
'ಬಿಗ್ ಬಾಸ್' ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ತುಕಾಲಿ ಸಂತೋಷ್ ಸಾಕಷ್ಟು ಫೇಮಸ್ ಆಗಿದ್ರು, ಜೊತೆಗೆ ಒಂದಿಷ್ಟು ಒಳ್ಳೆಯ ಹೆಸರುಗಳನ್ನೂ ಗಳಿಸಿದ್ದಾರೆ. ಫೈನಲ್ ತನಕ ಹೋಗಿದ್ದರು. ಆದರೆ ಅವರ ಪತ್ನಿ ಮಾನಸಾ ಐದೇ ವಾರದಲ್ಲಿ ವಾಪಸ್ ಆಗಿದ್ದಾರೆ. ಜೊತೆಗೆ ಸಾಕಷ್ಟು ಟ್ರೋಲ್ಗೂ ಒಳಗಾಗಿದ್ದಾರೆ. ಮಾನಸಾ ಅವರು ಪತಿ ಸಂತೋಷ್ ರೀತಿಯಲ್ಲಿಯೇ ಅಂತಿಮ ಕ್ಷಣದವರೆಗೂ ಇರುತ್ತಾರೆ ಎಂದೇ ಅವರ ಅಭಿಮಾನಿಗಳು ಆರಂಭದಲ್ಲಿ ಅಂದುಕೊಂಡದ್ದು ಇದೆ. ಆದರೆ ಅವರು ಎಲಿಮಿನೇಟ್ ಆಗಿ ಬಂದರು. ಅವರ ಮಾತುಗಳೇ ಅವರಿಗೆ ಮುಳುವಾಗಿದ್ದವು. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿಯೂ ಮಾನಸ ಅವರು ಆದಷ್ಟು ಟ್ರೋಲ್ ಇನ್ಯಾರೂ ಆಗಿಲ್ಲ ಎನ್ನಬಹುದೇನೋ.
ಅದೇನೇ ಇದ್ದರೂ ಬಿಗ್ಬಾಸ್ ಮನೆಯೊಳಕ್ಕೆ ಕಾಲಿಟ್ಟು ಹೊರಕ್ಕೆ ಬಂದರು ಎಂದರೆ ಅವರಿಗೆ ಸಿಗುವಷ್ಟು ರಾಜಮರ್ಯಾದೆ, ಎಂಥ ದೊಡ್ಡ ಸಾಧನೆ ಮಾಡಿ, ದೇಶದ ಕೀರ್ತಿ ವಿಶ್ವಾದ್ಯಂತ ಹರಡಿದವರಿಗೂ ಸಿಗುವುದಿಲ್ಲವೇನೋ! ಅದೇ ಕಾರಣಕ್ಕೆ ಈ ಮೊದಲು ತುಕಾಲಿ ಸಂತೋಷ್ ಅವರಷ್ಟೇ ಫೇಮಸ್ ಆಗಿದ್ದರು, ಈಗ ಅವರ ಪತ್ನಿ ಮಾನಸ ಅವರೂ ಜೊತೆಯಾಗಿದ್ದಾರೆ. ಮಾನಸಾ ಅವರು ಬಿಗ್ಬಾಸ್ನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಮಾಮೂಲಿನಂತೆ ಅವರಿಗೆ ಹಲವಾರು ರೀತಿಯ ಪ್ರಶ್ನೆ ಕೇಳಲಾಗಿದೆ. ಸಾಮಾನ್ಯವಾಗಿ ಬಿಗ್ಬಾಸ್ಗೆ ಹೋದರೆ ಭಾರಿ ಮೊತ್ತದ ಸಂಭಾವನೆ ಸಿಗುತ್ತದೆ ಎಂದೇ ಹೇಳಲಾಗುತ್ತದೆ. ಅದೇ ರೀತಿ ಮಾನಸಾ ಅವರಿಗೆ ಸಿಕ್ಕ ಪೇಮೆಂಟ್ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ್ದಾರೆ.
ಬಿಗ್ಬಾಸ್ಗೆ ಸಂಜನಾ ಬುರ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ? ಸೀರಿಯಲ್ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..
ಮೊದಲಿಗೆ ಸಂತೋಷ್ ಅವರಿಗೆ ಇದೇಪ್ರಶ್ನೆ ಕೇಳಿದಾಗ, ಅದೆಲ್ಲಾ ನಮ್ಮ ನಡುವಿನ ಅಂಡರ್ಸ್ಟ್ಯಾಂಡಿಂಗ್ ಸರ್. ಅದೆಲ್ಲಾ ಹೇಳಲು ಆಗಲ್ಲ. ಪೇಮೆಂಟ್ನಿಂದ ಒಂದು ಕಾರು ತೆಗೆದುಕೊಂಡೆ ಅಷ್ಟೇ. ಪೇಮೆಂಟ್ಗಿಂತಲೂ ಹೆಚ್ಚಾಗಿ ಸಿಕ್ಕಿದ್ದು ಕೀರ್ತಿ, ಯಶಸ್ಸು, ಜನರ ಪ್ರೀತಿ. ಇದೀಗ ಹಲವು ಆಪಾರ್ಚುನಿಟಿಗಳು ಸಿಗುತ್ತಿವೆ. ಅದಕ್ಕಿಂತ ಇನ್ನೇನು ಬೇಕು ಎಂದಿದ್ದಾರೆ. ಇನ್ನು ಮಾನಸ ಅವರಿಗೆ ಪ್ರಶ್ನೆ ಕೇಳಿದಾಗ ಸ್ವಲ್ಪ ಬೇಸರದಿಂದಲೇ ಇನ್ನೂ ನನಗೆ ಪೇಮೆಂಟ್ ಸಿಗಲಿಲ್ಲ ಎಂದರು. ಸ್ಪಾನ್ಸರ್ರಿಂದ ಬಂದ ಎರಡು ಲಕ್ಷ ರೂಪಾಯಿ ಅಷ್ಟೇ ಸಿಕ್ಕಿದೆ. ಪೇಮೆಂಟ್ ಬಗ್ಗೆ ನಾನು ಮಾತನಾಡಲಿಲ್ಲ, ಸಂತುನೇ ಮಾತಾಡಿದ್ದು. ನನಗೆ ಏನೂ ಸಿಕ್ಕಿಲ್ಲ ಎಂದರು.
ಇಎಂಐ ತೀರಿಸಲು ಬಿಗ್ಬಾಸ್ಗೆ ಹೋಗಿದ್ಲು, ಆದರೆ ಐದೇ ವಾರಕ್ಕೆ ವಾಪಸ್ ಬಂದಳು. ಮುಂದೆ ಸಮಸ್ಯೆ ಇದದ್ದೇ ಅಲ್ವಾ ಎಂದರು ಸಂತೋಷ್. ಇದೇ ವೇಳೆ ತಾವು ಬಿಗ್ಬಾಸ್ ಒಳಗೆ ಹೋಗುವಾಗ ಸಂತೋಷ್ ಅವರ ಸಜೆಷನ್ ತೆಗೆದುಕೊಂಡಿರಲಿಲ್ಲ. ಅದೇ ಮಾಡಿದ ತಪ್ಪು ಎನ್ನಿಸತ್ತೆ. ಅವರ ಹಾಗೆ ನಾನು ಆಗುವುದು ಬೇಡ, ನನ್ನ ಸ್ಟೈಲ್ನಲ್ಲಿಯೇ ನಾನು ಇರೋಣ ಅಂದುಕೊಂಡೆ. ಸಂತು ಕೂಡ ಹಾಗೇ ಹೇಳಿದ್ರು. ಆದ್ರೆ ಸಜೆಷನ್ ತಗೋಬಿಕಿತ್ತೇನೋ ಎಂದರು. ಇದೇ ವೇಳೆ, ಬಿಗ್ಬಾಸ್ನಿಂದ ಬೇರೆಯವರಿಗೆ ಗೌರವ ಕೊಡಬೇಕು, ಮಾತಿನ ಮೇಲೆ ನಿಗಾ ಇಡಬೇಕು ಎನ್ನುವುದನ್ನು ಕಲಿತೆ. ಯೋಚನೆ ಮಾಡಿ ಮಾತನಾಡಬೇಕು ಎನ್ನುವುದನ್ನು ಬಿಗ್ಬಾಸ್ ಕಲಿಸಿತು ಎಂದರು.
ಸುದೀಪ್ ಜೊತೆ ಮೊದಲ ಭೇಟಿಯ ರಹಸ್ಯ ಬಿಗ್ಬಾಸ್ನಲ್ಲೇ ರಟ್ಟು ಮಾಡ್ತೇನೆ ಎಂದ ಗೌತಮಿ! ಅಷ್ಟಕ್ಕೂ ಮೀಟ್ ಆಗಿದ್ದೆಲ್ಲಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.