಷ್ಠಾ ಮದ್ವೆಯಾಗ್ತಿರೋದು ತಾಂಡವ್​ನನ್ನೇ ಎನ್ನೋದು ಗೊತ್ತಾಗಿಲ್ಲ ಅನ್ನೋದೆ ವಿಚಿತ್ರ ಎನ್ನುತ್ತಿದ್ದಾರೆ. ಮೊಬೈಲ್​ ಫೋನೂ ಕಸಿದುಕೊಂಡು ಹೋಗಬೇಕಿತ್ತು ಎನ್ನುವುದು ಮತ್ತೆಕೆಲವರ ಸಲಹೆ. 

ಅತ್ತ ತನ್ನ ಮಗಳ ಇಂಥ ಕೆಟ್ಟ ವರ್ತನೆ ನೋಡಿ ಶ್ರೇಷ್ಠಾಳ ಅಪ್ಪ-ಅಮ್ಮನೂ ಮಗಳಿಗೆ ಬೈದಿದ್ದಾರೆ. ಆದರೆ ಶ್ರೇಷ್ಠಾಳಿಗೆ ಅವಮರ್ಯಾದೆಯಾಗಿ ಅಪ್ಪ-ಅಮ್ಮನನ್ನೇ ಬೈದು ಕಳಿಸಿದಳು. ಇಷ್ಟೆಲ್ಲಾ ಆದ ಮೇಲೆ ತನ್ನ ಮದುವೆ ನಡೆದೇ ನಡೆಯುತ್ತದೆ. ಭಾಗ್ಯ ಅದನ್ನು ಹೇಗೆ ತಡೆಯುತ್ತಾಳೆ ಎಂದು ಚಾಲೆಂಜ್​  ಮಾಡಿದ್ದಾಳೆ. ಸ್ಥಳಕ್ಕೆ ಕುಸುಮಾನೂ ಬಂದಿದ್ದಳು. ಆದರೆ ಬುದ್ಧಿವಂತೆ ಕುಸುಮಾಗೂ ಈಕೆ ಮದ್ವೆಯಾಗ್ತಿರೋದು ತನ್ನ ಮಗನನ್ನೇ ಅನ್ನೋ ಸತ್ಯ ಗೊತ್ತೇ ಇಲ್ಲ. ಭಾಗ್ಯಳಿಗೂ ತಿಳಿದಿಲ್ಲ ಎನ್ನುವುದು ವಿಪರ್ಯಾಸ. ಎಲ್ಲಾ ಗೊತ್ತಿರೋ ಪೂಜಾ ಕೂಡ ಇನ್ನೂ ಯಾಕೆ ಸೈಲೆಂಟ್​ ಆಗಿದ್ದಾಳೆ ಎನ್ನೋದು ಇನ್ನೊಂದು ವಿಚಿತ್ರ.  ಒಟ್ಟಿನಲ್ಲಿ ಈಗ ಶ್ರೇಷ್ಠಾ ಏನು ಮಾಡುತ್ತಾಳೆ, ತಾಂಡವ್​ ಕಥೆ ಏನು ಎನ್ನೋದೇ ಕುತೂಹಲವಾಗಿದೆ. 

3 ವರ್ಷದಿಂದ ಸೆಕ್ಸೇ ಮಾಡಿಲ್ಲ ಅಂದ ಉರ್ಫಿ ಎದೆ ಮೇಲೆ ಉಡ ಬಿಟ್ಕೊಳೋದಾ? ಕಮೆಂಟಿಗರು ಸುಮ್ನೆ ಇರ್ತಾರಾ?

click me!