ನಟ ಸುಂದರ್ ಹಾಗೂ ವೀಣಾ ದಂಪತಿ ಹೊಸ ಮನೆ ಕಟ್ಟಿದ್ದಾರೆ. ಸರಳವಾದ ಗೃಹಪ್ರವೇಶ ಸಂಭ್ರಮದಲ್ಲಿ ಆಪ್ತ ನಟ-ನಟಿಯರು ಭಾಗಿಯಾಗಿದ್ದರು.
ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿರುವ ತಾರಾ ದಂಪತಿಗಳಾದ ಸುಂದರ್ ಹಾಗೂ ವೀಣಾ ಸುಂದರ್ ಇತ್ತೀಚಿಗೆ ತಮ್ಮ ನೂತನವಾಗಿ ಗೃಹ ಪ್ರವೇಶ ಮಾಡಿದ್ದಾರೆ. ಫೇಸ್ ಬುಕ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡುವ ಮೂಲಕ ಅವರ ಸಂತೋಷವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
ಟಿಕ್‌ಟಾಕ್ ಸ್ಟಾರ್ ದಿಲೀಪ್ ನೃತ್ಯಕ್ಕೆ ಶ್ರುತಿ ನಾಯ್ಡು ಫಿದಾ; ನೃತ್ಯ ಸಂಯೋಜಿಸಲು ಅವಕಾಶ!
ದಶಕಗಳಿಂದ ರಂಗಭೂಮಿ,ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅಭಿನಯಿಸುತ್ತಿರುವ ಈ ತಾರಾ ದಂಪತಿಗಳ ಕೊಡುಗೆ ಚಿತ್ರರಂಗಕ್ಕೆ ಅಪಾರವಿದೆ. ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ವೀಣಾ ಇಂದು ಬಹುಬೇಡಿಕೆಯ ಪೋಷಕ ನಟಿಯಾಗಿ ಅಭಿನಯಿಸುತ್ತಿದ್ದಾರೆ ಹಾಗೂ ಸುಂದರ್ ಧಾರಾವಾಹಿಗಳಲ್ಲಿ ಅಭಿನಯಿಸುತ್ತಾ ತಮ್ಮ 'ಸುವ್ವಿ' ಹೆಸರಿನ ನಾಟಕ ತಂಡವನ್ನು ನೋಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ಅಮೇರಿಕಾ, ಸಿಂಗಪೂರ್ ಸೇರಿದಂತೆ ಅನೇಕ ದೇಶಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ.
ಕಲಾ ದಂಪತಿಗಳು ಒಟ್ಟಾಗಿ ಸುಮಾರು 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದ ನಂಟು ಇರುವ ಕಾರಣ ತಂತ್ರಜ್ಞರು, ಸಹ ಕಲಾವಿದುರ ಹಾಗೂ ನಿರ್ದೇಶಕರು ಭಾಗಿಯಾಗಿದ್ದರು. ಸದ್ಯಕ್ಕೆ 'ಬ್ರಹ್ಮಗಂಟು' ಹಾಗೂ 'ಬಯಸದೆ ಬಳಿ ಬಂದೆ' ಧಾರಾವಾಹಿಗೆ ಸುಂದರ್ ಸಂಭಾಷಣೆ ಬರೆಯುತ್ತಿದ್ದಾರೆ.