ಇದೀಗ ಒಟಿಟಿಯಲ್ಲಿ ಬಿಗ್‌ಬಾಸ್ ಮೊದಲ ಸೀಸನ್ ಪ್ರಸಾರವಾಗುತ್ತಿದೆ. ಯಾರೋ ಕೆಲವರು ಆ ಆ್ಯಪ್ ಇರೋರು ಈ ರಿಯಾಲಿಟಿ ಶೋನ ಫಾಲೋ ಮಾಡುತ್ತಿರಬಹುದು. ಆದರೆ, ಮೊದ ಮೊದಲು ಪ್ರಸಾರವಾದ ಬಿಗ್‌ಬಾಸ್‌ನಷ್ಟು ಯಾವುದೂ ಜನಪ್ರಿಯವಾಗಲಿಲ್ಲ. ಅದರಲ್ಲೂ ಮೂರನೇ ಸೀಸನ್ ಇತ್ತಲ್ಲ. ಬಹುಶಃ ಕಿಚ್ಚಿನಿಗೇ ಮರೆಯಲಾಗದ ಸೀಸನ್ ಇರಬಹುದು!
ಇವತ್ತು ಕಿಚಿ ಸುದೀಪ್‌ಗೆ ಹುಟ್ಟು ಹಬ್ಬದ ಸಂಭ್ರಮ. ಬಿಗ್ ಬಾಸ್ ನಿರೂಪಣೆ ಮೂಲಕ ಎಲ್ಲರ ಮನ, ಮನೆಯಲ್ಲಿಯೂ ವಿಶೇಷ ಜಾಗ ಪಡೆದ ಸುದೀಪ್ ಒಮ್ಮೆ ಬಿಗ್ ಬಾಸ್ ಸ್ಪರ್ಧಿಯೊಬ್ಬರು ತಮ್ಮ ಲೆಕ್ಕಚಾರವನ್ನು ಹೇಗೆ ತಲೆ ಕೆಳಗು ಮಾಡಿದ್ದರು ಎಂಬುದನ್ನು ಹಂಚಿಕೊಂಡಿದ್ದರು. ಅದರ ಮೆಲಕು ಇಲ್ಲಿದೆ.
ಬಿಗ್‌ಬಾಸ್ ಸೀಸನ್ 1 ಆರಂಭವಾದಾಗ ಮನೆಮಂದಿ ಎಲ್ಲೂ ಕೂತು ನೋಡಿದ್ದಾರೆ. ನಿಜವಾದ ಮನೋರಂಜನೆ (Entertainment) ಕೊಡುವಲ್ಲಿ ಸ್ಪರ್ಧಿಗಳು ಸಾಕಷ್ಟು ಎಫರ್ಟ್ಸ್ ಹಾಕಿದ್ದೂ ಸುಳ್ಳಲ್ಲ. ವಿಜಯ್ ರಾಘವೇಂದ್ರ, ಅರುಣ್ ಸಾಗರ್, ಅನುಶ್ರೀ..ಹೀಗೆ ಮೊದ ಮೊದಲು ಬಂದ ಬಿಗ್ ಬಾಸ್ ಸ್ಪರ್ಧಿಗಳು (Bigg Boss Contestents) ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವುದಂತೂ ಹೌದು. ಸೀಸನ್ ಬದಲಾಗಲಿ, ಅದು ಪ್ರಸಾರವಾಗಿ ಪ್ಲ್ಯಾಟ್‌ಫಾರ್ಮ್ ಬದಲಾಗಲಿ. ಇದರ ನಿರೂಪಕರು ಮಾತ್ರ ಇನ್ನೂ ಬದಲಾಗೋ ಸೂಚನೆ ಇಲ್ಲ. ಒನ್ ಆ್ಯಂಡ್ ಒನ್ ಸ್ಯಾಂಡಲ್‌ವುಡ್ ಬಾದ್‌ಶಾನಿಗೆ ಕನ್ನಡದ ವೀಕ್ಷಕರು ಪೂರ್ತಿ ಸೆಟ್ ಆಗಿ ಬಿಟ್ಟಿದ್ದಾರೆ.
ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್‌ನಲ್ಲಿ ಅರಳಿತು ಕಿಚ್ಚ ಸುದೀಪ್ ಮರಳು ಶಿಲ್ಪ
ಮೊದಲ ಸೀಸನ್‌ನಿಂದ ಇಲ್ಲೀವರೆಗೂ ಹಲವು ಸ್ಪರ್ಧಿಗಳು ಆ ಅರಮನೆಯಂತ ಸೆರೆಮನೆಯನ್ನು ಹೊಕ್ಕಿ ಹೋಗಿದ್ದಾರೆ. ಅದರಲ್ಲಿ ಕೆಲವರು ಕಿಚ್ಚನ ಮೇಲೂ ಪ್ರಭಾವ ಬೀರುವಂತೆ ಮಾಡಿದ್ದು ಸುಳ್ಳಲ್ಲ. ಕಾರ್ಯಕ್ರಮದಲ್ಲಿ ಇನ್ವಾಲ್ವ್ ಆದಾಗ ಸುದೀಪ್ ಸಹ ಸಹಜವಾಗಿಯೇ ಎಂಜಾಯ್ ಮಾಡಿರುತ್ತಾರೆ. ಎಲ್ಲರನ್ನೂ ಒಂದೇ ರೀತಿ ಪ್ರೀತಿ, ವಿಶ್ವಾಸದಿಂದಲೇ (Confident) ಮಾತನಾಡಿಸುತ್ತಾರೆ. ಪ್ರತಿಭಾನ್ವಿತರಿಗೆ ಸಾಧ್ಯವಾದಷ್ಟು ಪ್ರೋತ್ಸಾಹಿಸುತ್ತಾರೆ. ಆದರೆ, ಒಬ್ಬ ಅಪರೂಪದ ವ್ಯಕ್ತಿ ಮಾತ್ರ ಕಿಚ್ಚ ಸುದೀಪ್ ಅವರ ಲೆಕ್ಕಾಚಾರವನ್ನೇ ತಲೆ ಕೆಳಗು ಮಾಡಿದ್ದಾರೆ. ಅವರನ್ನು ಮಾತ್ರ ಮರೆಯಲಾಗೋಲ್ಲ ಅಂತ ಹಿಂದೊಮ್ಮೆ ಕಿಚ್ಚ ಹೇಳಿ ಕೊಂಡಿದ್ದರು. ಅಷ್ಟಕ್ಕೂ ಯಾರಪ್ಪ ಆ ಅಪರೂಪದ ವ್ಯಕ್ತಿ?
ಮತ್ಯಾರೂ ಅಲ್ಲ ಹುಚ್ಚ ವೆಂಕಟ್! ಇವರ ಬಗ್ಗೆ ಎಲ್ಲರಿಗೂ ಗೊತ್ತು ಬಿಡಿ. ಆದರೆ, ಸುದೀಪ್ ಒಮ್ಮೆ ಈ ವ್ಯಕ್ತಿ ಬಗ್ಗೆ ಮಾತನಾಡಿದ್ದರು. 'ಈ ಸ್ಪರ್ಧಿ ಹೀಗೇ ಆಡ್ತಾರೆ ಅಂತ ಅಂದು ಕೊಂಡೇ ಇರಲಿಲ್ಲ. ಇವತ್ತು ಬಹಳ ಇಂಪ್ರೆಸ್ ಮಾಡಿದ ವ್ಯಕ್ತಿ ನಾಳೆ ಸಂಪೂರ್ಣ ಬದಲಾಗಿರಬಹುದು. ಸೀಸನ್ 3 ಹೊತ್ತಿಗೆ ಬೆಳಗ್ಗೆ ಕಾರಿಂದಿಳೀತಾ ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಜೊತೆಗೆ ಈ ಬಾರಿ ಬಹುಶಃ ವೆಂಕಟ್ ಗೆಲ್ತಾರೆ ಅನಿಸುತ್ತೆ ಅಂದಿದ್ದೆ. ಅವತ್ತೇ ಹುಚ್ಚ ವೆಂಕಟ್ ಮತ್ತೊಬ್ಬ ಸ್ಪರ್ಧಿ ಮೇಲೆ ಕೈ ಎತ್ತಿದ್ದರು. ಆ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ನಡೆದರು. ಮತ್ತೆ ಎಂಟ್ರಿ ಕೊಟ್ಟಾಗ ಆ ವಿಶ್ವಾಸ ವೆಂಕಟ್ ಮೇಲೆ ಉಳಿದಿರಲಿಲ್ಲ. ಅವರು ಗೆದ್ದಿದ್ದರೆ ಜನರಿಗೆ ಬಹಳ ಇಷ್ಟ ಆಗ್ತಿತ್ತು. ಜನ ಹೈಯೆಸ್ಟ್ ಓಟು ಕೊಟ್ಟಿದ್ದರು. ಹೀಗೆ ನಾವು ಇವರೇ ವಿನ್ನಿಂಗ್ ಕ್ಯಾಂಡಿಡೇಟ್ (Winning Candidate) ಅಂತ ಹೇಳುವುದೂ ಕಷ್ಟ,' ಎಂದಿದ್ದರು ಒಮ್ಮೆ. ಅಲ್ಲಿಗೆ ಸುದೀಪ್ ಲೆಕ್ಕಾಚಾರವನ್ನೂ ತಲೆ ಕೆಳಗು ಮಾಡಿದ ಕೀರ್ತಿ ನಮ್ ಹುಚ್ಚ ವೆಂಕಟ್‌ಗೇ ಸಲ್ಲಬೇಕು.
ಬಿಗ್‌ಬಾಸ್ ಮನೆಯಲ್ಲಿ ವಾಸ್ತು ದೋಷ; ಚೆಕ್ ಮಾಡಿಸಿ ಎಂದು ನೆಟ್ಟಿಗರ ಸಲಹೆ
ಕೇವಲ ಸುದೀಪ್‌ಗೆ ಮಾತ್ರವಲ್ಲ, ವೀಕ್ಷಕರಿಗೂ ಹುಚ್ಚು ವೆಂಕಟ್ ಅಂದ್ರೆ ಅವರು ಬಿಗ್ ಬಾಸ್ ಮನೆಯಲ್ಲಿ ಕಳೆದ ದಿನಗಳು ನೆನಪಾಗುತ್ತೆ. ಸದಾ ಒಂದಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ಈ ವೆಂಕಟ್ ಮೇಲೆ ಜನರಿಗೆ ವಿಪರೀತ ಕುತೂಹಲ. ಸಹಜವಾಗಿಯೇ ಏನೋ ಗಿಮಿಕ್ ಮಾಡಿ ಬಿಗ್ ಬಾಸ್ ಸ್ಪರ್ಧೆಯನ್ನೂ ಗೆಲ್ಲಬಹುದೆಂದು ಜನರೂ ಭಾವಿಸಿದ್ದರು. ಆದರೆ, ಸುದೀಪ್ ಲೆಕ್ಕಚಾರವನ್ನೇ ತಲೆಕೆಳಗು ಮಾಡಿದ್ದಾನೆಂದ ಮೇಲೆ, ಇನ್ನು ವೀಕ್ಷಕರ ಗೆಸ್ ಸರಿ ಇರುತ್ತಾ?