ಕೋಳಿ ಕೂಗಿದ್ರೆ ಬೆಳಗಾಗ್ತದೆಂಬ ಭ್ರಮೆ ಗಂಡಸ್ರಿಗೆ ಬೇಡ: ಹೆಣ್ಣಿನ ಶಕ್ತಿಯೇನು? ಭಾಗ್ಯಲಕ್ಷ್ಮಿ ಕುಸುಮಾ ಮಾತು ಕೇಳಿ...

Published : Dec 14, 2023, 02:57 PM IST
ಕೋಳಿ ಕೂಗಿದ್ರೆ ಬೆಳಗಾಗ್ತದೆಂಬ ಭ್ರಮೆ ಗಂಡಸ್ರಿಗೆ ಬೇಡ: ಹೆಣ್ಣಿನ ಶಕ್ತಿಯೇನು? ಭಾಗ್ಯಲಕ್ಷ್ಮಿ ಕುಸುಮಾ ಮಾತು ಕೇಳಿ...

ಸಾರಾಂಶ

ಹೆಣ್ಣಿನ ಶಕ್ತಿ ಏನು ಎನ್ನುತ್ತಲೇ ತನ್ನಿಂದಲೇ ಸಂಸಾರ ನಡೆಯುತ್ತದೆ ಎನ್ನುವ ಗಂಡಿನ ಅಹಂಗೆ ಚುಚ್ಚಿದ್ದಾಳೆ ಭಾಗ್ಯಲಕ್ಷ್ಮಿ ಕುಸುಮಾ. ಈಕೆ ಹೇಳಿದ್ದೇನು ಕೇಳಿ...   

ಹೆಣ್ಣು ಅಂದ್ರೆ ಏನು ಅಂದ್ಕೊಂಡ್ರಿ? ಏನೇ ಸಮಸ್ಯೆ ಬಂದರೂ ಎದುರಿಸುವ ಛಾತಿ ಪ್ರತಿ ಹೆಣ್ಣಿನಲ್ಲಿದೆ. ಇದೇ ಕಾರಣಕ್ಕೆ ಜಗತ್ತು ಇಷ್ಟು ಬೆಳಗ್ತಾ ಇರೋದು. ಗಂಡ ಬಿಟ್ಟೋಗಿರೋ,  ಗಂಡನ್ನು ಕಳೆದುಕೊಂಡಿರೋ ಅಥ್ವಾ ಗಂಡು ಮಕ್ಕಳೇ ಇಲ್ಲದ ಮನೆಯಲ್ಲಿ ಹೆಣ್ಣು ಸಂಸಾರದ ನೊಗವನ್ನು ಹೊತ್ತು ಸಾಕಿ ಸಲುಹುತ್ತಿದ್ದಾಳೆ. ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಳೆ. ಆದ್ರೆ ಗಂಡಸರಿಗೆ ತಾವಿಲ್ಲದಿದ್ದರೆ ಹೆಣ್ಣುಮಕ್ಕಳು ಉಪವಾಸ ಬೀಳ್ತಾರೆ ಎನ್ನೋ ಅಹಂ. ಗಂಡಸರೇ ಒಂದು ವಿಷ್ಯ ತಿಳಿದುಕೊಳ್ಳಿ. ಕೋಳಿ ಕೂಗಿದ್ರೇನೆ ಬೆಳಗಾಗ್ತದೆ ಎನ್ನೋ ಭ್ರಮೆ ಬೇಡ....

ಹೀಗೆ ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯಳ ಅತ್ತೆ ಕುಸುಮಾ ಹೆಣ್ಣಿನ ಮಹಿಮೆ ತಿಳಿಸಿದ್ದಾಳೆ. ತಾನಿದ್ದರೇನೇ ಸಂಸಾರ ಎನ್ನುವ ಭ್ರಮೆಯಿಂದಲೇ ಎಷ್ಟೋ ಗಂಡಸರು ಕಟ್ಟಿಕೊಂಡಿರೋ ಹೆಂಡ್ತಿ, ಮಕ್ಕಳನ್ನು ಬಿಟ್ಟು ನಡುರಾತ್ರಿ ಓಡಿಹೋಗ್ತಾರೆ. ಅಂಥ ಗಂಡಸರು ಹೆಣ್ಣುಮಕ್ಕಳ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ಕೋಳಿ ಕೂಗಿದ್ರೆ ಬೆಳಗಾಗ್ತದೆ ಎನ್ನೋ ಮನೋಭಾವ ಮೊದಲು ಹೋಗಲಿ ಎಂದು ಮಗ ತಾಂಡವ್​ಗೆ ಟಾಂಟ್​ ಕೊಟ್ಟಿದ್ದಾಳೆ ಕುಸುಮಾ. ನಾನು ಇಲ್ಲದಿದ್ದರೆ ಹೊಟ್ಟೆಗೆ ಏನು ತಿಂತಾರೆ ಎನ್ನುವ ಅಹಂಕಾರ ಬಿಟ್ಟುಬಿಡಿ. ಹೆಣ್ಣಾದವಳು ಯಾರು ಇರಲಿ, ಯಾರು ಇಲ್ಲದೇ ಇರಲಿ ಆಕೆಗೆ ಬದುಕುವ ಶಕ್ತಿ ಇದೆ.  ನಯಾಪೈಸೆ ವಿದ್ಯೆ ಕಲಿಯಲು ಎಷ್ಟೋ ತಾಯಂದಿರು ಇಂದು ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಹುದ್ದೆಗೆ ಏರಿಸಿದ್ದಾರೆ. ಇಡೀ ಸಂಸಾರದ ನೊಗವನ್ನು ಹೊತ್ತು ಕಾಪಾಡಿದ್ದಾರೆ. ಗಂಡ, ಮಕ್ಕಳು, ಮೊಮ್ಮಕ್ಕಳನ್ನು ಈ ತಾಯಂದಿರು ಸಾಕಿರುವ ಹಲವಾರುಉದಾಹರಣೆ ಇದೆ. ಆದ್ದರಿಂದ ತನ್ನಿಂದಲೇ ಸಂಸಾರ, ತಾನು ದುಡಿದರೆ ಮಾತ್ರ ಕುಟುಂಬ ಬದುಕುತ್ತದೆ ಎನ್ನೋದನ್ನು ಮೊದ್ಲು ಗಂಡಸರು ತಲೆಯಿಂದ ಕಿತ್ತಾಕಿ. ಈ ಭ್ರಮೆ ಗಂಡಸರಿಗೆ ಬೇಡ. ಅವರು ಇರಲಿ, ಬಿಡಲಿ ಬೆಳಗಾಗತ್ತೆ, ಹೆಣ್ಣಿನ ಬದುಕು ನಡೆಯತ್ತೆ ಎಂದು ಕುಸುಮಾ ಹೇಳಿದ್ದಾಳೆ.

ಬಿಗ್​ಬಾಸ್​ ಮನೆಯಲ್ಲಿ ಅಶ್ಲೀಲದ ಪರಮಾವಧಿ! ಸ್ಪರ್ಧಿಗಳ ರೊಮ್ಯಾನ್ಸ್​ ವಿಡಿಯೋ ನೋಡಿ ಉಫ್​ ಅಂದ ಫ್ಯಾನ್ಸ್​

ಈ ಸೀರಿಯಲ್​ ಕುರಿತು ಹೇಳುವುದಾದರೆ, ಸದ್ಯ ಕುಸುಮಾ ಮಗ ತಾಂಡವ್​ ಪತ್ನಿ, ಮಕ್ಕಳು ಕುಟುಂಬ ಎಲ್ಲರನ್ನೂ ಬಿಟ್ಟು ಕಟ್ಟಿಕೊಂಡ ಶ್ರೇಷ್ಠಾಳ ಜೊತೆ ಬದುಕು ಸಾಗಿಸುತ್ತಿದ್ದಾನೆ. ಏನೂ ಕಲಿಯದ ಕುಸುಮಾ ಮಗಳ ಶಾಲೆಗೇ ಸೇರಿಕೊಂಡಿದ್ದು, ಈಕೆಯನ್ನು ಕಂಡರೆ ಟೀಚರ್​ಗೆ  ಕೋಪ. ಅತ್ತ ಭಾಗ್ಯಳ ಮಗಳಿಗೂ ಅಮ್ಮ ಅಷ್ಟಕಷ್ಟೇ. ಅಮ್ಮನನ್ನು ಇನ್​ಸಲ್ಟ್​ ಮಾಡಿಸಿ ಶಾಲೆಯಿಂದ ಬಿಡಿಸುವ ಪ್ರಯತ್ನದಲ್ಲಿದ್ದ ಮಗಳು ಡ್ಯಾನ್ಸ್​ ಸ್ಪರ್ಧೆಗೆ ಅಮ್ಮನ ಹೆಸರು ಕೊಟ್ಟಿದ್ದಾಳೆ. ಚಿಕ್ಕಂದಿನಲ್ಲಿ ಕಲಿತ ಭರತನಾಟ್ಯ ಪ್ರದರ್ಶನ ಮಾಡಿ ಅತಿಥಿಯಾಗಿ ಬಂದ ಗಂಡನ ಕೈಯಲ್ಲಿಯೇ ಬಹುಮಾನ ಪಡೆದಿದ್ದಾಳೆ ಭಾಗ್ಯ. ಸೊಸೆಗೆ ಸದಾ ಸಪೋರ್ಟ್​ ಮಾಡುವ ಕುಸುಮಾಳಿಗೆ ಇದು ಹೆಮ್ಮೆ. ವೇದಿಕೆಯ ಮೇಲೇರಿ ಸೊಸೆಯ ಪರವಾಗಿ ಮಾತನಾಡುತ್ತಾ, ಹೆಣ್ಣಿನ ಮಹಿಮೆ ಹೇಳಿದ್ದಾಳೆ.

ಇದೇ ವೇಳೆ, ಸೊಸೆಯನ್ನು ತುಚ್ಛವಾಗಿ ಕಾಣುವ ಟೀಚರ್ ಕನ್ನಿಕಾ ಮುಖಭಂಗವಾಗುವಂತೆ ಕುಸುಮಾ ಮಾತನಾಡಿದ್ದಾಳೆ. ಭಾಗ್ಯಲಕ್ಷ್ಮಿಯ ಭರತನಾಟ್ಯ ಪ್ರದರ್ಶನ ನೋಡಿ ಮುಖಭಂಗವಾದ ಕನ್ನಿಕಾ ಮೇಡಂ ಬಹುಮಾನದ ಸಮಯದಲ್ಲಿ ಕಾರ್ಯಕ್ರಮದಿಂದ ಹೊರಕ್ಕೆ ಹೋಗಲು ನೋಡಿದಾಗ, ಅವಳನ್ನೂ ಬಿಡದ ಕುಸುಮಾತ,  ಯಾಕೆ ಮೇಡಂ ಎದ್ದು ಹೋಗಬೇಡಿ. ಸೊಸೆ ಓಡಿ ಹೋದಳು ಎಂದೆಲ್ಲಾ ತುಚ್ಛವಾಗಿ ಮಾತನಾಡಿದ್ರಲ್ಲ, ಈಗ ನೋಡಿ. ಈಕೆ ನನ್ನ ಸೊಸೆ, ಅವಳು ಎಲ್ಲಿಯೂ ಓಡಿ ಹೋಗಲ್ಲ.  ಏನೇ ಕಷ್ಟ ಬಂದ್ರೂ ಧೈರ್ಯವಾಗಿ ಎದುರಿಸುತ್ತಾಳೆ ಎನ್ನುತ್ತಲೇ ಹೆಣ್ಣಿನ ಶಕ್ತಿಯ ಬಗ್ಗೆ ಮಾತನಾಡಿದ್ದಾಳೆ. ಇದರ ಪ್ರೊಮೋ ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಚಪ್ಪಾಳೆಗಳ ಸುರಿಮಳೆಯೇ ಆಗಿದೆ. ಸೀರಿಯಲ್​ಗಳಲ್ಲಿ ಇಂಥ ಮಾತುಗಳು ಕೇಳಿಬಂದರೆ, ಅದರಿಂದ ಆಗುವ ಪ್ರಯೋಜನ ಅಷ್ಟಿಷ್ಟಲ್ಲ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಕುಸುಮಾಳಿಗೆ ಭೇಷ್​ ಭೇಷ್​ ಎನ್ನುತ್ತಿದ್ದಾರೆ. 

ರಾಮ್​ಗೆ ಹುಟ್ಟುಹಬ್ಬದ ಸಂಭ್ರಮ: ವಿಶೇಷ ವಿಡಿಯೋ ರಿಲೀಸ್​- ಸೀತಾರಾಮ ನಾಯಕನ ರಿಯಲ್​ ಸ್ಟೋರಿ ಇಲ್ಲಿದೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್‌
ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?