ನಿನ್ನ ಕರಿಮಣಿ ಮಾಲೀಕನೂ ಅವ್ನೇ ಆದ್ರೆ ಚಂದನ್​ ಕಥೆಯೇನಮ್ಮಾ? ನಿವೇದಿತಾಗೆ ಕಾಲೆಳೀತಿರೋ ಫ್ಯಾನ್ಸ್​!

By Suvarna News  |  First Published Apr 8, 2024, 12:17 PM IST

ಕರಿಮಣಿ ಮಾಲಿಕ ಹಾಡಿಗೆ ಬೆಳ್ಳುಳ್ಳಿ ಕಬಾಬ್​ ಮಾಲಿಕ ಚಂದ್ರು ಜೊತೆ ರೀಲ್ಸ್​ ಮಾಡಿದ್ದಾರೆ ಬಿಗ್​ಬಾಸ್​​ ಖ್ಯಾತಿಯ ನಿವೇದಿತಾ ಗೌಡ. ನೆಟ್ಟಿಗರು ಏನೆಲ್ಲಾ ಹೇಳಿದ್ರು ಕೇಳಿ...
 


ಕಳೆದ 3-4 ತಿಂಗಳುಗಳಿಂದ  ಸೋಷಿಯಲ್​ ಮೀಡಿಯಾದಲ್ಲಿ ಕರಿಮಣಿ ಮಾಲೀಕನದ್ದೇ ಹವಾ. ಏನಿಲ್ಲ... ಏನಿಲ್ಲ... ಕರಿಮಣಿ ಮಾಲಿಕ ನೀನಲ್ಲ ಎಂದು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ರೀಲ್ಸ್​ ಮಾಡುತ್ತಿದ್ದಾರೆ. ಉಪೇಂದ್ರ ನಾಯಕನಾಗಿ ನಟಿಸಿದ್ದ 'ಉಪೇಂದ್ರ' ಸಿನಿಮಾದ ಹಾಡುಗಳು ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಒಬ್ಬೊಬ್ಬ ನಾಯಕಿಗೆ ಒಂದೊಂದು ಹಾಡನ್ನು ಇಡಲಾಗಿತ್ತು. ಅದರಲ್ಲಿ ಉಪ್ಪಿ ಹಾಗೂ ಪ್ರೇಮಗೆ ಅಂತ ಕಂಪೋಸ್ ಮಾಡಿದ್ದ ಹಾಡೇ 'ಏನಿಲ್ಲ.. ಏನಿಲ್ಲ..'. ಆಗತಾನೇ 'ಎ' ಸಿನಿಮಾಗೆ ಭರ್ಜರಿ ಮ್ಯೂಸಿಕ್ ಕೊಟ್ಟು ಗೆದ್ದಿದ್ದ ಗುರುಕಿರಣ್ 'ಉಪೇಂದ್ರ'ಗೂ ಮಸ್ತ್ ಟ್ಯೂನ್ ಹಾಕಿದ್ದರು. ಇದೀಗ ಮತ್ತೆ 25 ವರ್ಷಗಳ ಬಳಿಕ ಹಲ್​ಚಲ್​ ಸೃಷ್ಟಿಸುತ್ತಿದೆ. 

ಅದರ ಜೊತೆಗೆನೇ 'ಬೆಳ್ಳುಳ್ಳಿ ಕಬಾಬ್' ಎನ್ನುವುದು ಇನ್ನೊಂದೆಡೆ ಸಾಕಷ್ಟು ವೈರಲ್​ ಆಗುತ್ತಿದೆ.  ಚಂದ್ರು ಎನ್ನುವವರು ಯೂಟ್ಯೂಬ್ ಚಾನಲ್‌ನಲ್ಲಿ ಬೆಳ್ಳುಳ್ಳಿ ಕಬಾಬ್ ರೆಸಿಪಿ ವಿಡಿಯೋ ಮಾಡಿದ್ದರು. ರಾಹುಲ್ ಎನ್ನುವ ತಮ್ಮ ಸಹಾಯಕನನ್ನು ಅವರು ಕರೆದಿದ್ದ ರೀತಿ ಸಖತ್ ವೈರಲ್ ಆಗಿತ್ತು. ರಾವುಲ್ಲಾ ಎಂದು ಆಡುಭಾಷೆಯಲ್ಲಿ ಅವರು ಕರೆದಿದ್ದು ಟ್ರೆಂಡ್ ಹುಟ್ಟುಹಾಕಿದೆ. ಇಂಥ ವೈರಲ್​ ಕಂಟೆಂಟ್​ ಸಿಕ್ಕ ಮೇಲೆ ರೀಲ್ಸ್​ ಮಾಡುವವರು ಸುಮ್ಮನೆ ಬಿಡುತ್ತಾರೆಯೆ? ಅದರಲ್ಲಿಯೂ ನಾನು ನಂದಿನಿ ಖ್ಯಾತಿಯ ವಿಕ್ರಮ್​ (ವಿಕಿಪಿಡಿಯಾ ಎಂದೇ ಫೇಮಸ್​ ಆಗಿದ್ದಾರೆ) ಕರಿಮಣಿ ಮಾಲಿಕ ಹಾಗೂ ಬೆಳ್ಳುಳ್ಳಿ ಕಬಾಬ್​ ಎರಡನ್ನೂ ಸೇರಿಸಿ ಒಂದು ರೀಲ್ಸ್​  ಮಾಡಿದ್ದರು.  ಸ್ಪೆಷಲ್ ಸ್ಕಿಟ್ ತಯಾರಿಸಿದ್ದರು.  ಉಪೇಂದ್ರ ಬರೆದ ಕರಿಮಣಿ ಮಾಲಿಕ ಹಾಡಿಗೆ ಗುರು ಕಿರಣ ಸಂಗೀತ ಕೊಟ್ಟಿದ್ದಾರೆ. ಈ ಹಾಡಿನ ಸಾಲುಗಳನ್ನು ವಿಕ್ಕಿ ಮತ್ತವರ ತಂಡ ಸ್ಕಿಟ್​ ಜೊತೆ  ಡೈಲಾಗ್ ಮಾಡಿಕೊಂಡಿದೆ.  ಕರಿಮಣಿ ಮಾಲೀಕಾ ನೀನಲ್ಲ. ನನ್ನ ಈ ಕರಿಮಣಿ ಮಾಲಿಕ ರಾವುಲ್ಲಾ ಎಂದು ತಮಾಷೆಯಾಗಿ ತೋರಿಸಿದ್ದರು. ಬೆಳ್ಳುಳ್ಳಿ ಕಬಾಬ್​ ಹಿಡಿದುಕೊಂಡು ಬಂದ ಯುವಕನನ್ನು ತೋರಿಸುತ್ತಾ, ಆತನೇ ರಾವುಲ್ಲಾ ಎಂದಿದ್ದರು.

Tap to resize

Latest Videos

ತುಕಾಲಿ ಸಂತೋಷ್​ರ ಯಾರಿಗೂ ತಿಳಿಯದ ಎರಡು ಸೀಕ್ರೆಟ್​ಗಳನ್ನು ನಮ್ರತಾ ರಿವೀಲ್​ ಮಾಡೇ ಬಿಟ್ರು!

ಇದೀಗ ಬಿಗ್​ಬಾಸ್​ ಖ್ಯಾತಿಯ ನಟಿ ನಿವೇದಿತಾ ಗೌಡ ಕರಿಮಣಿ ಮಾಲಿಕ ನೀನಲ್ಲ, ಕರಿಮಣಿ ಮಾಲಿಕ ರಾವುಲ್ಲಾ ಎನ್ನುವ ರೀಲ್ಸ್​ಗೆ ಬೆಳ್ಳುಳ್ಳಿ ಕಬಾಬ್​ ಮಾಲಿಕ ಚಂದ್ರು ಮತ್ತಿತರ ಜೊತೆ ರೀಲ್ಸ್ ಮಾಡಿದ್ದಾರೆ. ಇದನ್ನು ಕೇಳಿ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ನಿನ್ನೆ ಕರಿಮಣಿ ಮಾಲಿಕನೂ ರಾವುಲ್ಲಾನೇ ಆದ್ರೆ ಪತಿ ಚಂದನ್​ ಶೆಟ್ಟಿ ಕಥೆಯೇನಮ್ಮಾ ಎಂದು ಪ್ರಶ್ನಿಸುತ್ತಿದ್ದಾರೆ. 

ಅಂದಹಾಗೆ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ನಿವೇದಿತಾ ಕನ್ನಡಕ್ಕೆ ನೆಟ್ಟಿಗರು ಕಿಡಿಕಿಡಿ: 'ನಾಟಕ ಏಕೆ? ಕರ್ನಾಟಕದಲ್ಲಿ ಏಕೆ ಬಾಳ್ತಿದ್ದಿ' ಕೇಳ್ತಿದ್ದಾರೆ ನೆಟ್ಟಿಗರು
 

click me!