ಪುಟ್ಟಕ್ಕನ ಮಕ್ಕಳು ಸ್ನೇಹಾ ವರ್ಕ್​ಔಟ್​ ವೈರಲ್​: ಹೊಸ ವರ್ಷಕ್ಕೆ ಸಂಜನಾ ಬುರ್ಲಿ ಕೊಟ್ಟ ಫಿಟ್​ನೆಸ್​ ಟಿಪ್ಸ್​ ಏನು?

By Suvarna News  |  First Published Jan 1, 2024, 4:41 PM IST

ಪುಟ್ಟಕ್ಕನ ಮಕ್ಕಳು ಸ್ನೇಹಾ ವರ್ಕ್​ಔಟ್​ ವಿಡಿಯೋ ವೈರಲ್ ಆಗಿದೆ. ಇದೇ ವೇಳೆ ದೇಹವನ್ನು ಫಿಟ್​ ಆ್ಯಂಡ್​ ಫೈನ್​ ಆಗಿಟ್ಟುಕೊಳ್ಳುವ ಕೆಲವು ಟಿಪ್ಸ್​ ನೀಡಿದ್ದಾರೆ ನಟಿ.
 


ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿ ಹಾಗೂ ಮದ್ವೆಯೇ  ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ಸಂಜನಾ ಅವರು ಆಗಾಗ್ಗೆ ರೀಲ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. 

ಇದೀಗ ಜಿಮ್​ನಲ್ಲಿ ವರ್ಕ್​ಔಟ್​ ಮಾಡುವ ವಿಡಿಯೋ ಅನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಫಿಟ್​ ಆ್ಯಂಡ್​ ಫೈನ್​ ಆಗಿರಬೇಕಾದರೆ ವರ್ಕ್​ಔಟ್​ ಅಗತ್ಯ ಎಂದು ಅವರು ತಿಳಿಸಿದ್ದು, ಜಿಮ್​ನಲ್ಲಿ ಇರುವ ವಿಡಿಯೋ ಹಂಚಿಕೊಂಡಿದ್ದು, ಅದೀಗ ವೈರಲ್​ ಆಗಿದೆ. ಇದೇ ವೇಳೆ ತಮ್ಮ ವರ್ಕೌಟ್​ ಜರ್ನಿಯ ಕುರಿತು ನಟಿ ಬರೆದುಕೊಂಡಿದ್ದಾರೆ.  ನಾನು ಪ್ರೌಢಾವಸ್ಥೆಗೆ ಬಂದಾಗಿನಿಂದ ನನ್ನ ದೇಹದ ಪ್ರಕಾರದಲ್ಲಿ ನನ್ನ ತೂಕ ಮತ್ತು ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳುವುದು ಎಂದಿಗೂ ಸುಲಭ ಅಥವಾ ಆನಂದದಾಯಕವಾಗಿರಲಿಲ್ಲ. ನನ್ನ ದೇಹವು ಕಳೆದುಕೊಳ್ಳುವುದಕ್ಕಿಂತ ಸುಲಭವಾಗಿ ತೂಕವನ್ನು ಹೆಚ್ಚಿಸುವ ವಿಪರೀತ ಪ್ರವೃತ್ತಿಯನ್ನು ಹೊಂದಿದೆ. ಆದ್ದರಿಂದ ನಾನು ಯಾವಾಗಲೂ ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿರುವ ನಟಿ ಇತರರಿಗೂ ಈ ಟಿಪ್ಸ್​ ಅನುಸರಿಸುವುದಕ್ಕೆ ಪ್ರೇರೇಪಿಸಿದ್ದಾರೆ.

Tap to resize

Latest Videos

ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

ಸಂಜನಾ ಹೇಳಿದ್ದೇನೆಂದರೆ, 1. ನಾನು ಏನು ತಿನ್ನುತ್ತೇನೆ ಮತ್ತು ಯಾವಾಗ ನಾನು ತಿನ್ನುತ್ತೇನೆ, 2. ನಾನು ಒಂದು ವೇಳೆ ಹೆಚ್ಚು ತಿಂದರೆ ಅದನ್ನು  ಹೇಗೆ ಸರಿದೂಗಿಸುತ್ತೇನೆ ಹಾಗೂ 3.  ನಾನು ವಾರಕ್ಕೆ ಸಾಕಷ್ಟು ನನ್ನ ಸ್ನಾಯುಗಳನ್ನು ಕೆಲಸ ಮಾಡಿದ್ದೇನೆ ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ಸುಟ್ಟುಹಾಕಿದ್ದೇನೆ ಎನ್ನುವುದನ್ನು ಗಮನಿಸುತ್ತೇನೆ. ಇಷ್ಟು ಮಾಡುವ ಮೂಲಕ ದೇಹವನ್ನು ಫಿಟ್​ ಆಗಿಟ್ಟುಕೊಂಡಿರುವುದಾಗಿ ಸಂಜನಾ ಬುರ್ಲಿ ಹೇಳಿದ್ದಾರೆ.  ಸ್ಥಿರತೆಯು ನನ್ನ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಕೀಲಿಯಾಗಿದೆ ಎಂದಿದ್ದಾರೆ.  ಶಿಸ್ತಿನ ವೇಳಾಪಟ್ಟಿಯನ್ನು ಇಟ್ಟುಕೊಳ್ಳುವುದರಿಂದ  ದೀರ್ಘಾವಧಿಯಲ್ಲಿ ನಿಮಗೆ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ. 

ಇನ್ನು ಸಂಜನಾ ಅವರ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಿರುವ ಕುರಿತು ಹೇಳುವುದಾದರೆ, ಈ ಹಿಂದೆ ಅವರೇ ಸಂದರ್ಶನವೊಂದರಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದರು. ಇವರ ಮೊದಲ ಧಾರಾವಾಹಿ  'ಲಗ್ನಪತ್ರಿಕೆ'. ಕಾರಾಣಾಂತರಗಳಿಂದ  ಪ್ರಸಾರ ನಿಲ್ಲಿಸಿತ್ತು. ನಂತರ ಧಾರಾವಾಹಿಯ ಉಸಾಬರಿ ಬೇಡ ಎಂದು  ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟಿದ್ದರು ನಟಿ.  ಆರೂರು ಜಗದೀಶ್‌ ಅವರು  'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದ್ದರೂ ಸ್ನೇಹಾ ಅದಕ್ಕೆ ಒಪ್ಪಿರಲಿಲ್ಲ. ಕೊರೋನಾ ಮುಗಿದು  ಕಾಲೇಜು ಶುರುವಾಗಿದ್ದರಿಂದ ವಿದ್ಯಾಭ್ಯಾಸಕ್ಕೆ ಕಷ್ಟ ಆಗುತ್ತೆ ಎಂದು ಬೇಡ ಎಂದರು. ನಂತರ ಪುನಃ ಕೊರೋನಾದಿಂದ ಆನ್​ಲೈನ್​ ತರಗತಿ ಶುರುವಾದ ಕಾರಣ, ಈ ಧಾರಾವಾಹಿಗೆ ಅವರು ಒಪ್ಪಿದರು.  ನಟನೆ ಮತ್ತು ಓದನ್ನು ಬ್ಯಾಲೆನ್ಸ್‌ ಮಾಡಬಹುದು ಎಂದು ಧೈರ್ಯ ಮಾಡದೇ ಹೋಗಿದ್ದರೆ ಪಾತ್ರದ ಯಶಸ್ಸನ್ನು ನಾನು ಕಳೆದುಕೊಳ್ಳುತ್ತಿದ್ದೆ ಎನ್ನುತ್ತಾರೆ ಸಂಜನಾ. 

ಸೀತಾ ಮದ್ವೆ ನಿಲ್ಲಿಸಲು ರಾಮನ ಭರ್ಜರಿ ಫೈಟಿಂಗ್​! ಶೂಟಿಂಗ್ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್
 

click me!