Bigg Boss Ott ನಾವೇನು ಕೆಲಸ ಮಾಡೋಕೆ ಬಂದಿದೀವಾ? ಕತ್ತು ಕತ್ತರಿಸಿ ಹಾಕ್ತೀನಿ: ಜೈಲು ಸೇರಿದ ಸೋನು ಟಾಂಗ್

By Vaishnavi Chandrashekar  |  First Published Sep 3, 2022, 12:05 PM IST

ಕಳಪೆ ಸ್ಪರ್ಧಿ ಆಗಿದಕ್ಕೆ ಬಿಗ್ ಬಾಸ್‌ ಮತ್ತು ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡು ಸೋನು ಗೌಡ. ನೆಟ್ಟಿಗರು ಗರಂ


ಬಿಗ್ ಬಾಸ್ ಓಟಿಟಿ ಕನ್ನಡ ನಾಲ್ಕನೇ ವಾರ ಅತ್ಯತ್ತಮ ಸ್ಪರ್ಧಿಯಾಗಿ ಜಯಶ್ರೀ (Jayashree) ಪಡೆದರೆ ಕಳಪೆ ಪಟ್ಟವನ್ನು ಸೋನು ಶ್ರೀನಿವಾಸ್ ಗೌಡ ಕೈ ಸೇರಿದೆ. ಕಳಪೆ ಪಟ್ಟ ಕೊಡುವ ಸಮಯದಲ್ಲಿ ರಾಕೇಶ್ (Rakesh) ಕೊಟ್ಟ ಕಾರಣವನ್ನು ಸೋನು ಗಂಭೀರವಾಗಿ ಪರಿಗಣಿಸಿದ್ದಾರೆ. ಸೋನುಗೆ ತುಂಬಾನೇ ಕ್ಲೋಸ್ ಇರುವ ವ್ಯಕ್ತಿನೇ ರಾಕೇಶ್, ಸ್ವತಃ ರಾಕೇಶ್ ಈ ರೀತಿ ಹೇಳಿರುವುದು ಸರಿ ಅಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಸೋನು ಮಾತು

Tap to resize

Latest Videos

'ಇಷ್ಟು ಚೀಪ್‌ ಮೆಂಟಾಲಿಟಿ ನಾ? ನಾವು ಕೆಲಸ ಮಾಡಿಲ್ಲ ಅಂತ ಕಳಪೆ ಕೊಡ್ತಾರಾ?ಅವರು ಕೊಟ್ಟ ಕಾರಣನೇ ನನಗೆ ಇಷ್ಟ ಇಲ್ಲ. ನಾವು ಬಂದಿರುವುದು ಏನಕ್ಕೆ. ಏನೋ ತಪ್ಪು ಮಾಡ್ತೀವಿ ಓಕೆ ಆದರೆ ಕೆಲಸ ಮಾಡಿಲ್ಲ ಅಂತ ಟಾರ್ಗೇಟ್ ಮಾಡ್ತಾರೆ. ಥು ಅಸಹ್ಯ ಆಗುತ್ತೆ. ಗೇಮ್ ಆಡಿ ಸೋತವರನ್ನು ಹೊಗಳುತ್ತಾರಾ' ಎಂದು ಸೋನು (Sonu Srinivas Gowda) ಕಳಪೆ ಪಟ್ಟ ಪಡೆದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. 

'ಅದೇನೋ ಹೇಳ್ತಾನೆ expectation hurts ಅಂತ ಆ ರೀತಿ ಅಯ್ತು ಈಗ. ಈ ರೀತಿ ಮಾಡಿದ ಜನರ ಮುಂದೆ ನೋವು ತೋರಿಸಿಕೊಳ್ಳುವುದಕ್ಕೆ ಇಷ್ಟನೇ ಇಲ್ಲ. ಕೆಲಸ ಮಾಡಿಲ್ಲ ಅಂದ್ರೆ ಈ ಪರಿಸ್ಥಿತಿ ಬರುತ್ತೆ ನನಗೆ ಗೊತ್ತಿರಲಿಲ್ಲ. ಲೈಫಲ್ಲಿ ಬುದ್ಧಿ ಕಲಿತುಕೊಂಡು ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ತಿಳಿದುಕೊಂಡೆ. ನನಗೆ ಹೊಟ್ಟೆ ಹಸಿತು ನಾನು ಊಟ ಮಾಡ್ಕೊಂಡು ಬಂದೆ. ಇಲ್ಲಿಗೆ ಬರ್ತೀನಿ ಬರೋಲ್ಲ ಅಂತ ನಾನು ತಿನ್ನದೆ ಬರೋದು ಹೋಗೋದು ಮಾಡಿಲ್ಲ. ಏನೋ ಟಾಸ್ಕ್‌ ಮಾಡಿಲ್ಲ ಅಂದ್ರೆ ಹೇಳಬೇಕು ಒಬ್ಬರ ಜತೆ ಸರಿ ಮಾತನಾಡಿಲ್ಲ ಅಂತ ಹೇಳಿದ್ದು ಎಷ್ಟು ಸರಿ? '

BIGG BOSS OTT ಜಾತ್ರೆಯಲ್ಲಿ ಸ್ಕೂಲಲ್ಲಿ ಕಳ್ಳತನ ಮಾಡುತ್ತಿದ್ದೆ: ಸೋನು ಗೌಡ- ಸೋಮಣ್ಣ ಸ್ಟೋರಿ ವೈರಲ್!

'ಈ ವಾರ ಯಾರೂ ವೀಕ್ ಆಗಿ ಸ್ಪರ್ಧಿಸಿಲ್ವಾ? ಕಣ್ಣಿಗೆ ಕಾಣ್ಸಿಲ್ವಾ? ಬಿಗ್ ಬಾಸ್ ಮನೆ ಅಂದ್ರೆ ಪಾರ್ಟ್‌ ಆಫ್ ಗೇಮ್ ಅನ್ನೋದು ಒಂದು ಗೇಮ್‌ ಅದೆಲ್ಲಾ ಲೆಕ್ಕ ಮಾಡದೇ ಕಳಪೆ ಕೊಡುತ್ತಾರಾ? ಈ ವಾರ ಗೆದ್ದಿರುವುದು ನಮ್ಮ ಟೀಂ ನಮ್ಮ ಟೀಂ ಅವರೇ ನನ್ನನ್ನು ಕಳುಹಿಸಿದ್ದಾರೆ. ಅಸಹ್ಯ ಆಗಬೇಕು ಇವರಿಗೆಲ್ಲಾ ಥು. ಒಬ್ಬರು ನೊಂದುಕೊಳ್ಳುತ್ತಾರೆ ಅಳುತ್ತಾರೆ ಅಂತ ದೂರ ಬಾರದು. ಪ್ರಾಮಾಣಿಕವಾಗಿ ಕಾರಣ ಕೊಡಬೇಕು ಇಲ್ಲಿ ಯಾರೂ ಕೆಲಸ ಮಾಡದೇ ಇರುವುದು ಕಾಣಿಸಿಲ್ವಾ? ಬೇರೆ ಅವರು ಕ್ಯಾಪ್ಟನ್ ಆದಾಗ 3 ಗಂಟೆ ಮನೆ ಕ್ಲೀನ್ ಮಾಡಿದ್ದೀವಿ ಅದು ಯಾರಿಗೂ ಕಾಣಿಸಿಲ್ವಾ? ಮಾತನಾಡಬಾರದು ಅಂತ ಸುಮ್ಮನೆ...ಮಾತನಾಡಿ ಕೋಪ ಹೆಚ್ಚಾದರೆ ಸರಿ ಸರಿಯಾಗಿ ಉಗಿದಾಕ್ಬಿಡುತ್ತೀನಿ. ಏನೇ ಇದ್ದರೂ ಮಾತನಾಡಿಸುತ್ತಾರೆ ಖುಷಿಯಾಗಿರುತ್ತಾರೆ ಅವರಿಂದ ಪಾಠ ಕಲಿತೆ. ನನ್ನ ಲೀನಿಯನ್ಸ್‌ ಇಲ್ಲಿಗೆ ಇವತ್ತು ನನ್ನನ್ನು ನಿಲ್ಲಿಸಿದೆ ಅಂದ್ರೆ ನಂದೇ ತಪ್ಪು.'

Bigg boss Ott ಹುಡುಗರಿಗೆ ಪ್ರೋಟಿನ್‌ ಪೌಡರ್ ಕಳಿಸ್ತಾರೆ ಅಮ್ಮ ನನಗೆ ಹಾರ್ಲಿಕ್ಸ್‌ ಕಳುಹಿಸಿ: ಸೋನು ಗೌಡ

'ಸುದೀಪ್ ಸರ್‌ಗೂ ನಾನು ಇದೇ ಹೇಳಿದ್ದೀನಿ. ಕೆಲಸ ಮಾಡುವುದಕ್ಕೆ ನಾನು ಇಲ್ಲಿಗೆ ಬಂದಿಲ್ಲ. ನನ್ನ ಮನಸ್ಸಿಗೆ ಬಂದು ನಾನೇ ಕೆಲಸ ಮಾಡುತ್ತಿರುವುದು. ಅದೂ ಕೂಡ ಒಂದು ಕಾರಣ ಕೊಟ್ಟು ಕಳಪೆ ಕೊಟ್ಟಿದ್ದಾರೆ. ಬಿಗ್ ಬಾಸ್ ಹೇಳಿದ್ದಾರಾ ಕೆಲಸ ಮಾಡಿ ಅಂತ?ಯಾವಾನು ಹೇಳಿದ್ದಾನೆ ಕರ್ಕೊಂಡು ಬನ್ನಿ. ಒಂದು ದಿನ ಮೂರು ಗಂಟೆ ಕೆಲಸ ಮಾಡಿದ್ದೀನಿ ನಾನು ಅದು ಯಾರಿಗೂ ಕಾಣಿಸಿಲ್ಲ ಇವತ್ತು ವೋಟ್ ಮಾಡಿದಾಗ. ರೆಸ್ಪೆಕ್ಟ್‌ ಕೊಟ್ಟು ಮಾತನಾಡಿಲ್ಲ ಅಂದ್ರೆ ನಾನು ಒಪ್ಪಿಕೊಳ್ಳುತ್ತಿದ್ದೆ ಆದರೆ ಇಲ್ಲಿ ಕೆಲಸ ಮಾಡಿಲ್ಲ ಅಂದ್ರೆ ಕಳುಹಿಸಿರುವುದು ಸರಿ ಅಲ್ಲ. ಇವತ್ತಿನ ವೋಟಿಂಗ್‌ನ ನಾನು ಒಪ್ಪಿಕೊಂಡಿಲ್ಲ. ಈ ವಾರ ವಿನ್ ಆಗಿರುವ ಟೀಂ ನಾವು? ಸೋತಿರುವವರನ್ನು ಒಬ್ಬರೂ ವೋಟ್ ಮಾಡಿಲ್ಲ. ನನಗೆ ಇವತ್ತು ನನಗೆ ವೋಟ್ ಮಾಡಿದವರು ಎಲ್ಲಾ ಫೇಕ್. ಬಿಗ್ ಬಾಸ್ ಅವಕಾಶ ಸಿಗುವುದೇ ಅಪರೂಪ ಅದರಲ್ಲೂ ಜನರು ಇಲ್ಲಿಗೆ ಬಂದು ಈ ರೀತಿ ಮಾತನಾಡಿರುವುದು ಸರಿ ಅಲ್ಲ. ಫೇಕ್ ಅವರು. ಎಲ್ಲಾ ಮಾಡಿ ಸಮಾಧಾನ ಮಾಡಲು ಇಲ್ಲಿಗೆ ಬರುವವರ ಕತ್ತು ಕತ್ತರಿಸಬೇಕು ಅನ್ನೋಷ್ಟು ಕೋಪ ಬರುತ್ತಿದೆ.' ಎಂದಿದ್ದಾರೆ ಸೋನು ಗೌಡ.

click me!