ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್‌ನನ್ನು ಪಡೆದುಕೊಂಡಿದ್ದಾರೆ...
ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಸೀಸನ್ 5ಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಮ್ಯೂಸಿಕಲಿ/ಟಿಕ್‌ಟಾಕ್ ಸ್ಟಾರ್ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಫೇಮಸ್. ಇಂಗ್ಲೀಷ್ ಹಾಡಿಗೆ ಡ್ಯಾನ್ಸ್ ಮಾಡುತ್ತಾ, ತಮ್ಮ ಮುದ್ದು ಸಾಕು ನಾಯಿಗಳ ತುಂಟಾಟದ ವಿಡಿಯೋ ಶೇರ್ ಮಾಡುತ್ತಾ ಜನರ ಗಮನ ಸೆಳೆದಿದ್ದ ನಟಿ ಸದ್ಯ ಏರ್ಪೋರ್ಟ್ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದಾರೆ.
ನೆಟ್ಟಿಗರ ಗಮನ ಸೆಳೆದ ಗೃಹಿಣಿ ಬಿಗ್ ಬಾಸ್ ನಿವೇದಿತಾ ಗೌಡ ಪೋಟೋ!
ಸೆಲೆಬ್ರಿಟಿಗಳ ನೆಚ್ಚಿನ ಆಪ್ ಆಗಿರುವ ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ 1 ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದ್ದಾರೆ. ಯಾವ ಸ್ಟಾರ್ ನಟಿಯರಿಗಿಂತಲೂ ನಾನು ಕಡಿಮೆ ಇಲ್ಲ ಎಂದು ಪ್ರೂವ್ ಮಾಡಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ನಿವೇದಿತಾ ಅಲ್ಲಿದ್ದ ಪ್ರತಿ ಸ್ಪರ್ಧಿ ರ್ಯಾಪರ್ ಚಂದನ್ ಶೆಟ್ಟಿಯನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೆಲವೊಮ್ಮೆ ಇಬ್ಬರು ಒಟ್ಟಾಗಿ ಹೆಜ್ಜೆ ಹಾಕಿರುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ವೈರಲ್ ನಿವೇದಿತಾ-ಚಂದನ್:
ನಿವೇದಿತಾ ಹಾಗೂ ಚಂದನ್ ಏನೇ ಮಾಡಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತದೆ ಅದರಲ್ಲೂ ಮೈಸೂರು ಯುವ ದಸರಾದಲ್ಲಿ ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದ ರೀತಿಯಿಂದ ಈಗಲೂ ಇಬ್ಬರು ಅನೇಕ ವಿಚಾರಗಳಿಗೆ ಟ್ರೋಲ್ ಆಗುತ್ತಿರುತ್ತಾರೆ.
ನಿವಿ ಟಿಕ್‌ಟಾಕ್ ಮಾಡಿದ್ರೆ, ಚಂದನ್ ಮನೆ ಕ್ಲೀನ್ ಮಾಡುತ್ತಿದ್ದಾರೆ; ವಿಡಿಯೋ ವೈರಲ್!
ಕೆಲ ದಿನಗಳ ಹಿಂದೆ ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದ ಅನುಷ್ಕಾ ಶರ್ಮಾ ಬ್ಲಾಕ್ ಟಾಪ್ ವಿತ್ ವೈಟ್ ಪುಲ್ಕ ಡಾಟ್ ಡಿಸೈನ್ ಇರುವ ಡ್ರೆಸ್ ಧರಿಸಿದ್ದರು, ಅದೇ ರೀತಿಯ ಬಟ್ಟೆ ಧರಿಸಿ ಡ್ಯಾನ್ಸ್ ವಿಡಿಯೋ ಮಾಡಿರುವ ನಿವೇದಿತಾ ಸದ್ಯದಲ್ಲೆ ಗುಡ್ ನ್ಯೂಡ್ ಕೊಡಲಿದ್ದಾರೆ ಎಂದು ಟ್ರೋಲ್ ಪೇಜ್‌ಗಳು ಕಾಲು ಎಳೆಯುತ್ತಿದ್ದಾರೆ.
ಒಟ್ಟಿನಲ್ಲಿ ನಿವೇದಿತಾ ತಮ್ಮ 1 ಮಿಲಿಯನ್ ವೀಕ್ಷಕರನ್ನು ಮನರಂಜಿಸಲು ಏನಾದರು ವಿಭಿನ್ನ ಪ್ರಯತ್ನ ಮಾಡುತ್ತಿರುತ್ತಾರೆ.