
ಭಾಷೆ ಯಾವುದೇ ಇರಲಿ, ಬಿಗ್‌ಬಾಸ್‌ನಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್. ಇಲ್ಲಿರುವ ಸ್ಪರ್ಧಿಗಳು ಬಿಗ್‌ಬಾಸ್ ಕೈಗೊಂಬೆಗಳು ಅಷ್ಟೇ... ಆದರೆ ನೋಡುಗರಿಗೆ ಎಲ್ಲವೂ ಅಚಾನಕ್ ಆಗಿ ಆಗಿದ್ದು ಎನ್ನಿಸುತ್ತದೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಇದಾಗಲೇ ಬೇರೆ ಬೇರೆ ಭಾಷೆಗಳ ಬಿಗ್ಬಾಸ್ಗೆ ಹೋಗಿ ಬಂದವರೂ ಇಲ್ಲಿರುವುದೆಲ್ಲವೂ ಸ್ಕ್ರಿಪ್ಟೆಡ್, ಜನರನ್ನು ಮರಳು ಮಾಡುವ ತಂತ್ರವಷ್ಟೇ. ಇದನ್ನು ಅರಿಯದ ಪ್ರೇಕ್ಷಕರು ತಮ್ಮ-ತಮ್ಮ ನಡುವೆ ಸುಖಾ ಸುಮ್ಮನೆ ಕಿತ್ತಾಡಿಕೊಳ್ತಾರೆ ಅಷ್ಟೇ ಎಂದು ಹೇಳಿದ್ದು ಇದೆ. ಆದರೆ ಈ ಗುಟ್ಟನ್ನು ಎಲ್ಲಿಯೂ ರಟ್ಟು ಮಾಡಬಾರದು ಎಂದು ಸ್ಪರ್ಧಿಗಳಿಗೆ ಮೊದಲೇ ಷರತ್ತು ಹಾಕಿರಲಾಗುತ್ತದೆ ಎನ್ನುವ ಮಾತೂ ಇದೆ. ಬಿಗ್‌ಬಾಸ್ ಮಾತ್ರವಲ್ಲದೇ ಡಾನ್ಸ್ ಷೋ ಸೇರಿದಂತೆ ಎಲ್ಲ ರೀತಿಯ ರಿಯಾಲಿಟಿ ಷೋಗಳದ್ದೂ ಇದೇ ಕಥೆ. ವೇದಿಕೆ ಮೇಲೆ ಅಳುವುದು, ಚಿಕ್ಕ ಮಕ್ಕಳು ದೊಡ್ಡವರಂತೆ ಡೈಲಾಗ್ ಹೇಳುವುದು ಇದ್ಯಾವುದೂ ಅಚಾನಕ್ ಅಲ್ಲ ಎನ್ನುವ ಮಾತಿದೆ.
ಇದೀಗ ಬಿಗ್‌ಬಾಸ್ ರಜತ್ ಕಿಶನ್ ಬಿಗ್‌ಬಾಸ್ ಸ್ಕ್ರಿಪ್ಟೆಡ್ ಹೌದೋ, ಅಲ್ಲವೊ, ಅಲ್ಲಿ ಹೇಗೆ ಜಗಳ ಕ್ರಿಯೇಟ್ ಮಾಡ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಅವರು, ಬಿಗ್‌ಬಾಸ್ ಆರಂಭವಾಗಿ 50 ದಿನಗಳ ಬಳಿಕ ಎಂಟ್ರಿ ಕೊಟ್ಟವರು. ಫಿನಾಲೆಯಲ್ಲಿ ಟಾಪ್ ತ್ರಿ ಕಂಟೆಸ್ಟೆಂಟ್ ಆಗಿ ಎಲಿಮಿನೇಟ್ ಆದವರು. ಎರಡನೇ ರನ್ನರ್ ಅಪ್ ಆದರು. ಇದೀಗ ಬಿಗ್‌ಬಾಸ್ ಮನೆಯ ಅತಿದೊಡ್ಡ ಸೀಕ್ರೇಟ್ ಒಂದನ್ನು ಅವರು ರಿವೀಲ್ ಮಾಡಿದ್ದಾರೆ.
ಬಿಗ್‌ಬಾಸ್ ಮನೆಯ ಹೇಳಬಾರದ ದೊಡ್ಡ ಗುಟ್ಟನ್ನು ಬಾಯ್ತಪ್ಪಿ ಹೇಳಿ ತಗ್ಲಾಕ್ಕೊಂಡ ವರ್ತೂರು ಸಂತೋಷ್! ವಿಡಿಯೋ ವೈರಲ್
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ಬಿಗ್‌ಬಾಸ್ ಸ್ಕ್ರಿಪ್ಟೆಡ್ ಎನ್ನುವವರಿಗೆ ನನ್ನದು ದೊಡ್ಡದೊಂದು ನಮಸ್ಕಾರ. ಇವೆಲ್ಲಾ ಸುಳ್ಳು. ಮೊದಲೇ ಎಲ್ಲಾ ಹೇಳಿಕೊಟ್ಟರೆ ಅಂಥ ಮಜ ಎಲ್ಲಿ ಬರುತ್ತೆ, ಎಲ್ಲವೂ ತಂತಾನಾಗಿಯೇ ಆಗುವಂಥದ್ದು. ಅದರಲ್ಲಿಯೂ ನನ್ನಂಥ ಸ್ಪರ್ಧಿಗಳಿಗೆ ಮೊದಲೇ ಹೇಳಿಕೊಟ್ಟು ಆಗುವುದು ಉಂಟಾ ಎಂದು ಪ್ರಶ್ನಿಸಿದ್ದಾರೆ. ನಮ್ಮಂಥವರನ್ನು ಒಟ್ಟಿಗೇ ಕೂಡಿ ಹಾಕಿ ಮೆಂಟೇನ್ ಮಾಡುವುದೇ ಕಷ್ಟ. ಇನ್ನು ಹೇಳಿ ಕೊಟ್ಟರೆ ನಾವು ಕೇಳ್ತಿವಾ ಎಂದಿದ್ದಾರೆ ರಜತ್. ಇನ್ನು ಸ್ವಲ್ಪ ದಿನ ಅಲ್ಲಿಯೇ ಇದ್ದರೆ ಹುಚ್ಚ ಆಗ್ತಿದ್ದೆ. ಸಿಗರೆಟ್ ಸೇವನೆ ಮಾಡುತ್ತಾ ಜಾಲಿಯಾಗಿ ಇದ್ದವನು ನಾನು. ಎಷ್ಟು ಬೇಡಿಕೊಂಡ್ರೂ ಸಿಗರೆಟ್ ಸುಲಭದಲ್ಲಿ ಸಿಕ್ತಾ ಇರಲಿಲ್ಲ. ಅವರವರ ಮುಖವನ್ನೇ ನೋಡಬೇಕು. ತಲೆ ಕೆಟ್ಟು ಹೋಗಿತ್ತು ಎಂದಿದ್ದಾರೆ ರಜತ್.
ಇದೇ ವೇಳೆ, ಬಿಗ್‌ಬಾಸ್ ಹೇಗೆ ಸ್ಪರ್ಧಿಗಳ ನಡುವೆ ಜಗಳ ಕ್ರಿಯೇಟ್ ಮಾಡುತ್ತಾರೆ ಎನ್ನುವ ಬಗ್ಗೆ ಹೇಳಿದ್ದಾರೆ. ಸ್ಕ್ರಿಪ್ಟೆಡ್ ಎನ್ನುವುದು ಸುಳ್ಳು. ಆದರೆ ಜಗಳ ಅಂತೂ ಅವರೇ ಕ್ರಿಯೇಟ್ ಮಾಡುತ್ತಾರೆ. ಯಾರಾದರೂ ಸ್ಪರ್ಧಿಗಳಿಗೆ ಪರಸ್ಪರ ಆಗುತ್ತಿಲ್ಲ ಎಂದಾದರೆ ಅವರೇ ಎದುರು ಬದುರು ಬರುವ ಟಾಸ್ಕ್ ಕೊಡುತ್ತಾರೆ. ಮೊದಲೇ ಉರಿಯುತ್ತಿರುವ ಸ್ಪರ್ಧಿಗಳು ಸಹಜವಾಗಿ ಈ ಟಾಸ್ಕ್ನಿಂದ ಗಲಾಟೆ ಮಾಡಿಕೊಳ್ಳುತ್ತಾರೆ. ಅಲ್ಲಿ ಗಲಾಟೆ ಸೃಷ್ಟಿಯಾಗುತ್ತದೆ. ಈ ಮಟ್ಟಿಗೆ ಅಷ್ಟೇ ಬಿಗ್‌ಬಾಸ್‌ನಲ್ಲಿ ನಡೆಯುವುದೇ ವಿನಾ ಹೇಳಿಕೊಟ್ಟು ಆಗುವಂಥದ್ದು ಏನೂ ಇಲ್ಲ. ಎಲ್ಲಾ ಸುಳ್ಳು ಎಂದಿದ್ದಾರೆ.
ಆ ರಾತ್ರಿ ಗೌತಮಿಗೆ ನಾನು ಆ ಮಾತು ಹೇಳ್ಬಾರ್ದಿತ್ತು, ಈಗ್ಲೂ ತುಂಬಾ ನೋವಿದೆ ಎಂದ ಬಿಗ್‌ಬಾಸ್ ಉಗ್ರಂ ಮಂಜು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.