ಬ್ರೇಕಪ್ ಮಾಡ್ಕೊಂಡ್ರಾ ಬಿಗ್ ಬಾಸ್ ಲವ್ ಬರ್ಡ್ಸ್‌ ಜಶ್ವಂತ್ - ನಂದು?; ಕಾರಣವಾದ ಸಾನ್ಯಾ ವಿರುದ್ಧ ನೆಟ್ಟಿಗರು ಗರಂ

Published : Jan 12, 2023, 11:20 AM IST
ಬ್ರೇಕಪ್ ಮಾಡ್ಕೊಂಡ್ರಾ ಬಿಗ್ ಬಾಸ್ ಲವ್ ಬರ್ಡ್ಸ್‌ ಜಶ್ವಂತ್ - ನಂದು?; ಕಾರಣವಾದ  ಸಾನ್ಯಾ ವಿರುದ್ಧ ನೆಟ್ಟಿಗರು ಗರಂ

ಸಾರಾಂಶ

ಸಾಮಾಜಿಕ ಜಾಲತಣದಲ್ಲಿ ನೋ ಅಪ್ಡೇಟ್‌. ಬ್ರೇಕಪ್ ಬಗ್ಗೆ ಕ್ಲಾರಿಟಿ ಕೇಳುತ್ತಿದ್ದಾರೆ ನೆಟ್ಟಿಗರು. ಏನಿದು ಓಟಿಟಿ ಕಥೆ?

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ 1 ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಮತ್ತು ಸಾನ್ಯಾ ಐಯ್ಯರ್ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟರು. ಹೀಗಾಗಿ ಓಟಿಟಿ ಬಗ್ಗೆ ಜನರಿಗೆ ಕೊಂಚ ಐಡಿಯಾ ಬಂತು. ಓಟಿಟಿಯಲ್ಲಿ ಜಶ್ವಂತ್ ಮತ್ತು ನಂದಿನಿ ಜೋಡಿ ಕೂಡ ತುಂಬಾನೇ ಹೆಸರು ಗಳಿಸಿದ್ದರು ಆದರೆ ಕಡಿಮೆ ವೋಟ್‌ನಿಂದ ಹೊರ ನಡೆಯುವ ಪರಿಸ್ಥಿತಿ ಎದುರಾಗಿತ್ತು. ಈಗ ನಂದು ಮತ್ತು ಜಸ್ವಂತ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 

ಹೌದು! ಕೆಲವು ದಿನಗಳ ಹಿಂದೆ ನಂದಿನಿ ಹುಟ್ಟುಹಬ್ಬವಿತ್ತು. ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ಅದ್ಧೂರಿಯಾಗಿ ಆಚರಿಸಿಕೊಂಡರು ಈ ಸಮಯದಲ್ಲಿ ಓಟಿಟಿ ಸೀಸನ್ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ ಮತ್ತು ಚೈತ್ರಾ ಹಳ್ಳಿಕೇರಿ ಭಾಗಿಯಾಗಿದ್ದರು ಆದರೆ ಜಶ್ವಂತ್ ಕಾಣಿಸಿಕೊಂಡಿಲ್ಲ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ವಿಶ್ ಮಾಡಿಲ್ಲ. ಇದನ್ನು ಗಮನಿಸಿರುವ ನೆಟ್ಟಿಗರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಇಬ್ಬರು ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ ಹಾಗೂ ಫೋಟೋ ಅಪ್ಲೋಡ್ ಮಾಡಿಲ್ಲ. ಕನೆಕ್ಷನ್‌ ಸಂಪೂರ್ಣವಾಗಿ ಕಟ್ ಆಗಿರಬಹುದು ...?

ಯಾರಿವರು?

ಹಿಂದಿ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ರೋಡೀಸ್‌ನಲ್ಲಿ  ಕರ್ನಾಟಕವನ್ನು ಜಶ್ವಂತ್  ಮತ್ತು ನಂದಿನಿ ಪ್ರತಿನಿಧಿಸಿದ್ದರು. ನಂದಿನಿ ವಿನ್ನರ್ ಟ್ರೋಫಿ ಗಿಟ್ಟಿಸಿಕೊಂಡು ಬಂದರು. ಅಲ್ಲಿಂದ ಸ್ನೇಹಿತರಾಗಿ, ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರಂತೆ. ಇವರಿಬ್ಬರನ್ನು ಒಬ್ಬ ಸ್ಪರ್ಧಿಯಾಗಿ ಪರಿಗಣಿಸಿ ಓಟಿಟಿ ಎಂಟ್ರಿ ನೀಡಲಾಗಿತ್ತು. ಕಡಿಮೆ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು ಆದರೆ ಅಷ್ಟೇ ಬೇಗ ಹೊರ ಬಂದರು. 

Bigg Boss Ott ಗರ್ಲ್‌ ಫ್ರೆಂಡ್‌ ಬದಲಾಯಿಸಿಕೋ; ಜಶ್ವಂತ್ - ನಂದು ನಡುವೆ ಮನಸ್ತಾಪ

ಬ್ರೇಕಪ್‌ಗೆ ಕಾರಣವೇನು?

ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ಜಶ್ವಂತ್ ಮತ್ತು ನಂದಿನಿ ಒಂದು ಗ್ಯಾಂಗ್‌ನಲ್ಲಿದ್ದರು. ನಂದು ಈ ತಂಡದಲ್ಲಿ ಡಾಮಿನೇಟ್ ಮಾಡುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿತ್ತು. ಈ ಸೈಕಲ್‌ ಗ್ಯಾಪ್‌ನಲ್ಲಿ ಜಶ್ವಂತ್ ಮತ್ತು ಸಾನ್ಯಾ ಸಿಕ್ಕಾಪಟ್ಟೆ ಕ್ಲೋಸ್ ಆಗಿ ಬಿಟ್ಟರು. ಜನರಿಗೆ ಇದು ತಪ್ಪಾಗಿ ಕಾಣಿಸುತ್ತಿದೆ ಎಂದು ನಂದಿನಿ ಎಷ್ಟು ಸಲ ಹೇಳಿದ್ದರು ಜಶ್ವಂತ್ ಬದಲಾಗಲಿಲ್ಲ. ಆರಂಭದಲ್ಲಿ ಕೇರ್ ಮಾಡುತ್ತಿದ್ದರು ಸಾನ್ಯಾ ಮಾತುಗಳಿಂದ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಸಂಪೂರ್ಣವಾಗಿ ದೂರವಾದ್ದರು. ಸಾನ್ಯಾ ಕಾರಣ ಎಂದು ಪದೇ ಪದೇ ರೂಪೇಶ್ ಹೇಳುತ್ತಿದ್ದರೂ ಕೂಡ ಸಾನ್ಯಾ ಅಗಲಿ ಅಥವಾ ಜಶ್ವಂತ್‌ ಅರ್ಥ ಮಾಡಿಕೊಳ್ಳಲಿಲ್ಲ. ಜಶ್ವಂತ್ ಎಲಿಮಿನೇಟ್ ಆದ ಮೇಲೆ ಸಾನ್ಯಾ ರೂಪೇಶ್‌ಗೆ ಕ್ಲೋಸ್ ಆಗಿದ್ದು.

ಬಿಗ್ ಬಾಸ್ ಲವ್ವಿ ಡವ್ವಿ : ದೊಡ್ಮನೆಯಲ್ಲಿ ಮಿಂಚಿದ ಜೋಡಿ ಹಕ್ಕಿಗಳಿವು

ನಿಮ್ಮ ಜೀವನ ಹಾಳು ಮಾಡಲು ಸಾನ್ಯಾ ಐಯ್ಯರ್ ಕಾರಣ ಆದರೆ ಈಗ ಆಕೆ ಖುಷಿಯಾಗಿದ್ದಾಳೆ ನೀವು ಮೊದಲು ಅವಳ ಜೀವನ ಹಾಳು ಮಾಡಿ ಎಂದು ನೆಟ್ಟಿಗರು ಕಾಮೆಂಟ್ಸ್‌ನಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.  

'ಸಾನ್ಯಾ ವಿರುದ್ಧ ನನಗೆ ಬೇಸರವಿಲ್ಲ. ಏನೇ ಮಾಡಿದ್ದರೂ ಒಬ್ಬ ವ್ಯಕ್ತಿ ನಿಮ್ಮಲ್ಲಿ ನೆಗೆಟಿವ್ ಹುಡುಕುತ್ತಿದ್ದಾರೆ ಅಂದ್ರೆ ರಿಯಲ್ ಲೈಫಲ್ಲಿ ಅವರಿಂದ ದೂರ ಇರುತ್ತೀವಿ ನಾನು ಕೂಡ ಅದೇ ಮಾಡಿದೆ' ಎಂದು ನಂದು ಈ ಹಿಂದೆ ಹೇಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ Top 5 ಸ್ಪರ್ಧಿಗಳಿವರು; ಗೆಲ್ಲೋರಾರು?
Bigg Boss ಸ್ಕ್ರಿಪ್ಟೆಡ್ಡಾ? ದೊಡ್ಮನೆಯ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಟ್ಯಾಟೂ ಆರ್ಟಿಸ್ಟ್​ ಮನೋಜ್​ ಕುಮಾರ್​