ಗಾಯಕ ಚಂದನ್ ಶೆಟ್ಟಿಯವರು 35ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಹಲವರಿಂದ ಶುಭಾಶಯಗಳ ಸುರಿಮಳೆಯಾಗಿದೆ. ಕಿರಿಕ್ ಕೀರ್ತಿ ವಿಷ್ ಮಾಡಿರುವುದು, ಅದಕ್ಕೆ ಚಂದನ್ ರಿಪ್ಲೈ ಕೊಟ್ಟಿರುವುದು ಈಗ ವೈರಲ್ ಆಗಿದೆ.
ನಿನ್ನೆಯಷ್ಟೇ ಅಂದರೆ ಸೆಪ್ಟೆಂಬರ್ 17ರಂದು ಚಂದನ್ ಶೆಟ್ಟಿ ಅವರು ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹಲವು ಅಭಿಮಾನಿಗಳಿಂದ ಚಂದನ್ ಅವರು ಶುಭಾಶಯಗಳ ಸುರಿಮಳೆಯನ್ನೇ ಪಡೆದುಕೊಂಡಿದ್ದಾರೆ. ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳೂ ವಿಷ್ ಮಾಡಿದ್ದಾರೆ. ಅವರಲ್ಲಿ ಒಬ್ಬರು ಕಿರಿಕ್ ಕೀರ್ತಿ. ಹೆಚ್ಚಿನವರಿಗೆ ತಿಳಿದಿರುವಂತೆ, ಕಿರಕ್ ಕೀರ್ತಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ರೇಡಿಯೋ ಜಾಕಿಯಾಗಿ ಪ್ರಯಾಣ ಆರಂಭಿಸಿರುವ ಕೀರ್ತಿ, ಸುದೀಪ್ ನಿರೂಪಣೆಯ ಬಿಗಬಾಸ್ ನಲ್ಲಿಯೂ ಭಾಗವಹಿಸಿದ್ದರು. ಕೆಲವು ಚಲನಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಇವರು ಮತ್ತು ಚಂದನ್ ಶೆಟ್ಟಿಯವರ ಒಡನಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ನಡುವೆ ಡಿವೋರ್ಸ್ ಆದ ಬಳಿಕ, ಚಂದನ್ ಅವರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಕೀರ್ತಿ.
ಇದೀಗ ನಿನ್ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಕೀರ್ತಿ ಅವರು ವಿಷ್ ಮಾಡಿದ್ದಾರೆ. ಇದಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ಚಂದನ್ ಶೆಟ್ಟಿ. ಕೀರ್ತಿ ತಮ್ಮ ಅಣ್ಣ ಎನ್ನುವ ಅರ್ಥದಲ್ಲಿ ರಿಪ್ಲೈ ಮಾಡಿರುವ ಚಂದನ್ ಶೆಟ್ಟಿಯವರು, Thank you so much, brother, from another mother ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಹ್ಯಾಪಿ ಹುಟ್ದಬ್ಬ ಡಾರ್ಲಿಂಗ್... ನಗು ನೂರ್ಕಾಲ ಜೊತೆಗಿರಲಿ... ವಯಸ್ಸು 30 ದಾಟದಿರಲಿ... ನಮ್ಮ ಸ್ನೇಹ ಮುದ್ದೆ ಸೊಪ್ಪು ಸಾರಿನ ಹಾಗೆ ಸದಾ ಇರಲಿ...ಎನ್ನುವ ಶೀರ್ಷಿಕೆ ಕೊಟ್ಟು ಕೀರ್ತಿಯವರು ವಿಷ್ ಮಾಡಿದ್ದರೆ, ಚಂದನ್ ಶೆಟ್ಟಿ, ಧನ್ಯವಾದ, ಮತ್ತೊಂದು ಅಮ್ಮನಿಂದ ಹುಟ್ಟಿರುವ ಸಹೋದರನೇ ಎನ್ನುವ ಮೂಲಕ ತಮ್ಮದು ಅಣ್ಣ-ತಮ್ಮನ ಸುಮಧುರ ಬಾಂಧವ್ಯ ಎನ್ನುವುದನ್ನು ತೋರಿಸಿದ್ದಾರೆ.
undefined
ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್!
ಅಂದಹಾಗೆ ಚಂದನ್ ಶೆಟ್ಟಿ ಕಳೆದೊಂದು ತಿಂಗಳಿನಿಂದ ತುಂಬಾ ಸದ್ದು ಮಾಡುತ್ತಿರುವುದಕ್ಕೆ ಕಾರಣ, ನಿವೇದಿತಾ ಗೌಡ ಮತ್ತು ಅವರ ವಿಚ್ಛೇದನ ಹಿನ್ನೆಲೆಯಲ್ಲಿ. ಯಾವುದೇ ಗಲಾಟೆ, ಗೊಂದಲಕ್ಕೆ ಆಸ್ಪದ ಕೊಡದೇ ಡಿವೋರ್ಸ್ ಪಡೆದುಕೊಂಡಿರುವ ಈ ದಂಪತಿಯನ್ನು ಹಲವರು ಶ್ಲಾಘಿಸುತ್ತಿದ್ದರೂ, ಚಂದನ್ ಶೆಟ್ಟಿ ಪರವೇ ಬಹುತೇಕ ಮಂದಿ ನಿಂತಿರುವುದೂ ಸಾಕ್ಷಿಯಾಗಿದೆ. ಡಿವೋರ್ಸ್ ಬಳಿಕವೂ ಮಾಜಿ ಪತ್ನಿಯ ಬಗ್ಗೆ ಅದೇ ಗೌರವ ಉಳಿಸಿಕೊಂಡು, ನಿವೇದಿತಾರನ್ನು ಬಹುವಚನದಿಂದಲೇ ಸಂಬೋಧಿಸುತ್ತಾ ಆಕೆಯ ಬಗ್ಗೆ ಕಾಳಜಿ ತೋರುವುದರಿಂದಲೂ ಚಂದನ್ ಶೆಟ್ಟಿ ಅಭಿಮಾನಿಗಳಿಗೆ ಮತ್ತಷ್ಟು ಆಪ್ತರಾಗುತ್ತಿದ್ದಾರೆ. ಡಿವೋರ್ಸ್ ಬಳಿಕ ಚಂದನ್ ಶೆಟ್ಟಿಯವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿ ಎನ್ನಬಹುದು. ಸದ್ಯ ಇವರು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈಚೆಗಷ್ಟೇ ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಬಿಡುಗಡೆಯಾಗಿದೆ.
ಡಿವೋರ್ಸ್ ಹಿನ್ನೆಲೆಯಲ್ಲಿ, ಚಂದನ್ ಶೆಟ್ಟಿಯವರು ಯಾವಾಗ ಗುಡ್‌ನ್ಯೂಸ್ ಕೊಡುತ್ತಾರೆ ಎಂದೇ ಬಹುತೇಕ ಮಂದಿ ಕಾಯುತ್ತಿದ್ದಾರೆ. ಸದ್ಯ ತಮ್ಮ ಕರಿಯರ್ ಬಗ್ಗೆ ಗಮನ ಹರಿಸುತ್ತಿದ್ದೇನೆ. ಮದುವೆ ಎಲ್ಲಾ ಆಮೇಲೆ ಎಂದು ಇದಾಗಲೇ ಹಲವು ಬಾರಿ ಚಂದನ್ ಅವರು ಹೇಳಿದ್ದರೂ, ಅವರ ಅಭಿಮಾನಿಗಳಿಗೆ ಅವರನ್ನು ಮದುವೆ ಮಾಡಿಸುವವರೆಗೂ ಸಮಾಧಾನವಿಲ್ಲ. ಇದೀಗ ಚಂದನ್ ಶೆಟ್ಟಿ ಅವರು, ಕೆಲ ದಿನಗಳ ಹಿಂದೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ "ಹುಸನ್ ತೆರಾ ತೌಬಾ ತೌಬಾ" ಹಾಡಿಗೆ ಭರ್ಜರಿ ರೀಲ್ಸ್ ...ಮಾಡಿದ್ದರು. ಇದರ ಅರ್ಥ ನಿನ್ನ ಸೌಂದರ್ಯ ಭಲೆ ಭಲೆ ಎನ್ನುವುದು. ಅದಕ್ಕಾಗಿಯೇ ಅಭಿಮಾನಿಗಳು ಈ ಹಾಡಿಗೂ, ಚಂದನ್ ಶೆಟ್ಟಿ ಮದ್ವೆಗೂ ಕನೆಕ್ಟ್ ಮಾಡಿದ್ದು, ಗುಡ್‌ನ್ಯೂಸಾ ಕೇಳ್ತಿದ್ದಾರೆ. ಒಟ್ಟಿನಲ್ಲಿ ಫ್ಯಾನ್ಸ್‌ಗೆ ಅವರ ಮದುವೆ ಮಾಡಿಸುವವರೆಗೆ ನೆಮ್ಮದಿ ಇದ್ದಂತೆ ಕಾಣುತ್ತಿಲ್ಲ. ಹುಟ್ಟುಹಬ್ಬದ ದಿನವೇ ಮಾಜಿ ಪತ್ನಿ ನಿವೇದಿತಾ ಗೌಡ ಅವರ ಹಾರ್ಟ್ ರೀಲ್ಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಮಗಳನ್ನೇ ಮದ್ವೆಯಾದ ಅಪ್ಪ! ಕುಂಕುಮ-ಸಿಂಧೂರ ಇಟ್ಟದ್ಯಾಕೆ ಎಂದು ಅವ್ರ ಬಾಯಲ್ಲೇ ಕೇಳಿ...