Sandalwood

ಮಗಳು ಜಾನಕಿ

ಟಿಎನ್‌ ಸೀತಾರಾಮ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ಸುಂದರಿ ಗಾನವಿ ಲಕ್ಷ್ಮಿಣ್ ಅಪಾರ ಸಂಖ್ಯೆಯಲ್ಲಿ ಕನ್ನಡಗರ ಪ್ರೀತಿಯನ್ನು ಗಳಿಸಿದ್ದರು. 

Image credits: Instagram

ಸಿನಿಮಾಗಳ ಆಫರ್

ಮಗಳು ಜಾನಕಿ ಸೀರಿಯಲ್ ಎರಡು ವರ್ಷಗಳ ಕಾಲ ನಡೆಯಿತ್ತು. ಸೀರಿಯಲ್ ಮುಗಿಯುತ್ತಿದ್ದಂತೆ ಸಿನಿಮಾ ಆಫರ್‌ಗಳು ಹುಡುಕಿಕೊಂಡು ಬಂದಿತ್ತು. ರಿಷಬ್ ಶೆಟ್ಟಿಗೆ ಜೋಡಿಯಾಗಿ 'ಹೀರೋ' ಸಿನಿಮಾದಲ್ಲಿ ನಟಿಸಿದ್ದರು.

Image credits: Instagram

ಬೆಳ್ಳಿತೆರೆಯಲ್ಲಿ ಫುಲ್ ಕ್ಲಿಕ್

ಹೀರೋ ಸಿನಿಮಾ ನಂತರ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ವೇದ ಸಿನಿಮಾದಲ್ಲಿ ಅವರ ಮಡದಿಯಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಸಖತ್ ಸ್ಟ್ರಾಂಗ್ ಮಹಿಳೆಯ ಪಾತ್ರವಾಗಿತ್ತು. 

Image credits: Instagram

ತೆಲುಗು ಚಿತ್ರರಂಗಕ್ಕೆ ಎಂಟ್ರಿ

ವೇದ ಸಿನಿಮಾ ನಂತರ ಭಾವಚಿತ್ರ ಸಿನಿಮಾದಲ್ಲಿ ನಟಿಸಿದ್ದರು. ಹೆಸರು ಗಳಿಸುತ್ತಿದ್ದರಂತೆ ತೆಲುಗು ಭಾಷೆಯ ರುದ್ರಾಂಗಿ ಸಿನಿಮಾದಲ್ಲಿ ರುದ್ರಾಂಗಿಯಾಗಿ ಅಭಿನಯಿಸಿ ಅಲ್ಲೂ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು.

Image credits: Instagram

ಕಿರುತೆರೆಗೆ ಬರಲಿಲ್ಲ

ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್‌ಗಳನ್ನು ಪಡೆದು ಬ್ಯುಸಿಯಾಗಿರುವ ಗಾನವಿ ಲಕ್ಷ್ಮಣ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿ ಮೂಡಿದೆ. 

Image credits: Instagram

ಸ್ಟಾರ್‌ಗಳ ಜೊತೆನೇ ಸಿನಿಮಾ

ಇದುವರೆಗೂ ಗಾನವಿ ನಟಿಸಿರುವುದು ಸ್ಟಾರ್‌ಗಳ ಜೊತೆ...ರಿಷಬ್ ಶೆಟ್ಟಿ, ಶಿವರಾಜ್‌ಕುಮಾರ್, ಜಗಪತಿ ಬಾಬು, ಆಶಿಶ್ ಗಾಂಧಿ, ಮಮ್ತಾ ಮೋಹನದಾಸ್ ಸೇರಿದಂತೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ.

Image credits: Instagram

ಹೊಸ ಸಿನಿಮಾ ಯಾವುದು?

ಇದೀಗ 'ನನಗೂ ಹೆಂಡತಿ ಬೇಕು' ಸಿನಿಮಾದಲ್ಲಿ ಗಾನವಿ ನಟಿಸುತ್ತಿದ್ದಾರೆ. ತಬಲಾ ನಾಣಿ, ಬ್ಯಾಂಕ್ ಜನಾರ್ಥನ್, ಕಿಲ್ಲರ್ ವೆಂಕಟೇಶ್, ಚೈತ್ರಾ ಕೊಟ್ಟೂರ್ ಸೇರಿದಂತೆ ದೊಡ್ಡ ತಾರ ಬಳಗವಿದೆ.

Image credits: Instagram

ಬಿಗ್ ಬಾಸ್‌ ರೂಪೇಶ್‌ ಶೆಟ್ಟಿಗೆ ಜೋಡಿಯಾದ ತುಳು ಸುಂದರಿ ಅದ್ವಿತಿ ಶೆಟ್ಟಿ!

ಕುಳ್ಳಿಯರಿಗೆ ನಟಿ ಕೀರ್ತಿ ಸುರೇಶ್ ಅವರ ಬಳಿ ಇರುವ ಟ್ರೆಂಡೀ ಸೀರೆ ಸ್ಟೈಲ್!

ನಾನು ಅಪ್ಪು ಮದುವೆಯಾದ ದಿನವೇ ಅತ್ತೆ ಕೆಲಸ ನಿಲ್ಲಿಸಿಬಿಟ್ಟರು: ಅಶ್ವಿನಿ ಪುನೀತ್

ಹೊಸ ಲುಕ್‌ನಲ್ಲಿ ತರುಣ್- ಸೋನಲ್; ಮತ್ತೆ ಎಲ್ಲಿಗೆ ಎಂದು ಕಾಲೆಳೆದ ನೆಟ್ಟಿಗರು!