ಬಿಗ್ ಬಾಸ್ ಪ್ರೊಮೋ ಶೂಟಿಂಗ್ ನಲ್ಲಿ ಸುದೀಪ್ ಝಲಕ್, ವಿಡಿಯೋ ನೋಡಿ ಉಘೇ ಎಂದ ಫ್ಯಾನ್ಸ್

Published : Sep 18, 2024, 02:43 PM IST
 ಬಿಗ್ ಬಾಸ್ ಪ್ರೊಮೋ ಶೂಟಿಂಗ್ ನಲ್ಲಿ ಸುದೀಪ್ ಝಲಕ್, ವಿಡಿಯೋ ನೋಡಿ ಉಘೇ ಎಂದ ಫ್ಯಾನ್ಸ್

ಸಾರಾಂಶ

ಬಿಗ್ ಬಾಸ್ ಸೀಸನ್ 11ರ ಪ್ರೊಮೋ ಈಗಾಗಲೇ ಸಂಚಲನ ಮೂಡಿಸಿದೆ. ರಿಯಾಲಿಟಿ ಶೋ ನೋಡೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ಕುಳಿತಿದ್ದಾರೆ. ಈ ಮಧ್ಯೆ ಕಲರ್ಸ್ ಕನ್ನಡ ಒಂದಾದ್ಮೇಲೆ ಒಂದು ಅಪ್ಡೇಟ್ ನೀಡಿ, ವೀಕ್ಷಕರ ಕುತೂಹಲವನ್ನು ಹೆಚ್ಚಿಸ್ತಿದೆ.   

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 (Colors Kannada Bigg Boss Season 11) ರ ಧಮಾಕಾ ಶುರುವಾಗಿದೆ. ಈಗಾಗಲೇ ಎರಡು ಪ್ರೋಮೋ ರಿಲೀಸ್ ಮಾಡಿರುವ ಚಾನೆಲ್ ಈಗ ಪ್ರೊಮೋ ಮೇಕಿಂಗ್ (Promo Making) ವಿಡಿಯೋ ಪೋಸ್ಟ್ ಮಾಡಿದೆ. ಬಿಗ್ ಬಾಸ್ ಸೀಸನ್ 11ಕ್ಕೆ ನಿರೂಪಕ ಯಾರು ಎನ್ನುವ ಪ್ರಶ್ನೆಗೆ ಪ್ರೊಮೋ ಮೂಲಕ ಉತ್ತರ ನೀಡಿರುವ ಬಿಗ್ ಬಾಸ್, ಕಿಚ್ಚ ಸುದೀಪ್ (Kiccha Sudeep) ಶೂಟಿಂಗ್ ವಿಡಿಯೋ ತುಣುಕನ್ನು ಹಂಚಿಕೊಂಡಿದೆ.

ಇದೇ ಸೆಪ್ಟೆಂಬರ್ 29ರಿಂದ ಕಲರ್ಸ್ ಕನ್ನಡದಲ್ಲಿ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗ್ತಿದೆ. ಇದನ್ನು ಅಭಿನಯ ಚಕ್ರವರ್ತಿ ಸುದೀಪ್ ನಡೆಸಿಕೊಡ್ತಿದ್ದಾರೆ. ತಂಡ ಮೊದಲು ಸಾರ್ವಜನಿಕರಿರುವ ಒಂದು ಪ್ರೋಮೋ ರಿಲೀಸ್ ಮಾಡಿ, ನಿರೂಪಕರು ಯಾರು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಅದ್ರ ನಂತ್ರ ಇನ್ನೊಂದು ಪ್ರೊಮೋ ರಿಲೀಸ್ ಮಾಡಿ, ಈ ಬಾರಿಯೂ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ದರ್ಬಾರ್ ನಡೆಯಲಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು. ಈಗ ಸುದೀಪ್ ಶೂಟಿಂಗ್ ಝಲಕ್ ಹಂಚಿಕೊಂಡಿದೆ. 

ಇದು ಗೊಂಬೆಯಲ್ಲ ಭೂತ, ಐಶ್ವರ್ಯ ರೈ ಡಾಲ್ ನೋಡಿ ನೆಟ್ಟಿಗರು ಗರಂ

ಕಲರ್ಸ್ ಕನ್ನಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದೆ. ಕಿರುತೆರೆಯ ದೊಡ್ಡಣ್ಣ ಬಿಗ್ ಬಾಸ್ 11ರ ಅದ್ಧೂರಿ ಪ್ರೊಮೋ ಮೇಕಿಂಗ್ ಎಂದು ಶೀರ್ಷಿಕೆ ಹಾಕಲಾಗಿದೆ. ವಿಡಿಯೋ ಆರಂಭದಲ್ಲಿ ಸೆಟ್ ಸಿದ್ಧಪಡಿಸೋದನ್ನು ನಾವು ನೋಡ್ಬಹುದು. ನಂತ್ರ ಕಾರೊಂದು ಬಂದು ನಿಲ್ಲುತ್ತದೆ. ಅದ್ರಿಂದ ಇಳಿಯುವ ಸುದೀಪ್, ಶೂಟಿಂಗ್ ಗೆ ಸಿದ್ಧವಾಗ್ತಾರೆ. ಕೆಂಪು ಡ್ರೆಸ್, ಕತ್ತಲ್ಲಿ ಒಂದಿಷ್ಟು ಚೈನ್ ಹಾಕಿಕೊಂಡು ರೆಡಿಯಾಗುವ ಸುದೀಪ್, ನಿರ್ದೇಶಕರ ಸಲಹೆಯಂತೆ ಆಕ್ಷನ್ ಮಾಡ್ತಾರೆ. ಹತ್ತು ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೆ ಲೆಕ್ಕ, ಇದು ಹೊಸ ಅಧ್ಯಾಯ ಎನ್ನುವ ಸುದೀಪ್,ಪ್ರೋಮೋ ಶೂಟ್ ಮುಗಸ್ತಾರೆ.

ಪ್ರೊಮೋ ಮೇಕಿಂಗ್ ನೋಡಿದ ಅಭಿಮಾನಿಗಳು ಕಮೆಂಟ್ ಶುರು ಮಾಡಿದ್ದಾರೆ. ಕಿರುತೆರೆಯ ದೊಡ್ಡಣ್ಣ ಬಿಗ್ ಬಾಸ್ ಅನ್ನೋದನ್ನು ಫ್ಯಾನ್ಸ್ ಒಪ್ಪಿಕೊಂಡಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ಗಾಗಿಯೇ ಬಿಗ್ ಬಾಸ್ ಶೋ ನೋಡ್ತೇವೆ ಅಂತ ತಮ್ಮ ಅಭಿಮಾನ ತೋರ್ಪಡಿಸಿದ್ದಾರೆ. 

ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಬಿಗ್ ಬಾಸ್ ಗೆ ಸಂಬಂಧಿಸಿದ ಒಂದೊಂದೇ ಅಪ್ಡೇಟ್ ಗಳನ್ನು ಚಾನೆಲ್ ನೀಡ್ತಿದೆ. ಬಿಗ್ ಬಾಸ್ ಶೋ ಸೆಪ್ಟೆಂಬರ್ 29ರಿಂದ ಶುರುವಾಗಲಿದ್ದು, ಸೆಪ್ಟೆಂಬರ್ 27ರಂದು ಡಾನ್ಸ್ ಶೂಟಿಂಗ್ ನಡೆಯಲಿದೆ. 28ರಂದು ಸ್ಪರ್ಧಿಗಳು ಮನೆಗೆ ಎಂಟ್ರಿಯಾಗಲಿದ್ದು, ಶೂಟಿಂಗ್ ಕೂಡ ಅಂದೇ ನಡೆಯಲಿದೆ. ಆದ್ರೆ ಶೋ ಟೆಲಿಕಾಸ್ಟ್ ಆಗೋದು ಸೆಪ್ಟೆಂಬರ್ 29ರಂದು ಎಂದು ಮಾಧ್ಯಮಗಳು ವರದಿ ಮಾಡಿವೆ. 

ಐಸಿ 814 ದಿ ಕಂದಹಾರ್ ಹೈಜಾಕ್ ಕಥೆ ಹೇಳೋ ಚಿತ್ರವಿದು!

ಈ ಬಾರಿ ಬಿಗ್ ಬಾಸ್ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9. 30ಕ್ಕೆ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ಕಿಚ್ಚನ ಪಂಚಾಯ್ತಿ ಇರುವ ಕಾರಣ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಪ್ರತಿ ಬಾರಿ  ಹೌದು ಸ್ವಾಮಿ ಎನ್ನುತ್ತ ಬರ್ತಿದ್ದ ಬಿಗ್ ಬಾಸ್ ಈ ಬಾರಿ, ನೋ ವೇ ಛಾನ್ಸೆ ಇಲ್ಲ ಎನ್ನುತ್ತಿದ್ದಾರೆ. ಕಲರ್ಸ್ ಕನ್ನಡದ ಬಿಗ್ ಬಾಸ್ ಪ್ರೊಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎರಡು ಮಿಲಿಯನ್ಸ್ ಗಿಂತಲೂ ಹೆಚ್ಚು ವೀವ್ಸ್ ಪಡೆದಿದೆ.

ಬಿಗ್ ಬಾಸ್ ಮನೆಗೆ ಯಾರೆಲ್ಲ ಬರ್ತಾರೆ ಅನ್ನೋದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಅನೇಕ ಕಲಾವಿದರ ಹೆಸರುಗಳು ಪಟ್ಟಿಯಲ್ಲಿದ್ದು, ಬಿಗ್ ಬಾಸ್ ಆರಂಭದ ದಿನವೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಒಳ್ಳೆ ಸ್ಪರ್ಧಿಯನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಅನ್ನೋದೇ ವೀಕ್ಷಕರ ಬೇಡಿಕೆಯಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!