
ಕನ್ನಡ ಜನಪ್ರಿಯ ಆರ್‌ಜೆ, ಬಿಗ್ ಬಾಸ್ ಸ್ಪರ್ಧಿ ಪೃಥ್ವಿ ಸಖತ್ ಬೋಲ್ಡ್ ವ್ಯಕ್ತಿ. ಮೂಗು ಚುಚ್ಚಿಸಿಕೊಂಡು ಡಿಫರೆಂಟ್ ರೀತಿಯಲ್ಲಿ ಸ್ಟೈಲ್ ಮಾಡುವ ಈ ಆರ್‌ಜೆ ಸದಾ ಬಹಿರಂಗವಾಗಿ ತಮ್ಮ ರಿಲೇಷನ್‌ಶಿಪ್‌ಗಳ ಬಗ್ಗೆ ಮಾತನಾಡುತ್ತಾರೆ. ದೇವರನ್ನು ನಂಬಲ್ಲ ಅನ್ನೋ ಆರ್‌ಜೆ ಮದುವೆ ಕಾಂಪ್ರಮೈಸ್ ವಿಚಾರನೂ ನಂಬುವುದಿಲ್ಲವಂತೆ.
'ಎಲ್ಲರು ಕೇಳುತ್ತಾರೆ...ಏನು ನೀವು ಮದುವೆ ಬಗ್ಗೆ ಇಷ್ಟು ಓಪನ್ ಆಗಿ ಮಾತನಾಡುತ್ತೀರಾ ಎಂದು. ನಾನು ನೇರವಾಗಿ ಹೇಳುತ್ತೀನಿ...ನನಗೆ ಎರಡು ಮದುವೆ ಆಗಿತ್ತು. ಈಗ ನಾನು ಸಿಂಗಲ್ ಆಗಿರುವೆ. ಎಲ್ಲರೂ ಹ್ಯಾಪಿ ಮ್ಯಾರಿಡ್ ಲೈಫ್ ಎಂದು ಹೇಳುತ್ತಾರೆ..ದಯವಿಟ್ಟು ಉದಾಹರಣೆ ಕೊಡಿ. ಎಷ್ಟು ಜನ ಮದುವೆಯಾಗಿ ಖುಷಿಯಾಗಿದ್ದಾರೆ...ಸಿಂಗಲ್ ಆಗಿರುವುದಕ್ಕೆ ಜೀವನ ಚೆನ್ನಾಗಿರುತ್ತದೆ. ಇಬ್ರು ಚೆನ್ನಾಗಿದ್ರೆ ಮೆಚ್ಯೂರ್ ಮೈಂಡ್ ಆಗಿದ್ರೆ ಮಾತ್ರ ಖುಷಿಯಾಗಿರುವುದು. ಗುರೂಜೀ ಒಮ್ಮೆ ಹೇಳಿದ್ದರು...ನಮ್ಮ ಜೀವನದಲ್ಲಿ ಏನೋ ಕೊರತೆ ಇದೆ ಅದಕ್ಕಾಗಿ ರಿಲೇಷನ್‌ಶಿಪ್‌ಗೆ ಬೀಳಬೇಡಿ. ಅದು ಕೆಲವು ಸಮಯದ ಅಷ್ಟೆ...ಆದಷ್ಟು ಬೇಗ ಮುರಿದು ಬೀಳುತ್ತದೆ. ಒಬ್ಬರನ್ನೊಬ್ಬರು ಮೇಲೆ ಎತ್ತಿ ಸಪೋರ್ಟ್ ಮಾಡಿಕೊಂಡು ಜೊತೆಗಿದ್ದರೆ...ಆ ಉದ್ದೇಶ ಇದ್ದರೆ ಗ್ರೇಟ್. ಅವಳು ಬಂದ್ರೆ ನಾನು ಜೀವನದಲ್ಲಿ ಖುಷಿಯಾಗಿ ಇರಬಹುದು ಅನ್ನೋ ಯೋಚನೆ ಬೇಡ...ಖುಷಿ ಕೊಟ್ಟ ಮೇಲೆ ಮುಂದೆ? ಬಿಟ್ಟು ಹೋಗಬಹುದು' ಎಂದು ಪೃಥ್ವಿ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮನೆ ಕೆಲಸ ಮಾಡೋ ಹೆಂಗಸನ್ನೇ ವಿನೋದ್ ಮದುವೆಯಾಗಿರುವುದು; ನಿಗೂಢ ಏನಿದೆ ಗೊತ್ತಿಲ್ಲ ಎಂದ ಪ್ರಕಾಶ್ ರಾಜ್
'ನನ್ನ ಪ್ರಕಾರ 30-35 ವರ್ಷ ಆಗುವವರೆಗೂ ಮದುವೆ ಆಗಬಾರದು. ಸ್ಕೂಲ್ ಕಾಲೇಜ್‌ನಲ್ಲಿ ಜೀವನಕ್ಕೆ ಬೇಕಿರುವ ಎಲ್ಲಾ ವಿಚಾರಗಳ ಬಗ್ಗೆ ಹೇಳಿಕೊಡುತ್ತಾರೆ ರಿಲೇಷನ್‌ಶಿಪ್ ಬಗ್ಗೆ ಬಿಟ್ಟು...ಹೀಗಾಗಿ ಜೀವನದಲ್ಲಿ ಪಾಠ ಕಲಿಬೇಕು ಅಂದ್ರೆ ಸಂಬಂಧದಲ್ಲಿ ಇರಬೇಕು. ಮೊದಲು ಇದ್ದ ಗರ್ಲ್‌ಫ್ರೆಂಡ್‌ನಿಂದ ಪಾಠ ಕಲಿತೆ..ಅದಾದ ಮೇಲೆ ಮತ್ತೆ ಬಂದ ಗರ್ಲ್‌ಫ್ರೆಂಡ್‌ನಿಂದ ಇನ್ನು ಜಾಸ್ತಿ ಪಾಠ ಕಲಿತೆ. ನಿಮ್ಮ ಮದುವೆ ಬಗ್ಗೆ ಒಂದು ಪದದಲ್ಲಿ ಹೇಳಿ ಅಂದಾಗ ಎಲ್ಲರೂ ಹೇಳುವುದು ಕಾಂಪ್ರಮೈಸ್ ಅಂತ, ಯಾವ ಕಾರಣಕ್ಕೆ ಕಾಂಪ್ರಮೈಸ್ ಆಗಬೇಕು? ಯಾರಿಗೆ ಕಾಂಪ್ರಮೈಸ್ ಆಗಬೇಕು' ಎಂದು ಪೃಥ್ವಿ ಹೇಳಿದ್ದಾರೆ.
ಕಿರುತೆರೆ ನಟಿ ಇಳಾ ಪತಿ ಮೇಲೆ ಹಲ್ಲೆ ಮಾಡಿದ ಬಿಗ್ ಬಾಸ್ ವಿನಯ್ ಗೌಡ; ದುರಹಂಕಾರದ ಮಾತುಗಳು ಬೇಡ!
'ನಾನು ಮದುವೆ ಮಾಡಿಕೊಂಡಾಗ 26 ವರ್ಷ ಆಗಿತ್ತು. ಬರೀ ಜಗಳಗಳು ಮೆಚ್ಯೂರಿಟಿ ಇರಲಿಲ್ಲ ಮದುವೆ 3 ವರ್ಷ ನಿಲ್ಲಲಿಲ್ಲ. ಎರಡನೇ ಮದುವೆ ಸೆಕ್ಸ್ಯೂಲ್ ಕಂಪ್ಯಾಟಬಲಿಟಿ ಇರಲಿಲ್ಲ, ಸ್ನೇಹಿತರಂತೆ ಇದ್ದೆವು. 6 ತಿಂಗಳು ಬೇರೆ ಬೇರೆ ಮನೆಯಲ್ಲಿ ಇದ್ದುಕೊಂಡು ಮದುವೆ ವರ್ಕೌಟ್ ಮಾಡುವುದಕ್ಕೆ ಟ್ರೈ ಮಾಡಿದೆ ಆದರೂ ಆಗಲಿಲ್ಲ. ಮಾಜಿ ಪತ್ನಿ ಜೊತೆ ಈಗಲೂ ಮಾತನಾಡುತ್ತೀನಿ ವಿಡಿಯೋ ಕಾಲ್ ಮಾಡುತ್ತೀನಿ. ಮುಂದಿನ ವಾರ ಊರಿನಿಂದ ಬರುತ್ತಾರೆ ಅವರ ಬಾಯ್‌ಫ್ರೆಂಡ್ ಜೊತೆ ಬಂದು ನಮ್ಮ ಮನೆಯಲ್ಲಿ ವಾಸಿಸುತ್ತಾರೆ. ನನ್ನ ಎರಡು ಮದುವೆ ಕೂಡ ಲವ್ ಮ್ಯಾರೇಜ್. ಮದುವೆ ಮುನ್ನ ಒಂದು ರೀತಿ ಮದುವೆ ನಂತರ ಒಂದು ರೀತಿ ಇರುತ್ತದೆ. Love is blind, marriage is eye opener. ಲವ್ ಮಾಡುವಾಗ ಒಂದೇ ಮನೆಯಲ್ಲಿ ಜೀವನ ಮಾಡಿರುವುದಿಲ್ಲ....ಕೇವಲ ಮೀಟ್ ಮಾಡುವುದು ಎಲ್ಲಾ. ಒಂದೇ ಮನೆಯಲ್ಲಿ ಉಳಿದುಕೊಂಡು ಜೀವನ ಮಾಡುವುದು ಕಷ್ಟ. ತಂದೆ ತಾಯಿ ಒಟ್ಟಿಗೆ ಇದ್ದರೆ ಇನ್ನೂ ಕಷ್ಟ ಆಗಿರುತ್ತದೆ. ಮದುವೆ ಆಗುವವರು ತಾಯಿ ತಂದೆಯಿಂದ ದೂರ ಬಂದು ಜೀವನ ಮಾಡಬೇಕು. ಪೋಷಕರ ಜೊತೆ ಬದುಕುವುದು ಬೇರೆ ಅವರ ನೆರಳಿನಲ್ಲಿ ಉಳಿಯುವುದು ಬೇರೆ' ಎಂದಿದ್ದಾರೆ ಪೃಥ್ವಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.