ಸೋನು ಗೌಡ ಕಳ್ಳತನ ಮಾಡ್ತಾರಾ? ಸೋಮಣ್ಣ ಗ್ರೀಟಿಂಗ್ ಕೂಡ ಕದ್ದಿದ್ದಾರೆ.
ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 27ನೇ ದಿನಕ್ಕೆ ಕಾಲಿಟ್ಟಿದೆ. ಮನೆಯಿಂದ ಅರ್ಜುನ್ ರಮೇಶ್ (Arjun Ramesh), ಲೋಕೇಶ್, ಸ್ಫೂರ್ತಿ, ಕಿರಣ್ ಮತ್ತು ಉದಯ್ ಹೊರ ನಡೆದಿದ್ದಾರೆ. ಈ ವಾರ ಸೋಮಣ್ಣ ಮಾಚಿಮಾಡ (somanna machimada) ಕ್ಯಾಪ್ಟನ್ ಆಗಿ ಇಡೀ ವಾರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ ಎಂದು ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ. ಹಬ್ಬದ ಹ್ಯಾಂಗೋವರ್‌ನಿಂದ ಹೊರ ಬಂದಿರುವ ಸೋನು ಗೌಡ ಬಳಸಿರುವ ಆಭರಣಗಳನ್ನು ಎತ್ತಿಡಲು ಮುಂದಾದಗ ತಮ್ಮ ಜೀವನದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
ಸೋಮಣ್ಣ: ಏನಿದು ಆಭರಣಗಳನ್ನು ಬಾತ್‌ರೂಮಿಂದ ತರುತ್ತಿದ್ದೀರಾ?
ಸೋನು: ಹೌದು ಅಲ್ಲಿ ಮಾರಾಟ ಮಾಡುತ್ತಿದ್ದಾರೆ.20 ರೂಪಾಯಿಗೆ
ಸೋಮಣ್ಣ: 20 ರೂಪಾಯಿನೂ ಜಾಸ್ತಿನೇ ಆಯ್ತು....
ನಗು ನಗುತ್ತಲೇ ಸೋನು ಕಿವಿ ಓಲೆ, ಸರ, ಉಂಗುರ ಮತ್ತು ಬಳೆಗಳಿಗೆ ಎಷ್ಟು ಹಣ ಕೊಟ್ಟು ಖರೀದಿ ಮಾಡಿದ್ದರು ಎಂದು ಉತ್ತರ ಕೊಟ್ಟಿದ್ದಾರೆ.
Bigg boss Ott ಹುಡುಗರಿಗೆ ಪ್ರೋಟಿನ್ ಪೌಡರ್ ಕಳಿಸ್ತಾರೆ ಅಮ್ಮ ನನಗೆ ಹಾರ್ಲಿಕ್ಸ್ ಕಳುಹಿಸಿ: ಸೋನು ಗೌಡ
ಸೋನು: ನಾನು ಜಾತ್ರೆಗೆ ಹೋದಾಗ ಕದಿಯುತ್ತಿದ್ದೆ. ಸುಮ್ಮನೆ ಹೇಳಿದ್ದೀನಿ ನಾನು ಕದಿಯುತ್ತಿರಲಿಲ್ಲ.
ಸೋಮಣ್ಣ: ಜಾತ್ರೆಯಲ್ಲಿ ಕದಿಯುತ್ತಿದ್ರಾ ನೀವು? ಸುಮ್ಮನೆ ಸುಮ್ಮನೆ ಈ ರೀತಿ ಹೇಳಿಕೆ ನೀಡಬಾರದು
ಸೋನು: ಚಿಕ್ಕ ವಯಸ್ಸಿನಲ್ಲಿ ಎಲ್ಲೂ ಕದ್ದಿರುತ್ತಾರೆ. ಪೆನ್ಸಿಲ್ ಕದಿಯೋದು ಎಲ್ಲಾ. ನೀವೂ ಕದ್ದಿರುತ್ತೀರಾ ಅಲ್ವಾ?
ಚೈತ್ರಾ: ನಾನು ಯಾಕೆ ಕದಿಯಲಿ? ಇವಳು ಕದಿಯೋದು ಆಮೇಲೆ ಎಲ್ಲರಿಗೂ ಹೇಳ್ಕೊಂಡು ಬರೋದು.
ಸೋನು: ಸ್ಕೂಲ್‌ನಲ್ಲಿ ಫ್ರೆಂಡ್ಸ್ ಬಾಕ್ಸ್‌ನಲ್ಲಿ ನಾವು ರಬರ್ ಕದ್ಗೊಂಡು ಬರ್ತಿದ್ವಿ. ಹಲ್ಲಲ್ಲಿ ರಬರ್‌ನ ಜಾಸ್ತಿ ಕಚುತ್ತಿದ್ದೆ ಆಮೇಲೆ ಫ್ರೆಂಡ್ಸ್ ಹೊಸದು ತಂದಾಗ ನಾನು ಮನೆಗೆ ಎತ್ಕೊಂಡು ಹೋಗುತ್ತಿದ್ದೆ.
ಲವ್ ಟೈಮ್‌ವೇಸ್ಟ್, ಫ್ರೆಂಡ್‌ಶಿಪ್ ಮುಖ್ಯ: ಪ್ರೀತಿ ಪಾಠ ಮಾಡಿದ ಸೋನು ಶ್ರೀನಿವಾಸ್ ಗೌಡ
ಸೋನು ಗೌಡ (Sonu gowda) ತಮ್ಮ ಸ್ಕೂಲ್ ದಿನಗಳನ್ನು ನೆನಪಿಸಿಕೊಳ್ಳುವಾಗ ಸೋಮಣ್ಣ ಕೂಡ ಕಳ್ಳತನ ಮಾಡಿರುವ ಘಟನೆಯನ್ನು ವಿವರಿಸುತ್ತಾರೆ. 'ಮೈಸೂರಿನ (Mysore) ಕಾಳಿದಾಸ ರಸ್ತೆಯಲ್ಲಿ ಒಂದು ಗಿಫ್ಟ್ ಅಂಗಡಿ ಇತ್ತು ಅಲ್ಲಿ ನಾನೊಂದು ಟೈಂ ಎತ್ತು ಬಿಟ್ಟಿದೆ. ಸಣ್ಣ ಸಣ್ಣ ಸೈಜ್‌ನಲ್ಲಿ ಗ್ರೀಟಿಂಗ್ ಕಾರ್ಡ್‌ಗಳು ಬರುತ್ತಿತ್ತು. ಅಗ ನನ್ನ ಕೈಯಲ್ಲಿ ಕಮಾಯಿ ಇರಲಿಲ್ಲ ಅದಿಕ್ಕೆ ಕಳ್ಳತನ ಮಾಡಿದ್ದೆ' ಎಂದು ಸೋಮಣ್ಣ ಹೇಳಿದ್ದಾರೆ.
ಸೋನು ಗೌಡ ಕನಸು:
'ಬಿಬಿ ಮನೆಯಲ್ಲಿ ನಾನು ಎಲ್ಲಿ ಮಲಗಿದ್ದರೂ ಕನಸು ಬರುವುದಿಲ್ಲ ಆದರೆ ಒಂದು ಕಡೆ ಮಾತ್ರ ಕನಸು ಬರುತ್ತದೆ. ಯಾರೂ ಬೇಸರ ಮಾಡಿಕೊಳ್ಳಬೇಡಿ. ನನ್ನ ಕನಸಿನಲ್ಲಿ ಅಕ್ಷತಾ (Akshatha Elimination) ಎಲಿಮಿನೆಟ್ ಅಗಿದ್ದಳು ಅವಳನ್ನು ಬಿಟ್ಟು ನಾನು ರಾಖಿ ಇರುವುದಕ್ಕೆ ಆಗೋಲ್ಲ ಅಂತ ಹೇಳಿ ನಾವೂ ಕೂಡ ಮನೆಯಿಂದ ಹೊರಗೆ ಹೋಗಿದ್ವಿ. ಅಕ್ಷತಾ ಮನೆಗೆ ಹೋಗಿರಲಿಲ್ಲ ನಾನು ಆಕೆಯನ್ನು ನಮ್ಮ ಮನೆಗೆ ಕರೆದುಕೊಂಡು ಹೋದ್ವಿ. ಅಲ್ಲಿ ಅವಳ ಬಳಿ ಫೋನ್ ಇರಲಿಲ್ಲ ಅಂತ ನನ್ನ ಫೋನ್‌ಲ್ಲಿದ್ದ ಆಕೆ ಸ್ನೇಹಿತೆಗೆ ಕರೆ ಮಾಡಿ ಮಾತನಾಡಿಸಿದ್ದು. ಒಂದೊಂದು ಸಲ ಒಂದೊಂದು ಕನಸು ಬರುತ್ತದೆ. ನನ್ನ ಕೈಗೆ ಏನೋ ಆಗಿತ್ತು ಪೂರ್ತಿ ರಕ್ತ ಗಟ್ಟಿತ್ತು. ಏನ್ ಮಾಡಿದ್ದರೂ ಕೈ ಆಡಿಸುವುದಕ್ಕೆ ಆಗುತ್ತಿರಲಿಲ್ಲ ಅಷ್ಟು ನೋವಾಗುತ್ತಿತ್ತು. ಈ ಕನಸು ಪೂರ್ತಿ ಆಗಿರಲಿಲ್ಲ ಇದೇ ಕನಸು ಬರಲಿ ಅಂತ ಮತ್ತೆ ಮಲ್ಕೊಂಡೆ ಆದರೆ ಈ ಕನಸು ಬರಲಿಲ್ಲ' ಎಂದಿದ್ದಾರೆ ಸೋನು ಗೌಡ.