
ಕನ್ನಡ ಕಿರುತೆರೆಯ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ಇನ್‌ಸ್ಟಾಗ್ರಾಂ ಸ್ಟಾರ್ ನಮತ್ರಾ ಗೌಡ ತಮ್ಮ ಜೀವನದಲ್ಲಿ ಯಾವುದರ ಹಿಂದೆ ಓಡುತ್ತಿದ್ದರು ಯಾವುದನ್ನು ಬೇಕು ಎಂದು ಭಯಸುತ್ತಿದ್ದರು, ಈಗ ಏನು ಮಾಡುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಮದುವೆಗೂ ಸಕ್ಸಸ್ ಫುಲ್ ಜೀವನ ಅಂದುಕೊಳ್ಳುತ್ತಿದ್ದ ನಮ್ರತಾ ಈಗ ಪ್ರಯಾಣ ಮಾಡಬೇಕು, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತಿದ್ದಾರೆ. ಈ ಆಲೂಚನೆ ಲೇಟ್ 20sನಲ್ಲಿ ಬರಲು ಕಾರಣ ಏನು ಎಂದು ರಿವೀಲ್ ಮಾಡಿದ್ದಾರೆ.
'ನನಗೆ ತುಂಜಾ ಎನರ್ಜಿ ಇತ್ತು, ತುಂಬಾ ಒರಟಾಗಿ ಇದ್ದೆ ಅಲ್ಲದೆ ಆಗ ಹೆಚ್ಚಾಗಿ ಕೆಲಸಗಳ ಮೇಲೆ ಗಮನ ಕೊಡುತ್ತಿದ್ದೆ. ಹಣ ಮಾಡಬೇಕು ಅನ್ನೋದು ಅಷ್ಟೇ ನನ್ನ ಗುರಿ ಆಗಿತ್ತು. ನನಗೆ ಅಂತ ಟೈಮ್ ಇಡುತ್ತಿರಲಿಲ್ಲ, ಪರ್ಸನಲ್‌ಲೈಫ್‌ಗೆ ಅಂತ ಟೈಮ್ ಕೊಡುತ್ತಿರಲಿಲ್ಲ. ಬರೀ ಕೆಲಸ ಮಾಡೋಣ ಫ್ರೀ ಇರಬಾರದು ಕೆಲಸ ಮಾಡೋಣ ಅನ್ನುತ್ತಿದ್ದೆ. ಹಣ ಮಾಡಬೇಕು ಎಂದು ಎಲ್ಲಾ ವಿಚಾರದಲ್ಲೂ ಗಡಿಬಿಡಿ ಮಾಡುತ್ತಿದ್ದೆ. ಆದರೆ ಈಗ ಹಾಗಲ್ಲ...ಆರಾಮ್ ಆಗಿ ಕುಳಿತುಕೊಂಡು ಬರುವ ಒಳ್ಳೆ ಆಯ್ಕೆಗಳನ್ನು ನೋಡೋಣ, ಒಳ್ಳೆ ಜೀವನ ಕಟ್ಟಿಕೊಳ್ಳೋಣ, ಹಣದ ಹಿಂದೆ ಓಡುವುದು ಬೇಡ. ಯಾವ ರೀತಿಯಲ್ಲಿ ಬೇಕಿದ್ದರೂ ಹಣ ಮಾಡಬಹುದು ಹೀಗಾಗಿ ನಿಧಾನವಾಗಿ ತೆಗೆದುಕೊಂಡು ಹೋಗುತ್ತಿದ್ದೀನಿ. ನನ್ನಲ್ಲಿ ಎನರ್ಜಿ ಇದೆ ಆದರೂ ನಾನು ಆರಾಮ್ ಆಗಿ ಮ್ಯಾನೇಜ್ ಮಾಡುತ್ತಿದ್ದೀನಿ. ಪ್ರೀತಿ ಸಿಗದ ಕಾರಣ ಜೀವನದಲ್ಲಿ ಚರಿ ಪಾರ್ಟನರ್ ಸಿಗಬೇಕು ಜೀವನದಲ್ಲಿ ಅಂತ ಇತ್ತು...ಸದಾ ಪ್ರೀತಿ ಹುಡುಕುತ್ತಿದ್ದೆ ಹಾಗೂ ಸ್ಥಿರ ಸಂಬಂಧಕ್ಕೆ ಕಾಯುತ್ತಿದ್ದೆ. ಮದುವೆ ಬಗ್ಗೆ ತುಂಬಾ ಯೋಚನೆ ಮಾಡಿಕೊಂಡು ದುಡಿದ ಹಣವನ್ನು ಮದುವೆಯಲ್ಲಿ ಇನ್ವೆಸ್ಟ್ ಮಾಡುತ್ತಿದ್ದೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ನಮ್ರತಾ ಮಾತನಾಡಿದ್ದಾರೆ.
ಒಂದು ಸಮಯದಲ್ಲಿ ಅಪ್ಪ ನಾನು ಮಾತು ಶುರು ಮಾಡುತ್ತಿದ್ದೇ ಜಗಳದಿಂದ: ಹಿತಾ ಸಿಹಿಕಹಿ ಚಂದ್ರು
'ಲೂವರ್ ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗಿಯಾಗಿ ಯಾವುದೇ ಸೇವಿಂಗ್ಸ್ ಇರುವುದಿಲ್ಲ. ನಾನು ದುಡಿಯಬೇಕು ಎಷ್ಟು ಕೆಲಸ ಮಾಡಬಹುದು ಹೇಗೆ ಕೆಲಸ ಮಾಡಬಹುದು ಹಾಗೂ 30ರ ನಂತರ ಏನ್ ಮಾಡ್ಬೋದು ಅನ್ನೋ ಯೋಚನೆಯಲ್ಲಿ ಇರುತ್ತಿದ್ದೆ. ನನ್ನ ಕಟ್ಟ ಕಡೆಯ ಗುರಿನೇ ಮದುವೆ ಆಗುವುದು. ಅದ್ಧೂರಿಯಾಗಿ ಮದುವೆ ಆಗೋಣ ಅನಿಸುತ್ತಿತ್ತು ಆದರೆ ಈಗ ಇಲ್ಲ ಅದು ಬೇಡ ಟ್ರಾವಲ್ ಮಾಡೋಣ ಜಾಗಗಳನ್ನು ನೋಡೋಣ ಅನಿಸುತ್ತಿದೆ. ಮದುವೆ ಅಂತ ಕೂಡಿಟ್ಟ ಹಣದಲ್ಲಿ ಈಗ ಮನೆ ಖರೀದಿ ಮಾಡಿದ್ದೀನಿ. ನನಗೆ ಬೇಕಿರುವ ಒಳ್ಳೆಯದನ್ನು ಖರೀದಿ ಮಾಡುತ್ತಿದ್ದೀನಿ. ಚೆನ್ನಾಗಿ ದುಡಿಯುತ್ತಿದ್ದರೂ ನನಗೆ ಅಂತ ನಾನು ಏನೂ ಮಾಡಿಕೊಂಡಿರಲಿಲ್ಲ ಆದರೆ ಈಗ ನನಗೆ ಅಂತ ಖರ್ಚು ಮಾಡಿಕೊಳ್ಳುತ್ತಿದ್ದೀನಿ' ಎಂದು ನಮ್ರತಾ ಹೇಳಿದ್ದಾರೆ.
ದುಡ್ಡು ಉಳಿಸೋಕೆ ಹೆಂಡತಿ ನಾನು ಒಂದೇ ಬಟ್ಟೆ ಹಾಕೋದು, ಸೀರೆ ಸೆಲ್ವಾರ್ ಬಿಟ್ಟು: ನಿರಂಜನ್ ದೇಶಪಾಂಡೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.